ETV Bharat / business

10 ಲಕ್ಷ ರೂ ಬಜೆಟ್​​​​​​​ನಲ್ಲಿ ಅತ್ಯುತ್ತಮ ಎಸ್​​​​​​ಯುವಿ ಖರೀದಿಸಬೇಕಾ?: ಹಾಗಾದರೆ ಇಲ್ಲಿವೆ ಐದು ಟಾಪ್​​ ಕಾರುಗಳು - MOST POWERFUL SUVS UNDER 10 LAKH - MOST POWERFUL SUVS UNDER 10 LAKH

ನೀವು ಅತ್ಯುತ್ತಮ SUV ಕಾರು ತೆಗೆದುಕೊಳ್ಳಬೇಕು ಎಂದು ಯೋಜಿಸಿದ್ದೀರಾ? ನಿಮ್ಮ ಬಜೆಟ್ 10 ಲಕ್ಷ ರೂ ಮಾತ್ರಾನಾ? ಡೋಂಟ್​ವರಿ ಈ ಬಜೆಟ್​ನಲ್ಲೂ ನಿಮಗೆ ಉತ್ತಮವಾದ ಎಸ್​​ಯುವಿ ಕಾರುಗಳು ಸಿಗ್ತವೆ. ಆಂತಹ ಐದು ಕಾರುಗಳ ಬಗ್ಗೆ ನಾವು ನಿಮಗೆ ಹೇಳಲು ಹೊರಟಿದ್ದೇವೆ.

Most Powerful SUVs Under 10 lakh
10 ಲಕ್ಷ ರೂ ಬಜೆಟ್​​​​​​​ನಲ್ಲಿ ಅತ್ಯುತ್ತಮ ಎಸ್​​​​​​ಯುವಿ ಖರೀದಿಸಬೇಕಾ? ಹಾಗಾದರೆ ಇಲ್ಲಿವೆ ಐದು ಟಾಪ್​​ ಮಾದರಿಗಳು (ETV Bharat)
author img

By ETV Bharat Karnataka Team

Published : Jun 10, 2024, 8:10 AM IST

ಭಾರತದಲ್ಲಿ ಎಸ್‌ಯುವಿ ಕಾರುಗಳಿಗೆ ಉತ್ತಮ ಬೇಡಿಕೆಯಿದೆ. ಏಪ್ರಿಲ್ 2023ಕ್ಕೆ ಹೋಲಿಸಿದರೆ, ಈ ವರ್ಷ ಅದೇ ಸಮಯದಲ್ಲಿ SUV ಗಳ ಮಾರಾಟವು ಶೇಕಡಾ 63 ರಷ್ಟು ಹೆಚ್ಚಾಗಿದೆ. ನೀವು ಕಾರು ಕೊಳ್ಳಲು ಮನಸ್ಸು ಮಾಡಿದ್ದೀರಾ? ಹಾಗಾದರೆ ಏಕೆ ತಡ, 10 ಲಕ್ಷದ ಬಜೆಟ್‌ನಲ್ಲಿ ಟಾಪ್-5 ಎಸ್‌ಯುವಿ ಕಾರುಗಳು ಲಭ್ಯ ಇವೆ. ಯಾವವು ಆ ಕಾರುಗಳು ಅಂತೀರಾ? ಇಲ್ಲಿದೆ ಮಾಹಿತಿ

1. Mahindra XUV 3X0 : ಮಹೀಂದ್ರ XUV 3X0 ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿರುವ ಸ್ಮಾರ್ಟ್​ ಕಾರಾಗಿದೆ. ಇದು 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 18.4 bhp ಗರಿಷ್ಠ ಶಕ್ತಿ, 200 Nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು 6 ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಹೊಂದಿದೆ. ಅಲ್ಲದೇ ಈ SUV ನಾಲ್ಕು ಡಿಸ್ಕ್ ಬ್ರೇಕ್​ಗಳನ್ನು ಕೂಡಾ ಹೊಂದಿದೆ.

ಈ ಎಸ್‌ಯುವಿ ಕಾರು 10.2 ಇಂಚಿನ ಫ್ಲೋಟಿಂಗ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 7 ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಆಪಲ್ ಕಾರ್ಪ್ಲೇ, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, 65 ವ್ಯಾಟ್ ಯುಎಸ್ ಚಾರ್ಜಿಂಗ್ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸಹ ಲಭ್ಯವಿದೆ.

ಮಹೀಂದ್ರ XUV 3X0 ಬೆಲೆ : ಈ ಮಹೀಂದ್ರ ಕಾರಿನ ಬೆಲೆ ರೂ.7.49 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.

2. ಟಾಟಾ ನೆಕ್ಸಾನ್ : ಟಾಟಾ ನೆಕ್ಸಾನ್ ಎಸ್‌ಯುವಿ ಆರು ಏರ್‌ಬ್ಯಾಗ್‌ಗಳನ್ನು ಹೊಂದಿದ್ದು, ಅತ್ಯಂತ ಸುರಕ್ಷಿತ ಕಾರು ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಟಾಟಾ ನೆಕ್ಸಾನ್‌ನಲ್ಲಿರುವ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 118 bhp ಪವರ್ ಮತ್ತು 170 nm ಟಾರ್ಕ್ ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನ್ಯುವಲ್, 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ನಾಲ್ಕು ವಿಭಿನ್ನ ಪ್ರಸರಣಗಳನ್ನು ಹೊಂದಿರುವ ಏಕೈಕ SUV ಇದಾಗಿದೆ.

ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ, ನೆಕ್ಸನ್ ಸ್ಪೋರ್ಟ್ಸ್ ಟ್ವಿನ್ 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 360 ಡಿಗ್ರಿ ಕ್ಯಾಮೆರಾ, 9 ಸ್ಪೀಕರ್ ಜೆಬಿಎಲ್ ಮ್ಯೂಸಿಕ್ ಸಿಸ್ಟಮ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಹೊಂದಿದೆ.

ಟಾಟಾ ನೆಕ್ಸಾನ್ ಬೆಲೆ: ಈ ಟಾಟಾ ನೆಕ್ಸಾನ್ ಕಾರಿನ ಬೆಲೆ 8 ಲಕ್ಷ ರೂದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.

3. ಮಾರುತಿ ಸುಜುಕಿ ಬ್ರೆಝಾ : ಮಾರುತಿ ಸುಜುಕಿ ಬ್ರೆಝಾ 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 103 bhp ಪವರ್ ಮತ್ತು 136.2 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಲ್ಲದೇ, ಈ ಎಸ್​​ಯುವಿಯು ಆರು ಏರ್​ ಬ್ಯಾಗ್​ಗಳನ್ನು ಹೊಂದಿದೆ ಕಳೆದ ವರ್ಷದ ಏಪ್ರಿಲ್ ತ್ರೈಮಾಸಿಕಕ್ಕೆ ಹೋಲಿಸಿದರೆ, ಈ ಮಾದರಿಯ ಎಸ್‌ಯುವಿ ಈ ವರ್ಷ ತನ್ನ ಮಾರಾಟವನ್ನು ಶೇಕಡಾ 45 ರಷ್ಟು ಹೆಚ್ಚಿಸಿದೆ. ಈ SUV ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್​ನೊಂದಿಗೆ 4 ಸಿಲಿಂಡರ್ ಎಂಜಿನ್ ಕೂಡಾ ಹೊಂದಿದೆ.

ಸನ್‌ರೂಫ್, 9-ಇಂಚಿನ ಟಚ್‌ಸ್ಕ್ರೀನ್, ಹೆಡ್-ಅಪ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಆರ್ಕಾಮಿಸ್ ಸೌಂಡ್ ಸಿಸ್ಟಮ್, 360 ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಿರುವುದು ಈ ಕಾರಿನ ವಿಶೇಷತೆಯಾಗಿದೆ.

ಮಾರುತಿ ಸುಜುಕಿ ಬ್ರೆಝಾ ಬೆಲೆ: ಮಾರುತಿ ಸುಜುಕಿ ಬ್ರೆಝಾ ಬೆಲೆ 8.34 ಲಕ್ಷ ರೂ.ದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ).

4. ನಿಸ್ಸಾನ್ ಮ್ಯಾಗ್ನೈಟ್: ನಿಸ್ಸಾನ್ ಮ್ಯಾಗ್ನೈಟ್ 1 ಲೀಟರ್ ಪೆಟ್ರೋಲ್ ಮತ್ತು 1 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಈ SUV 99 bhp ಪವರ್ ಮತ್ತು 160 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಪ್ರತಿ ಲೀಟರ್ ಗೆ 17.7-20 ಕಿ.ಮೀ ಮೈಲೇಜ್ ನೀಡುತ್ತದೆ.

ಇದರ ವೈಶಿಷ್ಟ್ಯಗಳಿಗೆ ಬರುವುದಾದರೆ, ಇದು ಡ್ಯುಯಲ್ ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಟ್ರಾಕ್ಷನ್ ಕಂಟ್ರೋಲ್, ಹಿಲ್-ಸ್ಟಾರ್ಟ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, 360-ಡಿಗ್ರಿ ಕ್ಯಾಮೆರಾ, ವೈರ್‌ಲೆಸ್ ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ, ಆರು-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್ ಅನ್ನು ಒಳಗೊಂಡಿದೆ.

ನಿಸ್ಸಾನ್ ಮ್ಯಾಗ್ನೈಟ್ ಬೆಲೆ: ಮಾರುಕಟ್ಟೆಯಲ್ಲಿ ಈ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಬೆಲೆ 9.19 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.

5. ರೆನಾಲ್ಟ್ ಕಿಗರ್ : ರೆನಾಲ್ಟ್ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಎಸ್‌ಯುವಿಗಳು ಬಹುತೇಕ ಒಂದೇ ಆಗಿರುತ್ತವೆ. ಇಲ್ಲದಿದ್ದರೆ ನಿಸ್ಸಾನ್ ಮ್ಯಾಗ್ನೈಟ್‌ಗೆ ಹೋಲಿಸಿದರೆ ರೆನಾಲ್ಟ್ ಕಿಗರ್ ಬೆಲೆ ಸ್ವಲ್ಪ ಹೆಚ್ಚಾಗಿದೆ. ಇದು 1 ಲೀಟರ್ ಟರ್ಬೊ ಎಂಜಿನ್ ಹೊಂದಿದೆ. ಕಿಗರ್ 99 bhp ಪವರ್ ಮತ್ತು 160 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5 ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಆಯ್ಕೆಗಳಲ್ಲಿ ಲಭ್ಯವಿದೆ.

ಅದರ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಇದು 7-ಇಂಚಿನ ಡಿಜಿಟಲ್ ಡ್ರೈವರ್ ಕನ್ಸೋಲ್, 6-ಸ್ಪೀಕರ್ ಅರ್ಕಾಮಿ ಮ್ಯೂಸಿಕ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋದೊಂದಿಗೆ 8-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಲೆಥೆರೆಟ್ ಫ್ಯಾಬ್ರಿಕ್ ಸೀಟ್‌ಗಳು, ಲೆದರ್ ಸುತ್ತುವ ಸ್ಟೀರಿಂಗ್ ವೀಲ್ ಅನ್ನು ಪಡೆಯುತ್ತದೆ.

ರೆನಾಲ್ಟ್ ಕಿಗರ್ ಬೆಲೆ: ರೆನಾಲ್ಟ್ ಕಿಗರ್ ಬೆಲೆ ರೂ.9.30 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ).

ಇದನ್ನೂ ಓದಿ: ಚಾಲಕನಿಲ್ಲದೇ ಓಡುತ್ತೆ ಇ - ಟ್ರ್ಯಾಕ್ಟರ್: ಅನ್ನದಾತನ ಅನುಕೂಲಕ್ಕಾಗಿ ಅದ್ಭುತ ಆವಿಷ್ಕಾರ - Driverless E Tractor

ಬಲ್ಕ್​ ಫಿಕ್ಸೆಡ್ ಡೆಪಾಸಿಟ್​ ಮಿತಿ ಹೆಚ್ಚಿಸಿದ ಆರ್​ಬಿಐ: ಹೂಡಿಕೆದಾರರಿಗೆ ಭಾರಿ ಲಾಭ: ಅದು ಹೇಗೆ ಇಲ್ಲಿದೆ ಡೀಟೇಲ್ಸ್​​ - fixed deposit limit

ETV Bharat Logo

Copyright © 2025 Ushodaya Enterprises Pvt. Ltd., All Rights Reserved.