ಹೈದರಾಬಾದ್: ಹೊಸ ಕಾರು ಖರೀದಿಸಬೇಕು ಎಂಬುದು ಬಹುತೇಕ ಜನರ ಕನಸಾಗಿರುತ್ತದೆ. ಅದರಲ್ಲೂ ಮಧ್ಯಮ ವರ್ಗದ ಜನರು ಇಡೀ ಕುಟುಂಬದೊಂದಿಗೆ ಪ್ರಯಾಣಿಸಿಲು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುವ ಬಜೆಟ್ ಫ್ರೆಂಡ್ಲಿ ಕಾರುಗಳನ್ನು ಖರೀದಿಸಬೇಕೆಂದು ಬಯಸುತ್ತಾರೆ.
ಇದನ್ನು ಗಮನದಲ್ಲಿಟ್ಟುಕೊಂಡು ಪ್ರಮುಖ ಆಟೋಮೊಬೈಲ್ ಕಂಪನಿಗಳು ಹೊಸ ಮಾದರಿಯ 7 ಸೀಟರ್ ಕಾರುಗಳನ್ನು ಹೊಸ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ತರುತ್ತಿವೆ. ಆದರೆ, ಬೇಡಿಕೆಗೆ ತಕ್ಕಂತೆ ಅವುಗಳ ಬೆಲೆಯೂ ಹೆಚ್ಚು. ಇದರಿಂದ ಕೆಲವರು ಬೆಲೆ ಜಾಸ್ತಿ ಎಂಬ ಕಾರಣಕ್ಕೆ ಈ ಕಾರುಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಅಂಥವರಿಗಾಗಿಯೇ ಕೇವಲ ರೂ.7 ಲಕ್ಷದೊಳಗೆ ಎರಡು ಸೂಪರ್ 7 ಸೀಟರ್ ಕಾರುಗಳನ್ನು ಪರಿಚಯಿಸಲಾಗಿದೆ. ಅದರ ಕುರಿತಾದ ಸಂಪೂರ್ಣ ವಿವಿರ ಇಲ್ಲಿದೆ.
Maruti Suzuki Eeco: ಭಾರತದಲ್ಲಿ ವಿಶ್ವಾಸಾರ್ಹತೆಯ ಬ್ರಾಂಡ್ಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಿರಲೆಂದು 'ಮಾರುತಿ ಸುಜುಕಿ ಇಕೋ' 7 ಆಸನಗಳ ಕಾರನ್ನು ಕೈಗೆಟಕುವ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ.
ವೈಶಿಷ್ಟ್ಯಗಳು: ಈ ಕಾರು 7 ಆಸನಗಳನ್ನು ಹೊಂದಿದ್ದು, 1197 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದೆ. ಸಿಎನ್ಜಿ ಮತ್ತು ಪೆಟ್ರೋಲ್ ವೇರಿಂಟ್ನಲ್ಲಿ ಲಭ್ಯವಿದೆ. ಇಂಧನ ಸಾಮರ್ಥ್ಯ 40 ಲೀಟರ್ ಆಗಿದೆ. ಪೆಟ್ರೋಲ್ ಚಾಲಿತ ಕಾರು ಪ್ರತಿ ಲೀಟರ್ಗೆ 19.71 kmpl, ಮತ್ತು ಸಿಎನ್ಜಿ (ಗ್ಯಾಸ್) ಚಾಲಿತ ಕಾರು 26.7 kmpl ಮೈಲೇಜ್ ನೀಡುತ್ತದೆ. ಇದು ಮ್ಯಾನ್ಯುವಲ್ ಗೇರ್ ಸಿಸ್ಟಂ ಹೊಂದಿದ್ದು, 5 ಬಣ್ಣಗಳಲ್ಲಿ ಲಭ್ಯವಿದೆ.
ಬೆಲೆ: ಮಾರುತಿ ಸುಜುಕಿ ಇಕೋ ಎಕ್ಸ್ ಶೋರೂಂ ಬೆಲೆ 5.32 ಲಕ್ಷ ರೂ. ಆಗಿದೆ.
Renault Triber: 7 ಸೀಟರ್ ಕಾರುಗಳಲ್ಲಿ ರೆನಾಲ್ಟ್ ಟ್ರೈಬರ್ ಕೂಡ ಬಹಳ ಜನಪ್ರಿಯವಾಗಿದ್ದು ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಬಜೆಟ್ ಫ್ರೆಂಡ್ಲಿ ಕಾರಾಗಿದೆ.
ವೈಶಿಷ್ಟ್ಯಗಳು: ರೆನಾಲ್ಟ್ ಟ್ರೈಬರ್ ವೈಶಿಷ್ಟ್ಯಗಳನ್ನು ನೋಡುವುದಾದರೇ 7 ಆಸಗಳೊಂದಿಗೆ 999 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದೆ. ಇದು ಪೆಟ್ರೋಲ್ ವೇರಿಯಂಟ್ ಕಾರ್ ಆಗಿದ್ದು, 40 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ. ಪ್ರತಿ ಲೀಟರ್ಗೆ 20 ಕಿ.ಮೀ ಮೈಲೇಜ್ ನೀಡುತ್ತದೆ. ಮ್ಯಾನ್ಯುವಲ್ ಮತ್ತು ಆಟೋಮೆಟಿಕ್ ಗೇರ್ ಟ್ರಾನ್ಸ್ಮಿಷನ್ ಆಯ್ಕೆ ಇರಲಿದ್ದು, 10 ಬಣ್ಣಗಳಲ್ಲಿ ಲಭ್ಯವಿರಲಿದೆ.
ಬೆಲೆ: ರೆನಾಲ್ಟ್ ಟ್ರೈಬರ್ 7 ಸೀಟರ್‌ನ ಆರಂಭಿಕ ಎಕ್ಸ್ ಶೋರೂಂ ಬೆಲೆ 6.33 ಲಕ್ಷದಿಂದ ಪ್ರಾರಂಭವಾಗುತ್ತದೆ.
ಇದನ್ನೂ ಓದಿ: ಕಡಿಮೆ ಬೆಲೆಯ ಕಾರು ಹುಡುಕುತ್ತಿದ್ದೀರಾ?: ಹಾಗಾದರೆ ಇವೇ ನೋಡಿ ಭಾರತದ ಟಾಪ್ 10 ಕಾರುಗಳು - Cheapest Cars In India