ಹೈದರಾಬಾದ್: ಪ್ರತಿಯೊಬ್ಬರೂ ತಾವು ಕಷ್ಟಪಟ್ಟು ದುಡಿದ ಹಣದಲ್ಲಿ ಸ್ವಲ್ಪ ಲಾಭವನ್ನು ಪಡೆಯಲು ಬಯಸುತ್ತಾರೆ. ಆದ್ರೆ ಕೆಲವರು ಅಪಾಯಗಳನ್ನು ತೆಗೆದುಕೊಂಡು ಹೆಚ್ಚಿನ ಆದಾಯ ಬರುವಲ್ಲಿ ಹೂಡಿಕೆ ಮಾಡುತ್ತಾರೆ. ಇತರರು ಯಾವುದೇ ಅಪಾಯವಿಲ್ಲದೆ ಸ್ಥಿರ ಆದಾಯ ಬರುವಂತೆ ಬಯಸುತ್ತಾರೆ. ಅಂತಹವರಿಗೆ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (ಎಂಐಎಸ್) ಉತ್ತಮ ಆಯ್ಕೆಯಾಗಿದೆ.
ಹೂಡಿಕೆಯ ಭದ್ರತೆಯೊಂದಿಗೆ ಸ್ಥಿರವಾದ ಮಾಸಿಕ ಆದಾಯವನ್ನು ಪಡೆಯಲು ಬಯಸುವವರು ಈ ಎಂಐಎಸ್ ಯೋಜನೆಯನ್ನು ಪರಿಗಣಿಸಬಹುದು. ನಿವೃತ್ತಿಯ ನಂತರ ತಮ್ಮ ಮಾಸಿಕ ವೆಚ್ಚಗಳಿಗೆ ಸ್ಥಿರ ಆದಾಯವನ್ನು ಪಡೆಯಲು ಬಯಸುವ ಹಿರಿಯ ನಾಗರಿಕರಿಗೆ ಈ ಯೋಜನೆಯು ವಿಶೇಷವಾಗಿ ಉಪಯುಕ್ತವಾಗಿದೆ.
ಅಂಚೆ ಕಚೇರಿಯಲ್ಲಿ ಮಾಸಿಕ ಆದಾಯ ಯೋಜನೆ : ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯು ಪೋಸ್ಟ್ ಆಫೀಸ್ ನೀಡುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಇದು ಸ್ಥಿರ ಆದಾಯವನ್ನು ಒದಗಿಸುವ ಯೋಜನೆಯಾಗಿ ಬಹಳ ಜನಪ್ರಿಯವಾಗಿದೆ. ಒಂದೇ ಬಾರಿಗೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ನೀವು 5 ವರ್ಷಗಳವರೆಗೆ ಮಾಸಿಕ ಆದಾಯವನ್ನು ಪಡೆಯಬಹುದು. ಹೂಡಿಕೆದಾರರು ಠೇವಣಿ ಮಾಡಿದ ಹಣವನ್ನು ಮಾರುಕಟ್ಟೆಗೆ ಲಿಂಕ್ ಮಾಡಲಾಗಿರುವುದಿಲ್ಲ. ಆದ್ದರಿಂದ ನಿಮ್ಮ ಠೇವಣಿ ಸುರಕ್ಷಿತವಾಗಿರುತ್ತದೆ. ನೀವು ಈ ಯೋಜನೆಯಲ್ಲಿ ಠೇವಣಿ ಇರಿಸಲು ಬಯಸಿದರೆ, ಅರ್ಹತೆ, ಬಡ್ಡಿ, ಮುಕ್ತಾಯ ಇತ್ಯಾದಿಗಳನ್ನು ಒಳಗೊಂಡಂತೆ ಈ ಯೋಜನೆಯ ವಿವರಗಳನ್ನು ಈ ಕೆಳಗಿನಂತಿವೆ ನೋಡಿ..
- ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಖಾತೆಯನ್ನು ಯಾರಾದರೂ ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ (ಗರಿಷ್ಠ ಮೂವರು) ತೆರೆಯಬಹುದು. 10 ವರ್ಷ ಪೂರೈಸಿದ ಮಗುವಿನ ಹೆಸರಿನಲ್ಲಿ ರಕ್ಷಕ (ಮೈನರ್ ಖಾತೆ) ಖಾತೆಯನ್ನು ಸಹ ತೆರೆಯಬಹುದಾಗಿದೆ.
- ಈ ಯೋಜನೆಯಲ್ಲಿ ಕನಿಷ್ಠ ರೂ.1,000 ಹೂಡಿಕೆ ಮಾಡಬಹುದು. ಒಂದೇ ಖಾತೆಯಲ್ಲಿ ಗರಿಷ್ಠ ರೂ.9 ಲಕ್ಷ ಹಾಗೂ ಜಂಟಿ ಖಾತೆಯಲ್ಲಿ ಗರಿಷ್ಠ ರೂ.15 ಲಕ್ಷ ಹೂಡಿಕೆ ಮಾಡಬಹುದಾಗಿದೆ.
- ಪ್ರಸ್ತುತ ಈ ಯೋಜನೆಯಲ್ಲಿ ಶೇಕಡಾ 7.4 ಬಡ್ಡಿಯನ್ನು ನೀಡಲಾಗುತ್ತಿದೆ. ಮುಕ್ತಾಯದವರೆಗೆ ಪ್ರತಿ ತಿಂಗಳು ಬಡ್ಡಿಯನ್ನು ಪಾವತಿಸಲಾಗುತ್ತದೆ. ಆದಾಗ್ಯೂ, ಈ ಯೋಜನೆಯಡಿ ಗಳಿಸಿದ ಬಡ್ಡಿಯು ತೆರಿಗೆಗೆ ಒಳಪಡುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು.
- MIS ಖಾತೆ ತೆರೆದ ಐದು ವರ್ಷಗಳ ನಂತರ ಮೆಚ್ಯೂರಿಟಿ ಪೂರ್ಣಗೊಳ್ಳುತ್ತದೆ. ಆರಂಭಿಕ ಹಿಂಪಡೆಯುವಿಕೆಯ ಸಂದರ್ಭದಲ್ಲಿ, ನಿಯಮಗಳ ಪ್ರಕಾರ ನಿರ್ದಿಷ್ಟ ಶೇಕಡಾವಾರು ಬಡ್ಡಿಯನ್ನು ಹೊರತುಪಡಿಸಿ ಉಳಿದ ಮೊತ್ತವನ್ನು ಮರುಪಾವತಿಸಲಾಗುತ್ತದೆ.
- ಉದಾಹರಣೆಗೆ, ನೀವು ತಿಂಗಳಿಗೆ ರೂ.5,550 ಗಳಿಸಲು ಬಯಸಿದರೆ, ನೀವು ರೂ.9 ಲಕ್ಷವನ್ನು ಎಂಐಎಸ್ ಯೋಜನೆಯಲ್ಲಿ ಠೇವಣಿ ಮಾಡಬೇಕಾಗುತ್ತದೆ.
- ಜಂಟಿ ಖಾತೆ ತೆರೆದು ರೂ.15 ಲಕ್ಷ ಜಮಾ ಮಾಡುವವರಿಗೆ ಮಾಸಿಕ ರೂ.9,250 ಆದಾಯ ಸಿಗಲಿದೆ. ನಿಮ್ಮ ಮಾಸಿಕ ಖರ್ಚು ಮತ್ತು ಅಪೇಕ್ಷಿತ ಆದಾಯದ ಆಧಾರದ ಮೇಲೆ ನೀವು ಹೂಡಿಕೆ ಮಾಡಬಹುದಾಗಿದೆ.
ಓದಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಫಾಸ್ಟಾಗ್ ನಿಷ್ಕ್ರಿಯ ಮಾಡುವುದೇಗೆ? ಇಲ್ಲಿದೆ ಸರಳ ವಿಧಾನ