ETV Bharat / business

PhonePeನಲ್ಲಿ ತಪ್ಪು ಕಂಡುಹಿಡಿದ ಭಾಗಲ್ಪುರದ ಮಯಾಂಕ್: ಕಂಪನಿಯಿಂದ ಹಾಲ್​ ಆಫ್​ ಫೇಮ್​ಗೆ ಆಯ್ಕೆ! - PHONEPE ERROR DETECTION - PHONEPE ERROR DETECTION

ಭಾಗಲ್ಪುರದ ಮಾಯಾಂಕ್ ಅವರು ಉತ್ತಮ ಕೆಲಸ ಮಾಡಿದ್ದಾರೆ. ಫೋನ್‌ ಪೇನಲ್ಲಿ ದೊಡ್ಡ ತಪ್ಪನ್ನು ಕಂಡುಕೊಂಡಿದ್ದಾರೆ. ಈ ದೋಷವನ್ನು ಪತ್ತೆಹಚ್ಚಿದ ನಂತರ, PhonePe ಮಯಾಂಕ್ ಅವರ ಹೆಸರನ್ನು 'ಹಾಲ್ ಆಫ್ ಫೇಮ್'ಗೆ ಆಯ್ಕೆ ಮಾಡಿದೆ. ದೂರವಾಣಿ ಮೂಲಕ ಕರೆ ಮಾಡಿ ಸನ್ಮಾನಿಸಲಾಗುವುದು ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. PhonePeನಲ್ಲಿ ಮಯಾಂಕ್ ಅವರು ತಪ್ಪು ಪತ್ತೆ ಹಚ್ಚಿದ್ದು ಹೇಗೆ ಎಂಬುದನ್ನು ತಿಳಿಯಿರಿ.

PhonePe  Error detection in PhonePe  Biha
PhonePeನಲ್ಲಿ ತಪ್ಪು ಕಂಡುಹಿಡಿದ ಭಾಗಲ್ಪುರದ ಮಯಾಂಕ್: ಆಶ್ಚರ್ಯಚಕಿತರಾದ ಕಂಪನಿ ಅಧಿಕಾರಿಗಳು! (ETV Bharat)
author img

By ETV Bharat Karnataka Team

Published : Jun 26, 2024, 12:45 PM IST

ಭಾಗಲ್ಪುರ (ಬಿಹಾರ): ಪ್ರತಿದಿನ ಜನರು ಸೈಬರ್ ಅಪರಾಧಕ್ಕೆ ಬಲಿಯಾಗುತ್ತಿದ್ದಾರೆ. ಯಾರದ್ದಾದರೂ ಮೊಬೈಲ್ ಹ್ಯಾಕ್ ಆಗಿದ್ದರೆ ಅವರ ಖಾತೆಯಿಂದ ಲಕ್ಷಗಟ್ಟಲೆ ಹಣ ಎಗರಿಸಲಾಗುತ್ತದೆ. PhonePeನಲ್ಲಿಯೂ ಒಂದು ದೋಷವಿತ್ತು. ಅದರಿಂದ ಜನರಿಗೆ ಲಕ್ಷಗಟ್ಟಲೆ ನಷ್ಟ ಉಂಟಾಗುವ ಸಾಧ್ಯತೆಯಿತ್ತು. ಇತ್ತೀಚಿನ ದಿನಗಳಲ್ಲಿ ಜನರು UPI ಮೂಲಕ ಎಲ್ಲಾ ರೀತಿಯ ಪಾವತಿಗಳನ್ನು ಮಾಡುತ್ತಾರೆ. ಹೀಗಿರುವಾಗ ಭಾಗಲ್‌ಪುರದ ಮಯಾಂಕ್‌ ಫೋನ್‌ ಪೇನಲ್ಲಿನ ದೊಡ್ಡ ತಪ್ಪನ್ನು ಕಂಡು ಹಿಡಿದಿದ್ದಾರೆ. ಈ ದೋಷವನ್ನು ಕಂಡುಹಿಡಿದ ನಂತರ, ಮಯಾಂಕ್ ಫೋನ್‌ಪೇಗೆ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ಫೋನ್ ಪೇ ಇ-ಮೇಲ್ ಮೂಲಕ ಮಯಾಂಕ್ ಅವರಿಗೆ ಧನ್ಯವಾದ ಸಲ್ಲಿಸಿದೆ. ಜೊತೆಗೆ ಶೀಘ್ರದಲ್ಲೇ ಮಯಾಂಕ್ ಅವರನ್ನು ಗೌರವಿಸಲಾಗುವುದು ಎಂದು ತಿಳಿಸಲಾಗಿದೆ.

ಫೋನ್‌ಪೇನಲ್ಲಿ ತಪ್ಪು ಕಂಡುಹಿಡಿದಿದ್ದು ಹೇಗೆ?: ಭಾಗಲ್ಪುರ್ ನಗರದ ಬುಧನಾಥ್ ನಿವಾಸಿ ಮಯಾಂಕ್ ಅವರು ಮೊಬೈಲ್ ಪಾವತಿ ಪ್ಲಾಟ್‌ಫಾರ್ಮ್ ಫೋನ್‌ಪೇನಲ್ಲಿ ದೊಡ್ಡ ತಪ್ಪನ್ನು ಕಂಡುಕೊಂಡಿದ್ದಾರೆ. ಇದರಲ್ಲಿ ಅವರು OTP ಇಲ್ಲದೆಯೇ PhonePe ಅನ್ನು ಬೈಪಾಸ್ ಮಾಡುವ ಮೂಲಕ ಲಾಗ್ ಇನ್ ಆದರು. ನಂತರ ಫೋನ್ ಪೇಗೆ ವರದಿ ಮಾಡಿದರು. ತನಿಖೆಯ ನಂತರ, PhonePe ಮಯಾಂಕ್ ಅವರನ್ನು ಹಾಲ್ ಆಫ್ ಫೇಮ್‌ಗೆ ಕಂಪನಿ ಸೇರಿಸಿದೆ.

PhonePe  Error detection in PhonePe  Biha
PhonePeನಲ್ಲಿ ತಪ್ಪು ಕಂಡುಹಿಡಿದ ಭಾಗಲ್ಪುರದ ಮಯಾಂಕ್ (ETV Bharat)

"ನಾನು ಯಾರಿಗಾದರೂ ಫೋನ್ ಕರೆಗಳನ್ನು ಮಾಡುತ್ತಿದ್ದೆ. ಆಗ ಇದ್ದಕ್ಕಿದ್ದಂತೆ ಯಾರಾದರೂ ಫೋನ್ ಪೇ ಅನ್ನು ಹ್ಯಾಕ್ ಮಾಡಬಹುದೆಂದು ನನ್ನ ಮನಸ್ಸಿಗೆ ಬಂದಿತು? ನಂತರ ನಾನು ಸಂಶೋಧನೆ ಮಾಡಲು ಪ್ರಾರಂಭಿಸಿದೆ. ಸಂಶೋಧನೆಯ ಸಮಯದಲ್ಲಿ ನಾನು ನನ್ನ ಟೂಲ್‌ನಿಂದ OTP ವಿಭಾಗವನ್ನು ತೆಗೆದುಹಾಕುತ್ತಿದ್ದೆ. ವೆಬ್‌ಸೈಟ್ ಸರಿಯಾಗಿದ್ದರೆ ನೀವು OTP ವಿಭಾಗವನ್ನು ತೆಗೆದುಹಾಕಿದರೆ ಅದು ಕಾರ್ಯನಿರ್ವಹಿಸುವುದಿಲ್ಲ. ಆದರೆ, ಯಾವುದೇ ಹ್ಯಾಕರ್‌ಗಳು PhonePe ಅನ್ನು ಹ್ಯಾಕ್ ಮಾಡಬಹುದು. ಇದರಲ್ಲಿ, ಒಟಿಪಿಯನ್ನು ಬೈಪಾಸ್ ಮಾಡುವ ಮೂಲಕ ಲಾಗ್ ಇನ್ ಮಾಡಲಾಗುತ್ತಿದೆ" ಎಂದು ಸೈಬರ್ ಸೆಕ್ಯೂರಿಟಿ ಸಂಶೋಧಕ ಮಯಾಂಕ್ ತಿಳಿಸಿದರು.

ಮಯಾಂಕ್​ಗೆ ಅಭಿನಂದನೆ: ಫೋನ್ ಪೇ ಕಂಪನಿಯ ಅಧಿಕಾರಿಗಳು ಮಯಾಂಕ್ ಅವರನ್ನು ಅಭಿನಂದಿಸಿದ್ದಾರೆ. ಜೊತೆಗೆ ಸನ್ಮಾನಿಸುತ್ತೇವೆ ಎಂದು ತಿಳಿಸಿದ್ದಾರೆ. ಫೋನ್‌ ಪೇನಲ್ಲಿ ದೋಷಗಳನ್ನು ಹುಡುಕಲು ಪ್ರಾರಂಭಿಸಿದಾಗ ಮಯಾಂಕ್ ಅವರು ತಮ್ಮ ಫೋನ್‌ನಲ್ಲಿ OTP ಇಲ್ಲದೆ ಲಾಗ್ ಇನ್ ಮಾಡಿದ್ದರು. ಆ ಬಳಿಕ ಮಯಾಂಕ್ ಕಂಪನಿಗೆ ವರದಿ ಸಲ್ಲಿಸಿದ್ದರು. ಕಂಪನಿ ಈ ಸಮಸ್ಯೆಯನ್ನು ಪರಿಹರಿಸುತ್ತದೆ. ಇದರಿಂದ ಬೇರೆ ಯಾರೂ ಇದನ್ನು ತಪ್ಪಾಗಿ ಬಳಸಲಾಗುವುದಿಲ್ಲ. ಫೋನ್ ಪೇನಲ್ಲಿ ತಪ್ಪುಗಳನ್ನು ಕಂಡುಹಿಡಿಯುವ ಮೂಲಕ ಮುಂದಾಗುವ ವಂಚನೆಗಳಿಂದ ಎಚ್ಚೆತ್ತುಕೊಳ್ಳುವಂತಾಗಿದೆ.

ನಾಸಾ ಮತ್ತು ಗೂಗಲ್‌ಗೆ ತಪ್ಪಿನ ಬಗ್ಗೆ ತಿಳಿಸಿದ್ದ ಮಯಾಂಕ್​: ಕಳೆದ ವರ್ಷ ಸಹ ಮಯಾಂಕ್ ಗೂಗಲ್‌ನಲ್ಲಿನ ದೋಷವನ್ನು ಪತ್ತೆಹಚ್ಚಿದ್ದರು. ಇದರಲ್ಲಿ ಯಾರಿಗಾದರೂ ಇ-ಮೇಲ್ ಕಳುಹಿಸಬಹುದಾದ ಸ್ಕ್ರಿಪ್ಟ್ ಅನ್ನು ಸಿದ್ಧಪಡಿಸಿದ್ದರು. ಅವರು ಈ ಮಾಹಿತಿಯನ್ನು ಗೂಗಲ್‌ಗೆ ನೀಡಿದ್ದರು. ಮಯಾಂಕ್ ಅವರ ಕಾರ್ಯಕ್ಕೆ ಮೆಚ್ಚಿದ ಗೂಗಲ್, ಅವರಿಗೆ ಐಫೋನ್, ಲ್ಯಾಪ್‌ಟಾಪ್ ಮತ್ತು ಇತರ ಹಲವು ವಸ್ತುಗಳನ್ನು ಉಡುಗೊರೆಯಾಗಿ ನೀಡಿತ್ತು.

ಇಷ್ಟು ಮಾತ್ರವಲ್ಲದೆ ನಾಸಾ ಸೈಟ್ ಅನ್ನು ಪರಿಶೀಲಿಸಿದ್ದ ಮಯಾಂಕ್, ನಾಸಾದಲ್ಲಿ ಕೆಲಸ ಮಾಡುತ್ತಿರುವವರ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇದೆ ಎಂದು ಅವರು ನಾಸಾಗೆ ಮಾಹಿತಿ ನೀಡಿದ್ದರು. ಮಯಾಂಕ್ ಕಳಿಂಗ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದು, ಎಥಿಕಲ್ ಹ್ಯಾಕಿಂಗ್ ಜಗತ್ತಿನಲ್ಲಿ ಹೆಸರು ಗಳಿಸುತ್ತಿದ್ದಾರೆ.

ಇದನ್ನೂ ಓದಿ: ಹಳ್ಳಿಯ ಯುವಕನ ಪರಿಶ್ರಮಕ್ಕೆ ಒಲಿದ ಉನ್ನತ ಹುದ್ದೆ: ಫೇಸ್‌ಬುಕ್‌ನಲ್ಲಿ ಉದ್ಯೋಗ, ವಾರ್ಷಿಕ ₹2 ಕೋಟಿ ವೇತನದ ಪ್ಯಾಕೇಜ್! - himachali boy got job in facebook

ETV Bharat Logo

Copyright © 2025 Ushodaya Enterprises Pvt. Ltd., All Rights Reserved.