ETV Bharat / business

ಲಾವಾ ಬ್ಲೇಜ್ ಎಕ್ಸ್​ ಬಜೆಟ್​ ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ 15 ಸಾವಿರಕ್ಕೂ ಕಡಿಮೆ! - LAVA Smartphone

author img

By ETV Bharat Karnataka Team

Published : Jul 10, 2024, 12:25 PM IST

ಲಾವಾ ತನ್ನ ಹೊಸ ಸ್ಮಾರ್ಟ್​ಫೋನ್ ಲಾವಾ ಬ್ಲೇಜ್ ಎಕ್ಸ್​ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಲಾವಾ ಬ್ಲೇಜ್ ಎಕ್ಸ್​ ಬಜೆಟ್​ ಸ್ಮಾರ್ಟ್​ಫೋನ್
ಲಾವಾ ಬ್ಲೇಜ್ ಎಕ್ಸ್​ ಬಜೆಟ್​ ಸ್ಮಾರ್ಟ್​ಫೋನ್ (IANS)

ನವದೆಹಲಿ: ದೇಶೀಯ ಸ್ಮಾರ್ಟ್​ಫೋನ್ ಬ್ರಾಂಡ್ ಲಾವಾ ಬುಧವಾರ ತನ್ನ ಬ್ಲೇಜ್ ಸರಣಿಯ ಹೊಸ ಬಜೆಟ್​ ಸ್ಮಾರ್ಟ್​ಪೋನ್ ಲಾವಾ ಬ್ಲೇಜ್ ಎಕ್ಸ್ ಅನ್ನು ಬಿಡುಗಡೆ ಮಾಡಿದೆ. ಹೊಸ ಬ್ಲೇಜ್ ಎಕ್ಸ್ ಸ್ಟಾರ್ ಲೈಟ್ ಪರ್ಪಲ್ ಮತ್ತು ಟೈಟಾನಿಯಂ ಗ್ರೇ ಎಂಬ ಎರಡು ಅದ್ಭುತ ಬಣ್ಣಗಳಲ್ಲಿ ಲಭ್ಯವಿದೆ. ಇದು ಜುಲೈ 20 ರಿಂದ ಲಾವಾ ಇ-ಸ್ಟೋರ್ ಮತ್ತು ಅಮೆಜಾನ್ ನಲ್ಲಿ 13,999 ರೂ.ಗಳ ಆರಂಭಿಕ ಬೆಲೆಯಲ್ಲಿ (ಬ್ಯಾಂಕ್ ಕೊಡುಗೆಗಳನ್ನು ಒಳಗೊಂಡಂತೆ) ಹೊಸ ಸ್ಮಾರ್ಟ್​ಫೋನ್ ಲಭ್ಯವಿರುತ್ತದೆ.

ಹೊಸ ಫೋನ್​ ಬಗ್ಗೆ ಲಾವಾ ಇಂಟರ್​ ನ್ಯಾಷನಲ್​ನ ಪ್ರಾಡಕ್ಟ್ ಹೆಡ್ ಸುಮಿತ್ ಸಿಂಗ್ ಮಾತನಾಡಿ, "ಹೊಸ ಬ್ಲೇಜ್ ಎಕ್ಸ್ ಅನ್ನು ಮೂರು ಪ್ರಮುಖ ನಿಯತಾಂಕಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಅವು- ಅಮೋಲೆಡ್ ಡಿಸ್ ಪ್ಲೇ, ಕಾರ್ಯಕ್ಷಮತೆ ಮತ್ತು ಆಕರ್ಷಕ ವಿನ್ಯಾಸ" ಎಂದು ಹೇಳಿದರು.

ಈ ಸ್ಮಾರ್ಟ್​ಫೋನ್ 6.67 ಇಂಚಿನ 120 ಹರ್ಟ್ಜ್ ಡಿಸ್ ಪ್ಲೇ ಹಾಗೂ ಪಂಚ್-ಹೋಲ್ ವಿನ್ಯಾಸ ಹೊಂದಿದೆ. ಹೊಸ ಬ್ಲೇಜ್ ಎಕ್ಸ್ 64 ಎಂಪಿ + 2 ಎಂಪಿ ಹಿಂಭಾಗದ ಕ್ಯಾಮೆರಾ ಹೊಂದಿದ್ದು, ಸೋನಿ ಸೆನ್ಸರ್ ಮತ್ತು 16 ಎಂಪಿ ಮುಂಭಾಗದ ಕ್ಯಾಮೆರಾ ಹೊಂದಿದೆ.

ಇದು ಡ್ಯುಯಲ್ ವ್ಯೂ ವೀಡಿಯೊ, ಫಿಲ್ಮ್, ಪ್ರೊ ವಿಡಿಯೋ, ಸ್ಲೋ ಮೋಷನ್, ಟೈಮ್ ಲ್ಯಾಪ್ಸ್, ಯುಹೆಚ್ ಡಿ, ಜಿಐಎಫ್, ಬ್ಯೂಟಿ, ಎಚ್​ಡಿಆರ್, ನೈಟ್, ಪೋರ್ಟ್ರೇಟ್, ಎಐ, ಪ್ರೊ, ಪನೋರಮಾ, ಫಿಲ್ಟರ್​ಗಳು, ಮ್ಯಾಕ್ರೊ, ಎಐ ಎಮೋಜಿ ಸೇರಿದಂತೆ ಹಲವಾರು ಶೂಟಿಂಗ್ ಮೋಡ್​ ಗಳನ್ನು ನೀಡುತ್ತದೆ.

ಇದಲ್ಲದೆ, ಸಾಧನವು ಇತ್ತೀಚಿನ ಮೀಡಿಯಾಟೆಕ್ ಡೈಮೆನ್ಸಿಟಿ 6300 ಪ್ರೊಸೆಸರ್ ಮತ್ತು ಟೈಪ್ ಸಿ ಪೋರ್ಟ್ ಮತ್ತು 33 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಜೊತೆಗೆ 5000 ಎಂಎಎಚ್ ಬ್ಯಾಟರಿಯನ್ನು ಒಳಗೊಂಡಿದೆ.

2009 ರಲ್ಲಿ ಸ್ಥಾಪನೆಯಾದ ಲಾವಾ ಇಂಟರ್ ನ್ಯಾಷನಲ್ ಲಿಮಿಟೆಡ್ ಭಾರತೀಯ ಮೊಬೈಲ್ ಹ್ಯಾಂಡ್ ಸೆಟ್ ತಯಾರಕ ಕಂಪನಿಯಾಗಿದೆ. ಪ್ರಾರಂಭದಿಂದಲೂ, ಕಂಪನಿಯು ಮೊಬೈಲ್ ಹ್ಯಾಂಡ್ ಸೆಟ್​ಗಳ ವಿನ್ಯಾಸ ಮತ್ತು ತಯಾರಿಕೆಯ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಮುಂಚೂಣಿಯಲ್ಲಿದೆ. 'Create Possibilities' ಎಂಬ ತನ್ನ ಮಾರ್ಗದರ್ಶಿ ತತ್ವದೊಂದಿಗೆ, ಗುಣಮಟ್ಟದ ನವೀನ ಉತ್ಪನ್ನಗಳೊಂದಿಗೆ ಭಾರತದಿಂದ ಮೊದಲ ಜಾಗತಿಕ ಗ್ರಾಹಕ ಬ್ರಾಂಡ್ ಆಗುವ ಮಹತ್ವಾಕಾಂಕ್ಷೆಯನ್ನು ಲಾವಾ ಹೊಂದಿದೆ.

ಇದನ್ನೂ ಓದಿ : ಸಣ್ಣ ನಗರಗಳ ಶೇ 65ರಷ್ಟು ಗ್ರಾಹಕರಿಂದ ಡಿಜಿಟಲ್ ಪಾವತಿ ಬಳಕೆ: ಮುಂಚೂಣಿಯಲ್ಲಿ ಜೆನ್​ ಎಕ್ಸ್​ ಪೀಳಿಗೆ - Digital Payments in India

ETV Bharat Logo

Copyright © 2024 Ushodaya Enterprises Pvt. Ltd., All Rights Reserved.