ETV Bharat / business

ಜಿಯೋ ಬಳಕೆದಾರರಿಗೆ ಬಂಪರ್​ ಆಫರ್!​: ಈ ಒಂದು ರೀಚಾರ್ಜ್​ನೊಂದಿಗೆ ಇಷ್ಟೊಂದು ಲಾಭ, ಯಾವುದಾ ಪ್ಲಾನ್​? - Jio offer - JIO OFFER

Jio ತನ್ನ ಬಳಕೆದಾರರಿಗೆ ಕಡಿಮೆ ಬೆಲೆಯಲ್ಲಿ ಹೊಸ ಆಫರ್​ವೊಂದನ್ನು ಪರಿಚಯಿಸಿದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕು ಎಂದರೆ ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.

ಜಿಯೋ ಬಳಕೆದಾರರಿಗೆ ಬಂಪರ್​ ಆಫರ್!​
ಜಿಯೋ ಬಳಕೆದಾರರಿಗೆ ಬಂಪರ್​ ಆಫರ್!​
author img

By ETV Bharat Karnataka Team

Published : May 2, 2024, 12:27 PM IST

Updated : May 2, 2024, 12:58 PM IST

ಹೈದರಾಬಾದ್​: ಭಾರತೀಯ ಟೆಲಿಕಾಂ ಕಂಪನಿ Jio ತನ್ನ ಬಳಕೆದಾರರಿಗೆ ಸದಾ ಹೊಸ ಆಫರ್​ಗಳನ್ನು ನೀಡುತ್ತಾ ಸುದ್ದಿಯಲ್ಲಿರುತ್ತದೆ. ಇತ್ತೀಚೆಗೆ ತನ್ನದೇ ಆದ OTT ಪ್ಲಾಟ್‌ಫಾರ್ಮ್ 'JioCinema'ನ ಪ್ರೀಮಿಯಂ ಚಂದಾದಾರಿಕೆ ಬೆಲೆಯನ್ನು ತಿಂಗಳಿಗೆ 29 ರೂ.ಗೆ ಇಳಿಸಿದ್ದು, ಗೊತ್ತಿರುವ ವಿಷಯ. ಇದೀಗ ಕೆಲ ಯೋಜನೆಗಳಿಗೆ ಓಟಿಟಿ ಸಬ್​ಸ್ಕ್ರಿಪ್ಷನ್​ ಫ್ರೀ ನೀಡುತ್ತಿದೆ. ಪ್ಲಾನ್​ಗಳು ಹೀಗಿವೆ

₹389 ಪ್ಲಾನ್​: ಕೇವಲ 389 ರೂ. ರೀಚಾರ್ಜ್​ ಮಾಡಿದರೇ ಅನಿಯಮಿತ ಕರೆ ಮತ್ತು 100 ಎಸ್​ಎಂಎಸ್​ ದಿನಕ್ಕೆ 2GB (4G)ಯಂತೆ ಒಟ್ಟು 56 GB ಇಂಟರ್​ನೆಟ್​​ನೊಂದಿಗೆ, ಜಿಯೋ ಸಿನಿಮಾ ಪ್ರೀಮಿಯಂ, ಸೋನಿ ಲೈವ್, ಜಿ5, ಸನ್​ಎನ್‌ಎಕ್ಸ್‌ಟಿ, ಡಿಸ್ಕವರಿ ಪ್ಲಸ್ ಮತ್ತು ಹೆಚ್ಚಿನವು ಸೇರಿದಂತೆ 12 ಒಟಿಟಿ ಸಬ್​ಸ್ಕ್ರಿಪ್ಷನ್​ ಫ್ರೀ ನೀಡಲಿದೆ. ಈ ಯೋಜನೆ ಅನಿಯಮಿತ 5G ಇಂಟರ್​ನೆಟ್​ ಸಹ ಒಳಗೊಂಡಿದೆ. ಇದರ ವ್ಯಾಲಿಡಿಟಿ 28 ದಿನಗಳಾಗಿದೆ.

₹148 ಪ್ಲಾನ್: ಎರಡನೇ ಯೋಜನೆ ರೂ.148 ಆಗಿದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಅಲ್ಲದೇ ಇದರಲ್ಲೂ ಮೊದಲ ಯೋಜನೆಯಂತೆ 12 ಓಟಿಟಿ ಸಬ್​ಸ್ಕ್ರಿಪ್ಷನ್​ ಉಚಿತವಾಗಿ ನೀಡಲಾಗುತ್ತದೆ. ಜತೆಗೆ 10GB ಡೇಟಾವನ್ನೂ ಒಳಗೊಂಡಿದೆ.

₹1,198 ಪ್ಲಾನ್​: ಮೂರನೇ ಯೋಜನೆ ರೂ.1,198 ಆಗಿದೆ. ಇದು 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದು ಮೊದಲ ಪ್ಲಾನ್​ನಲ್ಲಿ ಒದಗಿಸುವ 12 OTT ಸಬ್‌ಸ್ಕ್ರಿಪ್ಷನ್‌ಗಳೊಂದಿಗೆ ಹೆಚ್ಚುವರಿಯಾಗಿ ಪ್ರೈಮ್ ವಿಡಿಯೋ ಮೊಬೈಲ್ ಸಬ್‌ಸ್ಕ್ರಿಪ್ಶನ್, ಡಿಸ್ನಿ+ ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಷನ್‌ಗಳನ್ನು ಉಚಿತವಾಗಿ ಒದಗಿಸುತ್ತದೆ. ಈ ಯೋಜನೆಯ ಹೆಚ್ಚುವರಿ ಪ್ರಯೋಜನಗಳು ದಿನಕ್ಕೆ 4G ಯೊಂದಿಗೆ 2 GB ಡೇಟಾ, ಅನಿಯಮಿತ ಕರೆ ಮತ್ತು 100 ಉಚಿತ ಎಸ್​ಎಂಎಸ್​ ಸೇವೆಯನ್ನು ಹೊಂದಿದೆ.

₹4,498 ಯೋಜನೆ: ಕೊನೆಯದಾಗಿ 4,498 ಬೆಲೆಯ ವಾರ್ಷಿಕ ಸಬ್‌ಸ್ಕ್ರಿಪ್ಶನ್ ಯೋಜನೆ ಇದಾಗಿದೆ. 365 ದಿನಗಳ ಜೊತೆಗೆ 5G ಯೊಂದಿಗೆ 2 GB ಡೇಟಾ, 14 OTT ಪ್ಲಾಟ್‌ಫಾರಂಗಳಿಗೆ ಉಚಿತವಾಗಿ ಪ್ರವೇಶ ಪಡೆಯಬಹುದಾಗಿದೆ. ಈ ಯೋಜನೆಯೊಂದಿಗೆ ಬಳಕೆದಾರರು ಹೆಚ್ಚುವರಿಯಾಗಿ 78 GB 4G ಡೇಟಾ ಸಹ ಪಡೆಯಬಹುದು. ಒಮ್ಮೆ ಈ ಯೋಜನೆ ರೀಚಾರ್ಜ್ ಮಾಡಿದರೆ ಒಂದು ವರ್ಷದ ಜೊತೆಗೆ ಈ ಪ್ರಯೋಜನಗಳನ್ನು ಪಡೆಯಬಹುದು.

ಇದನ್ನೂ ಓದಿ: WhatsApp ಬಳಕೆದಾರರಿಗೆ ಗುಡ್​ ನ್ಯೂಸ್​; ಶೀಘ್ರವೇ ಬರಲಿದೆ ಈ ಹೊಸ ವೈಶಿಷ್ಟ್ಯ - WhatsApp In App Dialer

Last Updated : May 2, 2024, 12:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.