ETV Bharat / business

ಜಿಯೋ ಬಂಪರ್​ ಆಫರ್​: ಕೇವಲ ₹49 ರೂ.ಗಳಲ್ಲೇ IPL​ ಪಂದ್ಯಗಳನ್ನು ವೀಕ್ಷಿಸಿ!​ - Jio Cricket Plan - JIO CRICKET PLAN

ಕ್ರಿಕೆಟ್​ ಪ್ರೇಮಿಗಳಿಗಾಗಿ ರಿಲಾಯನ್ಸ್​ ಜಿಯೋ ಕಂಪೆನಿ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.

ಜಿಯೋ ಬಂಪರ್​ ಆಫರ್​: ಕೇವಲ ₹49 ರೂ.ಗಳಲ್ಲೇ ಐಪಿಎಲ್​ ಪಂದ್ಯಗಳನ್ನು ವೀಕ್ಷಿಸಿ!​

author img

By ETV Bharat Karnataka Team

Published : Mar 26, 2024, 10:35 AM IST

ಭಾರತದಲ್ಲಿ ಎಲ್ಲಾ ಕ್ರೀಡೆಗಳಿಗೆ ಹೋಲಿಕೆ ಮಾಡಿದರೆ ಕ್ರಿಕೆಟ್​ ಮೇಲೆ ಜನರಿಗೆ ಅತೀ ಹೆಚ್ಚು ಕ್ರೇಜ್ ಇದೆ. ಇದನ್ನು ಆರಾಧಿಸುವವರ ಸಂಖ್ಯೆಯೂ ​ದಿನೇ ದಿನೆ ಏರುತ್ತಲೇ ಇದೆ. ಅದರಲ್ಲೂ ಐಪಿಎಲ್​ ಬಂದರೆ ಸಾಕು ಎರಡು ತಿಂಗಳ ಕಾಲ ಕ್ರಿಕೆಟ್​ ಪ್ರೇಮಿಗಳಿಗೆ ಹಬ್ಬವೇ ಸರಿ. ಇಂತಹ ಐಪಿಎಲ್​ ಪಂದ್ಯಗಳನ್ನು ಅನ್​ಲೈನ್​ನಲ್ಲಿ ಅತೀ ಕಡಿಮೆ ದರದಲ್ಲಿ ಯಾವುದೇ ಅಡೆತಡೆಯಿಲ್ಲದೇ ವೀಕ್ಷಿಸಲೆಂದು ರಿಲಾಯನ್ಸ್​ ಜಿಯೋ ಕಂಪೆನಿ ಅತೀ ಕಡಿಮೆ ಬೆಲೆಯ ಹೊಸ ಪ್ಲಾನ್‌​ವೊಂದನ್ನು ಜಾರಿಗೆ ತಂದಿದೆ.

ವಾಸ್ತವವಾಗಿ ಇದು ಆಡ್-ಆನ್ ಡೇಟಾ ಯೋಜನೆಯಾಗಿದೆ. ನೀವು ಕೇವಲ 49 ರೂಪಾಯಿಗೆ 25 GB 4G ಡೇಟಾ ಪಡೆಯಬಹುದು. ಇದರ ವ್ಯಾಲಿಡಿಟಿ 24 ಗಂಟೆಗಳಾಗಿರಲಿದೆ. 25 GB ಡೇಟಾ ಸಂಪೂರ್ಣವಾಗಿ ಬಳಕೆಯಾದ ನಂತರ 64kbps ವೇಗದಲ್ಲಿ ಇಂಟರ್ನೆಟ್ ಬಳಸಬಹುದು. ಈ ಜಿಯೋ ಕ್ರಿಕೆಟ್ ಯೋಜನೆ ಕೇವಲ ಡೇಟಾ ಯೋಜನೆ ಎಂಬುದು ನಿಮಗೆ ತಿಳಿದಿರಲಿ. ಇದರಲ್ಲಿ ಯಾವುದೇ ಕರೆ ಮತ್ತು SMS ಸೇವೆಗಳು ಲಭ್ಯವಿರುವುದಿಲ್ಲ. ಇದಲ್ಲದೆ ಇದರ ವ್ಯಾಲಿಡಿಟಿ ಕೇವಲ 24 ಗಂಟೆಗಳಾಗಿರುವುದರಿಂದ ಕ್ಯಾರಿ ಫಾರ್​ವರ್ಡ್​ ಸಾಧ್ಯವಿಲ್ಲ.

ಟಾಟಾ ಐಪಿಎಲ್ 2024 ಟೂರ್ನಿ ಹಿನ್ನೆಲೆಯಲ್ಲಿ ಜಿಯೋ ಕ್ರಿಕೆಟ್​ ಯೋಜನೆ ತಂದಿದೆ. ಇದರೊಂದಿಗೆ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಮಾತ್ರವಲ್ಲದೆ ನಿಮ್ಮ ಲ್ಯಾಪ್‌ಟಾಪ್ ಮತ್ತು ಹಾಟ್‌ಸ್ಪಾಟ್‌ಗೆ ಕನೆಕ್ಟ್​ ಆಗಿರುವ ಸ್ಮಾರ್ಟ್ ಟಿವಿಯಲ್ಲಿಯೂ ಪಂದ್ಯಗಳನ್ನು ಆನಂದಿಸಬಹುದು. ಈ ಡೇಟಾ ಪ್ಲಾನ್ ಮೂಲಕ ಬಳಕೆದಾರರು 4K ರೆಸಲ್ಯೂಶನ್‌ನಲ್ಲಿ IPL ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಿದೆ.

ಏರ್ಟೆಲ್ ಪ್ಲಾನ್‌: ರಿಲಯನ್ಸ್ ಜಿಯೋದಂತೆ ಏರ್‌ಟೆಲ್ ಕೂಡ 49 ರೂಪಾಯಿ ಡೇಟಾ ಯೋಜನೆ ನೀಡುತ್ತಿದೆ. ಈ ಯೋಜನೆಯು ಒಂದು ದಿನದ ಮಾನ್ಯತೆಯೊಂದಿಗೆ 20 GB 4G ಡೇಟಾ ನೀಡುತ್ತದೆ. ಒಂದು ವೇಳೆ ನೀವು ಜಿಯೋ ಮತ್ತು ಏರ್‌ಟೆಲ್ 5G ಬಳಕೆದಾರರಾಗಿದ್ದಲ್ಲಿ ಈ ಯೋಜನೆಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಈ ಎರಡು ಕಂಪೆನಿಗಳು ಅನೇಕ ನಗರಗಳಲ್ಲಿ ಅನಿಯಮಿತ 5G ಡೇಟಾವನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿವೆ.

ಜಿಯೋ ಕ್ರಿಕೆಟ್ ಪ್ಲಾನ್​: ಐಪಿಎಲ್ ಆರಂಭದಲ್ಲಿ ಜಿಯೋ 444 ರೂ ಮತ್ತು 667 ರೂಪಾಯಿಯ ಎರಡು ಕ್ರಿಕೆಟ್ ಯೋಜನೆಗಳನ್ನು ಪರಿಚಯಿಸಿತ್ತು. 444 ರೂ ಯೋಜನೆಯಲ್ಲಿ ಬಳಕೆದಾರರು 60 ದಿನಗಳ ಮಾನ್ಯತೆಯೊಂದಿಗೆ 100 GB ಡೇಟಾ ಪಡೆಯುತ್ತಾರೆ. 667 ರೂ ಯೋಜನೆಯಲ್ಲಿ 90 ದಿನಗಳ ಮಾನ್ಯತೆಯೊಂದಿಗೆ 150 ಜಿಬಿ ಡೇಟಾ ಬಳಸಬಹುದಾಗಿದೆ. ಆದರೆ ಇವೆರಡೂ ಪ್ರಿಪೇಯ್ಡ್ ಡೇಟಾ ಯೋಜನೆಗಳಾಗಿದ್ದರಿಂದ ಯಾವುದೇ ಕರೆಗಳು ಅಥವಾ SMS ಸೇವೆಗಳು ಇರುವುದಿಲ್ಲ.

ಇದನ್ನೂ ಓದಿ: ಮೊಬೈಲ್ ರಿಚಾರ್ಜ್ ಮುಗಿದಿದೆಯೇ? ಈ ವಿಧಾನದಿಂದ ತುರ್ತು ವ್ಯಾಲಿಡಿಟಿ ಲೋನ್ ತೆಗೆದುಕೊಳ್ಳಿ - Airtel Emergency Validity Loan

ETV Bharat Logo

Copyright © 2025 Ushodaya Enterprises Pvt. Ltd., All Rights Reserved.