ETV Bharat / business

ಅಂತಾರಾಷ್ಟ್ರೀಯ ಸಕ್ಕರೆ ಮಂಡಳಿ ಸಭೆ ಜೂ.25ರಿಂದ: 30 ದೇಶಗಳ ಪ್ರತಿನಿಧಿಗಳು ಭಾಗಿ - ISO Council Meeting - ISO COUNCIL MEETING

ಅಂತಾರಾಷ್ಟ್ರೀಯ ಸಕ್ಕರೆ ಮಂಡಳಿಯ ಸಭೆಯಲ್ಲಿ ಪಾಲ್ಗೊಳ್ಳಲು 30 ದೇಶಗಳ ಪ್ರತಿನಿಧಿಗಳು ಭಾರತಕ್ಕೆ ಆಗಮಿಸಿದ್ದಾರೆ.

ಅಂತಾರಾಷ್ಟ್ರೀಯ ಸಕ್ಕರೆ ಮಂಡಳಿ ಸಭೆ ಆರಂಭ
ಅಂತಾರಾಷ್ಟ್ರೀಯ ಸಕ್ಕರೆ ಮಂಡಳಿ ಸಭೆ ಆರಂಭ (IANS (ಸಾಂದರ್ಭಿಕ ಚಿತ್ರ))
author img

By ETV Bharat Karnataka Team

Published : Jun 24, 2024, 7:47 PM IST

ನವದೆಹಲಿ: ಸಕ್ಕರೆ ಮತ್ತು ಜೈವಿಕ ಇಂಧನ ಕ್ಷೇತ್ರದ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಜೂನ್ 25ರಿಂದ 27ರವರೆಗೆ ದೆಹಲಿಯಲ್ಲಿ ಆಯೋಜಿಸಿರುವ ಐಎಸ್ಒ (ಇಂಟರ್ ನ್ಯಾಷನಲ್ ಶುಗರ್ ಆರ್ಗನೈಸೇಶನ್) ಕೌನ್ಸಿಲ್ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಪಾಲ್ಗೊಳ್ಳಲು 30ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಮತ್ತು ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಈಗಾಗಲೇ ಭಾರತಕ್ಕೆ ಆಗಮಿಸಿದ್ದಾರೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಸೋಮವಾರ ತಿಳಿಸಿದೆ.

ಭಾರತವು ವಿಶ್ವದ ಅತಿದೊಡ್ಡ ಗ್ರಾಹಕ ಮತ್ತು ಎರಡನೇ ಅತಿದೊಡ್ಡ ಸಕ್ಕರೆ ಉತ್ಪಾದಕನಾಗಿರುವುದರಿಂದ, ಐಎಸ್ಒ ಕೌನ್ಸಿಲ್ ಭಾರತವನ್ನು 2024ರ ಸಭೆಯ ಆತಿಥೇಯ ದೇಶವಾಗಿ ನಾಮನಿರ್ದೇಶನ ಮಾಡಿದೆ.

ಸಭೆಯ ಭಾಗವಾಗಿ, ಜೈವಿಕ ಇಂಧನ ಮತ್ತು ಇತರ ಉಪ ಉತ್ಪನ್ನಗಳ ಉತ್ಪಾದನೆಯಲ್ಲಿ ದೇಶವು ಇತ್ತೀಚಿನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದನ್ನು ಪ್ರದರ್ಶಿಸಲು, ಸೋಮವಾರ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿರುವ ಧಾನ್ಯ ಆಧಾರಿತ ಡಿಸ್ಟಿಲರಿಗೆ ಅಂತಾರಾಷ್ಟ್ರೀಯ ಪ್ರತಿನಿಧಿಗಳ ಕೈಗಾರಿಕಾ ಪ್ರವಾಸದೊಂದಿಗೆ ಸರಣಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ.

ಜೂನ್ 25ರಂದು ದೆಹಲಿಯ ಭಾರತ್ ಮಂಟಪದಲ್ಲಿ 'ಸಕ್ಕರೆ ಮತ್ತು ಜೈವಿಕ ಇಂಧನಗಳು - ಉದಯೋನ್ಮುಖ ವಿಚಾರಗಳು' (Sugar and Biofuels – Emerging Vistas) ಹೆಸರಿನ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ.

ಅಂತಾರಾಷ್ಟ್ರೀಯ ಪ್ರತಿನಿಧಿಗಳು, ಭಾರತೀಯ ಸಕ್ಕರೆ ಕಾರ್ಖಾನೆಗಳ ಉನ್ನತ ಆಡಳಿತ ಮಂಡಳಿಯ ಪ್ರತಿನಿಧಿಗಳು, ಐಎಸ್ಎಂಎ ಮತ್ತು ಎನ್ಎಫ್​ಸಿಎಸ್ಎಫ್​ನಂತಹ ಕೈಗಾರಿಕಾ ಸಂಘಗಳು ಮತ್ತು ತಾಂತ್ರಿಕ ತಜ್ಞರು ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಈ ವೇದಿಕೆಯು ಜಾಗತಿಕ ಸಕ್ಕರೆ ವಲಯ, ಜೈವಿಕ ಇಂಧನಗಳು, ಸುಸ್ಥಿರತೆ ಮತ್ತು ರೈತರ ಪಾತ್ರದ ಬಗ್ಗೆ ವಿಶ್ವದ ಭವಿಷ್ಯದ ದೃಷ್ಟಿಕೋನವನ್ನು ಚರ್ಚಿಸಲು ವಿಶ್ವದ ವಿವಿಧ ಭಾಗಗಳ 200ಕ್ಕೂ ಹೆಚ್ಚು ಪ್ರತಿನಿಧಿಗಳಿಗೆ ಅವಕಾಶ ನೀಡಲಿದೆ.

ಇಂಟರ್ ನ್ಯಾಷನಲ್ ಶುಗರ್ ಆರ್ಗನೈಸೇಶನ್ (ಐಎಸ್ಒ) ಇದು ಯುಎನ್-ಸಂಯೋಜಿತ ಸಂಸ್ಥೆಯಾಗಿದ್ದು, ಲಂಡನ್​ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಸಂಸ್ಥೆಯು ಸುಮಾರು 85 ದೇಶಗಳನ್ನು ಸದಸ್ಯರನ್ನಾಗಿ ಹೊಂದಿದ್ದು, ವಿಶ್ವದ ಸಕ್ಕರೆ ಉತ್ಪಾದನೆಯ ಸುಮಾರು 90 ಪ್ರತಿಶತ ದೇಶಗಳನ್ನು ಒಳಗೊಂಡಿದೆ. ಸಕ್ಕರೆ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವಲ್ಲಿ ಪರಸ್ಪರ ತಿಳುವಳಿಕೆ ಮತ್ತು ಪ್ರಗತಿಪರ ವಿಧಾನಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ಸಕ್ಕರೆ ಉತ್ಪಾದಿಸುವ, ಬಳಸುವ ಮತ್ತು ವ್ಯಾಪಾರ ಮಾಡುವ ರಾಷ್ಟ್ರಗಳನ್ನು ಒಟ್ಟಿಗೆ ತರುವುದು ಇದರ ಉದ್ದೇಶವಾಗಿದೆ.

ಇದನ್ನೂ ಓದಿ: ಏರುಗತಿಯಲ್ಲಿ ಗೋಧಿ ಬೆಲೆ: ದಾಸ್ತಾನಿಗೆ ಮಿತಿ ವಿಧಿಸಿ ಕೇಂದ್ರ ಸರ್ಕಾರ ಆದೇಶ - Wheat Prices Rise

ETV Bharat Logo

Copyright © 2024 Ushodaya Enterprises Pvt. Ltd., All Rights Reserved.