ETV Bharat / business

ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಳ: ಶೇ.1ರಷ್ಟು ಜನರಲ್ಲಿ 40% ಸಂಪತ್ತು ಕೇಂದ್ರೀಕರಣ

author img

By PTI

Published : Mar 21, 2024, 9:58 AM IST

ದೇಶದ ಪ್ರತೀ ಪ್ರಜೆಯೂ ಆರ್ಥಿಕ ಸಬಲತೆ ಕಾಣಬೇಕು ಎಂಬುದು ಸರ್ಕಾರಗಳ ಧ್ಯೇಯವಾದರೂ, ಶ್ರೀಮಂತರು ಮತ್ತಷ್ಟು ಸಿರಿವಂತರಾಗುತ್ತಿರುವುದು ಕಂಡುಬಂದಿದೆ.

ದೇಶದಲ್ಲಿ ಆರ್ಥಿಕ ಅಸಮಾನತೆ
ದೇಶದಲ್ಲಿ ಆರ್ಥಿಕ ಅಸಮಾನತೆ

ನವದೆಹಲಿ: ದೇಶದಲ್ಲಿ ಆರ್ಥಿಕ ಅಸಮಾನತೆಯ ಅಂತರ ಬೆಳೆಯುತ್ತಲೇ ಇದೆ. ಸಂಪತ್ತು ಕೆಲವೇ ಜನರಲ್ಲಿ ಕ್ರೋಢೀಕರಣವಾಗುತ್ತಿದೆ. ಇದು ಬಡವ ಮತ್ತು ಶ್ರೀಮಂತರ ನಡುವಿನ ಅಂತರವನ್ನು ಮತ್ತಷ್ಟು ಹಿಗ್ಗಿಸುತ್ತಿದೆ ಎಂಬುದು ಅಧ್ಯಯನದಲ್ಲಿ ತಿಳಿದುಬಂದಿದೆ.

2000ನೇ ಇಸ್ವಿಯಿಂದ ಸಂಪತ್ತಿನ ಕ್ರೋಢೀಕರಣದ ಪ್ರಮಾಣ ಹೆಚ್ಚಾಗುತ್ತಿದೆ. ವಿಚಿತ್ರ ಮತ್ತು ಅಚ್ಚರಿಯ ಅಂಶವೆಂದರೆ, ದೇಶದ 1 ಪ್ರತಿಶತದಷ್ಟು ಜನರಲ್ಲಿ ಶೇಕಡಾ 40ರಷ್ಟು ಸಂಪತ್ತು ಇದೆ. ಅವರ ಆದಾಯವು ಶೇ.22.6 ರಷ್ಟಿದ್ದರೆ ದೇಶದ ಉಳಿದ ಜನರಿಗೆ ಹೋಲಿಸಿದರೆ ಅವರ ಸಂಪತ್ತಿನ ಪಾಲು ಬರೋಬ್ಬರಿ ಶೇ.40.1ರಷ್ಟಿದೆ.

ಪ್ಯಾರಿಸ್​ನ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ವರ್ಲ್ಡ್ ಇನ್​ಇಕ್ವಾಲಿಟಿ ಲ್ಯಾಬ್​ನ ಥಾಮಸ್ ಪಿಕೆಟ್ಟಿ, ಹಾರ್ವರ್ಡ್ ಕೆನಡಿ ಸ್ಕೂಲ್ ಮತ್ತು ವರ್ಲ್ಡ್ ಇನ್​ಇಕ್ವಾಲಿಟಿ ಲ್ಯಾಬ್​ನ ಲ್ಯೂಕಾಸ್ ಚಾನ್ಸೆಲ್ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯ ಮತ್ತು ವಿಶ್ವ ಇನ್​ಇಕ್ವಾಲಿಟಿ ಪ್ರಯೋಗಾಲಯದ ನಿತಿನ್ ಕುಮಾರ್ ಭಾರ್ತಿ ಅವರು ಪತ್ರಿಕೆಯೊಂದಕ್ಕೆ ಬರೆದ ಪ್ರಬಂಧದಲ್ಲಿ ಈ ಅಂಶವಿದೆ.

1922ರಿಂದ 2023ರ ನಡುವೆ ಭಾರತದಲ್ಲಿ ಆದಾಯ ಮತ್ತು ಸಂಪತ್ತಿನ ಅಸಮಾನತೆ ಎಂಬ ಶೀರ್ಷಿಕೆಯಡಿ ಪ್ರಬಂಧ ಬರೆದಿದ್ದು, ಅದರಲ್ಲಿ 2014-15ರಿಂದ 2022-23ರ ಕೆಲವೇ ವ್ಯಕ್ತಿಗಳಲ್ಲಿ ಅತೀ ಹೆಚ್ಚಿನ ಸಂಪತ್ತಿನ ಕೇಂದ್ರೀಕರಣವಾಗುತ್ತಿದೆ ಎಂಬುದನ್ನು ಗುರುತಿಸಿದ್ದಾರೆ. ಅದರಲ್ಲೂ 2022-23ರಲ್ಲಿ ದೇಶದ ಕೇಲವ 1ರಷ್ಟು ಜನರಲ್ಲಿ ಮಾತ್ರ ಶೇ.22.6ರಷ್ಟು ಆದಾಯ ಮತ್ತು ಶೇ.40.1ರಷ್ಟು ಸಂಪತ್ತಿನ ಷೇರುಗಳಿವೆ. ಇದು ವಿಶ್ವದ ಆಫ್ರಿಕಾ, ಬ್ರೆಜಿಲ್ ಮತ್ತು ಅಮೆರಿಕ ದೇಶಕ್ಕಿಂತಲೂ ಅಧಿಕ ಎಂದು ವಿಶ್ಲೇಷಿಸಲಾಗಿದೆ.

ತೆರಿಗೆ ವ್ಯವಸ್ಥೆಯಲ್ಲಿ ಲೋಪ: ಜನರ ನಿವ್ವಳ ಸಂಪತ್ತಿನ ಲೆಕ್ಕಾಚಾರ ತಾಳೆ ಹಾಕಿದಾಗ ಭಾರತೀಯ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಲೋಪ ಇರುವುದು ಇದಕ್ಕೆ ಕಾರಣ ಎಂದು ತಿಳಿದುಬರುತ್ತದೆ. 2022-23ರಲ್ಲಿ 167 ಶ್ರೀಮಂತ ಕುಟುಂಬಗಳ ನಿವ್ವಳ ಸಂಪತ್ತಿನ ಮೇಲೆ ಪ್ರತಿಶತ 2ರಷ್ಟು ಸೂಪರ್​ ತೆರಿಗೆ ವಿಧಿಸಲಾಗಿದೆ. ಅವರ ಆದಾಯವು ರಾಷ್ಟ್ರೀಯ ಆದಾಯದ ಶೇ.0.5ರಷ್ಟಿದೆ. ಜಾಗತೀಕರಣದ ಪ್ರಭಾವದಿಂದಾಗಿ ಸಿರಿವಂತರು ಮಾತ್ರ ಪ್ರಯೋಜನ ಪಡೆಯುತ್ತಿದ್ದಾರೆ. ಹೀಗಾಗಿ, ಆದಾಯ ಮತ್ತು ಸಂಪತ್ತು ಎರಡನ್ನೂ ಸರಿದೂರಿಸಲು ತೆರಿಗೆ ವ್ಯವಸ್ಥೆಯ ಪುನರ್ರಚನೆ ಮತ್ತು ಆರೋಗ್ಯ, ಶಿಕ್ಷಣ ಮತ್ತು ಆಹಾರ ಕ್ಷೇತ್ರದಲ್ಲಿ ಸಾರ್ವಜನಿಕ ಹೂಡಿಕೆಗಳು ಹೆಚ್ಚಬೇಕಿದೆ ಎಂಬುದನ್ನು ಪ್ರಬಂಧ ಗುರುತಿಸಿದೆ.

ಭಾರತದಲ್ಲಿ ಆರ್ಥಿಕ ಮಾಹಿತಿ ಘೋಷಣೆ ಸ್ವೀಕಾರಾರ್ಹವಾಗಿಲ್ಲ ಮತ್ತು ಕಳಪೆಯಾಗಿದೆ. ಪೆರು, ಯೆಮೆನ್ ಮತ್ತು ಬ್ರೆಜಿಲ್​, ದಕ್ಷಿಣ ಆಫ್ರಿಕಾ ಮಾದರಿ ಭಾರತದಲ್ಲಿ ಶೇ.1ರಷ್ಟು ಸಿರಿವಂತ ಕುಟುಂಬಗಳಲ್ಲಿ ಮಾತ್ರ ಸಂಪತ್ತು ಇದೆ. ಅದರಲ್ಲೂ ಬ್ರೆಜಿಲ್ (ಶೇ.85.6ರಷ್ಟು) ಮತ್ತು ದಕ್ಷಿಣ ಆಫ್ರಿಕಾದಲ್ಲಿ (ಶೇ.79.7ರಷ್ಟು) ಇದರ ಪ್ರಮಾಣ ವಿಪರೀತವಾಗಿದೆ. 1922ರಲ್ಲಿ ಭಾರತದಲ್ಲಿದ್ದ ಶೇ.13ರಷ್ಟು ಸಂಪತ್ತಿನ ಕೇಂದ್ರೀಕರಣ ಬಳಿಕ ಅದು ಶೇ.20ಕ್ಕೆ ಹೆಚ್ಚಿತು.

ನಂತರ ನಾಟಕೀಯ ಕುಸಿತ ಕಂಡು, 1940ರ ದಶಕದಲ್ಲಿ ಭಾರತದ ಸ್ವಾತಂತ್ರ್ಯದ ಸಮಯದಲ್ಲಿ ಶೇ.13 ಕ್ಕೆ ಇಳಿಕೆ ಕಂಡಿತು. 1950 ರ ದಶಕದಲ್ಲಿ ತುಸು ಏರಿಕೆಯಾಯಿತು. ನಂತರ ಕುಸಿಯುತ್ತಾ ಸಾಗಿತು. 1982ರ ವೇಳೆಗೆ ಅದು 6.1 ಪ್ರತಿಶತಕ್ಕೆ ಇಳಿದಿತ್ತು. ಇದಕ್ಕೆ ಪ್ರಮುಖ ಕಾರಣವಾಗಿದ್ದು, ಸರ್ಕಾರ ಜಾರಿಗೆ ತಂಡ ಸಮಾಜವಾದಿ ನೀತಿ. ಬಳಿಕ 1991 ರಲ್ಲಿ ಉದಾರೀಕರಣದ ಪರಿಣಾಮವಾಗಿ ಮತ್ತೆ ಸಂಪತ್ತಿನ ಕೇಂದ್ರೀಕರಣ ಏರಿಕೆ ಕಾಣುತ್ತಾ ಸಾಗಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ದೇಶದಲ್ಲಿದ್ದಾರೆ ಶೇ.37 ರಷ್ಟು ಮಹಿಳಾ ಉದ್ಯೋಗಿಗಳು: ಹೈದರಾಬಾದ್​, ಪುಣೆಯಲ್ಲಿ ಅತ್ಯಧಿಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.