ETV Bharat / business

2025-26ಕ್ಕೆ 65 ಬಿಲಿಯನ್​ ಡಾಲರ್​ಗೆ ತಲುಪಲಿದೆ ಭಾರತದ ಜವಳಿ ರಫ್ತು: ಇನ್ವೆಸ್ಟ್ ಇಂಡಿಯಾ ವರದಿ - India textile exports

author img

By ETV Bharat Karnataka Team

Published : Aug 25, 2024, 4:49 PM IST

ಭಾರತದ ಜವಳಿ ರಫ್ತು 65 ಬಿಲಿಯನ್ ಡಾಲರ್​ಗೆ ತಲುಪುವ ನಿರೀಕ್ಷೆಯಿದೆ ಎಂದು ಇನ್ವೆಸ್ಟ್ ಇಂಡಿಯಾ ವರದಿ ತಿಳಿಸಿದೆ.

ಜವಳಿ ಉದ್ಯಮ (ಸಾಂದರ್ಭಿಕ ಚಿತ್ರ
ಜವಳಿ ಉದ್ಯಮ (ಸಾಂದರ್ಭಿಕ ಚಿತ್ರ (IANS)

ನವದೆಹಲಿ: ಭಾರತದ ಜವಳಿ ಉದ್ಯಮವು ವೇಗವಾಗಿ ಬೆಳವಣಿಗೆಯಾಗುತ್ತಿದ್ದು, 2025-26ರ ಆರ್ಥಿಕ ವರ್ಷದ ವೇಳೆಗೆ ದೇಶದ ಜವಳಿ ರಫ್ತು 65 ಬಿಲಿಯನ್ ಡಾಲರ್​ಗೆ ತಲುಪುವ ನಿರೀಕ್ಷೆಯಿದೆ ಎಂದು ಇನ್ವೆಸ್ಟ್ ಇಂಡಿಯಾ ವರದಿ ತಿಳಿಸಿದೆ. ದೇಶೀಯ ಮತ್ತು ರಫ್ತು ಮಾರುಕಟ್ಟೆಗಳೆರಡರಲ್ಲೂ ದೇಶದ ಜವಳಿ ಉತ್ಪಾದನೆಯು ಶೇಕಡಾ 10 ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರದಲ್ಲಿ (ಸಿಎಜಿಆರ್) ಬೆಳೆಯುತ್ತದೆ ಮತ್ತು 2030 ರ ವೇಳೆಗೆ 350 ಬಿಲಿಯನ್ ಡಾಲರ್ ಗಡಿಯನ್ನು ತಲುಪುತ್ತದೆ ಎಂದು ಇನ್ವೆಸ್ಟ್ ಇಂಡಿಯಾ ವರದಿ ಹೇಳಿದೆ.

2022 ರಲ್ಲಿ ಭಾರತೀಯ ಜವಳಿ ಮತ್ತು ಉಡುಪು ಮಾರುಕಟ್ಟೆ ಗಾತ್ರವು ಸುಮಾರು 165 ಬಿಲಿಯನ್ ಡಾಲರ್ ಆಗಿತ್ತು. ಇದರಲ್ಲಿ ದೇಶೀಯ ಮಾರುಕಟ್ಟೆ 125 ಬಿಲಿಯನ್ ಡಾಲರ್ ಮತ್ತು ರಫ್ತು 40 ಬಿಲಿಯನ್ ಡಾಲರ್ ಆಗಿತ್ತು. ಇದರ ಆಧಾರದ ಮೇಲೆ ಹೊಸ ಅಂದಾಜುಗಳನ್ನು ಮಾಡಲಾಗಿದೆ.

"ಪ್ರಧಾನಿ ಮೋದಿಯವರ ದಿಟ್ಟ ಫೈಬರ್-ಟು-ಫ್ಯಾಷನ್ ದೃಷ್ಟಿಕೋನವು ಜವಳಿ ಉದ್ಯಮವನ್ನು ಜಾಗತಿಕ ಮಾರುಕಟ್ಟೆಯಲ್ಲಿ ಚಾಲನಾ ಶಕ್ತಿಯಾಗಲು ಮಾರ್ಗದರ್ಶನ ನೀಡುತ್ತಿದೆ ಮತ್ತು ಸ್ಥಳೀಯ ಕಂಪನಿಗಳಿಗೆ ಸಾಮರ್ಥ್ಯ ಮತ್ತು ತಂತ್ರಜ್ಞಾನವನ್ನು ಒದಗಿಸುತ್ತಿದೆ" ಎಂದು ಇನ್ವೆಸ್ಟ್ ಇಂಡಿಯಾ ಸಂಸ್ಥೆಯು ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದೆ.

ಭಾರತವು ಜಾಗತಿಕವಾಗಿ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಎರಡನೇ ಅತಿದೊಡ್ಡ ತಯಾರಕರಾಗಿ ಹೊರಹೊಮ್ಮಿದೆ. ವಿನಾಶಕಾರಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಭಾರತವು ವಿಶ್ವ ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸಲು ಪ್ರಮುಖ ರಫ್ತುದಾರನಾಗಿ ಹೊರಹೊಮ್ಮಿದ ಸಂದರ್ಭದಲ್ಲಿ ದೇಶದ ಪಿಪಿಇ ಉತ್ಪಾದನೆ ಹೆಚ್ಚಾಗಿದೆ.

600 ಕ್ಕೂ ಹೆಚ್ಚು ಪ್ರಮಾಣೀಕೃತ ಪಿಪಿಇ ಉತ್ಪಾದಿಸುವ ಕಂಪನಿಗಳೊಂದಿಗೆ, ಭಾರತದಲ್ಲಿ ಇದರ ಮಾರುಕಟ್ಟೆಯು 2025 ರ ವೇಳೆಗೆ 92.5 ಬಿಲಿಯನ್ ಡಾಲರ್ ಮೀರುವ ನಿರೀಕ್ಷೆಯಿದೆ. ಇದು 2019 ರಲ್ಲಿ 52.7 ಬಿಲಿಯನ್ ಡಾಲರ್ ಆಗಿತ್ತು. ಜವಳಿ ಉದ್ಯಮವು ಉದ್ಯೋಗಗಳನ್ನು ಸೃಷ್ಟಿಸುವ ಅತಿದೊಡ್ಡ ವಲಯವಾಗಿದ್ದು, 45 ಮಿಲಿಯನ್ ವ್ಯಕ್ತಿಗಳಿಗೆ ಇದು ನೇರ ಉದ್ಯೋಗಗಳನ್ನು ಒದಗಿಸಿದೆ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಹೆಚ್ಚುವರಿಯಾಗಿ 100 ಮಿಲಿಯನ್ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.

ಭಾರತವು ವಿಶ್ವದ ಅತಿದೊಡ್ಡ ಹತ್ತಿ ಉತ್ಪಾದಕ (23 ಪ್ರತಿಶತ) ರಾಷ್ಟ್ರವಾಗಿದ್ದು, ಅತಿ ಹೆಚ್ಚು ಹತ್ತಿ ಕೃಷಿಯ ಪ್ರದೇಶವನ್ನು ಹೊಂದಿದೆ (ವಿಶ್ವ ಪ್ರದೇಶದ 39 ಪ್ರತಿಶತ). ಅಂದಾಜು 6.5 ಮಿಲಿಯನ್ ರೈತರ ಜೀವನೋಪಾಯಕ್ಕೆ ಹತ್ತಿ ಬೆಳೆಯೇ ಆಧಾರವಾಗಿದೆ. ಹೀಗಾಗಿ ದೇಶದಲ್ಲಿ ಜವಳಿ ಉದ್ಯಮಕ್ಕೆ ಸಾಕಷ್ಟು ಕಚ್ಚಾ ವಸ್ತುಗಳು ಲಭ್ಯವಾಗುತ್ತಿವೆ.

ಏಪ್ರಿಲ್ 2000 ರಿಂದ ಮಾರ್ಚ್ 2024 ರವರೆಗೆ, ಬಣ್ಣದ ಮತ್ತು ಮುದ್ರಿತ ಬಟ್ಟೆಗಳು ಸೇರಿದಂತೆ ಭಾರತದ ಜವಳಿ ಕ್ಷೇತ್ರಕ್ಕೆ 4.47 ಬಿಲಿಯನ್ ಡಾಲರ್ ಎಫ್​​ಡಿಐ ಹರಿದು ಬಂದಿದೆ. ಭಾರತವು ವಿಶ್ವದ ಅತಿದೊಡ್ಡ ಜವಳಿ ಮತ್ತು ಉಡುಪು ಉತ್ಪಾದಕರಲ್ಲಿ ಒಂದಾಗಿದೆ. ಜವಳಿ ಉದ್ಯಮವು ದೇಶದ ಜಿಡಿಪಿಗೆ ಸರಿಸುಮಾರು 2.3 ಪ್ರತಿಶತ, ಕೈಗಾರಿಕಾ ಉತ್ಪಾದನೆಗೆ 13 ಪ್ರತಿಶತ ಮತ್ತು ರಫ್ತುಗಳಿಗೆ 12 ಪ್ರತಿಶತದಷ್ಟು ಕೊಡುಗೆ ನೀಡುತ್ತದೆ. ದೇಶವು ಜಾಗತಿಕ ಜವಳಿ ಮತ್ತು ಉಡುಪು ವ್ಯಾಪಾರದಲ್ಲಿ ಶೇಕಡಾ 4 ರಷ್ಟು ಪಾಲನ್ನು ಹೊಂದಿದೆ.

ಇದನ್ನೂ ಓದಿ : ಅನಿಲ್ ಅಂಬಾನಿ ಸೇರಿ 24 ಕಂಪನಿಗಳಿಗೆ ಷೇರು ಮಾರುಕಟ್ಟೆಯಿಂದ 5 ವರ್ಷ ನಿಷೇಧ - SEBI Bars Anil Ambani

ETV Bharat Logo

Copyright © 2024 Ushodaya Enterprises Pvt. Ltd., All Rights Reserved.