ETV Bharat / business

ವಿಶ್ವದ 3ನೇ ಅತಿದೊಡ್ಡ ಹಣಕಾಸು ಕ್ಷೇತ್ರವಾಗಿ ಬೆಳೆದ ಭಾರತದ ಬ್ಯಾಂಕೇತರ ವಲಯ: ಎಸ್​ಬಿಐ ವರದಿ - INDIAS NBFC SECTOR - INDIAS NBFC SECTOR

ಭಾರತದ ಬ್ಯಾಂಕೇತರ ಹಣಕಾಸು ವಲಯವು ವಿಶ್ವದ ಮೂರನೇ ಅತಿದೊಡ್ಡ ಹಣಕಾಸು ವಲಯವಾಗಿ ಬೆಳೆದಿದೆ ಎಂದು ಎಸ್ ಬಿಐ ವರದಿ ತಿಳಿಸಿದೆ.

ವಿಶ್ವದ 3ನೇ ಅತಿದೊಡ್ಡ ಹಣಕಾಸು ಕ್ಷೇತ್ರವಾಗಿ ಬೆಳೆದ ಭಾರತದ ಬ್ಯಾಂಕೇತರ ವಲಯ
ವಿಶ್ವದ 3ನೇ ಅತಿದೊಡ್ಡ ಹಣಕಾಸು ಕ್ಷೇತ್ರವಾಗಿ ಬೆಳೆದ ಭಾರತದ ಬ್ಯಾಂಕೇತರ ವಲಯ (IANS (ಸಾಂದರ್ಭಿಕ ಚಿತ್ರ))
author img

By ETV Bharat Karnataka Team

Published : Jun 18, 2024, 4:06 PM IST

ನವದೆಹಲಿ: ಭಾರತದ ಬ್ಯಾಂಕೇತರ ಹಣಕಾಸು ವಲಯವು ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್ಡಮ್ ನಂತರ ವಿಶ್ವದ ಮೂರನೇ ಅತಿದೊಡ್ಡ ಹಣಕಾಸು ವಲಯವಾಗಿ ಬೆಳೆದಿದೆ ಎಂದು ಎಸ್ ಬಿಐ ವರದಿ ತಿಳಿಸಿದೆ.

ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಪೂರ್ಣ ಪ್ರಮಾಣದ ಬ್ಯಾಂಕಿಂಗ್ ಪರವಾನಗಿಯನ್ನು ಹೊಂದಿರುವುದಿಲ್ಲವಾದ್ದರಿಂದ ಇವು ಸಾರ್ವಜನಿಕರಿಂದ ಠೇವಣಿಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ಆದರೆ ಈ ಸಂಸ್ಥೆಗಳು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಗ್ರಾಹಕರು ಮತ್ತು ವ್ಯವಹಾರಗಳಿಗೆ ಸಾಲ ನೀಡುವತ್ತ ತಮ್ಮ ಗಮನ ಕೇಂದ್ರೀಕರಿಸುತ್ತವೆ.

ಕಳೆದ ದಶಕದಲ್ಲಿ, ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಗಮನಾರ್ಹ ದೃಢತೆಯನ್ನು ಪ್ರದರ್ಶಿಸಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಆರ್ಥಿಕ ವ್ಯವಸ್ಥೆಗಳಿಂದ ಎದುರಾದ ಹಲವಾರು ಸವಾಲುಗಳನ್ನು ನಿವಾರಿಸಿದೆ ಎಂದು ವರದಿ ಹೇಳಿದೆ. ಆಸ್ತಿ ಗುಣಮಟ್ಟದಲ್ಲಿನ ಸುಧಾರಣೆ ಮತ್ತು ಬಲವಾದ ಸ್ಥೂಲ ಅರ್ಥಶಾಸ್ತ್ರದ ಮೂಲಭೂತ ಅಂಶಗಳು ಭಾರತೀಯ ಬ್ಯಾಂಕಿಂಗ್ ವಲಯವನ್ನು ಸುಧಾರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಎಂದು ಅದು ತಿಳಿಸಿದೆ.

ಭಾರತ ಸರ್ಕಾರ ಮತ್ತು ನಿಯಂತ್ರಕ ಸಂಸ್ಥೆಗಳು ಹಣಕಾಸು ಸಂಸ್ಥೆಗಳಿಗೆ ಸಮಾನ ಅವಕಾಶಗಳನ್ನು ಸೃಷ್ಟಿಸುವತ್ತ ಗಮನ ಹರಿಸಿವೆ ಎಂಬ ವಿಷಯವನ್ನು ವರದಿ ಎತ್ತಿ ತೋರಿಸಿದೆ. ಇದು ವಿಲೀನಗಳು ಮತ್ತು ಬಂಡವಾಳ ಒಳಹರಿವಿನ ಮೂಲಕ ಬಲವಾದ ಬ್ಯಾಂಕುಗಳ ರಚನೆ, ಆಡಳಿತ ವ್ಯವಸ್ಥೆಯನ್ನು ಸುಧಾರಿಸುವುದು, ಹಣಕಾಸು ಸೇವೆಗಳ ವ್ಯಾಪ್ತಿ ಮತ್ತು ಗುಣಮಟ್ಟವನ್ನು ವಿಸ್ತರಿಸುವುದು ಮತ್ತು ಡಿಜಿಟಲ್ ಬ್ಯಾಂಕಿಂಗ್ ಅಳವಡಿಕೆಯನ್ನು ಹೆಚ್ಚಿಸುವುದು ಮುಂತಾದ ಉಪಕ್ರಮಗಳನ್ನು ಒಳಗೊಂಡಿದೆ.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ಸರ್ಕಾರವು ಗಣನೀಯ ಬಂಡವಾಳ ಮತ್ತು ನಗದು ಸಂಗ್ರಹಣೆಯ ಮೂಲಕ ಹಣಕಾಸು ಕ್ಷೇತ್ರದ ಸ್ಥಿರತೆಯನ್ನು ಕಾಯ್ದುಕೊಂಡಿತು. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಕೈಗೊಂಡ ಪೂರ್ವಭಾವಿ ಕ್ರಮಗಳಿಂದ ಹಣಕಾಸು ಕ್ಷೇತ್ರ ದೃಢವಾಗಿತ್ತು ಎಂದು ವರದಿ ಉಲ್ಲೇಖಿಸಿದೆ.

ಹಣಕಾಸು ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಆರ್​ಬಿಐನ ಪ್ರಯತ್ನಗಳು ನಿಯಂತ್ರಕ ಕ್ರಮಗಳನ್ನು ಜಾರಿಗೊಳಿಸುವುದನ್ನು ಒಳಗೊಂಡಿವೆ. ಇದು ಆರ್ಥಿಕ ಆಘಾತಗಳ ವಿರುದ್ಧ ವಲಯವು ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸುತ್ತದೆ ಎಂದು ವರದಿಯು ಗಮನಸೆಳೆದಿದೆ. ಈ ಕ್ರಮಗಳು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮಾತ್ರವಲ್ಲದೆ ವಲಯದಲ್ಲಿ ಬೆಳವಣಿಗೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಸಹಾಯ ಮಾಡಿದೆ.

ಇತ್ತೀಚೆಗೆ ಭಾರತದ ಡಿಜಿಟಲ್ ಬ್ಯಾಂಕಿಂಗ್ ವಲಯವು ಗಮನಾರ್ಹ ಪ್ರಗತಿಯನ್ನು ಕಂಡಿದೆ. ಡಿಜಿಟಲ್ ಬ್ಯಾಂಕಿಂಗ್ ಕಡೆಗೆ ಒತ್ತು ನೀಡುವುದು ಈ ಕ್ಷೇತ್ರದ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಿದೆ. ಡಿಜಿಟಲ್ ಪ್ಲಾಟ್ ಫಾರ್ಮ್​ಗಳಿಗೆ ಈ ಪರಿವರ್ತನೆಯು ಹಣಕಾಸು ಸೇವೆಗಳಿಗೆ ಅವಕಾಶಗಳನ್ನು ವಿಸ್ತರಿಸಿದೆ. ಅವುಗಳನ್ನು ಹೆಚ್ಚು ಅಂತರ್ಗತ ಮತ್ತು ಪರಿಣಾಮಕಾರಿಯನ್ನಾಗಿ ಮಾಡಿದೆ.

ಇದನ್ನೂ ಓದಿ : ಭಾರತದ ಔಷಧ ರಫ್ತು ಶೇ 10ರಷ್ಟು ಏರಿಕೆ: ಯುಎಸ್​, ಯುಕೆಯಿಂದ ಅತ್ಯಧಿಕ ಡಿಮ್ಯಾಂಡ್ - INDIA PHARMA EXPORTS

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.