ETV Bharat / business

ಜನವರಿಯಲ್ಲಿ ದೇಶದ ಖನಿಜ ಉತ್ಪಾದನೆ ಶೇ 6ರಷ್ಟು ಏರಿಕೆ - mining and quarrying

ದೇಶದ ಖನಿಜ ಉತ್ಪಾದನೆಯು ಜನವರಿಯಲ್ಲಿ ಶೇ 6 ರಷ್ಟು ಏರಿಕೆಯಾಗಿದೆ.

India records 5.9 pc mineral production increase in January

author img

By ETV Bharat Karnataka Team

Published : Mar 20, 2024, 7:07 PM IST

ನವದೆಹಲಿ : ದೇಶದ ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ ವಲಯದ ಉತ್ಪಾದನೆಯನ್ನು ಸೂಚಿಸುವ ಖನಿಜ ಉತ್ಪಾದನೆ ಸೂಚ್ಯಂಕವು ಈ ವರ್ಷದ ಜನವರಿಯಲ್ಲಿ ಶೇ 5.9ರಷ್ಟು ಏರಿಕೆಯಾಗಿದೆ ಎಂದು ಭಾರತೀಯ ಗಣಿ ಬ್ಯೂರೋ ಬುಧವಾರ ಬಿಡುಗಡೆ ಮಾಡಿದ ಅಂಕಿ - ಅಂಶಗಳು ತಿಳಿಸಿವೆ. 2023-24ರ ಏಪ್ರಿಲ್-ಜನವರಿ ಅವಧಿಯಲ್ಲಿ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಂಚಿತ ಬೆಳವಣಿಗೆಯು ಶೇಕಡಾ 8.3 ರಷ್ಟಿದೆ.

ಜನವರಿ 2024 ರಲ್ಲಿ ಪ್ರಮುಖ ಖನಿಜಗಳ ಉತ್ಪಾದನಾ ಪ್ರಮಾಣ ಹೀಗಿದೆ: ಕಲ್ಲಿದ್ದಲು 998 ಲಕ್ಷ ಟನ್, ಲಿಗ್ನೈಟ್ 41 ಲಕ್ಷ ಟನ್, ನೈಸರ್ಗಿಕ ಅನಿಲ (ಬಳಕೆ) 3073 ಮಿಲಿಯನ್ ಕ್ಯೂಬಿ, ಪೆಟ್ರೋಲಿಯಂ (ಕಚ್ಚಾ) 25 ಲಕ್ಷ ಟನ್, ಬಾಕ್ಸೈಟ್ 2426 ಸಾವಿರ ಟನ್, ಕ್ರೋಮೈಟ್ 251 ಸಾವಿರ ಟನ್, ತಾಮ್ರ 12.6 ಸಾವಿರ ಟನ್, ಚಿನ್ನ 134 ಕೆಜಿ, ಕಬ್ಬಿಣದ ಅದಿರು 252 ಲಕ್ಷ ಟನ್, ಸೀಸ 3 ಸಾವಿರ ಟನ್. ಮ್ಯಾಂಗನೀಸ್ ಅದಿರು 304 ಸಾವಿರ ಟನ್, ಸತು 152 ಸಾವಿರ ಟನ್, ಸುಣ್ಣದ ಕಲ್ಲು 394 ಲಕ್ಷ ಟನ್, ರಂಜಕ 109 ಸಾವಿರ ಟನ್ ಮತ್ತು ಮ್ಯಾಗ್ನಸೈಟ್ 13 ಸಾವಿರ ಟನ್.

ಜನವರಿ 2023 ಕ್ಕೆ ಹೋಲಿಸಿದರೆ 2024 ರ ಜನವರಿಯಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡ ಪ್ರಮುಖ ಖನಿಜಗಳು ಹೀಗಿವೆ: ಮ್ಯಾಗ್ನಸೈಟ್ (90.1 ಶೇಕಡಾ), ತಾಮ್ರದ ಕಾಂಕ್ (34.2 ಶೇಕಡಾ), ಕಲ್ಲಿದ್ದಲು (10.3 ಶೇಕಡಾ), ಸುಣ್ಣದ ಕಲ್ಲು (10 ಶೇಕಡಾ), ಬಾಕ್ಸೈಟ್ (9.8 ಶೇಕಡಾ), ಮ್ಯಾಂಗನೀಸ್ ಅದಿರು (7.8 ಶೇಕಡಾ), ನೈಸರ್ಗಿಕ ಅನಿಲ (ಯು) (5.5 ಶೇಕಡಾ), ಕಬ್ಬಿಣದ ಅದಿರು (5.5 ಶೇಕಡಾ), ಜಿಂಕ್ ಕಾಂಕ್ (1.3 ಶೇಕಡಾ) ಮತ್ತು ಪೆಟ್ರೋಲಿಯಂ (ಕಚ್ಚಾ) (0.7 ಶೇಕಡಾ).

ಉತ್ಪಾದನೆ ಕುಂಠಿತವಾದ ಇತರ ಪ್ರಮುಖ ಖನಿಜಗಳಲ್ಲಿ ಚಿನ್ನ (-23.4%), ಕ್ರೋಮೈಟ್ (-35.2%) ಮತ್ತು ಫಾಸ್ಫರೈಟ್ (-44.4%) ಸೇರಿವೆ.

ವಿಶ್ವದ ಎರಡನೇ ಅತಿದೊಡ್ಡ ಕಲ್ಲಿದ್ದಲು ಬಳಕೆದಾರ ದೇಶವಾದ ಭಾರತವು ಜನವರಿಯಲ್ಲಿ ದಾಖಲೆಯ ಕಲ್ಲಿದ್ದಲು ಆಧಾರಿತ ವಿದ್ಯುತ್​ ಉತ್ಪಾದಿಸಿದೆ. ಹವಾನಿಯಂತ್ರಣಕ್ಕೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ವಿದ್ಯುತ್ ಉತ್ಪಾದನಾ ಸಂಸ್ಥೆಗಳು ಕಲ್ಲಿದ್ದಲು ಮತ್ತು ಇತರ ಪಳೆಯುಳಿಕೆ ಇಂಧನಗಳ ಬಳಕೆಯಲ್ಲಿ ದೊಡ್ಡ ಕಡಿತ ಮಾಡದಿರುವುದು ಇದಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ದೇಶದಲ್ಲಿದ್ದಾರೆ ಶೇ.37 ರಷ್ಟು ಮಹಿಳಾ ಉದ್ಯೋಗಿಗಳು: ಹೈದರಾಬಾದ್​, ಪುಣೆಯಲ್ಲಿ ಅತ್ಯಧಿಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.