ETV Bharat / business

ವರ್ಷಾಂತ್ಯಕ್ಕೆ ಚೀನಾ ಹಿಂದಿಕ್ಕಲಿದೆ ಭಾರತ: ಈ ವಾಹನಗಳ ವಿಶ್ವದ ಅತಿದೊಡ್ಡ ಮಾರುಕಟ್ಟೆಯಾಗಲಿದೆ INDIA - EV 2 wheeler market

author img

By ETV Bharat Karnataka Team

Published : Aug 9, 2024, 1:37 PM IST

2024ರ ವರ್ಷಾಂತ್ಯದ ವೇಳೆಗೆ ಭಾರತವು ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಲಿದೆ ಎಂದು ವರದಿ ತಿಳಿಸಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ನವದೆಹಲಿ: ಭಾರತವು ಈ ವರ್ಷ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ (2ಡಬ್ಲ್ಯೂ) ಮಾರುಕಟ್ಟೆಯಾಗಲಿದೆ ಎಂದು ವರದಿಯೊಂದು ತಿಳಿಸಿದೆ. ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ ದೃಢವಾದ ಆರ್ಥಿಕ ಬೆಳವಣಿಗೆ, ಅಲ್ಪ ದೂರದ ಪ್ರಯಾಣಕ್ಕಾಗಿ ದ್ವಿಚಕ್ರ ವಾಹನಗಳ ಬಳಕೆಗೆ ಗ್ರಾಹಕರ ಆದ್ಯತೆ ಮತ್ತು ಹಂಚಿಕೆಯ ಆಧಾರದ ಬಳಕೆಯ ವಲಯದಲ್ಲಿ ದ್ವಿಚಕ್ರ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಭಾರತವು ಈ ಕ್ಷೇತ್ರದಲ್ಲಿ ಚೀನಾವನ್ನು ಹಿಂದಿಕ್ಕಲಿದೆ.

ಜೊತೆಗೆ ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರುಕಟ್ಟೆಯು ವೇಗವಾಗಿ ಬೆಳೆಯುತ್ತಿದ್ದು, 2024 ರಲ್ಲಿ ಇವುಗಳ ಮಾರಾಟವು ನಾಲ್ಕು ಚಕ್ರದ ಪ್ರಯಾಣಿಕ ಎಲೆಕ್ಟ್ರಿಕ್ ವಾಹನಗಳಿಗಿಂತ ಒಂದೂವರೆ ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ.

Increase demand for electric bikes: 2023 ರಲ್ಲಿ ದ್ವಿಚಕ್ರ ವಾಹನಗಳ ಮಾರಾಟದ ಬೆಳವಣಿಗೆಯು ಶೇಕಡಾ 1 ಕ್ಕಿಂತ ಕೊಂಚ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರುಕಟ್ಟೆಯು ಹೆಚ್ಚಿನ ಬೆಳವಣಿಗೆಯಾಗಲಿದೆ ಮತ್ತು 2024 ರಲ್ಲಿ ಮಾರಾಟವಾಗುವ ಒಟ್ಟಾರೆ ದ್ವಿಚಕ್ರ ವಾಹನಗಳ ಪೈಕಿ ಕಾಲು ಭಾಗದಷ್ಟು ಬ್ಯಾಟರಿ ಚಾಲಿತ ವಾಹನಗಳಿರಲಿವೆ ಎಂದು ನಿರೀಕ್ಷಿಸಲಾಗಿದೆ.

ಮುಖ್ಯ ವಾಹಿನಿಗೆ ಬರಲಿವೆ ಎಲೆಕ್ಟ್ರಿಕ್​ ದ್ವಿಚಕ್ರ ವಾಹನಗಳು: ಈ ಬಗ್ಗೆ ಮಾತನಾಡಿದ ಹಿರಿಯ ವಿಶ್ಲೇಷಕ ಸೌಮೆನ್ ಮಂಡಲ್, ದ್ವಿಚಕ್ರ ವಾಹನ ಮಾರುಕಟ್ಟೆಯು ಗರಿಷ್ಠ ಮಟ್ಟ ತಲುಪುವತ್ತ ಸಾಗುತ್ತಿದೆ. ಆದರೆ, ವಿಶೇಷವಾಗಿ 2025 ರ ನಂತರ ಇದರಲ್ಲಿ ಎಲೆಕ್ಟ್ರಿಕ್ ವಾಹನಗಳ ಪಾಲು ಗಮನಾರ್ಹವಾಗಿರಲಿದೆ. ವಿಶೇಷವಾಗಿ, ಆಗ್ನೇಯ ಏಷ್ಯಾದ ದೇಶಗಳು ಮತ್ತು ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳೇ ಮುಖ್ಯವಾಹಿನಿಗೆ ಬರಲಿವೆ ಎಂದು ಹೇಳಿದರು.

ಟಾಪ್ 10 ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳ ಪೈಕಿ ಮೂರು ಭಾರತದ ಕಂಪನಿಗಳೇ ಆಗಿವೆ. ಅವು - ಓಲಾ ಎಲೆಕ್ಟ್ರಿಕ್, ಟಿವಿಎಸ್ ಮೋಟಾರ್ ಮತ್ತು ಅಥೆರ್ ಎನರ್ಜಿ. ಓಲಾ ಮತ್ತು ಅಥೆರ್ ಗ್ರೀನ್ ಫೀಲ್ಡ್ "ಇವಿ-ಫಸ್ಟ್" ಕಂಪನಿಗಳಾಗಿದ್ದು ಟಿವಿಎಸ್, ಹೀರೋ ಮತ್ತು ಬಜಾಜ್ ನಂತಹ ಅಸ್ತಿತ್ವದಲ್ಲಿರುವ ಕಂಪನಿಗಳಿಗೆ ಪೈಪೋಟಿ ನೀಡುತ್ತಿವೆ.

ಹೊಸ ಕಂಪನಿಗಳು ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ: ಪ್ರೀಮಿಯಂ ಇವಿ ದ್ವಿಚಕ್ರ ವಾಹನ ಕಂಪನಿಗಳನ್ನು ನೋಡುವುದಾದರೆ- ಹಾರ್ಲೆ ಡೇವಿಡ್ಸನ್, ಎನ್ ಫೀಲ್ಡ್, ಯಮಹಾ ಮತ್ತು ಇತರ ಕಂಪನಿಗಳಿಗೆ ಪೈಪೋಟಿ ನೀಡಲು ಅಲ್ಟ್ರಾವಯಲೆಟ್, ರಿವೋಲ್ಟ್ ಮೋಟಾರ್ಸ್, ಎನರ್ಜಿಕಾ ಮೋಟಾರ್, ಡ್ಯಾಮನ್ ಮತ್ತು ಎಆರ್ ಸಿ ವೆಹಿಕಲ್ ನಂತಹ ಹೊಸ ಕಂಪನಿಗಳು ಮಾರುಕಟ್ಟೆಗೆ ಪ್ರವೇಶಿಸಿವೆ ಎಂದು ವರದಿ ತಿಳಿಸಿದೆ. ಒಟ್ಟಾರೆ ಜಾಗತಿಕ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಇವಿ ವಾಹನಗಳ ಪಾಲು 2030 ರ ವೇಳೆಗೆ ಶೇಕಡಾ 44 ಕ್ಕೆ ತಲುಪಲಿದೆ ಮತ್ತು ಸಂಚಿತ ಇವಿ ದ್ವಿಚಕ್ರ ವಾಹನಗಳ ಮಾರಾಟವು 2024 ಮತ್ತು 2030 ರ ನಡುವೆ 150 ಮಿಲಿಯನ್ ಯುನಿಟ್​ಗಳನ್ನು ದಾಟಲಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ : 4 ತಿಂಗಳಲ್ಲಿ 2.6 ಲಕ್ಷ ಟನ್ ಈರುಳ್ಳಿ ರಫ್ತು: ಕೇಂದ್ರ ಸರ್ಕಾರ - India Onion Exports

ETV Bharat Logo

Copyright © 2024 Ushodaya Enterprises Pvt. Ltd., All Rights Reserved.