ETV Bharat / business

2027ರ ವೇಳೆಗೆ ಭಾರತದಲ್ಲಿ 12.5 ಲಕ್ಷ ಎಐ ಪ್ರತಿಭಾವಂತರಿಗೆ ಬೇಡಿಕೆ: ನಾಸ್ಕಾಮ್ ವರದಿ - AI Skilled Professionals - AI SKILLED PROFESSIONALS

ಭಾರತದಲ್ಲಿ 2027ರ ವೇಳೆಗೆ 12.5 ಲಕ್ಷ ಎಐ ಪ್ರತಿಭಾವಂತರಿಗೆ ಬೇಡಿಕೆ ಉಂಟಾಗಲಿದೆ ಎಂದು ವರದಿಯೊಂದು ತಿಳಿಸಿದೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Aug 20, 2024, 6:58 PM IST

ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗುವ ಗುರಿ ಹೊಂದಿರುವ ಭಾರತದಲ್ಲಿ 2027ರ ವೇಳೆಗೆ 12.5 ಲಕ್ಷ ಎಐ ಪ್ರತಿಭಾವಂತರಿಗೆ ಬೇಡಿಕೆ ಉಂಟಾಗಲಿದೆ ಎಂದು ವರದಿಯೊಂದು ತಿಳಿಸಿದೆ. ಸದ್ಯ ದೇಶದಲ್ಲಿ 6 ರಿಂದ 6.5 ಲಕ್ಷದವರೆಗೆ ಎಐ ಪ್ರತಿಭಾವಂತರ ಬೇಡಿಕೆಯಿದೆ.

ನಾಸ್ಕಾಮ್ ಸಹಯೋಗದೊಂದಿಗೆ ನಡೆಸಲಾದ ಡೆಲಾಯ್ಟ್ ಇಂಡಿಯಾದ ವರದಿಯ ಪ್ರಕಾರ, ದೇಶದಲ್ಲಿ ಎಐ ಮಾರುಕಟ್ಟೆಯು ಶೇಕಡಾ 25 ರಿಂದ 35 ರಷ್ಟು (2022-2027 ಅವಧಿಯಲ್ಲಿ) ಬೆಳೆಯುವ ನಿರೀಕ್ಷೆಯಿದೆ. ಅಂದರೆ ಪ್ರತಿಭಾವಂತರ ಸಂಖ್ಯೆಯು ಬೇಡಿಕೆಗಿಂತ ಕಡಿಮೆಯಾಗಿರುವ ಸಾಧ್ಯತೆ ಇರುವುದನ್ನು ಇದು ಸೂಚಿಸುತ್ತದೆ. ಈ ಅಂತರ ನಿವಾರಣೆಗೆ ದೇಶದಲ್ಲಿನ ತಂತ್ರಜ್ಞಾನ ವಿದ್ಯಾವಂತರಿಗೆ ಎಐ ಕೌಶಲ್ಯ ತರಬೇತಿ ನೀಡುವುದು ಅಗತ್ಯವಾಗಿದೆ.

ಕಳೆದ ಒಂದು ವರ್ಷದಲ್ಲಿ, ವಿವಿಧ ವಲಯಗಳಲ್ಲಿ ಕೆಲಸ ಮಾಡುವ ಭಾರತೀಯ ಉದ್ಯೋಗಿಗಳ ಪೈಕಿ 43 ಪ್ರತಿಶತದಷ್ಟು ಜನರು ತಮ್ಮ ಸಂಸ್ಥೆಗಳಲ್ಲಿ ಎಐ ಅನ್ನು ಬಳಸಿದ್ದಾರೆ. ಎಐ ಕೌಶಲ್ಯ ಹೆಚ್ಚಿಸಿಕೊಳ್ಳುವುದರಿಂದ ತಮ್ಮ ವೃತ್ತಿಜೀವನದ ಭವಿಷ್ಯವನ್ನು ಮತ್ತಷ್ಟು ಉತ್ತಮಗೊಳಿಸಿಕೊಳ್ಳಬಹುದು ಎಂಬುದು ಸುಮಾರು 60 ಪ್ರತಿಶತದಷ್ಟು ಕಾರ್ಮಿಕರು ಮತ್ತು 71 ಪ್ರತಿಶತದಷ್ಟು ಜೆನ್ ಜೆಡ್​ಗಳ ಅಭಿಪ್ರಾಯವಾಗಿದೆ.

ಪ್ರತಿ ಮೂವರು ಭಾರತೀಯರಲ್ಲಿ ಇಬ್ಬರು ಕನಿಷ್ಠ ಒಂದಾದರೂ ಡಿಜಿಟಲ್ ಕೌಶಲ್ಯವನ್ನು ಕಲಿಯಲು ಯೋಜಿಸಿದ್ದಾರೆ. ಎಐ ಮತ್ತು ಯಂತ್ರ ಕಲಿಕೆ (ಎಂಎಲ್)ಯು ಅವರ ಆದ್ಯತಾ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.

ಡೆಲಾಯ್ಟ್ ದಕ್ಷಿಣ ಏಷ್ಯಾದ ತಂತ್ರಜ್ಞಾನ ಮತ್ತು ರೂಪಾಂತರ ವಿಭಾಗದ ಅಧ್ಯಕ್ಷ ಸತೀಶ್ ಗೋಪಾಲಯ್ಯ ಮಾತನಾಡಿ, "2030 ರ ವೇಳೆಗೆ ಭಾರತವು ಜಾಗತಿಕ ಎಐ ಶಕ್ತಿ ಕೇಂದ್ರವಾಗಿ ಹೊರಹೊಮ್ಮಲಿದೆ. ಆದಾಗ್ಯೂ, ಈ ಸಾಮರ್ಥ್ಯವನ್ನು ನಿಜವಾಗಿಯೂ ಬಳಸಿಕೊಳ್ಳಲು, ಕೇವಲ ಪ್ರಮಾಣದತ್ತ ಗಮನಹರಿಸುವುದು ಮಾತ್ರವಲ್ಲದೆ ಎಐ ಪ್ರತಿಭೆಯ ಗುಣಮಟ್ಟಕ್ಕೆ ಆದ್ಯತೆ ನೀಡಬೇಕಿದೆ. ಅಸ್ತಿತ್ವದಲ್ಲಿರುವ ಕಾರ್ಯಪಡೆಯನ್ನು ಮರು ಕೌಶಲ್ಯಗೊಳಿಸುವ ಮೂಲಕ ಮತ್ತು ದೃಢವಾದ ಸರ್ಕಾರ-ಶೈಕ್ಷಣಿಕ-ಉದ್ಯಮ ಸಹಯೋಗದಿಂದ ಹೊಸ ಪ್ರತಿಭೆಗಳನ್ನು ಬೆಳೆಸುವ ಮೂಲಕ, ಎಐ-ಚಾಲಿತ ಸಂಶೋಧನೆಗಳನ್ನು ಮುನ್ನಡೆಸಲು ಸಿದ್ಧವಾಗಿರುವ ವೃತ್ತಿಪರರ ಪಡೆಯನ್ನು ಸಜ್ಜುಗೊಳಿಸಬಹುದು" ಎಂದು ಹೇಳಿದರು.

ಎಐ ಈಗ ಯಾವುದೋ ಒಂದೇ ವಲಯಕ್ಕೆ ಸೀಮಿತವಾಗಿಲ್ಲ; ಇದು ಬಹುತೇಕ ಎಲ್ಲ ಕೈಗಾರಿಕೆಗಳಿಗೂ ವ್ಯಾಪಿಸಿದೆ ಮತ್ತು ವಿಶ್ವಾದ್ಯಂತದ ವ್ಯವಹಾರಗಳಲ್ಲಿ ಪರಿವರ್ತನೆ ತಂದಿದೆ ಎಂದು ನಾಸ್ಕಾಮ್​ನ ಹಿರಿಯ ಉಪಾಧ್ಯಕ್ಷೆ ಮತ್ತು ಮುಖ್ಯ ಕಾರ್ಯತಂತ್ರ ಅಧಿಕಾರಿ ಸಂಗೀತಾ ಗುಪ್ತಾ ಹೇಳಿದರು.

ಇದನ್ನೂ ಓದಿ : ಅಪರಿಚಿತ ಸಂಖ್ಯೆಯಿಂದ ಬರುವ ಮೆಸೇಜ್​ ಬ್ಲಾಕ್​: ವಾಟ್ಸ್​ಆ್ಯಪ್ ಹೊಸ ವೈಶಿಷ್ಟ್ಯ - WhatsApp New Feature

ETV Bharat Logo

Copyright © 2025 Ushodaya Enterprises Pvt. Ltd., All Rights Reserved.