ETV Bharat / business

4ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ 7.8ರಷ್ಟು ಬೆಳವಣಿಗೆ - India GDP grows

ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ಶೇಕಡಾ 7.8 ರಷ್ಟು ಬೆಳವಣಿಗೆ ಸಾಧಿಸಿದೆ.

4ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ 7.8ರಷ್ಟು ಬೆಳವಣಿಗೆ
4ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ 7.8ರಷ್ಟು ಬೆಳವಣಿಗೆ (IANS image)
author img

By ETV Bharat Karnataka Team

Published : May 31, 2024, 8:00 PM IST

ನವದೆಹಲಿ : ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಭಾರತೀಯ ಆರ್ಥಿಕತೆಯು ಶೇಕಡಾ 7.8 ರಷ್ಟು ದೃಢವಾದ ಜಿಡಿಪಿ ಬೆಳವಣಿಗೆಯನ್ನು ದಾಖಲಿಸಿದೆ. 2023-24 ರ ಪೂರ್ಣ ಹಣಕಾಸು ವರ್ಷದಲ್ಲಿ, ಬೆಳವಣಿಗೆಯ ದರ ಶೇಕಡಾ 8.2 ಕ್ಕೆ ಏರಿಕೆಯಾಗಿದೆ. ಇದು 2022-23 ರ ಹಣಕಾಸು ವರ್ಷದಲ್ಲಿ ಶೇಕಡಾ 7 ರಷ್ಟಿತ್ತು.

ಅಂಕಿ - ಅಂಶ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಉತ್ಪಾದನೆ ಮತ್ತು ಗಣಿಗಾರಿಕೆ ಕ್ಷೇತ್ರಗಳ ಉತ್ತಮ ಕಾರ್ಯಕ್ಷಮತೆಯಿಂದ ಜಿಡಿಪಿ ಹೆಚ್ಚಿನ ದರದಲ್ಲಿ ಬೆಳವಣಿಗೆಯಾಗಿದೆ. "2023-24ರಲ್ಲಿ ಉತ್ಪಾದನಾ ವಲಯದಲ್ಲಿ ಶೇಕಡಾ 9.9 ರಷ್ಟು ಗಮನಾರ್ಹ ಬೆಳವಣಿಗೆಯಿಂದಾಗಿ ಆರ್ಥಿಕತೆ ಬೆಳೆದಿದೆ. 2022-23ರಲ್ಲಿ ಇದು ಮೈನಸ್ ಶೇ 2.2 ರಷ್ಟಿತ್ತು. ಹಾಗೆಯೇ ಗಣಿಗಾರಿಕೆ ಕ್ಷೇತ್ರದಲ್ಲಿ 2022-23ರಲ್ಲಿ ಶೇ 1.9ರಷ್ಟಿದ್ದ ಬೆಳವಣಿಗೆ 2023-24ರಲ್ಲಿ ಶೇ 7.1ಕ್ಕೆ ಏರಿಕೆಯಾಗಿದೆ.

ದೇಶದ ಎಂಜಿನಿಯರಿಂಗ್ ಸಂಸ್ಥೆಗಳು ಮತ್ತು ಕಾಲೇಜುಗಳಿಂದ ಉತ್ತೀರ್ಣರಾದ ಯುವ ಪದವೀಧರರಿಗೆ ಗುಣಮಟ್ಟದ ಉದ್ಯೋಗಗಳನ್ನು ಒದಗಿಸುವಲ್ಲಿ ಉತ್ಪಾದನಾ ವಲಯವು ಪ್ರಮುಖ ಪಾತ್ರ ವಹಿಸುತ್ತದೆ. ಚೀನಾಕ್ಕೆ ಪರ್ಯಾಯವಾದ ಸರಕು ಪೂರೈಕೆ ಸರಪಳಿಯಾಗುವ ದೃಷ್ಟಿಯಿಂದ ಸ್ಮಾರ್ಟ್ ಫೋನ್​ಗಳು, ಎಲೆಕ್ಟ್ರಾನಿಕ್ ಸರಕುಗಳು, ಡ್ರೋನ್​ಗಳು ಮತ್ತು ಸೆಮಿಕಂಡಕ್ಟರ್​ಗಳ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರ ಹಲವಾರು ಪ್ರೋತ್ಸಾಹಕ ಕ್ರಮಗಳನ್ನು ಘೋಷಿಸಿದೆ. ಇದು ರಫ್ತುಗಳಲ್ಲಿನ ಹೆಚ್ಚಳಕ್ಕೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ಹೆದ್ದಾರಿಗಳು, ರೈಲ್ವೆ ಮತ್ತು ಬಂದರು ಕ್ಷೇತ್ರಗಳಲ್ಲಿನ ದೊಡ್ಡ ಮೂಲಸೌಕರ್ಯ ಯೋಜನೆಗಳ ವೆಚ್ಚವನ್ನು ಹೆಚ್ಚಿಸಿದೆ. ಇದು ಸರಕು ಮತ್ತು ಸೇವೆಗಳಿಗೆ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸುವಲ್ಲಿ ಮತ್ತು ಆರ್ಥಿಕತೆಯ ಬೆಳವಣಿಗೆ ಉತ್ತೇಜಿಸುವಲ್ಲಿ ಪರಿಣಾಮ ಬೀರಿದೆ.

ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಯ ವೇಗವು ಬಲವಾದ ದೇಶೀಯ ಮಾರುಕಟ್ಟೆ ಆಧಾರದ ಮೇಲೆ ಭಾರತೀಯ ಆರ್ಥಿಕತೆಯ ದೃಢತೆಯನ್ನು ಸೂಚಿಸುತ್ತದೆ. ಇದು ಜಾಗತಿಕ ಮಂದಗತಿಯಿಂದ ದೇಶವನ್ನು ರಕ್ಷಿಸಲು ಸಹಾಯ ಮಾಡಿದೆ.

ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಎಂದರೆ ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶದ ಗಡಿಯೊಳಗೆ ಉತ್ಪಾದಿಸಲಾದ ಎಲ್ಲ ಸಿದ್ಧಪಡಿಸಿದ ಸರಕುಗಳು ಮತ್ತು ಸೇವೆಗಳ ಒಟ್ಟು ವಿತ್ತೀಯ ಅಥವಾ ಮಾರುಕಟ್ಟೆ ಮೌಲ್ಯವಾಗಿದೆ. ಒಟ್ಟಾರೆ ದೇಶೀಯ ಉತ್ಪಾದನೆಯ ವಿಶಾಲ ಅಳತೆಯಾಗಿ, ಇದು ನಿರ್ದಿಷ್ಟ ದೇಶದ ಆರ್ಥಿಕ ಆರೋಗ್ಯದ ಸಮಗ್ರ ಸ್ಕೋರ್ ಕಾರ್ಡ್ ಆಗಿ ಕಾರ್ಯನಿರ್ವಹಿಸುತ್ತದೆ. ಜಿಡಿಪಿಯನ್ನು ಸಾಮಾನ್ಯವಾಗಿ ವಾರ್ಷಿಕ ಆಧಾರದ ಮೇಲೆ ಲೆಕ್ಕಹಾಕಲಾಗಿದರೂ, ಇದನ್ನು ಕೆಲವೊಮ್ಮೆ ತ್ರೈಮಾಸಿಕ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.

ಇದನ್ನೂ ಓದಿ : ಇಂಗ್ಲೆಂಡ್​​​​​​ನಲ್ಲಿದ್ದ 1 ಟನ್ ಚಿನ್ನ ಮರಳಿ ತಂದ ಭಾರತ: ಸ್ಥಳೀಯ ಖಜಾನೆಗೆ ರವಾನೆ; 822 ಮೆಟ್ರಿಕ್ ಟನ್​ಗೆ ಏರಿದ ಬಂಗಾರ ಸಂಗ್ರಹ! - India brings back gold from UK

ETV Bharat Logo

Copyright © 2024 Ushodaya Enterprises Pvt. Ltd., All Rights Reserved.