ETV Bharat / business

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ಇಲ್ಲದಿರುವುದು ವಿಪರ್ಯಾಸ: ಎಲಾನ್​ ಮಸ್ಕ್​ - ವಿಶ್ವಸಂಸ್ಥೆಯ ಭದ್ರತಾ ಮಂಡಳಿ

Elon Musk: ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರು ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇದುವರೆಗೆ ಖಾಯಂ ಸದಸ್ಯತ್ವವನ್ನು ಹೊಂದಿಲ್ಲದಿರುವುದು ವಿಪರ್ಯಾಸ ಎಂದು ಅಭಿಪ್ರಾಯಪಟ್ಟಿದ್ದಾರೆ.

India not having permanent seat  UNSC is absurd  Elon Musk  ಭಾರತಕ್ಕೆ ಖಾಯಂ ಸದಸ್ಯತ್ವ  ವಿಶ್ವಸಂಸ್ಥೆಯ ಭದ್ರತಾ ಮಂಡಳಿ  ಎಲೋನ್​ ಮಸ್ಕ್​
ಎಲೋನ್​ ಮಸ್ಕ್​
author img

By PTI

Published : Jan 23, 2024, 2:20 PM IST

ವಾಷಿಂಗ್ಟನ್(ಅಮೆರಿಕ): ಟೆಸ್ಲಾ ಮುಖ್ಯಸ್ಥ ಎಲಾನ್​ ಮಸ್ಕ್ ಅವರು ವಿಶ್ವಸಂಸ್ಥೆಯ ಕಾರ್ಯನಿರ್ವಹಣೆಯ ಕುರಿತು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ವಿಶ್ವಸಂಸ್ಥೆ ಮತ್ತು ಅದರ ಅಂಗಸಂಸ್ಥೆಗಳಲ್ಲಿ ಬದಲಾವಣೆಗಳ ಅಗತ್ಯವಿದೆ. ಈ ಸಂದರ್ಭದಲ್ಲಿ ಅವರು ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವದ ಇಲ್ಲ ಎಂಬುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಬಲ ರಾಷ್ಟ್ರಗಳು ತಮ್ಮ ಸದಸ್ಯತ್ವವನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಇತ್ತೀಚೆಗೆ 'ಎಕ್ಸ್ (ಟ್ವಿಟರ್)' ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಭದ್ರತಾ ಮಂಡಳಿಯಲ್ಲಿ ಯಾವುದೇ ಆಫ್ರಿಕನ್ ರಾಷ್ಟ್ರದ ಶಾಶ್ವತ ಸದಸ್ಯತ್ವದ ಇಲ್ಲದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಅಂತರಾಷ್ಟ್ರೀಯ ಸಂಸ್ಥೆಗಳು ಇಂದಿನ ಜಗತ್ತನ್ನು ಪ್ರತಿಬಿಂಬಿಸಬೇಕು ಮತ್ತು 80 ವರ್ಷಗಳ ಹಿಂದೆ ಇದ್ದಂತೆ ಮುಂದುವರಿಯಬಾರದು ಎಂದು ಅವರು ನಂಬುತ್ತಾರೆ. ಇದು ಭದ್ರತಾ ಮಂಡಳಿಯಲ್ಲಿ ದೇಶಗಳ ಶಾಶ್ವತ ಸದಸ್ಯತ್ವದ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಿತು.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಅಮೆರಿಕದ ಹೂಡಿಕೆದಾರ ಮೈಕೆಲ್ ಐಸೆನ್‌ಬರ್ಗ್, 'ಭಾರತದ ಬಗ್ಗೆ ಏನು?' ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಲಾನ್​ ಮಸ್ಕ್, ಇದರ ಬಗ್ಗೆ ವಿಶ್ವಸಂಸ್ಥೆ ಮತ್ತು ಅದರ ಅಂಗ ಸಂಸ್ಥೆಗಳನ್ನು ಪರಿಷ್ಕರಿಸಬೇಕು. ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಇಲ್ಲದಿರುವುದು ವಿಪರ್ಯಾಸ. ಪ್ರಬಲ ರಾಷ್ಟ್ರಗಳು ತಮ್ಮ ಸ್ಥಾನಗಳನ್ನು ಬಿಟ್ಟುಕೊಡಲು ಹಿಂಜರಿಯುವುದೇ ನಿಜವಾದ ಸಮಸ್ಯೆ. ಆಫ್ರಿಕಾ ಒಕ್ಕೂಟಕ್ಕೆ ಸಾಮೂಹಿಕವಾಗಿ ಶಾಶ್ವತ ಸದಸ್ಯತ್ವ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ವಿಶ್ವಶಾಂತಿಯನ್ನು ಸ್ಥಾಪಿಸುವ ಉದ್ದೇಶದಿಂದ ವಿಶ್ವಸಂಸ್ಥೆಯನ್ನು 1945 ರಲ್ಲಿ ಸ್ಥಾಪಿಸಲಾಯಿತು. ಇದರ ಜೊತೆಗೆ ಭದ್ರತಾ ಮಂಡಳಿ ರಚನೆಯಾಗಿ ಏಳೂವರೆ ದಶಕಗಳು ಕಳೆದಿವೆ. ಅಂದಿನಿಂದ, ಭದ್ರತಾ ಮಂಡಳಿಯಲ್ಲಿ ಯಾವುದೇ ಬದಲಾವಣೆಗಳು ನಡೆದಿಲ್ಲ. ಅಮೆರಿಕ, ರಷ್ಯಾ, ಚೀನಾ, ಬ್ರಿಟನ್ ಮತ್ತು ಫ್ರಾನ್ಸ್ ವಿಟೋ ಅಧಿಕಾರದೊಂದಿಗೆ ಖಾಯಂ ಸದಸ್ಯ ರಾಷ್ಟ್ರಗಳಾಗಿ ಮುಂದುವರಿದಿವೆ. ಭಾರತವು ಖಾಯಂ ಸದಸ್ಯತ್ವಕ್ಕೆ ಒತ್ತಾಯಿಸುತ್ತಿದ್ದರೂ ಅದಕ್ಕೆ ತಕ್ಕಂತೆ ಯಾವುದೇ ಬದಲಾವಣೆ ಮಾಡಿಲ್ಲ. ನಾಲ್ಕೈದು ರಾಷ್ಟ್ರಗಳು ಭಾರತದ ಪರವಾಗಿದ್ದರೂ ಚೀನಾ ಮಾತ್ರ ವಿರುದ್ಧವಾಗಿದೆ.

ಓದಿ: ಭಾರತದ ಆರ್ಥಿಕತೆ ಆಧ್ಯಾತ್ಮಿಕ ಪ್ರವಾಸೋದ್ಯಮದಿಂದ ಬಲವರ್ಧನೆ; ಯುಪಿಗೆ ರಾಮ ದೇಗುಲದ ಶಕ್ತಿ

21 ಉಪಗ್ರಹ ಹಾರಿಸಿದ ಸ್ಪೇಸ್​ಎಕ್ಸ್​: ವಿಶ್ವದ ಯಾವುದೇ ಮೂಲೆಯಲ್ಲಿರುವ ಮೊಬೈಲ್ ಫೋನ್ ಬಳಕೆದಾರರನ್ನು ಪರಸ್ಪರ ಸಂಪರ್ಕಿಸಲು ಸಾಧ್ಯವಾಗಿಸುವ ಮೊದಲ ಬ್ಯಾಚಿನ ಉಪಗ್ರಹಗಳನ್ನು ಎಲಾನ್ ಮಸ್ಕ್ ನೇತೃತ್ವದ ಏರೋಸ್ಪೇಸ್ ಕಂಪನಿ ಸ್ಪೇಸ್ ಎಕ್ಸ್ ಜನವರಿ ಮೊದಲ ವಾರದಲ್ಲಿ ಉಡಾವಣೆ ಮಾಡಿತ್ತು. ಉಡಾವಣೆಗೊಂಡ 21 ಹೊಸ ಸ್ಟಾರ್​ಲಿಂಕ್ ಉಪಗ್ರಹಗಳ ಪೈಕಿ ಆರು 2022 ರಲ್ಲಿ ಕಂಪನಿ ಘೋಷಿಸಿದ ಹೊಸ 'ಡೈರೆಕ್ಟ್ ಟು ಸೆಲ್' (Direct to Cell) ಸೇವೆಯನ್ನು ಬೆಂಬಲಿಸಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.