ETV Bharat / business

ತಾಂಜೇನಿಯಾಗೆ 30 ಸಾವಿರ ಟನ್ ಅಕ್ಕಿ ರಫ್ತು ಮಾಡಲು ಕೇಂದ್ರ ಸರ್ಕಾರದ ಅನುಮತಿ - 30 ಸಾವಿರ ಟನ್ ಅಕ್ಕಿ ರಫ್ತು

30 ಸಾವಿರ ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ತಾಂಜೇನಿಯಾಕ್ಕೆ ಮತ್ತು 80,000 ಟನ್ ನುಚ್ಚಕ್ಕಿಯನ್ನು ಜಿಬೌಟಿ ಮತ್ತು ಗಿನಿಯಾ ಬಿಸ್ಸೌ ದೇಶಗಳಿಗೆ ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

india-allows-export-of-30-thousand-tonnes-of-non-basmati-white-rice-to-tanzania
ತಾಂಜೇನಿಯಾಗೆ 30 ಸಾವಿರ ಟನ್ ಅಕ್ಕಿ ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ
author img

By ETV Bharat Karnataka Team

Published : Mar 4, 2024, 5:47 PM IST

ನವದೆಹಲಿ: ಕೇಂದ್ರ ಸರ್ಕಾರವು 30,000 ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ತಾಂಜೇನಿಯಾಕ್ಕೆ ಮತ್ತು ಜಿಬೌಟಿ ದೇಶಕ್ಕೆ 30 ಸಾವಿರ ಟನ್, ಗಿನಿಯಾ ಬಿಸ್ಸೌ ದೇಶಕ್ಕೆ 50 ಸಾವಿರ ಟನ್ ನುಚ್ಚು ಅಕ್ಕಿಯನ್ನು ​ರಫ್ತು ಮಾಡಲು ಅನುಮತಿ ನೀಡಿದೆ. ರಾಷ್ಟ್ರೀಯ ಸಹಕಾರಿ ರಫ್ತು ಲಿಮಿಟೆಡ್ ಮೂಲಕ ರಫ್ತಿಗೆ ಅನುಮತಿ ನೀಡಲಾಗಿದೆ ಎಂದು ವಿದೇಶಿ ವ್ಯಾಪಾರಗಳ ಮಹಾ ನಿರ್ದೇಶನಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.

ದೇಶದಲ್ಲಿ ಅಕ್ಕಿ ಪೂರೈಕೆಯನ್ನು ಹೆಚ್ಚಿಸಲು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಏರಿಕೆ ನಿಯಂತ್ರಣದಲ್ಲಿಡುವ ಸಲುವಾಗಿ 2023ರ ಜುಲೈ 20 ರಿಂದ ಬಾಸ್ಮತಿ ಹೊರತುಪಡಿಸಿ ಇತರ ಬಗೆಯ ಬಿಳಿ ಅಕ್ಕಿ ರಫ್ತನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಆದಾಗ್ಯೂ, ಈ ಹಿಂದೆ ಭಾರತವು ನೇಪಾಳ, ಕ್ಯಾಮರೂನ್, ಕೋಟ್ ಡಿ ಐವೊರ್, ರಿಪಬ್ಲಿಕ್ ಆಫ್ ಗಿನಿಯಾ, ಮಲೇಷ್ಯಾ, ಫಿಲಿಪೈನ್ಸ್, ಸೀಶೆಲ್ಸ್, ಯುಎಇ, ಸಿಂಗಾಪುರ್, ಕೊಮೊರೊಸ್, ಮಡಗಾಸ್ಕರ್, ಈಕ್ವೆಟೋರಿಯಲ್ ಗಿನಿಯಾ, ಈಜಿಪ್ಟ್ ಮತ್ತು ಕೀನ್ಯಾಕ್ಕೆ ಅಕ್ಕಿ ರಫ್ತು ಮಾಡಲು ಅನುಮತಿ ನೀಡಿತ್ತು.

ಆರಂಭದಲ್ಲಿ ಅಕ್ಕಿ ರಫ್ತು ನೀತಿ ತಿದ್ದುಪಡಿ ಮಾಡುವಾಗ, ಇತರ ದೇಶಗಳಿಗೆ ತಮ್ಮ ಆಹಾರ ಭದ್ರತಾ ಅಗತ್ಯಗಳನ್ನು ಪೂರೈಸಲು ಸರ್ಕಾರ ನೀಡಿದ ಅನುಮತಿ ಆಧಾರದ ಮೇಲೆ ಮತ್ತು ಅವರ ಸರ್ಕಾರದ ಕೋರಿಕೆ ಆಧಾರದ ಮೇಲೆ ರಫ್ತು ಮಾಡಲು ಅನುಮತಿಸಲಾಗುವುದು ಎಂದು ಡಿಜಿಎಫ್​ಟಿ ಸಮರ್ಥಿಸಿಕೊಂಡಿತ್ತು. ಪಶ್ಚಿಮ ಆಫ್ರಿಕಾದ ದೇಶ ಬೆನಿನ್ ಭಾರತದಿಂದ ಬಾಸ್ಮತಿಯೇತರ ಅಕ್ಕಿ ಆಮದು ಮಾಡಿಕೊಳ್ಳುವ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ಯುಎಇ, ನೇಪಾಳ, ಬಾಂಗ್ಲಾದೇಶ, ಚೀನಾ, ಕೋಟ್ ಡಿ ಐವೊರ್, ಟೋಗೊ, ಸೆನೆಗಲ್, ಗಿನಿಯಾ, ವಿಯೆಟ್ನಾಂ, ಜಿಬೌಟಿ, ಮಡಗಾಸ್ಕರ್, ಕ್ಯಾಮರೂನ್ ಸೊಮಾಲಿಯಾ, ಮಲೇಷ್ಯಾ ಮತ್ತು ಲೈಬೀರಿಯಾ ಭಾರತದಿಂದ ಅಕ್ಕಿ ಆಮದು ಮಾಡಿಕೊಳ್ಳುವ ಇತರ ಪ್ರಮುಖ ದೇಶಗಳಾಗಿವೆ.

ಆಗಸ್ಟ್ ಅಂತ್ಯದಲ್ಲಿ, ಭಾರತವು ಬಾಸ್ಮತಿ ಅಕ್ಕಿಯ ರಫ್ತಿನ ಮೇಲೆ ಕನಿಷ್ಠ ಬೆಲೆ(minimum floor price)ಯನ್ನು ವಿಧಿಸುವ ಮೂಲಕ ಹೆಚ್ಚುವರಿ ಕ್ರಮಗಳನ್ನು ಪರಿಚಯಿಸಿತು. ಇದರಿಂದಾಗಿ ಜುಲೈನಿಂದ ಈಗಾಗಲೇ ನಿಷೇಧಿತ ವರ್ಗದ ಅಡಿಯಲ್ಲಿದ್ದ ಬಾಸ್ಮತಿ ಅಲ್ಲದ ಬಿಳಿ ಅಕ್ಕಿ ರಫ್ತನ್ನು ತಡೆಗಟ್ಟಲು ಮುಂದಾಯಿತು. ಇತ್ತೀಚೆಗೆ, ಕೇಂದ್ರ ಸರ್ಕಾರವು ಪಾರ್ಬೋಯ್ಡ್ ಅಕ್ಕಿ ಮೇಲಿನ ಶೇಕಡಾ 20 ರಷ್ಟು ರಫ್ತು ಸುಂಕ ಮಾರ್ಚ್ 31, 2024 ರವರೆಗೆ ವಿಸ್ತರಿಸಿತು.

ಆರಂಭದಲ್ಲಿ ಸುಂಕವನ್ನು ಆಗಸ್ಟ್ 25, 2023 ರಂದು ಪರಿಚಯಿಸಲಾಗಿತ್ತು ಮತ್ತು ಸಾಕಷ್ಟು ದೇಶೀಯ ಲಭ್ಯತೆ ಕಾಪಾಡಿಕೊಳ್ಳುವ ಹಾಗೂ ಅದರ ಬೆಲೆಯನ್ನು ಸುಧಾರಿಸುವ ಉದ್ದೇಶದಿಂದ ಅಕ್ಟೋಬರ್ 16, 2023 ರವರೆಗೆ ಇದು ಜಾರಿಯಲ್ಲಿತ್ತು. ಸೆಪ್ಟೆಂಬರ್ 2022 ರಲ್ಲಿ ಭಾರತವು ನುಚ್ಚು ಅಕ್ಕಿಯ ರಫ್ತು ನಿಷೇಧಿಸಿತ್ತು ಮತ್ತು ಭತ್ತದ ಬೆಳೆಯ ಪ್ರದೇಶದ ಕುಸಿತದಿಂದಾಗಿ ಕಡಿಮೆ ಉತ್ಪಾದನೆ ಬಗ್ಗೆ ಕಳವಳಗಳ ನಡುವೆ ಪಾರ್ಬೋಯ್ಡ್ ಅಕ್ಕಿಯನ್ನು ಹೊರತುಪಡಿಸಿ ಬಾಸ್ಮತಿ ಅಲ್ಲದ ಅಕ್ಕಿಯ ರಫ್ತಿನ ಮೇಲೆ ಶೇಕಡಾ 20 ರಷ್ಟು ಸುಂಕವನ್ನು ವಿಧಿಸಿತ್ತು. ನಂತರ ನವೆಂಬರ್​​ನಲ್ಲಿ ನಿಷೇಧ ತೆಗೆದು ಹಾಕಿತ್ತು.

ಇದನ್ನೂ ಓದಿ: ಸಮುದ್ರ ಮಾರ್ಗದ ಮೂಲಕ ಅಮೆರಿಕಕ್ಕೆ ದಾಳಿಂಬೆ ರಫ್ತು ಆರಂಭಿಸಿದ ಭಾರತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.