ETV Bharat / business

ಜೊಮಾಟೊ 'ಶುದ್ಧ ಸಸ್ಯಾಹಾರ ಮೋಡ್‌'ಗೆ ಪರ-ವಿರೋಧ ಪ್ರತಿಕ್ರಿಯೆ: Zomato ಸಿಇಒ ಹೇಳಿದ್ದೇನು? - Zomato launches Pure Veg Mode

ಭಾರೀ ಪ್ರಮಾಣದಲ್ಲಿ ನಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾದಲ್ಲಿ ಶುದ್ಧ ಸಸ್ಯಾಹಾರ ಮೋಡ್‌ ಅನ್ನು ಹಿಂಪಡೆಯುವುದಾಗಿ ಜೊಮಾಟೊ ಕಂಪನಿ ತಿಳಿಸಿದೆ.

if-we-see-any-significant-negative-social-repercussions-of-this-change-zomato

author img

By ETV Bharat Karnataka Team

Published : Mar 20, 2024, 12:54 PM IST

ನವದೆಹಲಿ: ಶುದ್ಧ ಸಸ್ಯಹಾರಿಗಳಿಗಾಗಿ 'ಪ್ಯೂರ್​​ ವೆಜ್​ ಮೋಡ್'​​ ಹಾಗು 'ಪ್ಯೂರ್​ ವೆಜ್​ ಫ್ಲೀಟ್'​ ಪರಿಚಯಿಸಿದ್ದ ಜೊಮಾಟೊ ಕ್ರಮಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಂಸ್ಥೆಯ ಸಿಇಒ ದೀಪಿಂದರ್​ ಗೋಯೆಲ್​​, ಭಾರೀ ಪ್ರಮಾಣದಲ್ಲಿ ನಕಾರಾತ್ಮಕ ಟೀಕೆಗಳು ವ್ಯಕ್ತವಾದಲ್ಲಿ ನಾವು ಈ ವ್ಯವಸ್ಥೆಯನ್ನು ಹಿಂಪಡೆಯುತ್ತೇವೆ ಎಂದು ಹೇಳಿದ್ದಾರೆ.

ಮಾಂಸಾಹಾರ ಮತ್ತು ಸಸ್ಯಾಹಾರದ ಬಾಕ್ಸ್​​ಗಳನ್ನು ಒಟ್ಟಿಗೆ ಕೊಂಡೊಯ್ಯುವಾಗ ವಾಸನೆಗಳ ಸಮಸ್ಯೆಗಳು ಎದುರಾಗುತ್ತಿತ್ತು. ಈ ಕಾರಣದಿಂದ ನಾವು ಪ್ಯೂರ್ ವೆಜ್ ಫ್ಲೀಟ್​​​ ಪರಿಚಯಿಸಿ, ಸಸ್ಯಾಹಾರವನ್ನು ಪ್ರತ್ಯೇಕವಾಗಿ ಡೆಲಿವರಿ ಮಾಡುವ ನಿರ್ಧಾರ ಕೈಗೊಂಡೆವು ಎಂದು ಅವರು 'ಎಕ್ಸ್'​ ಪೋಸ್ಟ್​ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೆಲವು ಸೊಸೈಟಿಗಳು ಮತ್ತು ರೆಸಿಡೆನ್ಸಿಯಲ್​ ವೆಲ್​ಫೇರ್​ ಅಸೋಸಿಯೇಷನ್‌ಗಳು (ಆರ್​ಡಬ್ಲ್ಯೂಎ) ನಮ್ಮ ಜೊಮಾಟೊ ಫ್ಲೀಟ್​​ ಅನ್ನು ಒಳಗೆ ಸೇರಿಸುತ್ತಿಲ್ಲ ಎಂಬ ಸುದ್ದಿಗಳನ್ನು ಕೇಳುತ್ತಿದ್ದೇವೆ. ಇಂತಹ ಪ್ರಕರಣಗಳಲ್ಲಿ ನಾವು ಆರ್​ಡಬ್ಲ್ಯೂಎಗಳ ಜೊತೆಗೆ ಈ ರೀತಿ ಆಗದಂತೆ ಕೆಲಸ ಮಾಡುತ್ತೇವೆ. ಹೊಸ ಬದಲಾವಣೆಯಿಂದ ನಮ್ಮ ಜವಾಬ್ದಾರಿಯ ಕುರಿತು ನಾವು ಅರ್ಥೈಸಿಕೊಳ್ಳುತ್ತೇವೆ. ಪ್ಯೂರ್​ ವೆಜ್​​ ಮೋಡ್​ ಅಥವಾ ಪ್ಯೂರ್​ ವೆಜ್​ ಫ್ಲೀಟ್​​ ಯಾವುದೇ ಧರ್ಮ ಅಥವಾ ರಾಜಕೀಯ ಆದ್ಯತೆಯಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇವೆ ಎಂದು ತಿಳಿಸಿದ್ದಾರೆ.

ಪ್ಯೂರ್​ ವೆಜ್​ ಮೋಡ್​ ಮತ್ತು ಫ್ಲೀಟ್​ ಪರಿಚಯದ ಬಳಿಕ, ಮಾಂಸಾಹಾರ ಸೇವಿಸುವ ಅನೇಕ ಯುವ ಜನರು ಇದೀಗ ನಮ್ಮ ಪೋಷಕರು ಕೂಡ ಜೊಮಾಟೊ ಬಳಕೆ ಮಾಡುತ್ತಾರೆ ಎಂಬ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ ಎಂದು ಇದೇ ವೇಳೆ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಹೊಸ ಫೀಚರ್​​ ಗ್ರಾಹಕರ ಆಹಾರದ ಆದ್ಯತೆಗೆ ಅನುಗುಣವಾಗಿ ಮಾತ್ರವೇ ಸೇವೆ ಸಲ್ಲಿಸಲಿದೆ. ಅನೇಕ ಗ್ರಾಹಕರು ಯಾವುದೇ ಧರ್ಮ ಅಥವಾ ಜಾತಿಯನ್ನು ಗಮನಿಸದೇ, ಕೇವಲ ಮಾಂಸಾಹಾರವನ್ನು ರೆಸ್ಟೋರೆಂಟ್​​ಗಳು ಪೂರೈಸುತ್ತದೆ ಎಂಬ ಒಂದೇ ಕಾರಣಕ್ಕೆ ಆ ರೆಸ್ಟೋರೆಂಟ್​​ಗಳಿಂದ ಆರ್ಡರ್​ ಮಾಡುವುದಿಲ್ಲ ಎಂಬುದು ನಮಗೆ ತಿಳಿದಿದೆ. ಈ ಕಾರಣಕ್ಕೆ ಹೊಸ ಕ್ರಮ ನಡೆಸಲಾಗಿದೆ. ವೆಜ್​ ಡೆಲಿವರಿ ಫ್ಲೀಟ್​ನಲ್ಲಿ ಕಾರ್ಯ ನಿರ್ವಹಿಸುವ ನಮ್ಮ ಡೆಲಿವರಿ ಪಾರ್ಟನರ್​​ಗಳ​ ಆಹಾರ ಆದ್ಯತೆಯ ಮೇರೆಗೆ ಕೂಡ ನಾವು ತಾರತಮ್ಯ ಮಾಡುವುದಿಲ್ಲ ಎಂದಿದ್ದಾರೆ. (ಐಎಎನ್​​ಎಸ್​)

ಇದನ್ನೂ ಓದಿ: ಶುದ್ಧ ಸಸ್ಯಾಹಾರಿ ಗ್ರಾಹಕರಿಗಾಗಿ "ಪ್ಯೂರ್ ವೆಜ್ ಮೋಡ್" ಸೇವೆ ಆರಂಭಿಸಿದ ಜೊಮಾಟೊ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.