ETV Bharat / business

ಬ್ಯಾಂಕ್​, ಕೊರಿಯರ್​ ಕಂಪನಿಗಳ ನೆಪದಲ್ಲಿ ಸೈಬರ್​ ಕಳ್ಳರು ಒಟಿಪಿ ಕೇಳಿದರೆ ಏನ್​​​​​​​​​​​​​​​ ಮಾಡಬೇಕು?: ಇಲ್ಲಿದೆ ಫುಲ್​ ಡಿಟೇಲ್ಸ್​​ - CAREFUL ABOUT OTP

ನಾವು ಒಂದೇ ಕ್ಲಿಕ್‌ನಲ್ಲಿ ನಮಗೆ ಬೇಕಾದ ಎಲ್ಲವನ್ನೂ ಖರೀದಿಸುತ್ತಿದ್ದೇವೆ. ನಾವು ಎಲ್ಲ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡುತ್ತಿದ್ದೇವೆ. ಇದೆಲ್ಲದಕ್ಕೂ OTP (ಒನ್ ಟೈಮ್ ಪಾಸ್‌ವರ್ಡ್) ಅಗತ್ಯವಿದೆ. ಇದರ ಅನುಕೂಲದ ಜೊತೆಗೆ ಕೆಲವು ಅಪಾಯಗಳು ಇವೆ.

CAREFUL ABOUT OTP  OTP  One time password
ಬ್ಯಾಂಕ್​, ಕೊರಿಯರ್​ ಕಂಪನಿಗಳ ನೆಪದಲ್ಲಿ ಸೈಬರ್​ ಕಳ್ಳರು ಒಟಿಪಿ ಕೇಳಿದರೆ ತಪ್ಪದೇ ಈ ಕ್ರಮಗಳನ್ನು ಅನುಸರಿಸಿರಿ
author img

By ETV Bharat Karnataka Team

Published : Apr 5, 2024, 9:51 AM IST

ನಾವು ಒಂದೇ ಕ್ಲಿಕ್‌ನಲ್ಲಿ ನಮಗೆ ಬೇಕಾದ ಬಹುತೇಕ ವ್ಯವಹಾರಗಳನ್ನು ಮಾಡುತ್ತಿದ್ದೇವೆ. ಇವೆಲ್ಲದಕ್ಕೂ ಒಟಿಪಿ (ಒನ್ ಟೈಮ್ ಪಾಸ್ ವರ್ಡ್) ಅಗತ್ಯವಾಗಿ ಬೇಕಾಗುತ್ತದೆ. ಒಟಿಪಿಯ ಅನುಕೂಲದ ಜೊತೆಗೆ ಒಂದಷ್ಟು ಅಪಾಯಗಳೂ ಇವೆ. ಸೈಬರ್ ವಂಚಕರು ಯಾವಾಗಲೂ ವೈಯಕ್ತಿಕ ಮಾಹಿತಿಯನ್ನು ಕದಿಯುವ ಮೂಲಕ ನಮ್ಮನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾರೆ. ಬ್ಯಾಂಕ್‌ಗಳು, ಇ - ಕಾಮರ್ಸ್ ವೆಬ್‌ಸೈಟ್‌ಗಳು, ಕೊರಿಯರ್ ಕಂಪನಿಗಳು ನಮಗೆ ಒಟಿಪಿಗಳನ್ನು ಕಳುಹಿಸುತ್ತವೆ. ಸೈಬರ್ ಕಳ್ಳರು ಗ್ರಾಹಕರಿಗೆ ಮಂಕು ಬೂದಿ ಎರಚಿ ಒಟಿಪಿ ಪಡೆದು ಖಾತೆಗಳಿಂದ ಹಣ ಖಾಲಿ ಮಾಡುತ್ತಾರೆ. ಇಂತಹ ವಿಷಯಗಳ ಬಗ್ಗೆ ನಿಗಾವಹಿಸುವ ಅಗತ್ಯವಿದೆ.

ಹಣಕಾಸಿನ ಕುರಿತು ಫೋನ್ ಕರೆ ಅಥವಾ ಸಂದೇಶ ಬಂದರೆ, ಎರಡು ಬಾರಿ ಯೋಚಿಸಬೇಕು. ಬ್ಯಾಂಕ್‌ಗಳು, ವಿಮಾ ಕಂಪನಿಗಳು, ಇ-ಕಾಮರ್ಸ್ ವೆಬ್‌ಸೈಟ್‌ಗಳು, ಯಾವುದೇ ಇತರ ಹಣಕಾಸು ಸಂಸ್ಥೆಗಳು ನಿಮ್ಮ ಒಟಿಪಿಯನ್ನು ಎಂದಿಗೂ ಕೇಳುವುದಿಲ್ಲ. ಕೊರಿಯರ್ ಮಾಡಿದ ವಸ್ತುಗಳನ್ನು ನಮಗೆ ಕೊಡುವಾಗ ಬಂದವರೇ, ಗ್ರಾಹಕರ ಸಮ್ಮುಖದಲ್ಲಿ ಒಟಿಪಿಯನ್ನು ಪಡೆದುಕೊಳ್ಳುತ್ತಾರೆ. ಅಲ್ಲದೇ, ಫೋನ್‌ನಲ್ಲಿಯೇ ಒಟಿಪಿಗಳನ್ನು ಕೇಳಲಾಗುವುದಿಲ್ಲ ಎಂಬುದನ್ನು ನೆನಪಿಡಿ. ಇತ್ತೀಚಿನ ದಿನಗಳಲ್ಲಿ ನಕಲಿ ಕೊರಿಯರ್ ಡೆಲಿವರಿ ಪ್ರಕರಣಗಳು ಹೆಚ್ಚಾಗುತ್ತಿವೆ.

ಯಾವುದೇ OTP ಸ್ವೀಕರಿಸಿದ ತಕ್ಷಣವೇ ನೀವು ವಹಿಸಬೇಕಾದ ಕ್ರಮಗಳು:

  • ಒಟಿಪಿ ಮೂಲಕ ವಹಿವಾಟನ್ನು ನೀವೇ ನಿರ್ವಹಿಸಿದ್ದೀರಾ? ಒಟಿಪಿ ವಿಶ್ವಾಸಾರ್ಹ ಕಂಪನಿಯಿಂದ ಬಂದಿದೆಯೇ? ನಿಮಗೆ ಬಂದಿರುವ ಸಂದೇಶವು ಒತ್ತಡದ ಅಥವಾ ತುರ್ತು ಎಂದು ತೋರುತ್ತಿದೆಯೇ ಎನ್ನುವ ಎರಡೆರಡು ಬಾರಿ ಯೋಚಿಸಿ ಮುಂದುವರೆಯಿರಿ.
  • ಫೋನ್ ಕರೆ ಅಥವಾ ಸಂದೇಶದಲ್ಲಿ ಬಳಸಿದ ಭಾಷೆಗೆ ಹೆಚ್ಚು ಗಮನ ಕೊಡಿ. ಯಾವುದೇ ವಹಿವಾಟು ನಡೆಸದೇ ಒಟಿಪಿ ಪಡೆದರೆ ಅದು ಖಂಡಿತವಾಗಿಯೂ ಮೋಸ ಎಂದು ನೆನಪಿಡಿ. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಬಂದಿರುವ ಒಟಿಪಿಯನ್ನು ಗ್ರಾಹಕರು ಯಾರೊಂದಿಗೂ ಹಂಚಿಕೊಳ್ಳಬೇಡಿ.
  • ಇ-ಕೆವೈಸಿಗಾಗಿ ನಿಮ್ಮ ವೈಯಕ್ತಿಕ ವಿವರಗಳನ್ನು ಕೇಳುವ ಬ್ಯಾಂಕ್‌ಗಳು ಮತ್ತು ವಿಮಾ ಕಂಪನಿಗಳ ಕರೆಗಳಿಗೆ ಪ್ರತಿಕ್ರಿಯಿಸಬೇಡಿ. ಈ ವಿಷಯವನ್ನು ನಿಮ್ಮ ಕುಟುಂಬ ಸದಸ್ಯರಿಗೂ ತಿಳಿಸಿ.
  • ಅಧಿಕೃತ ವೆಬ್‌ಸೈಟ್‌ಗಳು, ಗ್ರಾಹಕ ಸೇವಾ ಕೇಂದ್ರಗಳನ್ನು ನೇರವಾಗಿ ಸಂಪರ್ಕಿಸಿ ಹಾಗೂ ಅಗತ್ಯವಿರುವ ಸೇವೆಗಳನ್ನು ಪಡೆಯಿರಿ.
  • ಹೆಚ್ಚಿನ ರಿಟರ್ನ್ಸ್ ಕೊಡುತ್ತೇವೆ ಎಂಬ ಸಂದೇಶಗಳು, ಬ್ಯಾಂಕಿನಿಂದ ಬರುವ ಎಚ್ಚರಿಕೆಗಳು, ಕಡಿಮೆ ಬಡ್ಡಿಗೆ ಸಾಲ ಕೊಡುತ್ತೇವೆ ಎಂಬ ಜಾಹೀರಾತುಗಳು ಹೀಗೆ ಹಲವು ಸಂದೇಶಗಳು ಬರುತ್ತಿವೆ. ಇವುಗಳು ವೆಬ್‌ಸೈಟ್ ಲಿಂಕ್‌ಗಳನ್ನು ಒಳಗೊಂಡಿವೆ. ಸಂಬಂಧವಿಲ್ಲದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದರಿಂದ ಮಾಲ್‌ವೇರ್ ಮತ್ತು ಫಿಶಿಂಗ್ ದಾಳಿಯ ರೂಪದಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು.
  • ನಿಮ್ಮ ಬ್ಯಾಂಕ್ ಖಾತೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು. ಯಾವುದೇ ಅನುಮಾನಾಸ್ಪದ ವಹಿವಾಟು ಕಂಡುಬಂದಲ್ಲಿ ತಕ್ಷಣವೇ ಬ್ಯಾಂಕ್‌ಗೆ ಸಂಪರ್ಕಿಸಿ ದೂರು ಸಲ್ಲಿಸಬೇಕಾಗುತ್ತದೆ.
  • ಒಟಿಪಿ ಪಡೆದು ವಂಚನೆ ಮಾಡುವ ಸೈಬರ್​ ಕಳ್ಳರ ಬಗ್ಗೆ ಸದಾ ಎಚ್ಚರದಿಂದ ಇರಬೇಕಾಗುತ್ತದೆ. ಸ್ವಲ್ಪ ಮೈ ಮರೆತು ಒಟಿಪಿ ಹಂಚಿಕೊಂಡರೆ ನಿಮ್ಮ ಖಾತೆಯಲ್ಲಿರುವ ಹಣವೆಲ್ಲಾ ಮಾಯವಾಗುತ್ತದೆ. ಸಂದೇಹವಿದ್ದಲ್ಲಿ ಆನ್​ಲೈನ್​ ವಹಿವಾಟುಗಳಿಗೆ ಸ್ವಲ್ಪ ಸಮಯದವರೆಗೆ ಬಂದ್​ ಮಾಡಿ ಸಂಬಂಧಪಟ್ಟ ಕಚೇರಿಗಳಿಗೆ ನೇರವಾಗಿ ಭೇಟಿ ನೀಡಿ ನಿಮಗಾದ ತೊಂದರೆಗಳು ಮಾಹಿತಿ ನೀಡಿ.

ಇದನ್ನೂ ಓದಿ: ನಿಮ್ಮ ಕ್ರೆಡಿಟ್ ಸ್ಕೋರ್​​ ವರದಿಯಲ್ಲಿ ದೋಷಗಳಿವೆಯೇ? ಸರಿಪಡಿಸುವ ಮಾರ್ಗ ಇಲ್ಲಿದೆ - Cibil Errors

ETV Bharat Logo

Copyright © 2024 Ushodaya Enterprises Pvt. Ltd., All Rights Reserved.