ETV Bharat / entertainment

'ರಾಮಾಯಣ'ದಲ್ಲಿ ಯಶ್​, ಸಾಯಿಪಲ್ಲವಿ, ರಣ್​​​ಬೀರ್​ ನಟನೆ ಖಚಿತ: ಬಿಡುಗಡೆಗೂ ಮುಹೂರ್ತ ಫಿಕ್ಸ್

ರಾಕಿಂಗ್​ ಸ್ಟಾರ್​ ಯಶ್​, ಸೌತ್ ಬ್ಯೂಟಿ ಸಾಯಿ ಪಲ್ಲವಿ, ಬಾಲಿವುಡ್​ ಸೂಪರ್​ ಸ್ಟಾರ್​ ರಣ್​​​ಬೀರ್​ ಕಪೂರ್​​ ಮುಖ್ಯಭೂಮಿಕೆಯ 'ರಾಮಾಯಣ'ದ ಮೊದಲ ಭಾಗ 2026ರ ದೀಪಾವಳಿಯಲ್ಲಿ ಮತ್ತು ಎರಡನೇ ಭಾಗ 2027ರ ದೀಪಾವಳಿ ಸಂದರ್ಭ ತೆರೆಗಪ್ಪಳಿಸಲಿದೆ.

Ranbir Kapoor, Sai Pallavi, Yash
'ರಾಮಾಯಣ'ದಲ್ಲಿ ರಣ್​​​ಬೀರ್ ಕಪೂರ್​, ಸಾಯಿಪಲ್ಲವಿ, ಯಶ್​ (ETV Bharat)
author img

By ETV Bharat Entertainment Team

Published : 3 hours ago

ತಲೆಮಾರುಗಳಿಂದ ಭಾರತೀಯರ ಆಚಾರ ವಿಚಾರಗಳಲ್ಲಿ ಕಾಣುವ ಮಹಾಕಾವ್ಯ 'ರಾಮಾಯಣ'ವು ಹಿರಿತೆರೆಗೆ ಮರಳಲು ಸಜ್ಜಾಗಿದೆ. ಈಗಾಗಲೇ ಈ ಮಹಾಕಾವ್ಯವನ್ನಾಧರಿಸಿ ಹಲವು ಧಾರಾವಾಹಿ, ಸಿನಿಮಾಗಳು ಮೂಡಿಬಂದಿವೆ. ಇದೀಗ ಬಾಲಿವುಡ್​ನಿಂದ ಬಿಗ್​​ ಪ್ರಾಜೆಕ್ಟ್​​​ ರೆಡಿಯಾಗುತ್ತಿದೆ. ಇದರಲ್ಲಿ ಭಾರತೀಯ ಚಿತ್ರರಂಗದ ಖ್ಯಾತನಾಮರು ಮುಖ್ಯಭೂಮಿಕೆಯಲ್ಲಿದ್ದಾರೆ ಎಂಬುದು ಗಮನಾರ್ಹ. ಅದರಲ್ಲೂ ಕನ್ನಡದ ಖ್ಯಾತ ನಟ ಯಶ್​​ ಮುಖ್ಯಪಾತ್ರ ನಿರ್ವಹಿಸುತ್ತಿರೋದು ವಿಶೇಷ.

ಬಾಲಿವುಡ್​ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್​ ಕಟ್​​ ಹೇಳುತ್ತಿರುವ ಈ ಚಿತ್ರವು ಆಧುನಿಕ ಚಲನಚಿತ್ರ ನಿರ್ಮಾಣ ತಂತ್ರಗಳೊಂದಿಗೆ ಭಾರತೀಯ ಪೌರಾಣಿಕ ಅಂಶಗಳನ್ನೊಳಗೊಂಡು ತೆರೆ ಮೇಲೆ ಬರಲಿದೆ. ಇಂದು ಹೊರಬಿದ್ದಿರುವ ಮುಖ್ಯ ಅನೌನ್ಸ್​​​ಮೆಂಟ್​ ಒಂದರಲ್ಲಿ, ರಣ್​​​ಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂಬುದನ್ನು ತಯಾರಕರು ಬಹಿರಂಗಪಡಿಸಿದ್ದಾರೆ. ಚಿತ್ರದ ಮೊದಲ ಭಾಗ 2026ರ ದೀಪಾವಳಿಯಲ್ಲಿ ಮತ್ತು ಎರಡನೇ ಭಾಗ 2027ರ ದೀಪಾವಳಿ ಸಂದರ್ಭ ಚಿತ್ರಮಂದಿರ ಪ್ರವೇಶಿಸಲಿದೆ ಎಂದು ತಿಳಿಸಿದ್ದಾರೆ.

ಹಲವು ದಿನಗಳಿಂದ 'ರಾಮಾಯಣ'ದ ಸುತ್ತಲಿನ ಉತ್ಸಾಹ ದೊಡ್ಡ ಮಟ್ಟದಲ್ಲೇ ಇದೆ. ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಪ್ರಾಜೆಕ್ಟ್​​​ ಕೆಲಸಗಳು ಕಳೆದ ಒಂದು ದಶಕದಿಂದ ನಡೆಯುತ್ತಾ ಬಂದಿದೆ. ನಿರ್ಮಾಪಕರು ಈ ಬಗ್ಗೆ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​​ ಮೂಲಕ ಉತ್ಸಾಹ ವ್ಯಕ್ತಪಡಿಸಿದ್ದಾರೆ.

"ಒಂದು ದಶಕಕ್ಕೂ ಹಿಂದೆ, 5,000 ವರ್ಷಗಳಿಂದ ಕೋಟ್ಯಂತರ ಜನರ ಮನಸ್ಸಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಈ ಮಹಾಕಾವ್ಯವನ್ನು ಬಿಗ್​ ಸ್ಕ್ರೀನ್​​ ಮೇಲೆ ತರಲು ನಾನು ನನ್ನ ಕೆಲಸ ಪ್ರಾರಂಭಿಸಿದೆ. ಇಂದು ಆ ಪ್ರಾಜೆಕ್ಟ್​​​ ರೂಪುಗೊಳ್ಳುತ್ತಿರುವ ರೀತಿಗೆ ಸಖತ್​ ಥ್ರಿಲ್​​ ಆಗಿದ್ದೇನೆ. ನಮ್ಮ ತಂಡ ದಣಿವರಿಯದೇ ಕೆಲಸ ಮಾಡುತ್ತಿದೆ. ನಮ್ಮ ಇತಿಹಾಸ, ನಮ್ಮ ಸತ್ಯ ಮತ್ತು ನಮ್ಮ ಸಂಸ್ಕೃತಿಯನ್ನು ಅತ್ಯಂತ ಅಧಿಕೃತ, ಪವಿತ್ರ ಮತ್ತು ಬೆರಗುಗೊಳಿಸುವ ದೃಶ್ಯ ರೂಪಾಂತರವಾಗಿ ಪ್ರಪಂಚದಾದ್ಯಂತದ ಜನರಿಗೆ ತೆರೆ ಮೇಲೆ ಪ್ರಸ್ತುತಪಡಿಸುವ ಉದ್ದೇಶದೊಂದಿಗೆ 'ನಮ್ಮ ರಾಮಾಯಣ' ಪ್ರಗತಿಯಲ್ಲಿದೆ. ನಮ್ಮ ಶ್ರೇಷ್ಠ ಮಹಾಕಾವ್ಯಕ್ಕೆ ಜೀವ ತುಂಬುವ ನಮ್ಮ ಕನಸನ್ನು ಹೆಮ್ಮೆ ಮತ್ತು ಗೌರವದಿಂದ ನನಸಾಗಿಸಲು ನಮ್ಮೊಂದಿಗೆ ಸೇರಿಕೊಳ್ಳಿ" ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರಲಿದೆ. ಮೊದಲ ಭಾಗದ ಯಶಸ್ಸಿನ ಆಧಾರದ ಮೇಲೆ ಸೀಕ್ವೆಲ್​ಗಳು ನಿರ್ಧಾರಗೊಳ್ಳುತ್ತವೆ.​​​ ಈ ವಿಧಾನಕ್ಕೆ ಭಿನ್ನವಾಗಿ, ತಿವಾರಿ ಮತ್ತು ಅವರ ತಂಡ ಎರಡೂ ಭಾಗಗಳನ್ನು ಏಕಕಾಲದಲ್ಲಿ ಚಿತ್ರೀಕರಿಸುವ ಮೂಲಕ ದಿಟ್ಟ ಹೆಜ್ಜೆ ಇಡುತ್ತಿದೆ. ಶೂಟಿಂಗ್​ ನಿರಂತರವಾಗಿ​​ ಸಾಗಲಿದೆ.

ಇದನ್ನೂ ಓದಿ: ಆಸ್ಕರ್​​ ಪ್ರವೇಶಿಸಿದ ಕನ್ನಡ ಕಿರುಚಿತ್ರ 'ಸನ್​ಫ್ಲವರ್ಸ್​​ ವೇರ್​ ದಿ ಫಸ್ಟ್ ಒನ್ಸ್ ಟು ನೋ': ಕೇನ್ಸ್​​​ ಅವಾರ್ಡ್​​ ಬಳಿಕ ಮತ್ತೊಂದು ಮೈಲಿಗಲ್ಲು

'ರಾಮಾಯಣ'ದ ಕಾಸ್ಟ್​​ ಘೋಷಣೆಯಾದಾಗಿನಿಂದಲೂ ಸೋಷಿಯಲ್​​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ. ಬಹುಮುಖ ಪ್ರತಿಭೆಗೆ ಹೆಸರುವಾಸಿಯಾಗಿರುವ ಬಾಲಿವುಡ್​​ ಸೂಪರ್​ ಸ್ಟಾರ್​​ ರಣ್​​​​​ಬೀರ್ ಕಪೂರ್ ಮಹಾಕಾವ್ಯದ ವೀರ ನಾಯಕ ಭಗವಾನ್ ಶ್ರೀರಾಮನ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಸೌತ್​​ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ಚೆಲುವೆ ಸಾಯಿ ಪಲ್ಲವಿ ಆಕರ್ಷಕ ಸ್ಕ್ರೀನ್ ಪ್ರಸೆನ್ಸ್‌ನೊಂದಿಗೆ ಸೀತಾ ಮಾತೆ ಪಾತ್ರ ನಿರ್ವಹಿಸಲಿದ್ದಾರೆ. ಇನ್ನು, ರಾಕಿಂಗ್​ ಸ್ಟಾರ್​ ಯಶ್​ ಅವರ ಸ್ಟಾರ್​​​ ಡಮ್​ ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. ಕೆಜಿಎಫ್‌ ಸರಣಿ ಸಿನಿಮಾಗಳ ರಾಕಿ ಪಾತ್ರಗಳಿಂದ ಹೆಸರುವಾಸಿಯಾಗಿರುವ ಯಶ್ ಮಹಾಕಾವ್ಯದಲ್ಲಿ ಅಸಾಧಾರಣ ಎದುರಾಳಿ ರಾವಣನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಪಾತ್ರಗಳ ಬಗ್ಗೆ ಮತ್ತು ಎರಡು ಭಾಗಗಳಲ್ಲಿ ಸಿನಿಮಾ ಮೂಡಿಬರಲಿದೆ ಎಂಬ ಬಗ್ಗೆ ಅಧಿಕೃತ ಘೋಷಣೆಗೂ ಮೊದಲೇ ವದಂತಿಗಳಿದ್ದವು. ಈ ಊಹಾಪೋಹಗಳೀಗ ನಿಜವಾಗಿವೆ.

ಇದನ್ನೂ ಓದಿ: ರಿಷಬ್​ ಶೆಟ್ಟಿ ಸಿನಿಮಾದಲ್ಲಿ ಬಾಹುಬಲಿ​​ ಸ್ಟಾರ್​?: ಇಂಟ್ರೆಸ್ಟಿಂಗ್​​ ಫೋಟೋ ಹಂಚಿಕೊಂಡ 'ಜೈ ಹನುಮಾನ್​' ನಿರ್ದೇಶಕ

ಗಮನಾರ್ಹ ವಿಷಯವೆಂದರೆ ಈ ಬಹುನಿರೀಕ್ಷಿತ ಪ್ರಾಜೆಕ್ಟ್​ನಲ್ಲಿ​​ ಹಿಂದಿನ ರಾಮಾಯಣ ರೂಪಾಂತರಗಳ ಜನಪ್ರಿಯ ಕಲಾವಿದರನ್ನು ಸಹ ಕಾಣಬಹುದು. 1987ರ ರಾಮಾಯಣ ಸರಣಿಯಲ್ಲಿ ರಾಮನ ಪಾತ್ರವನ್ನು ಅಮರಗೊಳಿಸಿದ್ದ ಅರುಣ್ ಗೋವಿಲ್ ಅವರು ಇಲ್ಲಿ ರಾಮನ ತಂದೆ ರಾಜ ದಶರಥನ ಪಾತ್ರವನ್ನು ನಿರ್ವಹಿಸಲಿದ್ದಾರೆ. ತಮ್ಮ ಅಭಿನಯಕ್ಕೆ ಹೆಸರುವಾಸಿಯಾಗಿರುವ ಲಾರಾ ದತ್ತಾ ಕೈಕೇಯಿ ಪಾತ್ರದಲ್ಲಿ ಮಿಂಚಲಿದ್ದಾರೆ. ಸದ್ಯಕ್ಕೆ ಎಲ್ಲರ ಗಮನ 2026ರ ದೀಪಾವಳಿಯ ಮೇಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.