ಹೈದರಾಬಾದ್: ಪ್ರಸ್ತುತ ಬಹುತೇಕ ಉದ್ಯೋಗಿಗಳು, ಉದ್ಯೋಗಿಗಳ ಭವಿಷ್ಯ ನಿಧಿ EPF ಖಾತೆಯನ್ನು ಹೊಂದಿಯೇ ಹೊಂದಿರುತ್ತಾರೆ. ಪ್ರತಿ ತಿಂಗಳು ಅವರು ತಮ್ಮ ಮೂಲ ವೇತನದ ನಿರ್ದಿಷ್ಟ ಹಣವನ್ನು ಪಿಎಫ್ ಖಾತೆಗೆ ಕೊಡುಗೆಯಾಗಿ ಪಾವತಿ ಮಾಡಿರಲೇಬೇಕಾಗುತ್ತದೆ. ನೌಕರರು ಅಷ್ಟೇ ಅಲ್ಲ ಅವರು ಕೆಲಸ ಮಾಡುತ್ತಿರುವ ಕಂಪನಿಯೂ ಸಹ, ಆತ ಪಾವತಿಸಿದಷ್ಟು ಮೊತ್ತವನ್ನು ಪಿಎಫ್ ಖಾತೆಗೆ ಜಮಾ ಮಾಡುತ್ತದೆ. ನಿವೃತ್ತಿಯ ನಂತರ ಈ ಹಣ ನೌಕರನಿಗೆ ಅನುಕೂಲ ಅಥವಾ ಸಹಾಯಕ್ಕೆ ಬರಲಿದೆ.
ಆದರೆ, ಕೆಲವರಿಗೆ ತುರ್ತು ಪರಿಸ್ಥಿತಿಯಲ್ಲಿ ಹಣ ಬೇಕಾಗುತ್ತದೆ. ಎಷ್ಟೋ ಜನರು EPFO ವೆಬ್‌ಸೈಟ್‌ಗೆ ಹೋಗಿ PF ಹಣ ಹಿಂಪಡೆಯುತ್ತಾರೆ. ಆದಾಗ್ಯೂ, ಈ ರೀತಿಯಲ್ಲಿ ಹಣವನ್ನು ಹಿಂಪಡೆಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿಯೇ EPFO ಬಳಕೆದಾರರಿಗೆ UMANG ಅಪ್ಲಿಕೇಶನ್ ಮೂಲಕ ಕ್ಷಣ ಮಾತ್ರದಲ್ಲಿ ಹಣ ಹಿಂಪಡೆಯುವ ಸೌಲಭ್ಯ ಒದಗಿಸಲಾಗಿದೆ. ಈಗ ಉಮಂಗ್ ಆಪ್ ಮೂಲಕ ಹಣವನ್ನು ಹಿಂಪಡೆಯುವುದು ಹೇಗೆ ಎಂದು ತಿಳಿದುಕೊಳ್ಳೋಣ.
How To Withdraw PF Balance From UMANG App- ಉಮಾಂಗ್ ಅಪ್ಲಿಕೇಶನ್ ಬಳಸಿ ಪಿಎಫ್ ಹಣವನ್ನು ಹಿಂಪಡೆಯುವುದು ಹೇಗೆ?
- ಮೊದಲು ಪ್ಲೇಸ್ಟೋರ್‌ನಿಂದ ಉಮಾಂಗ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.
- ಅಪ್ಲಿಕೇಶನ್ ಡೌನ್ಲೋಡ್ ಮಾಡಿದ ನಂತರ ಅಗತ್ಯವಿರುವ ವಿವರಗಳೊಂದಿಗೆ ಲಾಗಿನ್ ಮಾಡಿ.
- ನಂತರ ಸೇವಾ ವಿಭಾಗದಲ್ಲಿ EPFO ಆಯ್ಕೆಯನ್ನು ಆರಿಸಿಕೊಳ್ಳಿ.
- ನಂತರ 'ಉದ್ಯೋಗಿ ಕೇಂದ್ರಿತ ಸೇವೆಗಳು' ವಿಭಾಗದಲ್ಲಿ ರೈಸ್ ಕ್ಲೈಮ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಈಗ UAN ಸಂಖ್ಯೆಯನ್ನು ನಮೂದಿಸಿ. ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಅದನ್ನು ಅಪ್ಲಿಕೇಶನ್ನಲ್ಲಿ ನಮೂದಿಸಿ.
- ನಂತರ ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ನೀವು ಹಿಂಪಡೆಯಲು ಬಯಸುವ ಮೊತ್ತವನ್ನು ನಮೂದಿಸಿ, ಆ ಬಳಿಕ ಅಲ್ಲಿ ಕೇಳಿದಂತೆ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಿ.
- ಈ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮಗೊಂದು ಉಲ್ಲೇಖ ಸಂಖ್ಯೆ ಬರುತ್ತದೆ.
- ಉಮಾಂಗ್ ಆ್ಯಪ್‌ನಲ್ಲಿ ಈ ಉಲ್ಲೇಖ ಸಂಖ್ಯೆಯನ್ನು ನಮೂದಿಸುವ ಮೂಲಕ ನೀವು ದಾಖಲಿಸಿದ ಮೊತ್ತವನ್ನು ಹಿಂಪಡೆಯುವ ವಿನಂತಿಯನ್ನು ಪರಿಶೀಲನೆ ಮಾಡಬಹುದು
- ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಮೂಲಕ ನೀವು ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಪಿಎಫ್ ಹಣವನ್ನು ಕ್ಷಣಮಾತ್ರದಲ್ಲೇ ಉಮಾಂಗ್ ಅಪ್ಲಿಕೇಶನ್ ಮೂಲಕ ಹಿಂಪಡೆಯಬಹುದು.
ಉಮಾಂಗ್ ಆಪ್ ನಲ್ಲಿ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
- ನಿಮ್ಮ ಫೋನ್‌ನಲ್ಲಿ ಉಮಾಂಗ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ, ಇನ್ಸ್ಟಾಲ್ ಆದ ಮೇಲೆ ಇಪಿಎಫ್‌ಒ ಆಯ್ಕೆಯನ್ನು ಆರಿಸಿ.
- ನಂತರ 'ಉದ್ಯೋಗಿ ಕೇಂದ್ರಿತ ಸೇವೆಗಳು' ವಿಭಾಗದಲ್ಲಿ 'ಪಾಸ್‌ಬುಕ್ ವೀಕ್ಷಿಸಿ' ಆಯ್ಕೆಯ ಬಟನ್ ಕ್ಲಿಕ್ ಮಾಡಿ.
- ನಂತರ ನಿಮ್ಮ UAN ಸಂಖ್ಯೆಯನ್ನು ನಮೂದಿಸಿ.
- ತಕ್ಷಣವೇ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಅದನ್ನು ಅಲ್ಲಿ ನಮೂದಿಸಿ.
- ಈಗ ನಿಮ್ಮ ಬ್ಯಾಲೆನ್ಸ್ ವಿವರಗಳು ಪರದೆಯ ಮೇಲೆ ಕಾಣಿಸುತ್ತವೆ.
ಇದನ್ನು ಓದಿ: ಫ್ರೀ ಫ್ರೀ ಫ್ರೀ... ಜಿಯೋ ಫೈಬರ್ - ಏರ್ ಫೈಬರ್ ಗ್ರಾಹಕರಿಗೆ ಭರ್ಜರಿ ಆಫರ್ - Jio new plan