ETV Bharat / business

ಇಪಿಎಫ್ ಖಾತೆಯನ್ನು ಅನ್‌ಬ್ಲಾಕ್ ಮಾಡುವುದು ಹೇಗೆ?; ಇಲ್ಲಿದೆ ಸುಲಭ ಮಾರ್ಗ - How To Unblock EPF Account

ನಿವೃತ್ತ ಅಥವಾ ಕೆಲಸ ಬಿಟ್ಟಿರುವ ಉದ್ಯೋಗಿ ಮೂರು ವರ್ಷಗಳವರೆಗೆ ತನ್ನ ಪಿಎಫ್ ಖಾತೆಗೆ ಹಣ ತುಂಬದೇ ಇದ್ದರೆ, ಅಂತಹ ಖಾತೆಯು ನಿಷ್ಕ್ರಿಯವಾಗುತ್ತದೆ. ಬ್ಲಾಕ್ ಆಗಿರುವ ಇಪಿಎಫ್ ಖಾತೆಯನ್ನು ಪುನಃ ಸಕ್ರಿಯಗೊಳಿಸುವುದು ಹೇಗೆ? ಎಂಬುದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ

Etv Bharat
Etv Bharat
author img

By ETV Bharat Karnataka Team

Published : Apr 19, 2024, 9:12 AM IST

ಹೈದರಾಬಾದ್​: ಮಾಸಿಕ ಸಂಬಳ ಪಡೆಯುವ ಉದ್ಯೋಗಿಗಳು, EPFO ಖಾತೆಯನ್ನು ಹೊಂದಿರುತ್ತಾರೆ ಮತ್ತು ಹೊಂದಿರಲೇಬೇಕಾಗುತ್ತದೆ. ಸಂಘಟಿತ ವಲಯದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರ್ಕಾರವು ಉದ್ಯೋಗಿಗಳ ಭವಿಷ್ಯ ನಿಧಿಯನ್ನು ಸ್ಥಾಪಿಸಿದೆ. ಇದು ನೌಕರರ ನಿವೃತ್ತಿ ಉಳಿತಾಯ ಯೋಜನೆಯಾಗಿದೆ. ಇಪಿಎಫ್ ಯೋಜನೆಯನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ನಿರ್ವಹಿಸುತ್ತದೆ.

ಈ ಯೋಜನೆಗಾಗಿ, ನೌಕರರ ಮಾಸಿಕ ವೇತನದಿಂದ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಕಡಿತ ಮಾಡಲಾಗುತ್ತದೆ. ಇದಕ್ಕೆ ಸಮಾನವಾಗಿ ಉದ್ಯೋಗದಾತರು ಹಣವನ್ನು ಇಪಿಎಫ್​ ಖಾತೆಹೆ ಹಣ ಪಾವತಿ ಮಾಡುತ್ತಾರೆ. ಆದಾಗ್ಯೂ, ಕೆಲವೊಮ್ಮೆ ನಿವೃತ್ತಿ, ಮರಣ ಅಥವಾ ಇನ್ನಾವುದೇ ಕಾರಣಗಳಿಂದ ಉದ್ಯೋಗಿ ಸತತ ಮೂರು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಇಪಿಎಫ್‌ಗೆ ಕೊಡುಗೆ ನೀಡದಿದ್ದರೆ, ಅಂತಹ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಹಣವನ್ನು ಹಿಂಪಡೆಯಲು ಯಾವುದೇ ಆಯ್ಕೆ ಇರಲ್ಲ. ಆದರೆ ಇಂತಹ ಬ್ಲಾಕ್ ಮಾಡಲಾದ ನಿಷ್ಕ್ರಿಯ EPF ಖಾತೆಗಳನ್ನು EPF ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಸಕ್ರಿಯಗೊಳಿಸಬಹುದಾಗಿದೆ.

PF ಖಾತೆಗಳನ್ನು ಅನ್​ಲಾಕ್​ ಮಾಡುವುದು ಹೇಗೆ?: SOP ಪ್ರಕಾರ, ಬಳಕೆದಾರರು ತಮ್ಮ EPF ಖಾತೆಯನ್ನು ಅನ್‌ಬ್ಲಾಕ್ ಮಾಡುವ ಮೊದಲು ತಮ್ಮ KYC ವಿವರಗಳನ್ನು ಪರಿಶೀಲಿಸಬೇಕಾಗುತ್ತದೆ. ಅಂದರೆ ಖಾತೆದಾರರ ಗುರುತಿನ ಪುರಾವೆಗಳಾದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ವಿವರಗಳನ್ನು ನೀಡಬೇಕು. ಬಳಕೆದಾರರ ಇಪಿಎಫ್ ಖಾತೆಯ ಭದ್ರತೆ ಅಥವಾ ಸುರಕ್ಷತೆಗೆ ಈ ಕೆಲಸ ಮಾಡುವುದು ಅನಿವಾರ್ಯ. KYC ಪೂರ್ಣಗೊಂಡ ನಂತರ ಅವರು ಕೆಳಗೆ ತಿಳಿಸಿದಂತೆ ಅನುಸರಿಸುವ ಮೂಲಕ EPF ಖಾತೆಯನ್ನು ಅನ್​ಲಾಕ್ ಮಾಡಬಹುದು.

  • www.epfindia.gov.in ನಲ್ಲಿ ಉದ್ಯೋಗಿ ಭವಿಷ್ಯ ನಿಧಿಯ (EPF) ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
  • ಅಲ್ಲಿ ಒದಗಿಸಲಾದ ರುಜುವಾತುಗಳನ್ನು ಬಳಸಿಕೊಂಡು ಖಾತೆಗೆ ಲಾಗ್ ಇನ್ ಆಗಿ
  • ಅದರ ನಂತರ 'ಹೆಲ್ಪ್ ಡೆಸ್ಕ್' ಗೆ ಹೋಗಿ.
  • 'ಇನ್ ಆಪರೇಟಿವ್ ಅಕೌಂಟ್ ಅಸಿಸ್ಟೆನ್ಸ್' ಮೇಲೆ ಕ್ಲಿಕ್ ಮಾಡಿ.
  • ವೆಬ್‌ಸೈಟ್ ನೀಡಿದ ಸೂಚನೆಗಳ ಆಧಾರದ ಮೇಲೆ ನೀವು ನಿಮ್ಮ ಗುರುತಿನ ವಿವರಗಳನ್ನು ನಮೂದಿಸಿ, ಅದರ ನಂತರ ಅನ್​ಲಾಕ್​​​ ವಿನಂತಿ ಮಾಡಿ

ಇನ್ನು ಇಪಿಎಫ್ ಖಾತೆದಾರರು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಹಣ ಹಿಂಪಡೆಯಲು ಸಹ ಅನುಮತಿಸಲಾಗಿದೆ. ಇಪಿಎಫ್ ಬ್ಯಾಲೆನ್ಸ್ ಅನ್ನು ಅಧಿಕೃತ ಪೋರ್ಟಲ್ ಅಥವಾ ಉಮಂಗ್ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದಾಗಿದೆ. EPF ಈಗ ಬ್ಯಾಲೆನ್ಸ್, ಪಾಸ್‌ಬುಕ್ ವಿವರಗಳನ್ನು ಪರಿಶೀಲಿಸಲು ಏಕೀಕೃತ ಸದಸ್ಯ ಪೋರ್ಟಲ್‌ ಸಹಾಯ ಮಾಡುತ್ತದೆ. ಎಲ್ಲ EPF ಖಾತೆದಾರರು 58 ವರ್ಷ ವಯಸ್ಸಿನವರೆಗೆ ತಾವು ಪಾವತಿಸಿದ ಹಣದ ಮೇಲೆ ನಿಯಮಿತವಾಗಿ ಬಡ್ಡಿ ಗಳಿಸುತ್ತಾರೆ.

ಇದನ್ನು ಓದಿ: ಎಲ್​​​​ಐಸಿಯಲ್ಲಿ ಕೋಟ್ಯಧಿಪತಿ ಪ್ಲಾನ್​​: 500 ರೂನಂತೆ ಕಟ್ಟುತ್ತಾ ಹೋದರೆ ಕೋಟಿ ರೂ. ಪ್ರಯೋಜನ - LIC Crorepati Scheme

ETV Bharat Logo

Copyright © 2024 Ushodaya Enterprises Pvt. Ltd., All Rights Reserved.