ETV Bharat / business

ನಿಮ್ಮ PAN ಕಾರ್ಡ್ ದುರುಪಯೋಗವಾಗಿದೆಯೇ? ಈ ವಿಚಾರಗಳನ್ನು ಅವಶ್ಯವಾಗಿ ಇಂದೇ ತಿಳಿಯಿರಿ - PAN Card Fraud - PAN CARD FRAUD

How To Check PAN Card Fraud: ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ಯಾನ್ ಕಾರ್ಡ್ ದುರ್ಬಳಕೆ ಬಗ್ಗೆಯೂ ಆಗಾಗ್ಗೆ ಪರಿಶೀಲಿಸುವುದು ಸೂಕ್ತ. ಹಾಗಾದರೆ, ಪ್ಯಾನ್ ಕಾರ್ಡ್ ದುರುಪಯೋಗವಾಗಿದೆಯೇ ಎಂಬುದನ್ನು ತಿಳಿಯುವುದು ಹೇಗೆ?. ಇಲ್ಲಿದೆ ಉಪಯುಕ್ತ ಮಾಹಿತಿ.

PAN Card
ಪ್ಯಾನ್ ಕಾರ್ಡ್
author img

By ETV Bharat Karnataka Team

Published : Apr 2, 2024, 4:34 PM IST

ಇಂದಿನ ದಿನಗಳಲ್ಲಿ ಎಲ್ಲ ರೀತಿಯ ಹಣಕಾಸು, ಆರ್ಥಿಕತೆಗೆ ಸಂಬಂಧಿಸಿದ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ (PAN Card) ಕಡ್ಡಾಯ. ಆದರೆ, ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಕಾರಣ ಪ್ಯಾನ್ ಕಾರ್ಡ್ ಕೂಡ ದುರ್ಬಳಕೆಯಾಗುವ ಸಾಧ್ಯತೆಗಳಿವೆ. ಆದ್ದರಿಂದ ನಿಮ್ಮ ಪ್ಯಾನ್ ಕಾರ್ಡ್ ದುರುಪಯೋಗವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಒಳಿತು.

ಪ್ಯಾನ್ ಸಂಖ್ಯೆ ಎಂದರೇನು?: ಪ್ಯಾನ್​ ಕಾರ್ಡ್ ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುವ 10 ಅಂಕಿಯ ಆಲ್ಫಾನ್ಯೂಮರಿಕ್ ವಿಶಿಷ್ಟವಾದ ಗುರುತಿನ ಚೀಟಿ. ಪ್ಯಾನ್​ ಎಂದರೆ, ಆದಾಯ ತೆರಿಗೆ ಇಲಾಖೆಯ ಶಾಶ್ವತ ಖಾತೆ ಸಂಖ್ಯೆ (Permanent Account Number-PAN). ಇದನ್ನು ಐಟಿ ಇಲಾಖೆಯು ಲ್ಯಾಮಿನೇಟೆಡ್ ಕಾರ್ಡ್ ರೂಪದಲ್ಲಿ ನೀಡುತ್ತದೆ. ತೆರಿಗೆ ಉದ್ದೇಶಗಳಿಗಾಗಿ ದೇಶದ ಪ್ರಜೆಗಳು ಮತ್ತು ಸಂಸ್ಥೆಗಳಿಗೆ ಪ್ಯಾನ್ ಕಾರ್ಡ್ ವಿಶಿಷ್ಟ ಗುರುತಿನ ಸಂಖ್ಯೆಯಾಗಿ ಕಾರ್ಯನಿರ್ವಹಿಸುತ್ತದೆ.

ಆದರೆ, ಕೆಲವು ಪ್ರಮುಖ ಕೆಲಸ-ಕಾರ್ಯಗಳಿಗೆ ಪ್ಯಾನ್ ಕಾರ್ಡ್ ಜೆರಾಕ್ಸ್​ ಪ್ರತಿಗಳನ್ನು ನೀಡಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚು. ಹಾಗಾದರೆ, ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಹೇಗೆ ಎಂಬುವುದು ತಿಳಿಯೋಣ.

ಪ್ಯಾನ್ ಕಾರ್ಡ್ ದುರುಪಯೋಗವಾಗುತ್ತಿದೆಯೇ ಎಂದು ತಿಳಿಯಲು ಸುಲಭ ವಿಧಾನವೆಂದರೆ, ನಿಮ್ಮ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ಖಾತೆಗಳನ್ನು ಆಗಾಗ ಪರಿಶೀಲಿಸುವುದು. ಬ್ಯಾಂಕ್ ಸ್ಟೇಟ್‌ಮೆಂಟ್​ಗಳು ಮತ್ತು ರಸೀದಿಗಳನ್ನು ಪರಿಶೀಲನೆ ಮಾಡಿ. ಬೇರೆ ಯಾವುದನ್ನು ಪರಿಶೀಲಿಸಬೇಕು?

ಹಣಕಾಸು ಸ್ಟೇಟ್​ಮೆಂಟ್​ಗಳು: ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪರಿಶೀಲಿಸುವುದು ಒಳ್ಳೆಯದು. ಅವುಗಳಲ್ಲಿ ಯಾವುದಾದರೂ ಅನುಮಾನಾಸ್ಪದ ಅಥವಾ ಅನಧಿಕೃತ ಹಣಕಾಸು ವಹಿವಾಟು ನಡೆದಿದೆಯೇ ಎಂಬುದನ್ನು ಗಮನಿಸಿದೆ.

ಸಿ-ಬಿಲ್: ಕ್ರೆಡಿಟ್ ಬ್ಯೂರೋಗಳಿಂದ ನಿಮ್ಮ ಕ್ರೆಡಿಟ್ ವರದಿಯ ನಕಲು ಪ್ರತಿಗಳನ್ನು ಪಡೆಯಿರಿ. ನಿಮ್ಮ ಪ್ಯಾನ್ ಕಾರ್ಡ್‌ಗೆ ಯಾವುದೇ ನಕಲಿ ಖಾತೆಗಳು ಅಥವಾ ಕ್ರೆಡಿಟ್ ಅಪ್ಲಿಕೇಶನ್‌ಗಳನ್ನು ಲಿಂಕ್ ಮಾಡಲಾಗಿದೆಯೇ ಎಂದು ಪರಿಶೀಲಿಸಿ. ಒಂದು ಅಕ್ರಮ ಲಿಂಕ್​ ಆಗಿದ್ದಲ್ಲಿ ಅದನ್ನು ತಕ್ಷಣವೇ ಕ್ರೆಡಿಟ್ ಬ್ಯೂರೋಗೆ ವರದಿ ಮಾಡಿ.

ಐಟಿ ವರದಿ: ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ಬಳಸಿಕೊಂಡು ನಿಮ್ಮ ಖಾತೆಗೆ ಲಾಗಿನ್ ಆಗಬಹುದು. ನಿಮ್ಮ ತೆರಿಗೆ ಫೈಲಿಂಗ್‌ಗಳ ಮೂಲಕ ಯಾವುದೇ ವ್ಯತ್ಯಾಸಗಳಿವೆಯೇ ಎಂದು ಪರಿಶೀಲಿಸಿ. ಉದಾಹರಣೆಗೆ, ನೀವು ಫಾರ್ಮ್ 26ASನಲ್ಲಿ ಇದರ ವಿವರಗಳನ್ನು ಕಾಣಬಹುದು.

ಬ್ಯಾಂಕ್ ಅಧಿಕಾರಿಗಳಿಗೆ ದೂರು ನೀಡಿ: ಯಾವುದೇ ಮೋಸದ ಅಥವಾ ಅನುಮಾನಾಸ್ಪದ ವಹಿವಾಟುಗಳು ನಿಮಗೆ ಕಂಡುಬಂದರೆ, ತಕ್ಷಣವೇ ನಿಮ್ಮ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ವರದಿ ಮಾಡಿ. ಅವರು ಅನಧಿಕೃತ ಪ್ರವೇಶವನ್ನು ನಿರ್ಬಂಧಿಸುತ್ತಾರೆ ಮತ್ತು ನಿಮ್ಮ ಖಾತೆಗಳನ್ನು ರಕ್ಷಿಸುತ್ತಾರೆ.

ಪೊಲೀಸರಿಗೂ ವರದಿ ಮಾಡಿ: ಯಾವುದೇ ಪ್ಯಾನ್​ ಕಾರ್ಡ್​ ದುರ್ಬಳಕೆಯಂತಹ ಮೋಸದ ಹಣಕಾಸಿನ ವಹಿವಾಟುಗಳು, ಗುರುತಿನ ಕಳ್ಳತನ ಅಥವಾ ಅನಧಿಕೃತ ಪ್ರವೇಶ ಪತ್ತೆಯಾದರೆ, ತಕ್ಷಣವೇ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡಿ. ಪ್ಯಾನ್ ಕಾರ್ಡ್ ವಂಚನೆಗೆ ಸಂಬಂಧಿಸಿದ ಎಲ್ಲ ವಿವರಗಳು ಮತ್ತು ದಾಖಲೆಗಳನ್ನು ಪೊಲೀಸರಿಗೆ ಒದಗಿಸಿ.

ಆದಾಯ ತೆರಿಗೆ ಇಲಾಖೆಯ ಸಂಪರ್ಕಿಸಿ: ಆದಾಯ ತೆರಿಗೆ ಇಲಾಖೆ ಗ್ರಾಹಕ ಸೇವಾ ಸಹಾಯವಾಣಿಯನ್ನೂ ಸಂಪರ್ಕಿಬಹುದು. ನಿಮ್ಮ ಪ್ಯಾನ್ ಕಾರ್ಡ್‌ನ ದುರುಪಯೋಗದ ಕುರಿತು ವಿವರಗಳು ಮತ್ತು ಅದಕ್ಕೆ ಪೂರಕ ದಾಖಲೆಗಳನ್ನು ಸಲ್ಲಿಸಿ.

ಪ್ಯಾನ್ ದುರುಪಯೋಗದ ಬಗ್ಗೆ ವರದಿ ಮಾಡುವುದು ಹೇಗೆ?: TIN NSDL ಅಧಿಕೃತ ಪೋರ್ಟಲ್​ನಲ್ಲಿ ಸುಲಭವಾಗಿ ದೂರು ಸಲ್ಲಿಸಬಹುದು.

  • TIN NSDL ವೆಬ್​ಸೈಟ್​ನ ಮುಖಪುಟದಲ್ಲಿ ಕಸ್ಟಮರ್ ಕೇರ್ ವಿಭಾಗಕ್ಕೆ ಹೋಗಿ
  • ಡ್ರಾಪ್-ಡೌನ್ ಮೆನುವಿನಲ್ಲಿ ದೂರುಗಳು/ವಿಚಾರಣೆಗಳ ಮೇಲೆ ಕ್ಲಿಕ್ ಮಾಡಿ
  • ಆಗ ತಕ್ಷಣವೇ ದೂರು ನಮೂನೆ ತೆರೆದುಕೊಳ್ಳುತ್ತದೆ
  • ಈ ದೂರು ನಮೂನೆಯಲ್ಲಿ ಅಗತ್ಯವಿರುವ ಎಲ್ಲ ವಿವರಗಳನ್ನು ನಮೂದಿಸಿ
  • ಕ್ಯಾಪ್ಚಾ ಕೋಡ್​ ನಮೂದಿಸಿ ಮತ್ತು ಸಬ್ಮಿಟ್​ ಮಾಡಿ

ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಬಳಕೆದಾರರ ಗಮನಕ್ಕೆ; ಏಪ್ರಿಲ್ 1 ರಿಂದ ಹೊಸ ನಿಯಮಗಳು ಜಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.