ಹೈದರಾಬಾದ್: ಖಾಸಗಿ ವಲಯದಲ್ಲಿ ಕಾರ್ಯ ನಿರ್ವಹಿಸುವ ಪ್ರತಿ ವ್ಯಕ್ತಿ ತಮ್ಮ ಆದಾಯದಲ್ಲಿ ಕೊಂಚ ಹಣ ಉಳಿತಾಯ ಮಾಡುವ ಜೊತೆಗೆ ಉತ್ತಮ ರಿರ್ಟರ್ನ್ಸ್ ಹೊಂದಿದ ಕಡೆ ಹೂಡಿಕೆ ಮಾಡುತ್ತಾರೆ. ಈ ಮೂಲಕ ನಿವೃತ್ತಿ ಬಳಿಕ ಯಾವುದೇ ಆರ್ಥಿಕ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುತ್ತಾರೆ.
ಈ ರೀತಿಯಲ್ಲಿ ಯೋಚಿಸುತ್ತಿದ್ದರೆ ಅದಕ್ಕೆ ಪಿಎಫ್ ಅತ್ಯುತ್ತಮ ಆಯ್ಕೆ. ಇದರಲ್ಲಿ ಉತ್ತಮ ರಿಟರ್ನ್ಸ್ ಜೊತೆಗೆ ನಿವೃತ್ತಿ ಬಳಿಕ ಪಿಂಚಣಿಯ ಆತಂಕಕ್ಕೆ ಇತಿಶ್ರೀ ಹಾಡಬಹುದು. ಪಿಎಫ್ ಖಾತೆದಾರರು ಇಪಿಎಸ್ - 95 ಅಡಿ ಪಿಂಚಣಿ ಪ್ರಯೋಜನವನ್ನು ಪಡೆಯಬಹುದಾಗಿದೆ. ಆದಾಗ್ಯೂ, ಇದರಲ್ಲಿ ಕೆಲವು ಷರತ್ತುಗಳಿದ್ದು, ಇವುಗಳನ್ನು ಪೂರೈಸಿದಲ್ಲಿ ಮಾತ್ರವೇ ಪಿಂಚಣಿ ಪ್ರಯೋಜನ ಪಡೆಯಬಹುದಾಗಿದೆ.
10 ವರ್ಷ ಕೆಲಸ ಮಾಡಿದಲ್ಲಿ ಪಿಂಚಣಿ ಸೌಲಭ್ಯ: ಉದ್ಯೋಗಿ ಪಿಂಚಣಿ ಯೋಜನೆ (ಇಪಿಎಸ್) ಬಗ್ಗೆ ಅನೇಕರಿಗೆ ಗೊಂದಲಗಳಿವೆ. ಈ ಹಿನ್ನೆಲೆಯಲ್ಲಿ ಇಪಿಎಸ್ ಎಂದರೇನು? ಇದರಿಂದ ಏನು ಪ್ರಯೋಜನ ಎಂಬುದನ್ನು ಮೊದಲು ತಿಳಿಯಬೇಕು. ಈ ಇಪಿಎಸ್ ಅನ್ನು ಇಪಿಎಚ್ಒ ನಿರ್ವಹಣೆ ಮಾಡುತ್ತದೆ. ಯೋಜನೆಯ ಪ್ರಯೋಜನ ಪಡೆಯುವುದಾರೆ, ಈ ಷರತ್ತನ್ನು ಪೂರೈಸಲೇಬೇಕಾಗುತ್ತದೆ. ಅದೆಂದರೆ 10 ವರ್ಷದ ಸೇವಾವಧಿ. 10 ವರ್ಷ ಕಾರ್ಯ ನಿರ್ವಹಿಸಿದಲ್ಲಿ ಮಾತ್ರ ಈ ಪಿಂಚಣಿ ಸೌಲಭ್ಯ ಅನ್ವಯವಾಗಲಿದೆ.
1995ರಲ್ಲಿ ಆರಂಭವಾದ ಯೋಜನೆ: ಉದ್ಯೋಗಿ ಪಿಂಚಣಿ ಯೋಜನೆಯನ್ನು 19 ನವೆಂಬರ್ 1995ರಲ್ಲಿ ಪ್ರಾರಂಭಿಸಲಾಯಿತು. ಸಂಘಟನೆ ವಲಯದಲ್ಲ ಉದ್ಯೋಗಿಯ ನಿವೃತ್ತಿ ಅವಶ್ಯಕತೆ ಪೂರೈಸುವುದು ಈ ಯೋಜನೆಯ ಹಿಂದಿನ ಉದ್ದೇಶವಾಗಿದೆ. ಅರ್ಹ ಉದ್ಯೋಗಿ ತನ್ನ 58ನೇ ವರ್ಷದ ಬಳಿಕ ಈ ಯೋಜನೆಯ ಅನ್ವಯ ಗ್ಯಾರಂಟಿ ಪಿಂಚಣಿ ಪ್ರಯೋಜನ ಪಡೆಯುತ್ತಾರೆ. ನಿಯಮದ ಅನುಸಾರ, ವ್ಯಕ್ತಿಯೊಬ್ಬ 9 ವರ್ಷ 6 ತಿಂಗಳು ಕಾರ್ಯ ನಿರ್ವಹಿಸಿದ್ದರೂ ಈ ಯೋಜನೆಗೆ ಅರ್ಹರಾಗಿದ್ದಾರೆ.
ಉದ್ಯೋಗ 9 ವರ್ಷ ಆರು ತಿಂಗಳಿಗಿಂಗ ಕಡಿಮೆ ಅವಧಿಗೆ ಕಾರ್ಯ ನಿರ್ವಹಿಸಿದಲ್ಲಿ ಇದನ್ನು 9 ವರ್ಷ ಎಂದೇ ಪರಿಗಣಿಸಲಾಗುವುದು. ಇಂತಹ ಸಂದರ್ಭದಲ್ಲಿ ಇವರನ್ನು ಪಿಂಚಣಿಗೆ ಅರ್ಹರು ಎಂದು ಪರಿಗಣಿಸುವುದಿಲ್ಲ. ಆಗ ಉದ್ಯೋಗಿಯು ತಮ್ಮ ಠೇವಣಿ ಖಾತೆಯಿಂದ ನಿವೃತ್ತಿಗೆ ಮೊದಲೇ ಹಣವನ್ನು ಹಿಂಪಡೆಯಬಹುದು.
ಪಿಎಫ್ ಕಡಿತದ ಲೆಕ್ಕಾಚಾರ: ಖಾಸಗಿ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳ ವೇತನದಲ್ಲಿ ಪಿಎಫ್ ಕಡಿತ ಮಾಡಲಾಗುವುದು. ಈ ಕಡಿತವಾದ ಹಣವೂ ಪ್ರತಿ ತಿಂಗಳು ಉದ್ಯೋಗಿಯ ಪಿಎಫ್ ಖಾತೆಯಲ್ಲಿ ಜಮೆಯಾಗುತ್ತದೆ. ಖಾಸಗಿ ಉದ್ಯೋಗದಲ್ಲಿ 10 ವರ್ಷ ಕೆಲಸ ಮಾಡಿದ್ದಲ್ಲಿ, ಈ ಪಿಂಚಣಿಗೆ ಉದ್ಯೋಗಿಗಳು ಅರ್ಹರಾಗುತ್ತಾರೆ.
ನಿಯಮದ ಪ್ರಕಾರ, ಉದ್ಯೋಗಿಯ ಬೇಸಿಕ್ ವೇತನದಲ್ಲಿ ಶೇ 12ರಷ್ಟು ಜೊತೆಗೆ ಪ್ರತಿ ತಿಂಗಳು ಪಿಎಫ್ ಖಾತೆಯಲ್ಲಿ ಜಮೆ ಮಾಡಲಾಗುವುದು. ಇದರರಲ್ಲಿ ಉದ್ಯೋಗಿಯ ಸಂಪೂರ್ಣ ಷೇರು ಇಪಿಎಫ್ಗೆ ಹೋಗುತ್ತದೆ. ಉದ್ಯೋಗದಾತರ ಶೇ 8.33ರಷ್ಟು ಷೇರು ಕೂಡ ಇಪಿಎಫ್ಗೆ ಜಮಾ ಮಾಡಲಾಗುತ್ತದೆ.
ಉದ್ಯೋಗದ ನಡುವಿನ ಅಂತರ ಹೆಚ್ಚಾದರೆ: ಉದ್ಯೋಗಿಯೊಬ್ಬ ಎರಡು ವಿಭಿನ್ನ ಸಂಸ್ಥೆಗಳಲ್ಲಿ ಐದೈದು ವರ್ಷದಂತೆ ಕೆಲಸ ಮಾಡಿದರೆ, ಅಥವಾ ಎರಡು ಉದ್ಯೋಗದ ನಡುವಿನ ಅಂತರ ಹೆಚ್ಚಾದರೆ, ಅಂತ ಅಭ್ಯರ್ಥಿ ಈ ಪಿಂಚಣಿಗೆ ಅರ್ಹ ಅಥವಾ ಇಲ್ಲ ಎಂಬ ಬಗ್ಗೆ ಕೂಡ ನಿಯಮ ತಿಳಿಸುತ್ತದೆ. ಉದ್ಯೋಗದ ನಡುವಿನ ಅಂತರ ಅಥವಾ ಎರಡು ವಿಭಿನ್ನ ಸಂಸ್ಥೆಗಳಲ್ಲಿ ಸೇರಿ 10 ವರ್ಷ ಉದ್ಯೋಗ ನಿರ್ವಹಿಸಿದ್ದಲ್ಲಿ ಆ ಉದ್ಯೋಗಿಯು ಈ ಪಿಂಚಣಿ ಸವಲತ್ತು ಪಡೆಯಬಹುದಾಗಿದೆ.
ಆದರೆ, ಅಭ್ಯರ್ಥಿ ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ಕೆಲಸ ಬದಲಾಯಿಸಿದಾಗ ಯುಎಎನ್ ಸಂಖ್ಯೆಯನ್ನು ಬದಲಾಯಿಸಬಾರದು. ಒಂದೇ ಯುಎಎನ್ ಸಂಸ್ಥೆಯನ್ನು 10 ವರ್ಷಗಳ ಕಾಲ ಮುಂದುವರೆಸಿದ್ದಲ್ಲಿ ಆತ ಈ ಪ್ರಯೋಜನದ ಫಲಾನುಭವಿಯಾಗಬಹುದು.
ಇದನ್ನೂ ಓದಿ: ಜಿಎಸ್ಟಿ ಕಾಯ್ದೆ ತಿದ್ದುಪಡಿಯ ಸಾಂವಿಧಾನಿಕತೆ ಪ್ರಶ್ನಿಸಿದ ಅರ್ಜಿ ಸುಪ್ರೀಂ ಕೋರ್ಟ್ನಲ್ಲಿ ವಜಾ