ETV Bharat / business

ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬಹುದು​? IT ದಾಳಿ ಯಾವಾಗ ನಡೆಯುತ್ತದೆ? ಈ ಸಂಗತಿಗಳು ಗೊತ್ತಿದೆಯೇ? - Personal Finance

author img

By ETV Bharat Karnataka Team

Published : Mar 22, 2024, 11:15 AM IST

ನಮ್ಮ ದೇಶದಲ್ಲಿ ಮಧ್ಯಮ ವರ್ಗದ ಜನರು ಮತ್ತು ಗೃಹಿಣಿಯರು ತಮ್ಮ ಗಳಿಕೆಯನ್ನು ಮನೆಯಲ್ಲಿ ನಗದು ರೂಪದಲ್ಲಿ ಇಡುತ್ತಾರೆ. ಹಾಗಿದ್ದರೆ, ಮನೆಯಲ್ಲಿ ಎಷ್ಟು ಹಣ ಇಡಬಹುದು? ಅದಕ್ಕೆ ಮಿತಿ ಇದೆಯೇ? ಹೆಚ್ಚಾದರೆ ಏನು ಮಾಡಬೇಕು ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

How much cash can be kept at home  Income Tax Return  IT
ಮನೆಯಲ್ಲಿ ಕಾನೂನುಬದ್ಧವಾಗಿ ಎಷ್ಟು ಹಣ ಇಟ್ಟುಕೊಂಡರೆ ಸೇಫ್​? ಐಟಿ ದಾಳಿ ನಡೆದರೆ ಏನಾಗಬಹುದೆಂದು ಯೋಚಿಸಿದ್ದೀರಾ?

ನೀವು ಗಳಿಸಿದ ಹಣವನ್ನು ನಿಮ್ಮ ಮನೆಯಲ್ಲಿ ನಗದು ರೂಪದಲ್ಲಿಡಬಹುದು. ಇದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಆದರೆ ಆದಾಯ ತೆರಿಗೆ (IT) ನಿಯಮಗಳ ಪ್ರಕಾರ, ಅಧಿಕಾರಿಗಳು ತನಿಖೆ ನಡೆಸಿದಾಗ ಹಣ ಎಲ್ಲಿಂದ ಬಂತು ಎಂಬುದನ್ನು ನಿಖರವಾಗಿ ತಿಳಿಸಬೇಕಾಗುತ್ತದೆ. ತನಿಖಾಧಿಕಾರಿಗಳಿಗೆ ಮನೆಯಲ್ಲಿ ಇಟ್ಟಿರುವ ಹಣಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು. ಎಲ್ಲಾ ದಾಖಲೆಗಳು ಸರಿಯಾಗಿ ಇಟ್ಟುಕೊಂಡಿದ್ದರೆ, ಚಿಂತಿಸಬೇಕಾದ ಅವಶ್ಯಕತೆಯೇ ಇಲ್ಲ.

ಲೆಕ್ಕಕ್ಕೆ ಸಿಗದ ನಗದನ್ನು ನೀವು ಏನು ಮಾಡುತ್ತೀರಿ?: ಆದಾಯ ತೆರಿಗೆ ಅಧಿಕಾರಿಗಳು ಆಗಾಗ್ಗೆ ದಾಳಿ ನಡೆಸುತ್ತಾರೆ. ಈ ದಾಳಿಯಲ್ಲಿ ವಶಪಡಿಸಿಕೊಂಡ ಹಣಕ್ಕೆ ಸರಿಯಾಗಿ ಲೆಕ್ಕ ಹಾಕದೇ ಇದ್ದರೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚು. ಸರಿಯಾದ ವಿವರಗಳನ್ನು ನೀಡಲು ವಿಫಲವಾದಲ್ಲಿ, ವಿಶೇಷವಾಗಿ ಆದಾಯಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲೆ ಭಾರಿ ದಂಡ ಹಾಕಬಹುದು. ಕೆಲವೊಮ್ಮೆ ನಿಮ್ಮ ಬಂಧನವೂ ಆಗುವ ಸಾಧ್ಯತೆ ಇದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಬಹಿರಂಗಪಡಿಸದ ಆದಾಯದ ಮೇಲೆ ಶೇಕಡಾ 78ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದರ ಜೊತೆಗೆ ದಂಡವನ್ನೂ ಹಾಕಲಾಗುತ್ತದೆ. ಅದಕ್ಕಾಗಿಯೇ ನೀವು ನಿಮ್ಮ ಆದಾಯದ ವಿವರಗಳನ್ನು ನಮೂದಿಸಿ ITR (Income Tax Return) ಸಲ್ಲಿಸಬೇಕು. ಅಲ್ಲದೇ ಸರಿಯಾದ ಲೆಕ್ಕ ಪುಸ್ತಕಗಳನ್ನು ನಿರ್ವಹಿಸಬೇಕು.

ಈ ಅಂಶಗಳತ್ತ ನಿಮ್ಮ ಗಮನವಿರಲಿ: ಉದಾಹರಣೆಗೆ, ನೀವು ವ್ಯಾಪಾರ ನಡೆಸುತ್ತಿದ್ದರೆ, ನಿಮ್ಮ ಆದಾಯದ ವಿವರಗಳನ್ನು ನಗದು ಪುಸ್ತಕದಲ್ಲಿ ನಮೂದಿಸಿ. ನೀವು ಬೇರೆ ರೀತಿಯಲ್ಲಿ ಹಣ ಗಳಿಸುತ್ತಿದ್ದರೆ, ಆದಾಯ ತೆರಿಗೆ ಅಧಿಕಾರಿಗಳಿಗೆ ಹಣದ ಮೂಲ ವಿವರಿಸಬೇಕು. ಉಡುಗೊರೆಗಳ ರೂಪದಲ್ಲಿ ಪಡೆದ ಆದಾಯವನ್ನು ಐಟಿಆರ್‌ನಲ್ಲಿ ಸಲ್ಲಿಸಬೇಕು. ಇಲ್ಲಿ ನೀವು ಗಮನಿಸಬೇಕಾದ ಅಂಶವೆಂದರೆ 2 ಲಕ್ಷ ರೂ.ಗಿಂತ ಹೆಚ್ಚಿನ ನಗದು ಉಡುಗೊರೆಗಳು ಅಥವಾ ಆಸ್ತಿ ವಹಿವಾಟುಗಳಿಗೆ ಖಂಡಿತವಾಗಿಯೂ ಸರ್ಕಾರಕ್ಕೆ ತೆರಿಗೆ ಕಟ್ಟಲೇಬೇಕಾಗುತ್ತದೆ. ಇಲ್ಲದಿದ್ದರೆ, ಆದಾಯ ತೆರಿಗೆ ಇಲಾಖೆ ನಿಮ್ಮ ಮೇಲೆ ಭಾರೀ ದಂಡ ವಿಧಿಸುತ್ತದೆ.

ಇದನ್ನೂ ಓದಿ: ತೆರಿಗೆ ಉಳಿತಾಯಕ್ಕೆ 10 ಬೆಸ್ಟ್​ ಹೂಡಿಕೆ ವಿಧಾನಗಳು ಇಲ್ಲಿವೆ ನೋಡಿ - Tax saving

ETV Bharat Logo

Copyright © 2024 Ushodaya Enterprises Pvt. Ltd., All Rights Reserved.