ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ಹಣಕಾಸು ನೀತಿ ಸಮಿತಿ ಎಂಪಿಸಿ ಕೈಗೊಂಡಿರುವ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಈ ಬಾರಿಯೂ ಆರ್‌ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಕಾಪಾಡಿಕೊಂಡಿದೆ. ಈ ಮೂಲಕ ಸತತ 10ನೇ ಬಾರಿಗೆ ರೆಪೋದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿದರದಲ್ಲಿ ಭಾರಿ ಕಡಿತ ಮಾಡಿತ್ತು. ಹೀಗಾಗಿ ರಿಸರ್ವ್ ಬ್ಯಾಂಕ್ ಕೂಡಾ ಸ್ವಲ್ಪಮಟ್ಟಿಗಾದರೂ ರೆಪೋ ದರ ಇಳಿಕೆ ಮಾಡಲಿದೆ ಎಂಬ ಆಶಯದಲ್ಲಿ ಹೂಡಿಕೆದಾರರಿದ್ದರು. ಆದರೆ ರಿಸರ್ವ್ ಬ್ಯಾಂಕ್ ಇದ್ಯಾವುದೇ ತೀರ್ಮಾನ ಕೈಗೊಳ್ಳದೇ ಯಥಾ ಸ್ಥಿತಿ ಕಾಪಾಡಿಕೊಂಡಿದೆ.
MPC ನಿರ್ಧಾರಗಳ ಮುಖ್ಯಾಂಶಗಳು ಹೀಗಿವೆ:
- ಬೆಂಚ್‌ಮಾರ್ಕ್ ಅಲ್ಪಾವಧಿಯ ಸಾಲd ದರ (ರೆಪೊ)ದಲ್ಲಿ ಯಾವುದೇ ಬದಲಾವಣೆ ಮಾಡದೇ ಶೇ 6.5ರಲ್ಲೇ ಇರಿಸಲಾಗಿದೆ.
- ಫೆಬ್ರವರಿ 2023 ರಿಂದ ರೆಪೋ ದರದಲ್ಲಿ ಯಥಾಸ್ಥಿತಿ
- ಇದು ಪುನರ್ರಚಿಸಲಾದ MPC ಯ ಮೊದಲ ಸಭೆ
- 25ನೇ ಸಾಲಿನ GDP ಬೆಳವಣಿಗೆಯ ಪ್ರಕ್ಷೇಪಣವನ್ನು 7.2ರಷ್ಟೇ ಉಳಿಸಿಕೊಳ್ಳಲಾಗಿದೆ
- ಶೇ 7 ರಷ್ಟು ಜಿಡಿಪಿ 2ನೇ ತ್ರೈಮಾಸಿಕದಲ್ಲಿ ಬೆಳವಣಿಗೆ ಮುನ್ಸೂಚನೆ ಮೂರನೇ ತ್ರೈಮಾಸಿಕದಲ್ಲಿ 7.4 pc; ಮತ್ತು 4ನೇ ತ್ರೈಮಾಸಿಕದಲ್ಲಿ 7.4ರಷ್ಟು ಬೆಳವಣಿಗೆ ಅಂದಾಜು
- 25ನೇ ಸಾಲಿನ ಹಣದುಬ್ಬರ ಪ್ರಕ್ಷೇಪಣ 4.5 pc ನಲ್ಲೇ ಉಳಿಕೆ
- UPI123PAY (ಫೀಚರ್ ಫೋನ್‌ಗಾಗಿ) ಪ್ರತಿ ವಹಿವಾಟಿನ ಮಿತಿ 10,000 ರೂ.ಗೆ ದ್ವಿಗುಣ
- UPI ಲೈಟ್ ವಾಲೆಟ್ ಮಿತಿಯನ್ನು ರೂ 5,000 ಕ್ಕೆ ಹೆಚ್ಚಿಸಲಾಗಿದೆ ಮತ್ತು ಪ್ರತಿ ವಹಿವಾಟಿನ ಮಿತಿಯನ್ನು ರೂ 1,000 ಕ್ಕೆ ಹೆಚ್ಚಳ
- MPC ಯ ಮುಂದಿನ ಸಭೆಯನ್ನು ಡಿಸೆಂಬರ್ 4 ರಿಂದ 6 ರವರೆಗೆ ನಿಗದಿ
ಇದನ್ನು ಓದಿ: ಪುಟಿದೆದ್ದ ಷೇರು ಮಾರುಕಟ್ಟೆ: ಸೆನ್ಸೆಕ್ಸ್ 584 & ನಿಫ್ಟಿ 217 ಅಂಕ ಏರಿಕೆ