ನವದೆಹಲಿ: ಸಾಮಾನ್ಯವಾಗಿ ಉದ್ಯೋಗ ಅರಸುತ್ತಿರುವ ಆಕಾಂಕ್ಷಿಗಳಿಂದ ಕೆಲವು ನಿರೀಕ್ಷಿತ ಕೌಶಲ್ಯಗಳನ್ನು ಸಂಸ್ಥೆಗಳು ಎದುರು ನೋಡುತ್ತವೆ. ಅದರಲ್ಲೂ ಇತ್ತೀಚಿನ ದಿನದಲ್ಲಿ ಬಹುತೇಕ ಉದ್ಯಮ ವಲಯಗಳು ಎದುರು ನೋಡುತ್ತಿರುವ ಪ್ರಮುಖ ಕೌಶಲ್ಯ ಎಂದರೆ ಅದು ವಾಹನ ಚಾಲನೆಯಾಗಿದೆ. ಇ- ಕಾಮರ್ಸ್, ನಿರ್ಮಾಣ, ಪ್ರವಾಸೋದ್ಯಮ ಮತ್ರು ಗ್ರಾಹಕ ಸೇವೆ ಸೇರಿದಂತೆ ಅನೇಕ ವಿವಿಧ ವಲಯಗಳು ಈ ಕೌಶಲ್ಯವನ್ನು ತಮ್ಮ ಉದ್ಯೋಗಿಗಳಿಂದ ಸಂಸ್ಥೆಗಳು ಆಪೇಕ್ಷಿಸುತ್ತಿವೆ ಎಂದು ವರದಿ ತಿಳಿಸಿದೆ.
ಇಂಡೀಡ್ ಅವರ ಗ್ಲೋಬಲ್ ಹೈರಿಂಗ್ ಪ್ರಕಾರ, ಶೇ 53ರಷ್ಟು ಉದ್ಯೋಗದಾತರು ಚಾಲನಾ ಸಾಮರ್ಥ್ಯ ಪ್ರಮುಖ್ಯತೆಯನ್ನು ಒತ್ತಿ ಹೇಳುವ ಜೊತೆಗೆ ಇದು ಅಪೇಕ್ಷಣೀಯ ಕೌಶಲ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಮಾರ್ಚ್ 2023 ರಿಂದ ಮಾರ್ಚ್ 2024ರವರೆಗೆ ಶೇ 4ರಷ್ಟು ಉದ್ಯೋಗಗಳು ಚಾಲನೆಯನ್ನು ಬರದಿರುವ ಹಿನ್ನೆಲೆ ಉದ್ಯೋಗಿಗಳನ್ನು ಕೈಬಿಟ್ಟಿದೆ. ಚಾಲನೆ ಸಾಮರ್ಥ್ಯ ಹೊಂದಿದಲ್ಲಿ ಉದ್ಯೋಗ ಪಡೆಯುವ ಭರವಸೆ ಕೂಡ ಶೇ 10ರಷ್ಟು ಹೆಚ್ಚಿದೆ. ಉದ್ಯೋಗದಾತರು ಕೂಡ ಇದನ್ನು ಎದುರು ನೋಡುತ್ತಾರೆ ಎಂದು ವರದಿ ತಿಳಿಸಿದೆ.
ಈ ದತ್ತಾಂಶವೂ ಕೆಲವು ವಿರೋಧಾಭಾಸವನ್ನು ಎತ್ತಿ ತೋರಿಸುತ್ತದೆ. ಆದರೂ ಕಡಿಮೆ ಉದ್ಯೋಗಾವಕಾಶಗಳನ್ನು ತುಂಬಲು ಉತ್ಸುಕರಾಗಿರುವ ಉದ್ಯೋಗಾಕಾಂಕ್ಷಿಗಳು, ಈ ರೀತಿಯ ಹೊಸ ಉದ್ಯೋಗದ ಪ್ರಮುಖ ಪಾತ್ರಗಳನ್ನು ಹೊಂದುವ ಮೂಲಕ ಸರಿದೂಗಿಸಬಹುದಾಗಿದೆ ಎಂದು ಇಂಡೀಡ್ ಇಂಡಿಯಾದ ಸೇಲ್ಸ್ನ ಮುಖ್ಯಸ್ಥ ಶಶಿ ಕುಮಾರ್ ತಿಳಿಸಿದ್ದಾರೆ.
ಇದು ಅಭ್ಯರ್ಥಿಗಳಲ್ಲಿ ಹೆಚ್ಚಿನ ಸ್ಪರ್ಧೆಗೆ ಕಾರಣವಾಗಬಹುದು. ಆದರೂ, ದೃಢವಾದ ಚಾಲನಾ ಕೌಶಲ್ಯವನ್ನು ಹೊಂದಿರುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ ಎಂದಿದ್ದಾರೆ. ವರದಿಯ ಪ್ರಕಾರ, ಚಾಲನ ಕೌಶಲ್ಯದ ಬೇಡಿಕೆ ಹೆಚ್ಚಿರಲು ಕಾರಣ ಸಂಸ್ಥೆಗಳು ಅನೇಕ ವಲಯಗಳಾದ ಚಿಲ್ಲರೆ, ಲಾಜಿಸ್ಟಿಕ್ ಮತ್ತು ಗ್ರಾಹಕರ ಸೇವೆಯಂತಹ ಅನೇಕ ವಲಯದಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಸಂಸ್ಥೆಗಳು ಬಹುಮುಖ ಕಾರ್ಯದ ಉದ್ಯೋಗಿಗಳನ್ನು ಬೇಡುತ್ತಿದ್ದಾರೆ. ಗ್ರಾಹಕರ ಸಂವಹನ ಮತ್ತು ವ್ಯವಸ್ಥಾಪನಾ ಸಮನ್ವಯದಂತಹ ಹೆಚ್ಚುವರಿ ಕೌಶಲ್ಯಗಳ ಜೊತೆಗೆ ಚಾಲನಾ ಸಾಮರ್ಥ್ಯ ಹೊಂದಿರುವವರಿಗೆ ಇಂದು ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ.
ಪ್ರಸ್ತುತ ಡ್ರೈವಿಂಗ್ ಉದ್ಯೋಗಿಗಳು ಮಾಸಿಕ 15, 104 ರಿಂದ 25,709ರವರೆಗೆ ವೇತನ ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ಕೈಗಾರಿಕೆಗಳಲ್ಲಿ ವೈವಿಧ್ಯಮಯ ವ್ಯಾಪ್ತಿ ಕಾರ್ಯ ಮತ್ತು ಜವಾಬ್ದಾರಿ ನಿರ್ವಹಣೆಯಲ್ಲಿ ಉದ್ಯೋಗಿಗಳ ಡ್ರೈವಿಂಗ್ ಕೌಶಲ್ಯ ಪ್ರಮುಖವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ಬರಲಿದೆ ಆ್ಯಪಲ್ ಸೆಲ್ಫ್ ಡ್ರೈವಿಂಗ್ ಕಾರು: ಬೆಲೆ 1 ಲಕ್ಷ ಡಾಲರ್ಗಿಂತ ಕಡಿಮೆ!