Gold Rate April 2nd 2024: ದೇಶದಲ್ಲಿ ಚಿನ್ನದ ಬೆಲೆ ಇಂದು ಸ್ವಲ್ಪ ಇಳಿಕೆಕಂಡಿದೆ. ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಸೋಮವಾರ 10 ಗ್ರಾಂ ಚಿನ್ನದ ಬೆಲೆ ರೂ.71,110ರಷ್ಟಿದ್ದರೆ, ಮಂಗಳವಾರ ರೂ.195 ಇಳಿಕೆಯಾಗಿ ರೂ.70,915ಕ್ಕೆ ತಲುಪಿದೆ. ಸೋಮವಾರ ಪ್ರತಿ ಕೆ.ಜಿ ಬೆಳ್ಳಿಯ ಬೆಲೆ 77,912 ರೂ.ಗಳಾಗಿದ್ದರೆ, ಮಂಗಳವಾರ 382 ರೂ.ಗಳ ಏರಿಕೆ ಕಂಡಿದ್ದು, 78,294 ರೂ.ಗೆ ತಲುಪಿದೆ.
- ಹೈದರಾಬಾದ್‌ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ ರೂ.70,915 ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 78,294 ರೂ.
- ವಿಜಯವಾಡದಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.70,915 ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 78,294 ರೂ.
- ವಿಶಾಖಪಟ್ಟಣಂನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.70,915 ಆಗಿದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 78,294 ರೂ.
- ಪ್ರದ್ದತ್ತೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ.70,915. ಪ್ರತಿ ಕೆಜಿ ಬೆಳ್ಳಿ ಬೆಲೆ 78,294 ರೂ.
- ಬೆಂಗಳೂರಿನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 69,110 ರೂ. ಇದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 77,500 ರೂ.
- ಬೆಳಗಾವಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 69,110 ರೂ. ಇದೆ. ಪ್ರತಿ ಕೆಜಿ ಬೆಳ್ಳಿ ಬೆಲೆ 77,500 ರೂ.
ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಚಿನ್ನ ಹಾಗೂ ಬೆಳ್ಳಿ ದರಗಳು ಬದಲಾಗುತ್ತವೆ.
ಸ್ಪಾಟ್ ಚಿನ್ನದ ಬೆಲೆ?: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಸ್ವಲ್ಪ ಕಡಿಮೆಯಾಗಿದೆ. ಸೋಮವಾರ, ಒಂದು ಔನ್ಸ್ ಸ್ಪಾಟ್ ಚಿನ್ನದ ಬೆಲೆ 2,263 ಡಾಲರ್‌ಗಳಷ್ಟಿತ್ತು. ಆದರೆ, ಮಂಗಳವಾರದ ವೇಳೆಗೆ ಅದು 11 ಡಾಲರ್‌ಗಳಷ್ಟು ಕಡಿಮೆಯಾಗಿ 2,252 ಡಾಲರ್‌ಗಳಿಗೆ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 25.29 ಡಾಲರ್ ಆಗಿದೆ.
ಷೇರು ಮಾರುಕಟ್ಟೆ ಅಪ್ಡೇಟ್: ದೇಶಿಯ ಷೇರು ಮಾರುಕಟ್ಟೆಗಳು ಮಂಗಳವಾರವೂ ನಷ್ಟವನ್ನು ಅನುಭವಿಸುತ್ತಲೇ ಇವೆ. ಹೂಡಿಕೆದಾರರು ಲಾಭವನ್ನು ಪಡೆಯುವುದು ಸೇರಿದಂತೆ ವಿದೇಶಿ ಹೂಡಿಕೆಯ ಹರಿವು ಇದಕ್ಕೆ ಪ್ರಮುಖ ಕಾರಣವಾಗಿದೆ.
ಪ್ರಸ್ತುತ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 182.90 ಅಂಕ ಕಳೆದುಕೊಂಡು 73,831.65ರಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಪ್ರಸ್ತುತ 32.25 ಅಂಕಗಳ ನಷ್ಟದ ನಂತರ 22,429.75ರಲ್ಲಿ ವಹಿವಾಟು ನಡೆಸುತ್ತಿದೆ.
ಲಾಭದಲ್ಲಿ ಮುಂದುವರಿದ ಷೇರುಗಳು: ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಟೈಟಾನ್, ಎನ್‌ಟಿಪಿಸಿ, ಪವರ್‌ಗ್ರಿಡ್.
ನಷ್ಟದಲ್ಲಿ ಮುಂದವರಿದ ಷೇರುಗಳು: ಐಸಿಐಸಿಐ ಬ್ಯಾಂಕ್, ಸನ್ಫಾರ್ಮಾ, ಟಿಸಿಎಸ್, ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರಾ, ಮಾರುತಿ ಸುಜುಕಿ, ಏಷ್ಯನ್ ಪೇಂಟ್ಸ್.
ರೂಪಾಯಿ ಮೌಲ್ಯ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು 4 ಪೈಸೆಗಳಷ್ಟು ಹೆಚ್ಚಾಗಿದೆ. ಪ್ರಸ್ತುತ ಡಾಲರ್ ಎದುರು ರೂಪಾಯಿ ವಿನಿಮಯ ದರ ರೂ.83.35 ಆಗಿದೆ.
ಪೆಟ್ರೋಲ್, ಡೀಸೆಲ್ ಬೆಲೆ: ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಹೈದರಾಬಾದ್‌ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.39 ರೂ. ಡೀಸೆಲ್ ಬೆಲೆ 95.63 ರೂ. ವಿಶಾಖಪಟ್ಟಣಂನಲ್ಲಿ ಲೀಟರ್ ಪೆಟ್ರೋಲ್ ಬೆಲೆ 108.27 ರೂ. ಡೀಸೆಲ್ ಬೆಲೆ 96.16 ರೂ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ.94.76 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ.87.66 ಆಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 99.84 ರೂ. ಡೀಸೆಲ್ ಬೆಲೆ 85.93 ರೂ. ಇದೆ.
ಕಚ್ಚಾ ತೈಲ ಬೆಲೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಶೇಕಡಾ 0.48 ರಷ್ಟು ಹೆಚ್ಚಾಗಿದೆ. ಪ್ರಸ್ತುತ, ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 87.84 ಡಾಲರ್ ಆಗಿದೆ.
ಇದನ್ನೂ ಓದಿ: ಅಡೆತಡೆ ಇಲ್ಲದೆ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಿ: ಬ್ಯಾಂಕುಗಳಿಗೆ ಆರ್ಬಿಐ ಸೂಚನೆ - Self Help Groups