ETV Bharat / business

ಚಿನ್ನದ ಬೆಲೆಯಲ್ಲಿ ಸತತ ಇಳಿಕೆ: ವಾರದಲ್ಲಿ 10 ಗ್ರಾಂ ಚಿನ್ನಕ್ಕೆ ₹3,400, ಕೆಜಿ ಬೆಳ್ಳಿಗೆ ₹3,200 ಕುಸಿತ - ಇಂದಿನ ಚಿನ್ನದ ದರ

ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದೆ. ಕಳೆದ ಒಂದು ವಾರದಲ್ಲಿ 10 ಗ್ರಾಂ ಚಿನ್ನಕ್ಕೆ ₹3,400, ಕೆಜಿ ಬೆಳ್ಳಿಗೆ ₹3,200 ಕುಸಿತ ಕಂಡಿದೆ.

ಚಿನ್ನದ ಬೆಲೆಯಲ್ಲಿ ಸತತ ಇಳಿಕೆ
ಚಿನ್ನದ ಬೆಲೆಯಲ್ಲಿ ಸತತ ಇಳಿಕೆ (Getty Images)
author img

By PTI

Published : Nov 14, 2024, 5:17 PM IST

ನವದೆಹಲಿ: ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಕಾಣುತ್ತಲೇ ಇದೆ. ಇಂದು(ಗುರುವಾರ) 870 ರೂಪಾಯಿ ಕುಸಿಯುವ ಮೂಲಕ ಒಂದು ವಾರದಲ್ಲಿ 3,400 ರೂಪಾಯಿ ಇಳಿಕೆ ಕಂಡಿದೆ. ಇದೇ ರೀತಿ ಬೆಳ್ಳಿಯ ದರದಲ್ಲೂ ವ್ಯತ್ಯಾಸ ಉಂಟಾಗಿದ್ದು ವಾರದಲ್ಲಿ 3,400 ಕಡಿಮೆಯಾಗಿದೆ.

ಮದುವೆ ಸೀಸನ್​ ಹಿನ್ನೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದ ಹಳದಿ ಲೋಹ ಕಳೆದ ಒಂದು ವಾರದಿಂದ ಇಳಿಕೆ ಕಾಣುತ್ತಿದೆ. ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನಕ್ಕೆ 73,850 ರೂಪಾಯಿ ಬೆಲೆ ಇದೆ. ಬೆಳ್ಳಿಯು ಪ್ರತಿ ಕೆಜಿಗೆ 87,750 ರೂಪಾಯಿ ಬಿಕರಿ ಕಾಣುತ್ತಿದೆ.

ಬಲಗೊಳ್ಳುತ್ತಿರುವ ಡಾಲರ್​, ಬಾಂಡ್​​ಗಳು ಮತ್ತು ಕ್ರಿಪ್ಟೊ ಕರೆನ್ಸಿಯಲ್ಲಿ ಹೆಚ್ಚಿನ ಹೂಡಿಕೆ ಆಗುತ್ತಿರುವ ಕಾರಣ ಚಿನ್ನದ ಬೆಲೆ ಇಳಿಯಲು ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕನ್​ ಡಾಲರ್ ಮತ್ತು ಕ್ರಿಪ್ಟೋ ಕರೆನ್ಸಿಗಳಲ್ಲಿ ಜನರು ಹೆಚ್ಚಿನ ಹೂಡಿಕೆ ಆರಂಭಿಸಿದ್ದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆ ಕುಸಿಯುತ್ತಿದೆ. ಈ ವರ್ಷ ಬಾಂಡ್ ಖರೀದಿಯಲ್ಲಿ ಶೇಕಡಾ 4.40 ಮಟ್ಟ ದಾಟಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದ ನಂತರ ಡಾಲರ್ ಸೂಚ್ಯಂಕವು 106 ಅಂಕಗಳನ್ನು ದಾಟಿದೆ. ಸುಮಾರು ಒಂದು ವರ್ಷದ ಗರಿಷ್ಠ ಮಟ್ಟ ದಾಖಲಿಸಿದೆ.

ಸ್ಪಾಟ್ ಚಿನ್ನದ ಬೆಲೆ ಹೀಗಿದೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ದರಗಳು ಕಡಿಮೆಯಾಗಿದೆ. ಬುಧವಾರ, ಒಂದು ಔನ್ಸ್ ಚಿನ್ನದ ಬೆಲೆ 2,613 ಡಾಲರ್‌ಗಳಷ್ಟಿತ್ತು. ಆದರೆ ಗುರುವಾರದ ವೇಳೆಗೆ ಅದು 38 ಡಾಲರ್‌ಗೆ ಇಳಿದು 2,651 ಡಾಲರ್‌ಗಳಿಗೆ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 30.16 ಡಾಲರ್ ಆಗಿದೆ.

ಡಾಲರ್​ ಮುಂದೆ ರೂಪಾಯಿ: ಅಮೆರಿಕನ್ ಡಾಲರ್ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ರೂಪಾಯಿ ಬೆಲೆ ಇಳಿಯುತ್ತಲೇ ಇದೆ. ಸದ್ಯ ಒಂದು ಡಾಲರ್​ ಎದುರು ರೂಪಾಯಿ ಬೆಲೆ 84.40 ರೂಪಾಯಿ ಆಗಿದೆ.

ಇದನ್ನೂ ಓದಿ: ಅಮೆರಿಕದ ಇಂಧನ, ಮೂಲಸೌಕರ್ಯ ಯೋಜನೆಗಳಲ್ಲಿ ಅದಾನಿ ಗ್ರೂಪ್​ನಿಂದ​ $10 ಬಿಲಿಯನ್ ಹೂಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.