ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರುಗತಿಯಲ್ಲಿವೆ. ಮಂಗಳವಾರ 10 ಗ್ರಾಂ ಚಿನ್ನದ ಬೆಲೆ ₹74,651 ರಷ್ಟಿದ್ದರೆ, ಬುಧವಾರದ ವೇಳೆಗೆ ₹252ರಷ್ಟು ಏರಿಕೆಯಾಗಿ ₹74,903 ತಲುಪಿತು. ಮಂಗಳವಾರ ಕೆಜಿ ಬೆಳ್ಳಿ ದರ ₹96,006 ಇತ್ತು. ಇದು ಬುಧವಾರ ₹1,038 ರೂ. ಏರಿಕೆಯಾಗಿದ್ದು, ₹97,044ರ ಗಡಿದಾಟಿದೆ.
- ಬೆಂಗಳೂರಿನಲ್ಲಿ 10ಗ್ರಾಂ ಚಿನ್ನದ ಬೆಲೆ ₹73,200 ಆಗಿದೆ. ಪ್ರತೀ ಕೆಜಿ ಬೆಳ್ಳಿ ಬೆಲೆ ₹95,250 ಇದೆ.
- ಬೆಳಗಾವಿಯಲ್ಲಿ ಚಿನ್ನದ ಬೆಲೆ ₹73,200 ಆಗಿದೆ. ಬೆಳ್ಳಿ ಬೆಲೆ ₹95,250 ಇದೆ.
- ಮೈಸೂರಿನಲ್ಲಿ ಚಿನ್ನದ ಬೆಲೆ ₹73,200 ಆಗಿದೆ. ಬೆಳ್ಳಿ ಬೆಲೆ ₹95,250 ಇದೆ.
- ಮಂಗಳೂರಿನಲ್ಲಿ ಚಿನ್ನದ ಬೆಲೆ ₹73,200 ಆಗಿದೆ. ಬೆಳ್ಳಿ ಬೆಲೆ ₹95,250 ಇದೆ.
- ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ ₹74,903 ಆಗಿದೆ. ಬೆಳ್ಳಿ ಬೆಲೆ 97,044 ರೂ. ಇದೆ.
- ವಿಜಯವಾಡದಲ್ಲಿ ಚಿನ್ನದ ಬೆಲೆ ₹74,903 ಆಗಿದೆ. ಬೆಳ್ಳಿ ಬೆಲೆ 97,044 ರೂ. ಇದೆ.
- ವಿಶಾಖಪಟ್ಟಣಂನಲ್ಲಿ ಚಿನ್ನದ ಬೆಲೆ ₹74,903 ಆಗಿದೆ. ಬೆಳ್ಳಿ ಬೆಲೆ 97,044 ರೂ. ಇದೆ.
ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ದರಗಳು ಬದಲಾಗುತ್ತವೆ.
ಸ್ಪಾಟ್ ಚಿನ್ನದ ಬೆಲೆ ಹೇಗಿದೆ?: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಕ್ರಮೇಣ ಹೆಚ್ಚಾಗುತ್ತಿವೆ. ಮಂಗಳವಾರ ಒಂದು ಔನ್ಸ್ ಚಿನ್ನದ ಬೆಲೆ 2,351 ಡಾಲರ್ ಇತ್ತು. ಆದರೆ, ಬುಧವಾರದ ವೇಳೆಗೆ 6 ಡಾಲರ್ ಏರಿಕೆಯಾಗಿ 2,357 ಡಾಲರ್ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 32.08 ಡಾಲರ್ ಆಗಿದೆ.
ಕ್ರಿಪ್ಟೋಕರೆನ್ಸಿ ಬೆಲೆಗಳ ವಿವರ: ಕ್ರಿಪ್ಟೋಕರೆನ್ಸಿ ವ್ಯಾಪಾರ ಬುಧವಾರ ಯಥಾಸ್ಥಿತಿ ಮುಂದುವರಿದಿದೆ.
ವಿವಿಧ ಕ್ರಿಪ್ಟೋಗಳ ಪ್ರಸ್ತುತ ಮೌಲ್ಯ:
- ಬಿಟ್ ಕಾಯಿನ್- ₹51,98,637
- ಎಥೆರಿಯಂ ₹2,77,416
- ಟೆಥರ್ ₹79.55
- ಬೈನಾನ್ಸ್ ನಾಣ್ಯ ₹49,601
- ಸೊಲೊನಾ ₹12,716
ಷೇರುಪೇಟೆ ಅಪ್ಡೇಟ್: ದೇಶೀಯ ಷೇರು ಮಾರುಕಟ್ಟೆಗಳು ಬುಧವಾರ ನಷ್ಟದೊಂದಿಗೆ ಆರಂಭಗೊಂಡವು. ಏಷ್ಯಾದ ಮಾರುಕಟ್ಟೆಗಳಿಂದ ನಕಾರಾತ್ಮಕ ಸಂಕೇತಗಳು ಬರುತ್ತಿದ್ದು, ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನ ಹೂಡಿಕೆದಾರರು ಜಾಗರೂಕತೆಯಿಂದ ಹೆಜ್ಜೆ ಇಡಬೇಕಿದೆ.
ಪ್ರಸ್ತುತ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 418 ಅಂಕ ಕಳೆದುಕೊಂಡು 74,752ರಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಪ್ರಸ್ತುತ 122 ಅಂಕಗಳ ನಷ್ಟದ ನಂತರ 22,766ನಲ್ಲಿ ವಹಿವಾಟು ನಡೆಸುತ್ತಿದೆ.
ಲಾಭದಲ್ಲಿರುವ ಷೇರುಗಳು: ಭಾರ್ತಿ ಏರ್‌ಟೆಲ್, ಪವರ್‌ಗ್ರಿಡ್, ಟಾಟಾ ಸ್ಟೀಲ್, ಎಸ್‌ಬಿಐ, ಐಟಿಸಿ, ಸನ್‌ಫಾರ್ಮಾ, ಕೊಟಕ್ ಬ್ಯಾಂಕ್, ಮಾರುತಿ ಸುಜುಕಿ.
ಲಾಸ್ನಲ್ಲಿರುವ ಷೇರುಗಳು: M&M, IndusInd Bank, ಟೆಕ್ ಮಹಿಂದ್ರಾ, HDFC ಬ್ಯಾಂಕ್, ICICI ಬ್ಯಾಂಕ್ ಮತ್ತು ಇನ್ಫೋಸಿಸ್.
ಡಾಲರ್ ಎದುರು ರೂಪಾಯಿ ಮೌಲ್ಯ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ 9 ಪೈಸೆಯಷ್ಟು ಕಡಿಮೆಯಾಗಿದೆ. ಪ್ರಸ್ತುತ ಡಾಲರ್ ಎದುರು ರೂಪಾಯಿ ವಿನಿಮಯ ದರ ರೂ.83.27 ಆಗಿದೆ.
ಪೆಟ್ರೋಲ್, ಡೀಸೆಲ್ ಬೆಲೆ: ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹99.84 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ₹85.93 ಇದೆ. ಬೆಳಗಾವಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹99.66 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ₹85.81 ಆಗಿದೆ. ದಕ್ಷಿಣ ಕನ್ನಡದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹99.03 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ₹85.17 ಆಗಿದೆ. ದಾವಣಗೆರೆಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹101.73 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ₹87.55 ಆಗಿದೆ.
ಹೈದರಾಬಾದ್‌ನಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹107.39, ಡೀಸೆಲ್ ಬೆಲೆ ₹95.63 ಇದೆ. ವಿಶಾಖಪಟ್ಟಣಂನಲ್ಲಿ ಲೀಟರ್ ಪೆಟ್ರೋಲ್ ಬೆಲೆ ₹108.27, ಡೀಸೆಲ್ ಬೆಲೆ ₹96.16 ಇದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹94.76 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ₹87.66 ಆಗಿದೆ.
ಕಚ್ಚಾ ತೈಲ ಬೆಲೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 0.21ರಷ್ಟು ಹೆಚ್ಚಾಗಿದೆ. ಪ್ರಸ್ತುತ, ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 84.40 ಡಾಲರ್ ಇದೆ.
ಇದನ್ನೂ ಓದಿ: ಆರ್ಬಿಐ ಕೇಂದ್ರಕ್ಕೆ ನೀಡಿರುವ 2 ಲಕ್ಷ ಕೋಟಿ ಹಣ: ವಿತ್ತೀಯ ಕೊರತೆ ನೀಗಿಸಲು ಸಖತ್ ನೆರವು - Surplus RBI Dividend