ETV Bharat / business

ಮುಖೇಶ್​ ಅಂಬಾನಿ ಹಿಂದಿಕ್ಕಿ ಏಷ್ಯಾದ ನಂಬರ್​​ 1 ಶ್ರೀಮಂತ ಪಟ್ಟಕ್ಕೆ ಮರಳಿದ ಗೌತಮ್ ಅದಾನಿ - Gautam Adani - GAUTAM ADANI

ಭಾರತದ ಉದ್ಯಮಿ ಗೌತಮ್​ ಅದಾನಿ ಏಷ್ಯಾದ ನಂಬರ್​ 1 ಶ್ರೀಮಂತ ಪಟ್ಟಕ್ಕೆ ಮರಳಿದ್ದಾರೆ.

ಮುಖೇಶ್​ ಅಂಬಾನಿ ಹಿಂದಿಕ್ಕಿ ಏಷ್ಯಾದ ನಂಬರ್​​ 1 ಶ್ರೀಮಂತ ಪಟ್ಟಕ್ಕೆ ಮರಳಿದ ಗೌತಮ್ ಅದಾನಿ
ಮುಖೇಶ್​ ಅಂಬಾನಿ ಹಿಂದಿಕ್ಕಿ ಏಷ್ಯಾದ ನಂಬರ್​​ 1 ಶ್ರೀಮಂತ ಪಟ್ಟಕ್ಕೆ ಮರಳಿದ ಗೌತಮ್ ಅದಾನಿ (ETV Bharat)
author img

By PTI

Published : Jun 2, 2024, 7:46 PM IST

ನವದೆಹಲಿ: ಹಿಂಡನ್​​ಬರ್ಗ್​ ವರದಿಯಿಂದ ಭಾರೀ ಆಸ್ತಿ ನಷ್ಟ ಕಂಡಿದ್ದ ಉದ್ಯಮಿ ಗೌತಮ್​ ಅದಾನಿ ಸಿರಿವಂತರ ಪಟ್ಟಿಯಲ್ಲಿ ಮತ್ತೆ ಮೇಲಕ್ಕೆ ಏರುತ್ತಿದ್ದಾರೆ. ಹೊಸ ಅಂಕಿಅಂಶಗಳ ಪ್ರಕಾರ, ಅವರ ಕಂಪನಿಯ ಷೇರುಗಳಲ್ಲಿ ಭಾರೀ ಏರಿಕೆಯಾಗಿದ್ದು, ಏಷ್ಯಾದ ನಂಬರ್​ 1 ಸಿರಿವಂತ ಪಟ್ಟವನ್ನು ಮರಳಿ ಪಡೆದಿದ್ದಾರೆ. ಈ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ್ದಾರೆ.

ಅದಾನಿ ಗ್ರೂಪ್​ನ ಸೇಬು ಉದ್ಯಮದಿಂದ ಹಿಡಿದು ವಿಮಾನ ನಿಲ್ದಾಣದವರೆಗಿನ ಕಂಪನಿಗಳ ಷೇರುಗಳು ಪ್ರಗತಿ ಕಂಡಿವೆ. ಇದರಿಂದ ಅವರು ಸಿರಿವಂತರ ಪಟ್ಟಿಯಲ್ಲಿ ಮತ್ತೆ ಅಧಿಪತ್ಯ ಸಾಧಿಸುತ್ತಿದ್ದಾರೆ ಎಂದು ಬ್ಲೂಮ್​​ಬರ್ಗ್​ ಬಿಲಿಯನೇರ್​ ಇಂಡೆಕ್ಸ್​ ತಿಳಿಸಿದೆ.

ಅಮೆರಿಕದ ಉದ್ಯಮಿ ಜೆಫರೀಸ್ ಅವರು ಮುಂದಿನ 10 ವರ್ಷಗಳಲ್ಲಿ 90 ಬಿಲಿಯನ್​ ಅಮೆರಿಕನ್​ ಡಾಲರ್​ ಬಂಡವಾಳ ಹೂಡಿಕೆಯನ್ನು ವಿಸ್ತರಿಸಿದ ಬಳಿಕ ಅದಾನಿ ಗ್ರೂಪ್​ನ ಎಲ್ಲ ಕಂಪನಿಗಳ ಷೇರುಗಳು ಶುಕ್ರವಾರ ಶೇಕಡಾ 14ರಷ್ಟು ಏರಿಕೆ ಕಂಡಿವೆ. ಇದರಿಂದ 111 ಬಿಲಿಯನ್​ ಡಾಲರ್​ ನಿವ್ವಳ ಆಸ್ತಿಯೊಂದಿಗೆ ಗೌತಮ್​ ಅದಾನಿ ವಿಶ್ವದ 11ನೇ ಸಿರಿವಂತರಾಗಿ ಹೊರಹೊಮ್ಮಿದರೆ, 109 ಬಿಲಿಯನ್​ ಡಾಲರ್​ ಸಂಪತ್ತಿನೊಂದಿಗೆ ಮುಖೇಶ್​ ಅಂಬಾನಿ ವಿಶ್ವದ ನಂಬರ್​ 12ರಲ್ಲಿ ಮುಂದುವರಿದರು.

ಸದ್ಯ ರಿಲಯನ್ಸ್​ ಇಂಡಸ್ಟ್ರೀಸ್​ ಕಂಪನಿಯ ಮಾಲೀಕ ಮುಖೇಶ್​ ಅಂಬಾನಿ ಅವರು ಪುತ್ರ ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಅವರ ಎರಡನೇ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಯುರೋಪ್​ನಲ್ಲಿ ಈ ಅದ್ಧೂರಿ ಕಾರ್ಯಕ್ರಮ ನಡೆಯುತ್ತಿದ್ದು, ಇದಕ್ಕಾಗಿ ವಿಶೇಷ ಹಡಗನ್ನು ತಯಾರಿಸಲಾಗಿದೆ.

ಜಾಗತಿಕ ಆರ್ಥಿಕತೆ ಹಿಂಜರಿತ ಉಂಟಾಗಿದ್ದರೂ, ಗೌತಮ್​ ಅದಾನಿ ಅವರು 2022ರಲ್ಲಿ ಸಂಪತ್ತು ಏರಿಕೆ ಕಂಡು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು. ಆದರೆ, 2023ರಲ್ಲಿ ಹಿಂಡನ್​ಬರ್ಗ್​ ವರದಿ ನಂತರ ಅದಾನಿ ಗ್ರೂಪ್​ನ ಉದ್ಯಮಗಳಾದ ವಿಮಾನ ನಿಲ್ದಾಣಗಳು, ಖಾಸಗಿ ವಲಯದ ಬಂದರು, ಮಾಧ್ಯಮ ದೈತ್ಯ ನವದೆಹಲಿ ಟೆಲಿವಿಷನ್, ನವೀಕರಿಸಬಹುದಾದ ಇಂಧನ ಸಂಸ್ಥೆ, ಡೇಟಾ ಸೆಂಟರ್‌ಗಳು ಸೇರಿದಂತೆ ಹಲವು ಕಂಪನಿಗಳು 21 ಬಿಲಿಯನ್​ ಡಾಲರ್​ ಆಸ್ತಿಯನ್ನು ಕಳೆದುಕೊಂಡವು. ಇದರಿಂದ ಅವರು ಸಿರಿವಂತರ ಪಟ್ಟಿಯಿಂದ ಹೊರಬಿದ್ದಿದ್ದರು.

ಇದನ್ನೂ ಓದಿ: ಅಂಬುಜಾ ಸಿಮೆಂಟ್ಸ್​ನಲ್ಲಿ ಮತ್ತೆ 8,339 ಕೋಟಿ ರೂ. ಹೂಡಿಕೆ ಮಾಡಿದ ಅದಾನಿ ಗ್ರೂಪ್: ಪಾಲುದಾರಿಕೆ ಶೇ 70ಕ್ಕೆ ಏರಿಕೆ - Ambuja Cements

ETV Bharat Logo

Copyright © 2025 Ushodaya Enterprises Pvt. Ltd., All Rights Reserved.