ETV Bharat / business

ತಾಜಾ ಹಣ್ಣು ರಫ್ತಿನಲ್ಲಿ ಶೇ 29ರಷ್ಟು ಏರಿಕೆ, 111 ದೇಶಗಳಿಗೆ ಪೂರೈಕೆ - ವಿದೇಶಕ್ಕೆ ರಫ್ತಾಗುವ ಹಣ್ಣು

ಭಾರತದಿಂದ ನಡೆಯುತ್ತಿರುವ ತಾಜಾ ಹಣ್ಣಿನ ರಫ್ತು ವಹಿವಾಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

http://10.10.50.85:6060/reg-lowres/17-February-2024/fruits-and-veg_1702newsroom_1708162539_964.jpg

author img

By ETV Bharat Karnataka Team

Published : Feb 17, 2024, 4:06 PM IST

Updated : Feb 17, 2024, 4:59 PM IST

ನವದೆಹಲಿ: ಕಳೆದ 9 ತಿಂಗಳ ಅವಧಿಯಲ್ಲಿ ಅಂದರೆ 2023ರ ಏಪ್ರಿಲ್​ನಿಂದ ಡಿಸೆಂಬರ್​ ಅವಧಿಯಲ್ಲಿ ಭಾರತದಿಂದ ವಿದೇಶಕ್ಕೆ ರಫ್ತಾಗುವ ತಾಜಾ ಹಣ್ಣಿನ ಸಾಗಣೆಯಲ್ಲಿ ಶೇ 29ರಷ್ಟು ಏರಿಕೆ ಕಂಡಿದೆ ಎಂದು ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಪಿಇಡಿಎ) ಇತ್ತೀಚಿನ ದತ್ತಾಂಶ ತಿಳಿಸಿದೆ.

ಇದರ ಜೊತೆಗೆ ಭಾರತದಿಂದ ಹಣ್ಣುಗಳು ರಫ್ತಾಗುತ್ತಿರುವ ವಿದೇಶಗಳ ಸಂಖ್ಯೆ ಕೂಡ ವಿಸ್ತಾರಗೊಂಡಿದೆ. ಹಿಂದಿನ ವರ್ಷದಲ್ಲಿ 102 ದೇಶದಲ್ಲಿ ಈ ರಫ್ತು ವಹಿವಾಟು ನಡೆಯುತ್ತಿದ್ದು, ಆದರೆ, ಇದೀಗ 111 ದೇಶಗಳಿಗೆ ಭಾರತದಿಂದ ತಾಜಾ ಹಣ್ಣುಗಳನ್ನು ರಫ್ತು ಮಾಡಲಾಗುತ್ತಿದೆ.

ಈ ಹಿಂದಿನ ವರ್ಷದ ದತ್ತಾಂಶಕ್ಕೆ ಹೋಲಿಕೆ ಮಾಡಿದಾಗ 2023ರ ಏಪ್ರಿಲ್​ನಿಂದ ನವೆಂಬರ್​ನಲ್ಲಿ ಅನೇಕ ಪ್ರಮುಖ ಸರಕುಗಳ ರಫ್ತು ವಹಿವಾಟಿನಲ್ಲಿ ಸುಸ್ಥಿರ ಬೆಳವಣಿಗೆ ಕಂಡುಬಂದಿದೆ. ಬಾಳೆಹಣ್ಣು ಶೇ 63ರಷ್ಟು, ಕೇಸರ್​​ ಮತ್ತು ದಶೇರಿ ಮಾವಿನಹಣ್ಣಿನಲ್ಲಿ ಕ್ರಮವಾಗಿ 120 ಮತ್ತು 140ರಷ್ಟು, ಮೊಟ್ಟೆಯಲ್ಲಿ 160ರಷ್ಟು ರಫ್ತು ಹೆಚ್ಚಾಗಿದೆ.

2023ರ ಏಪ್ರಿಲ್​ನಿಂದ ಡಿಸೆಂಬರ್​ನಲ್ಲಿ ಬಾಸ್ಮತಿ ಅಕ್ಕಿಯ ರಫ್ತು ಮೌಲ್ಯವು ಶೇ 19ರಷ್ಟು ಹೆಚ್ಚಾಗಿದ್ದು, 3.97 ಬಿಲಿಯನ್​ ಅಮೆರಿಕನ್​ ಡಾಲರ್​​ ತಲುಪಿತ್ತು. ಇದರ ಜೊತೆಗೆ, ರಫ್ತು ಗಾತ್ರ ಕೂಡ ಶೇ 11ರಷ್ಟು ಬೆಳವಣಿಗೆ ಕಂಡಿದ್ದು, 31.98 ಲಕ್ಷ ಮೆಟ್ರಿಕ್​ ಟನ್​ನಿಂದ 35.43 ಲಕ್ಷ ಮೆಟ್ರಿಕ್​ ಟನ್​ ಆಗಿದೆ.

ಮಾರುಕಟ್ಟೆಯಲ್ಲಿ ಬಾಸ್ಮತಿ ಅಕ್ಕಿಯ ವಹಿವಾಟು ಪ್ರಮುಖ ಸ್ಥಾನದಲ್ಲಿದೆ. ಇರಾನ್​, ಇರಾಕ್​, ಸೌದಿ ಅರೇಬಿಯ, ಅಮೆರಿಕ ಮತ್ತು ಯುಎಇ ಈ ಅಕ್ಕಿ ಆಮದು ಮಾಡಿಕೊಳ್ಳುತ್ತಿರುವ ಪ್ರಮುಖ ದೇಶಗಳಾಗಿವೆ. ಬಾಸ್ಮತಿ ಅಕ್ಕಿಯ ಜನಪ್ರಿಯತೆ ಮತ್ತು ಜಾಗತಿಕ ಬೇಡಿಕೆಯು ಇದರ ರಫ್ತು ಹೆಚ್ಚಳಕ್ಕೆ ಕಾರಣವಾಗುವ ಪ್ರಮುಖ ಅಂಶವಾಗಿದ್ದು, ಭಾರತದಿಂದ ರಫ್ತಾಗುತ್ತಿರುವ ಕೃಷಿ ಉತ್ಪನ್ನದಲ್ಲಿ ಇದು ಪ್ರಮುಖವಾಗಿದೆ.

ವಿವಿಧ ಸಂಸ್ಕರಿತ ವಸ್ತುಗಳ ಬೆನ್ನಲ್ಲೇ ಭಾರತದಿಂದ ರಫ್ತಾಗುತ್ತಿರುವ ತರಕಾರಿ ಪ್ರಮಾಣ ಕೂಡ ಶೇ 24ರಷ್ಟು ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ತಾಜಾ ತರಕಾರಿಗಳಲ್ಲೂ ಸುಸ್ಥಿರ ಬೆಳವಣಿಗೆಯನ್ನು ಕಾಣಬಹುದಾಗಿದೆ.

2023 ಏಪ್ರಿಲ್​ನಿಂದ ಡಿಸೆಂಬರ್​ವರೆಗೆ ಎಪಿಇಡಿಎ ರಫ್ತು ವಹಿವಾಟಿನಲ್ಲಿ 23 ಪ್ರಮುಖ ಸರಕುಗಳು ಶೇ 18ರಷ್ಟು ಸಕಾರಾತ್ಮಕ ಬೆಳವಣಿಗೆ ಕಂಡಿದೆ. 2022-23ರಲ್ಲಿ ಭಾರತದ ಕೃತಿ ರಫ್ತು 53.1 ಬಿಲಿಯನ್​ ಅಮೆರಿಕನ್​ ಡಾಲರ್​​​ ತಲುಪಿತು. ಇದರ ಜೊತೆಗೆ ಎಪಿಇಡಿಎ ಸರಕು ಸಾಗಣೆ ಕೂಡ ಭಾರತದ ಕೃತಿ ರಫ್ತಿನಲ್ಲಿ ಶೇ 51ರಷ್ಟು ಕೊಡುಗೆ ನೀಡಿದೆ. (ಐಎಎನ್​ಎಸ್​)

ಇದನ್ನೂ ಓದಿ: 2028ಕ್ಕೆ $100 ಬಿಲಿಯನ್ ತಲುಪಲಿದೆ ಭಾರತದ ಆಹಾರ ಸೇವಾ ಮಾರುಕಟ್ಟೆ

Last Updated : Feb 17, 2024, 4:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.