ETV Bharat / business

ನೀವು ನಿವೃತ್ತಿ ಬಗ್ಗೆ ಯೋಚಿಸುತ್ತಿದ್ದೀರಾ?: ಈ ಸಲಹೆಗಳನ್ನು ಪಾಲಿಸಿದರೆ ಹೆಚ್ಚುವರಿ ಪಿಂಚಣಿ ಗ್ಯಾರಂಟಿ - EPFO PENSION RULES - EPFO PENSION RULES

ನೀವು ರಿಟೈರ್ಡ್​​ಮೆಂಟ್​​ ಬಗ್ಗೆ ಯೋಚನೆ ಮಾಡಿದ್ದೀರಾ? ಸಾಕಪ್ಪ ಕೆಲಸ ಎಂದು ಯೋಜಿಸುತ್ತಿದ್ದೀರಾ? ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚು ಪಿಂಚಣಿ ಪಡೆಯುವ ಭರವಸೆ ಏನಾದರೂ ಇದೆಯೇ?. ಹಾಗಾದರೆ, ಇಪಿಎಫ್‌ಒ ಪಿಂಚಣಿ ನಿಯಮಗಳ ಪ್ರಕಾರ, ಹೆಚ್ಚಿನ ಪಿಂಚಣಿ ಪಡೆಯುವ ಅವಕಾಶಗಳು ನಿಮಗೆ ಇವೆ.

epfo-pension-rules-key-things-you-need-to-know-for-financial-security
ನೀವು ನಿವೃತ್ತಿ ಬಗ್ಗೆ ಯೋಚಿಸುತ್ತಿದ್ದೀರಾ?: ಈ ಸಲಹೆಗಳನ್ನು ಪಾಲಿಸಿದರೆ ಹೆಚ್ಚುವರಿ ಪಿಂಚಣಿ ಗ್ಯಾರಂಟಿ
author img

By ETV Bharat Karnataka Team

Published : Apr 22, 2024, 7:17 AM IST

ಹೈದರಾಬಾದ್​: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ - EPFO ಉದ್ಯೋಗಿಗಳ ಭವಿಷ್ಯದ ಆರ್ಥಿಕ ಭದ್ರತೆಗಾಗಿ 'ನೌಕರರ ಪಿಂಚಣಿ ಯೋಜನೆ'- EPS ಅನ್ನು ಒದಗಿಸುತ್ತದೆ. ಈ ಯೋಜನೆಯ ಮೂಲಕ ನಿವೃತ್ತಿಯ ನಂತರ ಪಿಂಚಣಿ ಪಡೆಯಬಹುದು. ನೀವು ಬಯಸಿದರೆ ನೀವು ಆರಂಭಿಕ ಪಿಂಚಣಿ ವ್ಯವಸ್ಥೆಯನ್ನೂ ಮಾಡಬಹುದು. ಇಲ್ಲದಿದ್ದರೆ ಸ್ವಲ್ಪ ತಡವಾಗಿ ಕ್ಲೈಮ್ ಮಾಡಿ ಹೆಚ್ಚಿನ ಮೊತ್ತದ ಪಿಂಚಣಿ ಪಡೆಯಬಹುದು.

10 ವರ್ಷಗಳ ಸೇವೆ ಕಡ್ಡಾಯ: ಕನಿಷ್ಠ 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಖಾತೆದಾರರು ಪಿಂಚಣಿಗೆ ಅರ್ಹರಾಗಿರುತ್ತಾರೆ. 10 ವರ್ಷಗಳವರೆಗೆ ಹಣಪಾವತಿಸಿದ ನೌಕರರು 58 ವರ್ಷವನ್ನು ತಲುಪಿದ ನಂತರ ಪಿಂಚಣಿ ಪಡೆದುಕೊಳ್ಳಬಹುದು. ಆದರೆ, ನಿವೃತ್ತ ನೌಕರರು 58 ವರ್ಷವಾದ ತಕ್ಷಣ ಪಿಂಚಣಿ ಪಡೆಯುವ ಬದಲು 60 ವರ್ಷ ವಯಸ್ಸಿನವರೆಗೆ ಕಾಯುವ ಸಾಮರ್ಥ್ಯ ಹೊಂದಿದ್ದರೆ, ಅವರ ವಾರ್ಷಿಕ ಪಿಂಚಣಿ ಶೇಕಡಾ 8 ರಷ್ಟು ಹೆಚ್ಚಾಗುತ್ತದೆ. ಅಂದರೆ ಹೆಚ್ಚು ಆರ್ಥಿಕ ಭದ್ರತೆ ಅವರಿಗೆ ಸಿಗಲಿದೆ.

ಆರಂಭಿಕ ಪಿಂಚಣಿ: ನನಗೆ 58 ವರ್ಷ ಕಾಯಲು ಆಗುವುದಿಲ್ಲ, 50ನೇ ವಯಸ್ಸಿನಲ್ಲೇ ಪಿಂಚಣಿ ಬೇಕು ಎಂದು ಯೋಚನೆ ಮಾಡುತ್ತಿದ್ದರೆ, ಅಂತಹ ಅವಕಾಶವೂ ಇದೆ. ಉದ್ಯೋಗಿಗಳು ಬಯಸಿದಲ್ಲಿ 50 ವರ್ಷ ವಯಸ್ಸಿನಿಂದ ಪಿಂಚಣಿ ಪಡೆಯಬಹುದು. ಆದರೆ, ನೀವು ಈ ಆರಂಭಿಕ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದೇ ಆದರೆ, ನಿಮಗೆ ಕಡಿಮೆ ಪಿಂಚಣಿ ಬರಲಿದೆ. ಅಲ್ಲದೇ ನೀವು ಪಿಎಫ್‌ಗೆ ನಿಮ್ಮ ಮೂಲ ವೇತನದ ಶೇಕಡಾ 12 ಕ್ಕಿಂತ ಹೆಚ್ಚು ಕೊಡುಗೆ ನೀಡಬೇಕು. ಆದರೆ, ಇಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ಗಮನಿಸಬೇಕಾಗುತ್ತದೆ. ಉದ್ಯೋಗಿಗಳು ಸ್ವಯಂಪ್ರೇರಣೆಯಿಂದ ಶೇಕಡಾ 12 ಕ್ಕಿಂತ ಹೆಚ್ಚು ಕೊಡುಗೆ ನೀಡಿದರೆ, ಕಂಪನಿಗಳು ಕೇವಲ 12 ಪ್ರತಿಶತದವರೆಗೆ ಕೊಡುಗೆ ಮಾತ್ರ ನೀಡುತ್ತವೆ. ನಿಯಮಗಳ ಪ್ರಕಾರ, ಕಂಪನಿಗಳು ಅಥವಾ ಉದ್ಯೋಗದಾತರು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ನೀಡಬೇಕಾಗಿಲ್ಲ. ಉದ್ಯೋಗಿ ಪಿಂಚಣಿ ಯೋಜನೆ ಇಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತದ 8.33 ಪ್ರತಿಶತವನ್ನು 'ನೌಕರ ಪಿಂಚಣಿ ಯೋಜನೆ' ಇಪಿಎಸ್ ಗಾಗಿ ಮೀಸಲಿಡಲಾಗಿದೆ. ಇದು ನಿವೃತ್ತಿಯ ನಂತರ ಉದ್ಯೋಗಿಗೆ ಪಿಂಚಣಿ ಪ್ರಯೋಜನಗಳನ್ನು ಒದಗಿಸುತ್ತದೆ.

ಭವಿಷ್ಯ ನಿಧಿ -PF: EPF ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತದ 3.67 ಪ್ರತಿಶತವನ್ನು EPF ಗೆ ತಿರುಗಿಸಲಾಗುತ್ತದೆ. ಇದು ಉದ್ಯೋಗಿ ಮಾಡಿದ ಉಳಿತಾಯವಾಗಿರುತ್ತದೆ.

ಇಪಿಎಫ್ ವೇತನ ಮಿತಿ ಏರಿಕೆ !?: ನೌಕರ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್‌ಒ ಅಡಿ ಉದ್ಯೋಗಿಗಳ ಗರಿಷ್ಠ ವೇತನ ಮಿತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಸದ್ಯ ನೌಕರರ ಗರಿಷ್ಠ ವೇತನದ ಮಿತಿ 15,000 ರೂಗಳಾಗಿವೆ. ಈ ಮೊತ್ತವನ್ನು 21,000ಕ್ಕೆ ಹೆಚ್ಚಿಸಲಾಗುತ್ತದೆ ಎಂಬ ಸುದ್ದಿ ಇದೆ. ವೇತನ ಮಿತಿ ಹೆಚ್ಚಿಸಬೇಕು ಎಂಬ ಕೂಗು ಹಲವು ವರ್ಷಗಳಿಂದ ಇದೆ. ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಂಡಿದೆ ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ.

ವಾಸ್ತವವಾಗಿ, EPFO ​​ಗರಿಷ್ಠ ವೇತನ ಮಿತಿಯನ್ನು ಕೊನೆಯದಾಗಿ 2014 ರಲ್ಲಿ ಪರಿಷ್ಕರಿಸಲಾಗಿತ್ತು. ಆಗ 6,500 ರೂ ಇದ್ದ ಮಿತಿಯನ್ನು 15 ಸಾವಿರ ರೂ.ಗೆ ಏರಿಕೆ ಮಾಡಲಾಗಿತ್ತು. ಈ ನಡುವೆ ನೌಕರರ ರಾಜ್ಯ ವಿಮಾ ನಿಗಮ ಇಎಸ್‌ಐಸಿ ಈಗಾಗಲೇ ವೇತನ ಮಿತಿಯನ್ನು 21 ಸಾವಿರ ರೂಗೆ ಹೆಚ್ಚಿಸಿದೆ. ಇಪಿಎಫ್ ಅನ್ನು ಅದೇ ಮೊತ್ತಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರವೂ ಯೋಜಿಸಿದೆ.

ಇದನ್ನು ಓದಿ: ಈ ವಾರ 310 ಮಿಲಿಯನ್ ಡಾಲರ್ ಫಂಡಿಂಗ್ ಸಂಗ್ರಹಿಸಿದ 37 ಭಾರತೀಯ ಸ್ಟಾರ್ಟ್​ಅಪ್​ಗಳು - INDIAN STARTUPS

ETV Bharat Logo

Copyright © 2025 Ushodaya Enterprises Pvt. Ltd., All Rights Reserved.