ETV Bharat / business

ಉದ್ಯೋಗಿಗಳಿಗೆ ಶುಭಸುದ್ದಿ: ಭವಿಷ್ಯ ನಿಧಿ ಬಡ್ಡಿ ದರ ಶೇಕಡಾ 8.25ಕ್ಕೆ ಹೆಚ್ಚಳ - ಇಪಿಎಫ್​ಒ

ಪಿಎಫ್​ ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದ ಬಳಿಕ ಜಾರಿಗೆ ಬರಲಿದೆ.

ಭವಿಷ್ಯ ನಿಧಿ ಬಡ್ಡಿ ದರ
ಭವಿಷ್ಯ ನಿಧಿ ಬಡ್ಡಿ ದರ
author img

By ETV Bharat Karnataka Team

Published : Feb 10, 2024, 4:26 PM IST

Updated : Feb 10, 2024, 4:43 PM IST

ನವದೆಹಲಿ: ಭವಿಷ್ಯ ನಿಧಿ (ಪಿಎಫ್​) ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಪಿಎಫ್​ ಖಾತೆಗಳ ಮೇಲಿನ ಠೇವಣಿ ಮೊತ್ತಕ್ಕೆ ನೀಡಲಾಗುವ ಬಡ್ಡಿ ದರವನ್ನು ಹೆಚ್ಚಳ ಮಾಡಲಾಗಿದೆ. ಈ ವರ್ಷದ ಹಣಕಾಸಿನ ವರ್ಷವಾದ 2023-24 ರ ಸಾಲಿನಲ್ಲಿ ಭವಿಷ್ಯ ನಿಧಿ (ಪಿಎಫ್​) ಹಣದ ಮೇಲಿನ ಬಡ್ಡಿಯನ್ನು ಶೇಕಡಾ 8.25ಕ್ಕೆ ಹೆಚ್ಚಿಸಲಾಗಿದೆ. ಈ ಮೊದಲು ನೀಡುತ್ತಿದ್ದ 8.15 ಪ್ರಮಾಣಕ್ಕೆ ಹೆಚ್ಚುವರಿಯಾಗಿ ಶೇಕಡಾ 0.10 ರಷ್ಟು ಹೆಚ್ಚಳ ಮಾಡಲಾಗಿದೆ.

ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಕೇಂದ್ರ ಟ್ರಸ್ಟಿಗಳ ಮಂಡಳಿಯು ಶನಿವಾರ (ಫೆಬ್ರವರಿ 10 ರಂದು) ನಡೆಸಿದ 235 ನೇ ಸಭೆಯಲ್ಲಿ ಬಡ್ಡಿ ದರ ಹೆಚ್ಚಳ ಮಾಡುವ ಬಗ್ಗೆ ನಿರ್ಣಯಿಸಲಾಗಿದೆ ಎಂದು ಘೋಷಿಸಲಾಗಿದೆ. ಕೇಂದ್ರದ ಹಣಕಾಸು ಸಚಿವಾಲಯವು ಈ ನಿರ್ಣಯಕ್ಕೆ ಅನುಮೋದನೆ ನೀಡಿದ ಬಳಿಕ ಸರ್ಕಾರಿ ಗೆಜೆಟ್‌ ಹೊರಡಿಸಲಾಗುತ್ತದೆ. ನಂತರ ಇಪಿಎಫ್ಒ ತನ್ನ ಠೇವಣಿದಾರರ ಖಾತೆಗಳಿಗೆ ಅನುಮೋದಿತ ಬಡ್ಡಿ ದರವನ್ನು ಕ್ರೆಡಿಟ್ ಮಾಡುತ್ತದೆ.

6 ಕೋಟಿ ಉದ್ಯೋಗಿಗಳಿಗೆ ಲಾಭ: ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ ಸಭೆಯು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್, ಉಪಾಧ್ಯಕ್ಷ ರಾಮೇಶ್ವರ ತೇಲಿ ಅವರ ನೇತೃತ್ವದಲ್ಲಿ ಈಚೆಗೆ ಸಭೆ ನಡೆಯಿತು. ಇದರಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿಯ ಮೇಲಿನ ಬಡ್ಡಿದರ ಏರಿಕೆ ಮಾಡುವ ಬಗ್ಗೆ ಎಲ್ಲ ಸದಸ್ಯರು ಪ್ರಸ್ತಾಪ ಸಲ್ಲಿಸಿದರು.

ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್, ದೇಶದ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಇಟ್ಟ ಹೆಜ್ಜೆಯಾಗಿದೆ. 6 ಕೋಟಿ ಉದ್ಯೋಗಿಗಳು ಇದರ ಲಾಭ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ವರ್ಷ ಇಪಿಎಫ್‌ಒಗೆ ಈಕ್ವಿಟಿಯಲ್ಲಿನ ಹೂಡಿಕೆಗಳು ಮತ್ತು ಹೆಚ್ಚಿನ ರಿಟರ್ನ್ ಬಂದ ಪರಿಣಾಮ ಬಡ್ಡಿ ದರ ಏರಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ, ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಆದಾಯವು ಶೇಕಡಾ 17.39 ಕ್ಕಿಂತ ಹೆಚ್ಚು ಬೆಳೆದಿದೆ. ಆದರೆ, ಅಸಲು ಮೊತ್ತವು ಶೇಕಡಾ 17.97 ರಷ್ಟು ಹೆಚ್ಚಾಗಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

ಇಪಿಎಫ್​ಒ ಸಾಮಾಜಿಕ ಭದ್ರತಾ ಸಂಸ್ಥೆಯಾಗಿದ್ದು, ದೇಶದ ಸಂಘಟಿತ ಉದ್ಯೋಗಿಗಳಿಗೆ ಭವಿಷ್ಯ, ಪಿಂಚಣಿ ಮತ್ತು ವಿಮಾ ನಿಧಿಗಳ ರೂಪದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ನೀಡುವ ಜವಾಬ್ದಾರಿಯನ್ನು ಹೊಂದಿದೆ.

ಇದನ್ನೂ ಓದಿ: ಇಪಿಎಫ್​, PPF, ವಿಪಿಎಫ್​​​​: ಈ ಮೂರು ಭವಿಷ್ಯ ನಿಧಿ ಪ್ರಯೋಜನೆಗಳೇನು?; ಇಲ್ಲಿದೆ ಫುಲ್​ ಡೀಟೇಲ್ಸ್​​

Last Updated : Feb 10, 2024, 4:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.