ಸಾಲ ತೆಗೆದುಕೊಳ್ಳುವ ಮೊದಲು ಬ್ಯಾಂಕ್‌ಗಳು ನೋಡುವುದೇ ಕ್ರೆಡಿಟ್ ಸ್ಕೋರ್. ಹೀಗಾಗಿ ಯಾವುದೇ ತಪ್ಪಾಗದಂತೆ ಎಚ್ಚರ ವಹಿಸಬೇಕು. ಇಲ್ಲವಾದರೆ ನಮಗೆ ಬೇಕಾದಾಗ ಸಾಲ ಪಡೆಯಲು ಕಷ್ಟವಾಗಬಹುದು. ನಮ್ಮ ಸಾಲದ ಅರ್ಜಿ ತಿರಸ್ಕೃತವಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಸಿಬಿಲ್ನಲ್ಲಿ ಯಾವುದೇ ದೋಷಗಳು ಕಂಡುಬಂದಲ್ಲಿ, ಅವುಗಳನ್ನು ತಕ್ಷಣವೇ ಕ್ರೆಡಿಟ್ ಮಾಹಿತಿ ಬ್ಯೂರೋ ಇಂಡಿಯಾ ಲಿಮಿಟೆಡ್ (CIBIL) ಗಮನಕ್ಕೆ ತರಬೇಕು.
- ಸಿಬಿಲ್ನಲ್ಲಿ ಕೆಲವೊಮ್ಮೆ ನಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಪ್ಯಾನ್ ವಿವರಗಳು ಇತ್ಯಾದಿಗಳು ತಪ್ಪಾಗಿರುತ್ತವೆ.
- ಈಗಾಗಲೇ ಅಸ್ತಿತ್ವದಲ್ಲಿರುವ ಸಾಲಗಳ ಬಗ್ಗೆ ಮಾಹಿತಿಯೂ ವರದಿಯಲ್ಲಿ ಕಂಡುಬರುತ್ತದೆ. ಈ ಸಾಲಗಳ ಸಂಖ್ಯೆ ಅಥವಾ ಮೊತ್ತ ಹೆಚ್ಚಾದಾಗ ಎಲ್ಲೋ ತಪ್ಪು ನಡೆದಿದೆ ಎಂದರ್ಥ.
- ಸಾಲದ ಕಂತುಗಳ ಪಾವತಿಯಲ್ಲಿ ಯಾವುದೇ ವಿಳಂಬ ಸಾಧ್ಯ. ಈ ಸಂದರ್ಭದಲ್ಲಿ ವಿಳಂಬ ಪಾವತಿಯ ದಿನಗಳ ಸಂಖ್ಯೆಯನ್ನು ಸಹ ವರದಿಯಲ್ಲಿ ಉಲ್ಲೇಖಿಸಲಾಗುತ್ತದೆ. ಕೆಲವೊಮ್ಮೆ ಪಾವತಿಯನ್ನು ಸಮಯಕ್ಕೆ ಸರಿಯಾಗಿ ಮಾಡಿದರೂ, ತಡವಾಗಿ ಉಲ್ಲೇಖಿಸಬಹುದು.
- ಮತ್ತೆ ಕೆಲವೊಮ್ಮೆ ನಮಗೆ ಸಂಬಂಧವೇ ಇಲ್ಲದ ಸಾಲಗಳು ಈ ವರದಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳೂ ಇರುತ್ತದೆ. ಈ ಸಂದರ್ಭದಲ್ಲಿ ಕ್ರೆಡಿಟ್ ವರದಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ ನಮ್ಮ ಸಾಲದ ಅರ್ಹತೆಯನ್ನು ಕಡಿಮೆ ಮಾಡುವ ಅಪಾಯ ಎದುರಾಗುತ್ತದೆ.
- ಯಾವುದೇ ಸಂದೇಹವಿದ್ದಲ್ಲಿ ಸಂಬಂಧಿತ ದೋಷವನ್ನು ಸರಿಪಡಿಸಲು ತಕ್ಷಣವೇ ಸಿಬಿಲ್ ಸಂಪರ್ಕಿಸಬೇಕು. ಸಿಬಿಲ್‌ಗೆ ವರದಿ ಮಾಡುವ ಮೊದಲು, ವರದಿಯನ್ನು ಎರಡು ಬಾರಿ ಪರಿಶೀಲಿಸಬೇಕು. ನಿಮ್ಮ ಸಾಲದ ಖಾತೆಯ ವಿವರಗಳನ್ನು ಹೋಲಿಕೆ ಮಾಡಿ, ಇದರಲ್ಲಿ ಏನಾದರೂ ತಪ್ಪುಗಳಿದ್ದಲ್ಲಿ ಬ್ಯಾಂಕ್ಅನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಬ್ಯಾಂಕ್ನಿಂದ ಮಾಹಿತಿಯನ್ನು ಕಳುಹಿಸಿದ ತಕ್ಷಣ ವರದಿಯಲ್ಲಿ ಸರಿಯಾದ ವಿವರಗಳು ಕಾಣಿಸಿಕೊಳ್ಳುತ್ತವೆ. ಸಿಬಿಲ್ ಅಧಿಕೃತ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಲ್ಲಿ ನಿಮ್ಮ ವಿವರಗಳೊಂದಿಗೆ ಲಾಗಿನ್ ಮಾಡುವ ಮೂಲಕ ದೋಷಗಳನ್ನು ವರದಿ ಮಾಡಬಹುದು.
- ಒಂದು ವೇಳೆ, ನಿಮಗೆ ಸಿಬಿಲ್ ವಿವರಗಳು ಅರ್ಥವಾಗದಿದ್ದರೆ, ನೀವು ನಿಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಮತ್ತು ಅದರ ವಿವರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು.
- ಸಿಬಿಲ್ ವರದಿಯಲ್ಲಿ ಪ್ರತಿಯೊಬ್ಬ ಖಾತೆದಾರರು ವಿಶಿಷ್ಟ ಸಂಖ್ಯೆಯನ್ನು ಹೊಂದಿರುತ್ತಾರೆ. ದೋಷಗಳನ್ನು ರೆಕಾರ್ಡ್ ಮಾಡುವಾಗ ಇದನ್ನು ನಮೂದಿಸಬೇಕು. ಕ್ರೆಡಿಟ್ ಬ್ಯೂರೋ ನಿಮ್ಮಿಂದ ಪಡೆದ ವಿವರಗಳನ್ನು ಆಯಾ ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳಿಗೆ ಕಳುಹಿಸಿ, ಅವುಗಳನ್ನು ಪರಿಶೀಲಿಸುತ್ತದೆ. ಆಗ ಮಾತ್ರ ಬದಲಾವಣೆ ಉಂಟಾಗುತ್ತದೆ. ಈ ದೋಷಗಳನ್ನು ಸರಿಪಡಿಸಲು 30-45 ದಿನಗಳು ತೆಗೆದುಕೊಳ್ಳಲಾಗುತ್ತದೆ.
- ನೀವು ಸಾಲವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲದಿದ್ದರೂ, ನಿಮ್ಮ ಕ್ರೆಡಿಟ್ ವರದಿಯನ್ನು ವರ್ಷಕ್ಕೆ ಒಮ್ಮೆಯಾದರೂ ಪರಿಶೀಲಿಸುವುದು ಒಳ್ಳೆಯದು. ಇದನ್ನು ಮಾಡಲು ಮರೆಯಬೇಡಿ. ಯಾಕೆಂದರೆ, ಇದರಿಂದ ಯಾವುದೇ ದೋಷಗಳು ಉಂಟಾಗದಂತೆ ನೋಡಿಕೊಳ್ಳಬಹುದು.
ಇದನ್ನೂ ಓದಿ: ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕೇ? ನಿಮಗೆ 7-5-3-1 ನಿಯಮ ಗೊತ್ತಿರಲೇಬೇಕು - Mutual Fund Investment Tips