ETV Bharat / business

ಹಣಕಾಸು ಸಚಿವರ ಸಮ್ಮುಖದಲ್ಲಿ ನಡೆಯಿತು ಹಲ್ವಾ ಸಮಾರಂಭ - ಬಜೆಟ್​ ಲಾಕಿನ್​ ಅವಧಿ

ಇಂದು ಸಾಂಪ್ರದಾಯಿಕ ಹಲ್ವಾ ಸಮಾರಂಭ ನಡೆಯಿತು. ಬಜೆಟ್​ ಸಿದ್ಧತೆಗಳು ಪೂರ್ಣಗೊಂಡು ಬಜೆಟ್​ ಲಾಕಿನ್​ ಅವಧಿ ಆರಂಭಕ್ಕೂ ಮುನ್ನ ಈ ಸಮಾರಂಭವನ್ನು ನಡೆಸಲಾಗುತ್ತದೆ.

Customary 'Halwa' Ceremony Held in Presence of Finance Minister Nirmala Sitharaman
ಹಣಕಾಸು ಸಚಿವರ ಸಮ್ಮುಖದಲ್ಲಿ ನಡೆಯಿತು ಕೇಂದ್ರ ಬಜೆಟ್​​​​​ನ ಹಲ್ವಾ ಸಮಾರಂಭ
author img

By ETV Bharat Karnataka Team

Published : Jan 24, 2024, 10:02 PM IST

ನವದೆಹಲಿ: 2024ರ ಮಧ್ಯಂತರ ಕೇಂದ್ರ ಬಜೆಟ್​ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ಭರ್ಜರಿ ತಯಾರಿ ನಡೆಸಿದ್ದಾರೆ. 2024ರ ಬಜೆಟ್ ತಯಾರಿ ಪ್ರಕ್ರಿಯೆ ಭಾಗವಾಗಿ 'ಹಲ್ವಾ' ಸಮಾರಂಭ ಬುಧವಾರ ನಡೆಯಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಾಗವತ್ ಕರದ್ ಅವರ ಉಪಸ್ಥಿತಿಯಲ್ಲಿ ಈ ಸಮಾರಂಭ ನಡೆಸಲಾಯಿತು.

ಬಜೆಟ್ ತಯಾರಿಯ "ಲಾಕ್-ಇನ್" ಪ್ರಕ್ರಿಯೆ ಪ್ರಾರಂಭವಾಗುವ ಮೊದಲು ಸಾಂಪ್ರದಾಯಿಕ ಹಲ್ವಾ ಸಮಾರಂಭವನ್ನು ಸಾಂಪ್ರದಾಯಿಕವಾಗಿ ಪ್ರತಿ ವರ್ಷ ನಡೆಸಿಕೊಂಡು ಬರಲಾಗುತ್ತಿದೆ. ಹಣಕಾಸು ಸಚಿವಾಲಯ ಹೊರಡಿಸಿದ ಹೇಳಿಕೆಯ ಪ್ರಕಾರ, ಸಮಾರಂಭದ ಭಾಗವಾಗಿ, ಕೇಂದ್ರ ಹಣಕಾಸು ಸಚಿವರು ಬಜೆಟ್ ಪ್ರೆಸ್‌ನಲ್ಲಿ ಒಂದು ಸುತ್ತು ಹಾಕಿ ಸಿದ್ಧತೆಗಳನ್ನು ಪರಿಶೀಲಿಸಿದರು. "ಹಿಂದಿನ ಮೂರು ಪೂರ್ಣ ಕೇಂದ್ರ ಬಜೆಟ್‌ಗಳನ್ನು ಮಂಡಿಸಿದಂತೆಯೇ ಈ ಬಾರಿಯ ಕೇಂದ್ರದ ಮಧ್ಯಂತರ ಬಜೆಟ್ 2024 ಅನ್ನು ಸಹ ಕಾಗದರಹಿತ ರೂಪದಲ್ಲಿ ವಿತರಣೆ ಹಾಗೂ ಮಂಡನೆ ಮಾಡಲಾಗುತ್ತದೆ. ಫೆಬ್ರವರಿ ಒಂದರಂದು ಮಧ್ಯಂತರ ಬಜೆಟ್​ ಮಂಡನೆಯಾಗಲಿದೆ ಎಂದು ಈಗಾಗಲೇ ಕೇಂದ್ರ ಸರ್ಕಾರ ಹೇಳಿದೆ

ವಾರ್ಷಿಕ ಹಣಕಾಸು ಹೇಳಿಕೆಯನ್ನೇ ಸಾಮಾನ್ಯವಾಗಿ ಬಜೆಟ್​ ಎಂದು ಕರೆಯಲಾಗುತ್ತದೆ. ಅನುದಾನದ ಬೇಡಿಕೆ (DG), ಹಣಕಾಸು ಮಸೂದೆ ಸೇರಿದಂತೆ ಎಲ್ಲ ಕೇಂದ್ರ ಬಜೆಟ್​ನ ದಾಖಲೆಗಳು 'ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್' ನಲ್ಲಿ ಸಂಸದರು ಮತ್ತು ಸಾಮಾನ್ಯರ -ಮುಕ್ತ ಪ್ರವೇಶಕ್ಕಾಗಿ ಲಭ್ಯವಿರುತ್ತವೆ. ಸಾರ್ವಜನಿಕರು ಇದನ್ನು ಸುಲಭವಾಗಿ ನೋಡಬಹುದು.

ಇಂದು ನಡೆದ ಹಲ್ವಾ ಸಮಾರಂಭದಲ್ಲಿ, ಸೀತಾರಾಮನ್ ಅವರೊಂದಿಗೆ ಹಣಕಾಸು ಕಾರ್ಯದರ್ಶಿ ಡಾ. ಟಿ ವಿ ಸೋಮನಾಥನ್, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್ ಮತ್ತು ಹಣಕಾಸು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು. ಈ ವರ್ಷಾಂತ್ಯದಲ್ಲಿ ದೇಶವು ಲೋಕಸಭೆ ಚುನಾವಣೆಗೆ ಹೋಗಲಿದ್ದು, ಪ್ರಸ್ತುತ ನರೇಂದ್ರ ಮೋದಿ ನೇತೃತ್ವದ ಆಡಳಿತದ ಅವಧಿಯು ಮೇ ತಿಂಗಳಾಂತ್ಯದಲ್ಲಿ ಕೊನೆಗೊಳ್ಳಲಿದ್ದು, ಸೀತಾರಾಮನ್ ಮಧ್ಯಂತರ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ.

ಇದನ್ನು ಓದಿ:ಸ್ವಿಗ್ಗಿ ಪ್ಲಾಟ್​ಫಾರ್ಮ್ ಶುಲ್ಕ ಹೆಚ್ಚಳ ಸಾಧ್ಯತೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.