ETV Bharat / business

ವಜೀರ್​ ಎಕ್ಸ್​ನಿಂದ 2 ಸಾವಿರ ಕೋಟಿ ಮೊತ್ತದ ಕ್ರಿಪ್ಟೊಕರೆನ್ಸಿ ಕಳವು: ಸಮಗ್ರ ತನಿಖೆಗೆ ಸೈಬರ್​ ಕ್ರೈಮ್ ತಜ್ಞರ ಒತ್ತಾಯ - WazirX digital asset theft - WAZIRX DIGITAL ASSET THEFT

ಕ್ರಿಪ್ಟೊ ಎಕ್ಸ್​ಚೇಂಜ್ ಆಗಿರುವ ವಜೀರ್ ಎಕ್ಸ್​ ನಿಂದ 2 ಸಾವಿರ ಕೋಟಿ ಮೊತ್ತದ ಕ್ರಿಪ್ಟೊಗಳನ್ನು ಕಳವು ಮಾಡಲಾಗಿದೆ.

ವಜೀರ್ ಎಕ್ಸ್​
ವಜೀರ್ ಎಕ್ಸ್​ (IANS)
author img

By ETV Bharat Karnataka Team

Published : Aug 20, 2024, 1:27 PM IST

ನವದೆಹಲಿ : ಕ್ರಿಪ್ಟೊ ಎಕ್ಸ್​ಚೇಂಜ್​ ವಜೀರ್​ ಎಕ್ಸ್​ನಿಂದ 2 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಡಿಜಿಟಲ್ ಸಂಪತ್ತು ಕಳುವಾಗಿರುವ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದೆ ಎಂದು ಸೈಬರ್ ಕ್ರೈಮ್ ತಜ್ಞರು ಸೋಮವಾರ ಆಗ್ರಹಿಸಿದ್ದಾರೆ.

ದೇಶದಲ್ಲಿ ಕಠಿಣವಾದ ಮನಿ ಲಾಂಡರಿಂಗ್ ವಿರೋಧಿ ನಿಯಮಗಳು ಮತ್ತು ಕ್ರಿಪ್ಟೋಕರೆನ್ಸಿಗಳಿಗೆ ತೆರಿಗೆ ವಿಧಿಸುವಿಕೆಯನ್ನು ಜಾರಿಗೆ ತಂದಿರುವ ಸಮಯದಲ್ಲಿ ಹಾಗೂ ಜಾರಿ ನಿರ್ದೇಶನಾಲಯ (ಇಡಿ)ವು ದೇಶಾದ್ಯಂತ ನಕಲಿ ಕ್ರಿಪ್ಟೋಕರೆನ್ಸಿ ದಂಧೆಗಳನ್ನು ಭೇದಿಸುತ್ತಿರುವ ಸಮಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಕ್ರಿಪ್ಟೊ ಆಸ್ತಿ ಕಳುವಾಗಿರುವುದು ಕಳವಳ ಮೂಡಿಸಿದೆ.

ವಜೀರ್​ ಎಕ್ಸ್​ನಿಂದ ಕ್ರಿಪ್ಟೊ ಆಸ್ತಿ ಕಳುವಾಗಿರುವ ವಿಚಾರದಲ್ಲಿ ನಾಲ್ಕು ಪ್ರಮುಖ ಅಂಶಗಳು ಅಡಕವಾಗಿದ್ದು, ಇವುಗಳ ಬಗ್ಗೆ ತುರ್ತಾಗಿ ತನಿಖೆ ನಡೆಯಬೇಕಿದೆ ಎಂದು ಸೈಬರ್ ಕ್ರೈಮ್ ಹಾಗೂ ಕಾನೂನು ತಜ್ಞರು ಹೇಳಿದ್ದಾರೆ.

"ಮೊದಲನೆಯದಾಗಿ, ವಜೀರ್​ ಎಕ್ಸ್​ನ ಯೂಸರ್ ಅಗ್ರಿಮೆಂಟ್​ ಪ್ರಕಾರ- ಯಾವುದೇ ಪೂರ್ವಭಾವಿ ನೋಟಿಸ್ ನೀಡದೆ ವಜೀರ್​ ಎಕ್ಸ್​ ತಾನಾಗಿಯೇ ಯಾವುದೇ ಗ್ರಾಹಕರ ಖಾತೆಯನ್ನು ಅನಿರ್ದಿಷ್ಟವಾಗಿ ಅಮಾನತಿನಲ್ಲಿಡಬಹುದು ಅಥವಾ ರದ್ದುಗೊಳಿಸಬಹುದು ಹಾಗೂ ಖಾತೆಗೆ ಯಾವುದೇ ಹಣವನ್ನು ತುಂಬಿಸಲು ಆಗದಂತೆ ಅಥವಾ ಖಾತೆಯಲ್ಲಿನ ಹಣವನ್ನು ಮರಳಿ ಪಡೆಯದಂತೆ ವಜೀರ್ ಎಕ್ಸ್​ ನಿರ್ಬಂಧಿಸಬಹುದು. ಆದರೆ ಇದು ಏಕಪಕ್ಷೀಯ ನಿಯಮವಾಗಿದ್ದು, ಇದು ಹೊಸ ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರ ಉಲ್ಲಂಘನೆಯಾಗಿದೆ ಹಾಗೂ ಕಾನೂನು ಬಾಹಿರವಾಗಿದೆ" ಎಂದು ಸುಪ್ರೀಂ ಕೋರ್ಟ್ ವಕೀಲ ಮತ್ತು ಸೈಬರ್ ಕಾನೂನು ತಜ್ಞ ವಿರಾಗ್ ಗುಪ್ತಾ ಐಎಎನ್ಎಸ್​ಗೆ ತಿಳಿಸಿದರು.

"ಎರಡನೆಯದಾಗಿ, ಕ್ರಿಪ್ಟೊ ಆಸ್ತಿ ಕಳುವಾದ ವಿಷಯವನ್ನು ಪೊಲೀಸರಿಗೆ ತಿಳಿಸುವಲ್ಲಿ ಗಮನಾರ್ಹ ವಿಳಂಬವಾಗಿದೆ. ಕಳುವಾಗಿರುವ ಆಸ್ತಿಯ ಮೊತ್ತ 2 ಸಾವಿರ ಕೋಟಿ ರೂಪಾಯಿಗಳಷ್ಟು ದೊಡ್ಡ ಮಟ್ಟದಲ್ಲಿರುವಾಗ ಈ ವಿಷಯವು ಹೂಡಿಕೆದಾರರು ಮತ್ತು ಆ ಎಕ್ಸ್​ಚೇಂಜ್​ಗೆ ಮಾತ್ರ ಸಂಬಂಧಿಸಿದ್ದು ಎಂದು ಸುಮ್ಮನೆ ಕೂರಲಾಗುವುದಿಲ್ಲ. ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಹೊಸ ಬಿಎನ್ಎಸ್ (ಭಾರತೀಯ ನ್ಯಾಯ ಸಂಹಿತಾ) ಸಂಹಿತೆಯ ನಿಬಂಧನೆಗಳ ಪ್ರಕಾರ, ಸರಿಯಾದ ಪ್ರಕ್ರಿಯೆಯನ್ನು ನಿರ್ವಹಿಸಲು ಇತರ ಕಾನೂನು ಜಾರಿ ಅಧಿಕಾರಿಗಳು ಮತ್ತು ಪೊಲೀಸರಿಗೆ ಮಾಹಿತಿ ನೀಡುವುದು ಎಕ್ಸ್​ಚೇಂಜ್​ನ ಕರ್ತವ್ಯವಾಗಿದೆ" ಎಂದು ಗುಪ್ತಾ ಹೇಳಿದರು.

"ಮೂರನೆಯದಾಗಿ, ಕಳುವಾದ ಮೊತ್ತವನ್ನು ಕಾನೂನುಬಾಹಿರ ಉದ್ದೇಶಗಳಿಗಾಗಿ (ಭಯೋತ್ಪಾದನೆ ಮತ್ತು ಮಾದಕವಸ್ತುಗಳು ಇತ್ಯಾದಿ) ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಆದಾಯ ತೆರಿಗೆ ಮತ್ತು ಇಡಿಐ (ಎಲೆಕ್ಟ್ರಾನಿಕ್ ಡೇಟಾ ಇಂಟರ್ ಚೇಂಜ್) ಅಧಿಕಾರಿಗಳು ತನಿಖೆ ನಡೆಸಬೇಕಾಗಿದೆ. ಗೂಗಲ್​ನ ಅಂಗಸಂಸ್ಥೆಯ ಮೂಲಕ ಥರ್ಡ್ ಪಾರ್ಟಿ ಫೋರೆನ್ಸಿಕ್ ಮೌಲ್ಯಮಾಪನದ ಆಧಾರದ ಮೇಲೆ ಕ್ಲೀನ್ ಚಿಟ್ ನೀಡಲಾಗಿದ್ದರೂ, ತನಿಖೆಯು ಸಮಗ್ರವಾಗಿಲ್ಲ. ಅಪರಾಧದ ಪ್ರಮಾಣವನ್ನು ಪರಿಗಣಿಸಿ ಕಾನೂನು ಜಾರಿ ಅಧಿಕಾರಿಗಳು ಸಮಗ್ರ ತನಿಖೆ ನಡೆಸುವುದು ತೀರಾ ಅಗತ್ಯ" ಎಂದು ಗುಪ್ತಾ ಐಎಎನ್ಎಸ್​ಗೆ ತಿಳಿಸಿದರು.

ಅಂತಿಮವಾಗಿ, ಈ ಘಟನೆಯಿಂದ ಭಾರತದಲ್ಲಿ ಕ್ರಿಪ್ಟೋ-ಟ್ರೇಡಿಂಗ್​ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಬೇಕಿದೆ ಎಂಬ ಪಾಠ ಕಲಿಯಬೇಕಿದೆ ಎಂದು ತಜ್ಞರು ಹೇಳಿದ್ದಾರೆ.

2022 ರಲ್ಲಿ, ಭಾರತ ಸರ್ಕಾರವು ವರ್ಚುವಲ್ ಕರೆನ್ಸಿಗಳ ಮೇಲೆ ಶೇಕಡಾ 30 ರಷ್ಟು ತೆರಿಗೆ ಮತ್ತು ಪ್ರತಿ ಕ್ರಿಪ್ಟೋ ವಹಿವಾಟಿಗೆ ಶೇಕಡಾ 1 ರಷ್ಟು ಮೊತ್ತ ಕಡಿತದ ನಿಯಮವನ್ನು ಜಾರಿಗೆ ತಂದಿದೆ.

ಕೆಲವು ಭಾರತೀಯ ಫಿನ್ ಟೆಕ್ ಸಂಸ್ಥೆಗಳು ಮತ್ತು ಸಾಲ ನೀಡುವ ಅಪ್ಲಿಕೇಶನ್​ಗಳಿಗೆ ಸಂಬಂಧಿಸಿದ ಅಪರಿಚಿತ ವಿದೇಶಿ ವ್ಯಾಲೆಟ್​ಗಳಿಗೆ ಹಣ ವರ್ಗಾಯಿಸುವುದಕ್ಕೆ ವಜೀರ್​ ಎಕ್ಸ್​ ಸಹಾಯ ಮಾಡಿದೆ ಎಂಬ ಆರೋಪಗಳ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ತನಿಖೆ ಆರಂಭಗೊಂಡ ನಂತರ ಆಗಸ್ಟ್ 2022 ರಲ್ಲಿ ವಜೀರ್ ಎಕ್ಸ್​ನ 64.67 ಕೋಟಿ ರೂ.ಗಳಷ್ಟು ಮೊತ್ತ ಹೊಂದಿದ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ : ಮಹಾರಾಷ್ಟ್ರ: ಲಡ್ಕಿ ಬಹಿನ್ ಮೊತ್ತ 3,000ಕ್ಕೆ ಏರಿಕೆ - ಬೊಕ್ಕಸಕ್ಕೆ 4.6 ಲಕ್ಷ ಕೋಟಿ ಹೆಚ್ಚುವರಿ ಹೊರೆ - Ladki Bahin Scheme

ETV Bharat Logo

Copyright © 2025 Ushodaya Enterprises Pvt. Ltd., All Rights Reserved.