ETV Bharat / business

83.91 ದಶಲಕ್ಷ ಟನ್​ಗೆ ತಲುಪಿದ ಕಲ್ಲಿದ್ದಲು ಉತ್ಪಾದನೆ: ಶೇ 10ರಷ್ಟು ಹೆಚ್ಚಳ - Coal production up - COAL PRODUCTION UP

ಭಾರತದ ಕಲ್ಲಿದ್ದಲು ಉತ್ಪಾದನೆಯು ಮೇ ತಿಂಗಳಲ್ಲಿ 83.91 ದಶಲಕ್ಷ ಟನ್​ಗೆ ತಲುಪಿದೆ.

ಕಲ್ಲಿದ್ದಲು ಗಣಿ
ಕಲ್ಲಿದ್ದಲು ಗಣಿ (IANS (ಸಂಗ್ರಹ ಚಿತ್ರ))
author img

By ETV Bharat Karnataka Team

Published : Jun 4, 2024, 1:13 PM IST

ನವದೆಹಲಿ: ಭಾರತದ ಕಲ್ಲಿದ್ದಲು ಉತ್ಪಾದನೆಯು ಮೇ ತಿಂಗಳಲ್ಲಿ 83.91 ದಶಲಕ್ಷ ಟನ್​ಗೆ (ಎಂಟಿ) ತಲುಪಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 10.15ರಷ್ಟು ಬೆಳವಣಿಗೆಯಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ತಿಳಿಸಿದೆ. ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಮೇ ತಿಂಗಳಲ್ಲಿ 64.40 ಮೆಟ್ರಿಕ್ ಟನ್ ಕಲ್ಲಿದ್ದಲು ಉತ್ಪಾದನೆ ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇಕಡಾ 7.46 ರಷ್ಟು ಬೆಳವಣಿಗೆಯಾಗಿದೆ ಎಂದು ಕಲ್ಲಿದ್ದಲು ಸಚಿವಾಲಯ ತಿಳಿಸಿದೆ.

ಹೆಚ್ಚುವರಿಯಾಗಿ ಮೇ 2024 ರಲ್ಲಿ ಕ್ಯಾಪ್ಟಿವ್ ಮತ್ತು ಇತರ ಘಟಕಗಳಿಂದ 13.78 ಮೆಟ್ರಿಕ್ ಟನ್ ಕಲ್ಲಿದ್ದಲು ಉತ್ಪಾದನೆ ಆಗಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 32.76 ರಷ್ಟು ಬೆಳವಣಿಗೆಯಾಗಿದೆ. ಕಳೆದ ವರ್ಷ ಇದು 10.38 ಮೆಟ್ರಿಕ್ ಟನ್ ಆಗಿತ್ತು.

ನಿರ್ದಿಷ್ಟ ಕಂಪನಿಗಳ ಒಡೆತನದಲ್ಲಿರುವ ಗಣಿಗಳನ್ನು ಕ್ಯಾಪ್ಟಿವ್ ಗಣಿಗಳು ಎನ್ನಲಾಗುತ್ತದೆ. ಈ ಗಣಿಗಳಿಂದ ಉತ್ಪತ್ತಿಯಾಗುವ ಕಲ್ಲಿದ್ದಲು ಅಥವಾ ಖನಿಜವು ಗಣಿಗಳ ಮಾಲೀಕರ ಕಂಪನಿಯ ವಿಶೇಷ ಬಳಕೆಗಾಗಿ ಮೀಸಲಾಗಿರುತ್ತದೆ. ಕಂಪನಿಯು ಈ ಗಣಿಗಳಿಂದ ಉತ್ಪಾದಿಸಿದ ಕಲ್ಲಿದ್ದಲು ಅಥವಾ ಖನಿಜವನ್ನು ಹೊರಗೆ ಮಾರಾಟ ಮಾಡಲು ಸಾಧ್ಯವಿಲ್ಲ. ಕೆಲವು ವಿದ್ಯುತ್ ಉತ್ಪಾದನಾ ಕಂಪನಿಗಳು ಕ್ಯಾಪ್ಟಿವ್ ಗಣಿಗಳನ್ನು ಹೊಂದಿವೆ.

ಮೇ ತಿಂಗಳಲ್ಲಿ ಭಾರತದ ಒಟ್ಟಾರೆ ಕಲ್ಲಿದ್ದಲು ಪೂರೈಕೆ 90.84 ಮೆಟ್ರಿಕ್ ಟನ್​ಗೆ ತಲುಪಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 10.35 ರಷ್ಟು ಹೆಚ್ಚಾಗಿದೆ. ಈ ತಿಂಗಳಲ್ಲಿ ಸಿಐಎಲ್ 69.08 ಮೆಟ್ರಿಕ್ ಟನ್ ಕಲ್ಲಿದ್ದಲನ್ನು ರಫ್ತು ಮಾಡಿದ್ದು, ಇದು ಶೇಕಡಾ 8.50 ರಷ್ಟು ಬೆಳವಣಿಗೆಯಾಗಿದೆ.

ಹೆಚ್ಚುವರಿಯಾಗಿ, ಮೇ ತಿಂಗಳಲ್ಲಿ ಕ್ಯಾಪ್ಟಿವ್ ಮತ್ತು ಇತರ ಘಟಕಗಳು 16 ಮೆಟ್ರಿಕ್ ಟನ್ (ತಾತ್ಕಾಲಿಕ) ಕಲ್ಲಿದ್ದಲು ಉತ್ಪಾದಿಸಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 29.33 ರಷ್ಟು ಬೆಳವಣಿಗೆಯಾಗಿದೆ. ಹಿಂದಿನ ವರ್ಷ ಇದು 12.37 ಮೆಟ್ರಿಕ್ ಟನ್ ಆಗಿತ್ತು ಎಂದು ಸಚಿವಾಲಯ ತಿಳಿಸಿದೆ.

ಬಿಸಿಲು ಹೆಚ್ಚಾಗುತ್ತಿರುವ ಈ ಅವಧಿಯಲ್ಲಿ ವಿದ್ಯುತ್ತಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ದಾಸ್ತಾನು 19 ದಿನಗಳ ಅಗತ್ಯವನ್ನು ಪೂರೈಸಲು ಸಾಕಾಗುತ್ತದೆ ಎಂದು ಸಚಿವಾಲಯ ಕಳೆದ ವಾರ ತಿಳಿಸಿತ್ತು. ಭಾರತದ ವಿದ್ಯುತ್ ಬೇಡಿಕೆ ಕಳೆದ ವಾರ 250 ಗಿಗಾವ್ಯಾಟ್ ಗೆ ತಲುಪಿದೆ. ಮಾನ್ಸೂನ್ ಋತುವಿನಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಸಾಕಷ್ಟು ಕಲ್ಲಿದ್ದಲು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಿದ್ಧವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ : ಮುಖೇಶ್​ ಅಂಬಾನಿ ಹಿಂದಿಕ್ಕಿ ಏಷ್ಯಾದ ನಂಬರ್​​ 1 ಶ್ರೀಮಂತ ಪಟ್ಟಕ್ಕೆ ಮರಳಿದ ಗೌತಮ್ ಅದಾನಿ - Gautam Adani

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.