ETV Bharat / state

ಆವಿಷ್ಕಾರ, ಸಂಶೋಧನೆಗೆ ಮತ್ತಷ್ಟು ಆದ್ಯತೆ ನೀಡಲು ಐಪಿಆರ್ ಸೆಲ್​ ಸ್ಥಾಪಿಸಿದ ಬೆಂಗಳೂರು ವಿವಿ - INTELLECTUAL PROPERTY RIGHTS CELL

ಹೊಸ ಆವಿಷ್ಕಾರ, ಸಂಶೋಧನೆಗೆ ಐಪಿಆರ್ ಸೆಲ್​ ವತಿಯಿಂದ ಪೇಟೆಂಟ್, ಕಾಪಿರೈಟ್, ಟ್ರೇಡ್ ಸಿಕ್ರೆಟ್ಸ್, ಟ್ರೇಡ್​ಮಾರ್ಕ್ ಪಡೆಯಲು ಸಹಕರಿಸಲಾಗುವುದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ‌. ಜಯಕರ್ ತಿಳಿಸಿದರು.

ಬೆಂಗಳೂರು ವಿವಿಯಲ್ಲಿ ಐಪಿಆರ್ ಸೆಲ್​ ಸ್ಥಾಪನೆ
ಬೆಂಗಳೂರು ವಿವಿಯಲ್ಲಿ ಐಪಿಆರ್ ಸೆಲ್​ ಸ್ಥಾಪನೆ (ETV Bharat)
author img

By ETV Bharat Karnataka Team

Published : Jan 5, 2025, 8:58 PM IST

ಬೆಂಗಳೂರು: ಸಂಶೋಧನೆ ಮತ್ತು ಅಧ್ಯಯನವನ್ನು ಮತ್ತಷ್ಟು ಉತ್ತೇಜಿಸಲು ಬೆಂಗಳೂರು ವಿಶ್ವವಿದ್ಯಾಲಯ ಮಹತ್ವದ ಹೆಜ್ಜೆ ಇಟ್ಟಿದ್ದು, ವಿವಿಯಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಕೋಶವನ್ನು ಸ್ಥಾಪಿಸಿದೆ. ಈ ಸಂಬಂಧ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಜೊತೆ ಪರಸ್ಪರ ಒಡಂಬಡಿಕೆಗೆ ಕೂಡ ಸಹಿ ಹಾಕಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯ ತಂತ್ರಜ್ಞಾನ, ವಿಜ್ಞಾನ, ಭೂಗೋಳ, ಸಮಾಜ ವಿಜ್ಞಾನ, ವಾಣಿಜ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಸಂಶೋಧನೆಗಳನ್ನು ನಡೆಸುತ್ತಿದ್ದು, ಅನೇಕ ಸಂಶೋಧಕರು ತಮ್ಮ‌ ಆವಿಷ್ಕಾರಗಳ ಆಲೋಚನೆಗಳಿಗೆ ಪೇಟೆಂಟ್‌ಗಳನ್ನು ಪಡೆದುಕೊಂಡಿದ್ದಾರೆ. ಅಂದಾಜು 70ಕ್ಕೂ ಅಧಿಕ ಪೇಟೆಂಟ್‌ಗಳು ಕಳೆದ 5 ವರ್ಷಗಳಲ್ಲಿ ದಾಖಲಾಗಿದ್ದು, ಈ ಸಂಖ್ಯೆಯನ್ನು ಮತ್ತಷ್ಟು ವಿಸ್ತರಿಸುವ ಗುರಿಯನ್ನು ಬೆಂಗಳೂರು ವಿಶ್ವವಿದ್ಯಾಲಯ ಹೊಂದಿದೆ.

"ಬೌದ್ಧಿಕ ಆಸ್ತಿಯ ಹಕ್ಕು ಕೋಶದಡಿಯಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸಂಶೋಧಕರು, ಪ್ರಾಧ್ಯಾಪಕರಿಗೆ ತಮ್ಮ ಆವಿಷ್ಕಾರ ಸಂಶೋಧನೆಗಳನ್ನು ರಕ್ಷಿಸುವ ಕುರಿತು ಮಾರ್ಗದರ್ಶನ ನೀಡಲಾಗುವುದು. ಹೊಸ ಆವಿಷ್ಕಾರ, ಸಂಶೋಧನೆಗೆ ಐಪಿಆರ್ ಕೋಶದ ವತಿಯಿಂದ ಪೇಟೆಂಟ್, ಕಾಪಿರೈಟ್, ಟ್ರೇಡ್ ಸಿಕ್ರೆಟ್ಸ್, ಟ್ರೇಡ್​ಮಾರ್ಕ್ ಪಡೆಯಲು ಸಹಕರಿಸಲಾಗುವುದು. ಸರ್ಕಾರಿ ನವೀಕರಣ ಶುಲ್ಕವನ್ನು ಕೋಶದ ವತಿಯಿಂದಲೇ ಭರಿಸಲಾಗುವುದು. ಅಲ್ಲದೇ ಕೋಶದ ವತಿಯಿಂದ ನಿರಂತರವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಹೊಸ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಅವಶ್ಯಕವಾದ ಸೂಕ್ತ ಅವಕಾಶ ಮತ್ತು ವೇದಿಕೆ ಕಲ್ಪಿಸಲಾಗುವುದು" ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ‌.ಜಯಕರ್ ಹೇಳಿದರು.

"ಬೆಂವಿವಿಯಲ್ಲಿ ಐಪಿಆರ್ ಕೋಶ ಸ್ಥಾಪನೆಯಾಗಿರುವುದು ಐತಿಹಾಸಿಕ ಕ್ಷಣವಾಗಿದೆ. ರಾಜ್ಯದಲ್ಲಿ ಉಳಿದ ವಿಶ್ವವಿದ್ಯಾಲಯಗಳಿಗಿಂತ ಹೆಚ್ಚಿನ ಪೇಟೆಂಟ್‌ಗಳನ್ನು ಬೆಂಗಳೂರು ವಿಶ್ವವಿದ್ಯಾಲಯ ಹೊಂದಿದೆ. ಆವಿಷ್ಕಾರ, ಸಂಶೋಧನೆ ಮತ್ತು ಅಧ್ಯಯನದಿಂದ ಮಾತ್ರ ಬದಲಾವಣೆ ಸಾಧ್ಯವಿದೆ. ಆ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪೂರಕ ವಾತಾವರಣ ನಿರ್ಮಿಸಲಾಗಿದೆ. ಈ ಅವಕಾಶವನ್ನು ವಿದ್ಯಾರ್ಥಿಗಳು, ಸಂಶೋಧಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು" ಎಂದು ಸಲಹೆ ನೀಡಿದರು.

"ಬೆಂವಿವಿಯಲ್ಲಿ ನಿರಂತರ ಅಧ್ಯಯನಗಳ ನಡೆದರೂ ಕೂಡ ಪೇಟೆಂಟ್‌ಗಳನ್ನು ಪಡೆದುಕೊಳ್ಳುವಲ್ಲಿ ಅಷ್ಟಾಗಿ ಆಸಕ್ತಿ ತೋರಿಸಲಾಗಿಲ್ಲ. ಸಂಶೋಧನೆ, ಪ್ರಯೋಗ, ಅನ್ವೇಷಣೆ, ಅಧ್ಯಯನಗಳನ್ನು ರಕ್ಷಿಸದಿದ್ದರೆ ಅದರ ಶ್ರಮದ ಫಲ ಯಾರಿಗೂ ಸಿಗುವುದಿಲ್ಲ. ಆ ನಿಟ್ಟಿನಲ್ಲಿ ಐಪಿಆರ್ ಕೋಶ ಸ್ಥಾಪಿಸಲಾಗಿದ್ದು, ಭವಿಷ್ಯದಲ್ಲಿ ವಿವಿ ದೊಡ್ಡ ಮಟ್ಟದ ಕೊಡುಗೆ ನೀಡುವ ವಿಶ್ವಾಸ ಹೊಂದಲಾಗಿದೆ" ಎಂದು ಬೌದ್ಧಿಕ ಆಸ್ತಿ ಹಕ್ಕು ಕೋಶದ ಸಂಯೋಜಕ ಪ್ರೊ.ಜಿ.ಕೃಷ್ಣಮೂರ್ತಿ ಹೇಳಿದರು.

ಇದನ್ನೂ ಓದಿ: ಚಿತ್ರಸಂತೆಯಲ್ಲಿ ಮೇಳೈಸಿದ ದೃಶ್ಯಕಲಾ ವೈಭವ : ಕಲಾಸಕ್ತರ ಕಣ್ಮನ ತಣಿಸಿದ ಕಲಾಕೃತಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.