ETV Bharat / business

17 ದಿನಗಳಿಂದ ಅಮೆರಿಕ ಪ್ರವಾಸದಲ್ಲಿ ಸಿಎಂ ಸ್ಟಾಲಿನ್: ಬಂಡವಾಳ ಹೂಡಿಕೆಯ ಹಲವು ಒಪ್ಪಂದಗಳಿಗೆ ಸಹಿ - CM Stalin USA Tour

author img

By ETV Bharat Karnataka Team

Published : Sep 11, 2024, 2:04 PM IST

ತಮಿಳುನಾಡು ಸಿಎಂ ಸ್ಟಾಲಿನ್ ಕಳೆದ 17 ದಿನಗಳಿಂದ ಅಮೆರಿಕ ಪ್ರವಾಸದಲ್ಲಿದ್ದಾರೆ.

ಚಿಕಾಗೊದಲ್ಲಿ ಫೋರ್ಡ್​ ಅಧಿಕಾರಿಗಳನ್ನು ಭೇಟಿಯಾದ ಸಿಎಂ ಸ್ಟಾಲಿನ್
ಚಿಕಾಗೊದಲ್ಲಿ ಫೋರ್ಡ್​ ಅಧಿಕಾರಿಗಳನ್ನು ಭೇಟಿಯಾದ ತಮಿಳುನಾಡು ಸಿಎಂ ಸ್ಟಾಲಿನ್ (IANS)

ಚೆನ್ನೈ: ಆಗಸ್ಟ್ 29ರಿಂದ ಅಮೆರಿಕ ಪ್ರವಾಸದಲ್ಲಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಚಿಕಾಗೋದಲ್ಲಿ ಫೋರ್ಡ್ ಮೋಟಾರ್ಸ್ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ 'ಎಕ್ಸ್'​ನಲ್ಲಿ ಮಾಹಿತಿ ನೀಡಿರುವ ಅವರು, 'ಫೋರ್ಡ್​ ಮೋಟರ್ಸ್​ ತಂಡದೊಂದಿಗೆ ಉತ್ತಮವಾಗಿ ಮಾತುಕತೆ ನಡೆಯಿತು. ತಮಿಳುನಾಡಿನೊಂದಿಗೆ ಫೋರ್ಡ್​ ಹೊಂದಿರುವ ಮೂರು ದಶಕಗಳ ಸಂಬಂಧವನ್ನು ಮತ್ತೆ ಬೆಸೆಯಬಹುದಾದ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಯಿತು. ವಿಶ್ವಕ್ಕಾಗಿ ತಮಿಳುನಾಡಿನಲ್ಲಿ ಮತ್ತೊಮ್ಮೆ ಫೋರ್ಡ್​ ವಾಹನಗಳನ್ನು ತಯಾರಿಸಲಿ' ಎಂದು ಬರೆದಿದ್ದಾರೆ.

ಫೋರ್ಡ್ ತನ್ನ ವಿನ್ಯಾಸ, ಉತ್ಪಾದನೆ ಮತ್ತು ಮಾರ್ಕೆಟಿಂಗ್​​ಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 2 ಬಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು. ಆದರೆ ಭಾರತದಲ್ಲಿ ತೀವ್ರ ಸ್ಪರ್ಧೆ ಎದುರಾಗಿದ್ದರಿಂದ ಮತ್ತು ಅದರ ಜಾಗತಿಕ ಮಾರಾಟವು ಕುಸಿದಿದ್ದರಿಂದ ಸೆಪ್ಟೆಂಬರ್ 2021 ರಲ್ಲಿ ಫೋರ್ಡ್​ ಭಾರತದಿಂದ ನಿರ್ಗಮಿಸಿತ್ತು. ಆದಾಗ್ಯೂ, ಫೋರ್ಡ್ ಇವಿ ವಾಹನ ಉತ್ಪಾದನೆ ಮತ್ತು ಸಿಬಿಯು ರೂಪಗಳಲ್ಲಿ ಆಂತರಿಕ ದಹನ ಎಂಜಿನ್​​ಗಳ (ಐಸಿಇ) ಉತ್ಪಾದನೆಯೊಂದಿಗೆ ಭಾರತದ ಮಾರುಕಟ್ಟೆಗೆ ಮರುಪ್ರವೇಶಿಸಲು ಪ್ರಯತ್ನಿಸುತ್ತಿದೆ ಎಂಬ ಮಾತುಗಳು ಆಟೋಮೊಬೈಲ್ ಉದ್ಯಮದಲ್ಲಿ ಹರಿದಾಡುತ್ತಿವೆ.

ಸಿಎಂ ಸ್ಟಾಲಿನ್ ತಮ್ಮ 17 ದಿನಗಳ ಅಮೆರಿಕ ಪ್ರವಾಸದಲ್ಲಿ ಈಗಾಗಲೇ ಹಲವಾರು ಕಂಪನಿಗಳೊಂದಿಗೆ ಅನೇಕ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ತಮಿಳು ನಾಡು ಸರ್ಕಾರವು ಸ್ಯಾನ್ ಫ್ರಾನ್ಸಿಸ್ಕೋದ ಓಮಿಯಂನೊಂದಿಗೆ 400 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು ರಾಜ್ಯದಲ್ಲಿ 500 ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಸಿಎಂ ಸ್ಟಾಲಿನ್ ಗೂಗಲ್, ಆಪಲ್ ಮತ್ತು ಮೈಕ್ರೋಸಾಫ್ಟ್ ಪ್ರಧಾನ ಕಚೇರಿಗಳಿಗೆ ಭೇಟಿ ನೀಡಿ ಈ ಕಂಪನಿಗಳೊಂದಿಗೆ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

10 ಜಿ, 25 ಜಿ, 50 ಜಿ ಮತ್ತು 100 ಜಿ ಪಿಒಎನ್ (PON) ತಂತ್ರಜ್ಞಾನದ ಸಂಶೋಧನೆಯ ಹೊಸ ನೋಕಿಯಾ ಆರ್ &ಡಿ ಕೇಂದ್ರ ಸ್ಥಾಪನೆಗಾಗಿ ಮುಖ್ಯಮಂತ್ರಿ ಸ್ಟಾಲಿನ್ ನೋಕಿಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಸಿಪ್ಕಾಟ್, ಸಿರುಸೇರಿ, ಚೆಂಗಲ್ಪಟ್ಟುಗಳಲ್ಲಿ 450 ಕೋಟಿ ರೂ.ಗಳ ಹೂಡಿಕೆಯಲ್ಲಿ ಸ್ಥಾಪನೆಯಾಗಲಿರುವ ಈ ಕೇಂದ್ರ 100 ಉದ್ಯೋಗಗಳನ್ನು ಸೃಷ್ಟಿಸಲಿದೆ. ಕೃತಕ ಬುದ್ಧಿಮತ್ತೆಯ ಸುಧಾರಿತ ಅಭಿವೃದ್ಧಿ ಕೇಂದ್ರಕ್ಕಾಗಿ ಅವರು ಪೇಪಾಲ್​ ಗುಂಪಿನೊಂದಿಗೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಚೆನ್ನೈನಲ್ಲಿ ಸ್ಥಾಪನೆಯಾಗಲಿರುವ ಈ ಕೇಂದ್ರವು 1000 ಉದ್ಯೋಗಗಳನ್ನು ಸೃಷ್ಟಿಸಲಿದೆ.

ಇದನ್ನೂ ಓದಿ: 15 ತಿಂಗಳ ಕನಿಷ್ಠ ಮಟ್ಟಕ್ಕಿಳಿದ ವಿದ್ಯುತ್ ಬೇಡಿಕೆ: ಆಗಸ್ಟ್​ನಲ್ಲಿ ಶೇ 5.3ರಷ್ಟು ಕುಸಿತ - POWER DEMAND IN INDIA

ETV Bharat Logo

Copyright © 2024 Ushodaya Enterprises Pvt. Ltd., All Rights Reserved.