ETV Bharat / business

ಮೊಬೈಲ್ ಪ್ರಿಯರಿಗೆ ಗುಡ್​ ನ್ಯೂಸ್: ಮೊಬೈಲ್ ಫೋನ್, ಬಿಡಿಭಾಗಗಳ ಮೇಲಿನ ಕಸ್ಟಮ್ಸ್ ಸುಂಕ ಶೇ.15ಕ್ಕೆ ಇಳಿಕೆ - centre cuts customs duty - CENTRE CUTS CUSTOMS DUTY

ಗ್ರಾಹಕರ ಹಿತದೃಷ್ಟಿಯಿಂದ, ನಾನು ಈಗ ಮೊಬೈಲ್ ಫೋನ್‌ಗಳು, ಮೊಬೈಲ್ ಪಿಸಿಬಿಎ ಮತ್ತು ಮೊಬೈಲ್ ಚಾರ್ಜರ್‌ಗಳ ಮೇಲಿನ ಬಿಸಿಡಿಯನ್ನು ಶೇ.15ಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್​​​ನಲ್ಲಿ ಘೋಷಿಸಿದ್ದಾರೆ.

ಮೊಬೈಲ್ ಫೋನ್, ಬಿಡಿಭಾಗಗಳ ಮೇಲಿನ ಕಸ್ಟಮ್ಸ್ ಸುಂಕ ಶೇ.15ಕ್ಕೆ ಇಳಿಕೆ
ಮೊಬೈಲ್ ಫೋನ್, ಬಿಡಿಭಾಗಗಳ ಮೇಲಿನ ಕಸ್ಟಮ್ಸ್ ಸುಂಕ ಶೇ.15ಕ್ಕೆ ಇಳಿಕೆ (IANS)
author img

By ETV Bharat Karnataka Team

Published : Jul 23, 2024, 3:35 PM IST

ನವದೆಹಲಿ: ಮೊಬೈಲ್ ಫೋನ್, ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಅಸೆಂಬ್ಲಿ (ಪಿಸಿಬಿಎ) ಮತ್ತು ಮೊಬೈಲ್ ಚಾರ್ಜರ್‌ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು (ಬಿಸಿಡಿ) ಪ್ರಸ್ತುತ ಇರುವ ಶೇ.20 ರಿಂದ ಶೇ.15ಕ್ಕೆ ಇಳಿಸುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಪ್ರಕಟಿಸಿದೆ. ಕಳೆದ ಆರು ವರ್ಷಗಳಲ್ಲಿ ದೇಶೀಯ ಉತ್ಪಾದನೆಯಲ್ಲಿ ಮೂರು ಪಟ್ಟು ಹೆಚ್ಚಳ ಮತ್ತು ಮೊಬೈಲ್ ಫೋನ್‌ಗಳ ರಫ್ತಿನಲ್ಲಿ ಸುಮಾರು 100 ಪಟ್ಟು ಹೆಚ್ಚಳದೊಂದಿಗೆ, ಭಾರತೀಯ ಮೊಬೈಲ್ ಫೋನ್ ಉದ್ಯಮವು ಗಮರ್ನಾಹವಾಗಿ ಬೆಳೆದಿದೆ.

"ಗ್ರಾಹಕರ ಹಿತದೃಷ್ಟಿಯಿಂದ, ನಾನು ಈಗ ಮೊಬೈಲ್ ಫೋನ್‌ಗಳು, ಮೊಬೈಲ್ ಪಿಸಿಬಿಎ ಮತ್ತು ಮೊಬೈಲ್ ಚಾರ್ಜರ್‌ಗಳ ಮೇಲಿನ ಬಿಸಿಡಿಯನ್ನು ಶೇ.15ಕ್ಕೆ ಇಳಿಸಲು ನಿರ್ಧರಿಸಲಾಗಿದೆ" ಎಂದು ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್​​ನಲ್ಲಿ ಪ್ರಕಟಿಸಿದ್ದಾರೆ.

ಭಾರತದ ಎಲೆಕ್ಟ್ರಾನಿಕ್ಸ್ ಕ್ಷೇತ್ರವು ತ್ವರಿತ ಬೆಳವಣಿಗೆಯನ್ನು ಕಂಡಿದೆ, 2023ರ ಹಣಕಾಸು ವರ್ಷದಲ್ಲಿ ಇದು 155 ಬಿಲಿಯನ್ ಡಾಲರ್ ತಲುಪಿದೆ. ಉತ್ಪಾದನೆಯು 2017ರ ಹಣಕಾಸು ವರ್ಷದಲ್ಲಿ 48 ಬಿಲಿಯನ್ ಡಾಲರ್ ನಿಂದ 2023ರ ಹಣಕಾಸು ವರ್ಷದಲ್ಲಿ 101 ಬಿಲಿಯನ್ ಡಾಲರ್​ಗೆ ದ್ವಿಗುಣಗೊಂಡಿದೆ. ಇದರಲ್ಲಿ ಮೊಬೈಲ್ ಫೋನ್​ಗಳು ಹೆಚ್ಚಿನ ಪಾಲು ಹೊಂದಿದೆ. ಇದು ಈಗ ಒಟ್ಟು ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಶೇ.43 ರಷ್ಟಿದೆ.

ಕೇಂದ್ರ ಬಿಸಿಡಿ ಇಳಿಕೆ ಮಾಡಿದ್ದೇಕೆ?: ಇಂಡಿಯಾ ಸೆಲ್ಯುಲರ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ​​(ICEA) ಅಧ್ಯಕ್ಷ ಪಂಕಜ್ ಮೊಹಿಂದ್ರೂ ಅವರು, ಈ ಮಹತ್ವದ ಬಜೆಟ್‌ಗಾಗಿ ಕೇಂದ್ರ ಸರ್ಕಾರವನ್ನು ಅಭಿನಂದಿಸಿದ್ದಾರೆ. "ಉತ್ಪಾದನೆ ಮತ್ತು ರಫ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವತ್ತ ಗಮನ ಹರಿಸಿರುವ ಬಜೆಟ್​ ಉದ್ದೇಶ ಮತ್ತು ನಿರ್ಧಾರದಿಂದ ನಾವು ಪ್ರಭಾವಿತರಾಗಿದ್ದೇವೆ. ಮೊಬೈಲ್ ಫೋನ್ ಉತ್ಪಾದನೆ ಮತ್ತು ರಫ್ತಿನ ಬೆಳವಣಿಗೆಯನ್ನು ಹಣಕಾಸು ಸಚಿವರು ಒಪ್ಪಿಕೊಂಡಿದ್ದಾರೆ" ಎಂದು ಮೊಹಿಂದ್ರೂ ತಿಳಿಸಿದ್ದಾರೆ.

ಮೊಬೈಲ್ ಫೋನ್​ಗಳು ಅದರ ಪಿಸಿಬಿಎ ಮತ್ತು ಚಾರ್ಜರ್ / ಅಡಾಪ್ಟರ್ ಮೇಲಿನ ಬಿಸಿಡಿಯನ್ನು ಶೇ.15ಕ್ಕೆ ಇಳಿಸುವಂತೆ ಉದ್ಯಮವು ಮನವಿ ಮಾಡಿತ್ತು, ಈ ಮನವಿಯನ್ನು ಸರ್ಕಾರ ಪುರಸ್ಕರಿಸಿದೆ.

ಉದ್ಯಮದ ಪ್ರತಿಕ್ರಿಯೆ ಹೀಗಿದೆ; ಈ ಘೋಷಣೆಗಳು ಉತ್ಪಾದನೆ, ರಫ್ತು ಮತ್ತು ನಮ್ಮ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಸುಂಕ ಸ್ಲ್ಯಾಬ್ ತರ್ಕಬದ್ಧಗೊಳಿಸುವ ನಮ್ಮ ಪ್ರಸ್ತಾಪವನ್ನು ಸಹ ಅಂಗೀಕರಿಸಲಾಗಿದೆ ಮತ್ತು ಮುಂದಿನ ಆರು ತಿಂಗಳಲ್ಲಿ ಇದನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದ್ದಾರೆ, ಇದು ಉದ್ಯಮ ಮತ್ತು ಅದರ ಸ್ಪರ್ಧಾತ್ಮಕತೆಗೆ ಮತ್ತಷ್ಟು ಧೈರ್ಯ ತುಂಬುತ್ತದೆ " ಎಂದು ಮೊಹಿಂದ್ರೂ ವಿವರಿಸಿದ್ದಾರೆ. ಭಾರತವು ಸ್ಮಾರ್ಟ್‌ಫೋನ್ ಆಮದುಗಳ ಮೇಲಿನ ತನ್ನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ, ಈಗ ದೇಶೀಯವಾಗಿ ಶೇ. 99 ರಷ್ಟನ್ನು ಉತ್ಪಾದಿಸುತ್ತಿದೆ.

ಸ್ಯಾಮ್ಕೋ ಸೆಕ್ಯುರಿಟೀಸ್‌ನ ಸಂಶೋಧನಾ ವಿಶ್ಲೇಷಕ ಸಿದ್ಧೇಶ್ ಮೆಹ್ತಾ ಪ್ರಕಾರ, ಈ ಬದಲಾವಣೆಯು ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಭಾರತೀಯ ಉತ್ಪಾದಕರನ್ನು ಪ್ರೋತ್ಸಾಹಿಸುತ್ತದೆ. ಡಿಕ್ಸನ್ ಟೆಕ್ನಾಲಜೀಸ್ ಸರ್ಕಾರದ ಈ ಕ್ರಮದಿಂದ ಹೆಚ್ಚು ಪ್ರಯೋಜನ ಪಡೆಯುತ್ತದೆ. ಕಂಪನಿಯು ತನ್ನ ಮಾರುಕಟ್ಟೆ ಸ್ಥಾನವನ್ನು ಬಲಪಡಿಸಲು ಮತ್ತು ಮತ್ತಷ್ಟು ಬೆಳೆಯಲು ಅನುವು ಮಾಡಿಕೊಡುತ್ತದೆ" ಎಂದು ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಕೇಂದ್ರ ಬಜೆಟ್​ 2024: ಯಾವ ವಸ್ತು ಏರಿಕೆ, ಯಾವುದು ಇಳಿಕೆ- ತಿಳಿಯಿರಿ - Union Budget 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.