ETV Bharat / business

ಬ್ಯಾಂಕ್​ ವಹಿವಾಟಿನಲ್ಲಿ ಮಹತ್ವದ ಬದಲಾವಣೆ: ಶೀಘ್ರವೇ ಯುಪಿಐ ಮೂಲಕವೂ ಹಣ ಠೇವಣಿಗೆ ಅವಕಾಶ - Cash Deposit Through UPI - CASH DEPOSIT THROUGH UPI

ಬ್ಯಾಂಕ್​ ವಹಿವಾಟಿನಲ್ಲಿ ಮಹತ್ವದ ಬದಲಾವಣೆ ಪ್ರಕಟಿಸಿರುವ ಆರ್​ಬಿಐ, ಶೀಘ್ರದಲ್ಲೇ ಬ್ಯಾಂಕ್​ಗಳಲ್ಲಿ ಯುಪಿಐ ಮೂಲಕವೂ ಹಣ ಠೇವಣಿ ಮಾಡುವ ಸೌಲಭ್ಯ ಕಲ್ಪಿಸಲು ನಿರ್ಧರಿಸಿದೆ.

Cash deposit facility in banks through use of UPI soon: RBI
ಶೀಘ್ರವೇ ಯುಪಿಐ ಮೂಲಕವೂ ಹಣ ಠೇವಣಿಗೆ ಅವಕಾಶ
author img

By PTI

Published : Apr 5, 2024, 5:10 PM IST

ಮುಂಬೈ(ಮಹಾರಾಷ್ಟ್ರ): ಬ್ಯಾಂಕ್​ಗಳಲ್ಲಿ ಹಣದ ವಹಿವಾಟಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್​​ ಬ್ಯಾಂಕ್​ (ಆರ್​ಬಿಐ) ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಶೀಘ್ರದಲ್ಲೇ ಬ್ಯಾಂಕ್​ಗಳಲ್ಲಿ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮೂಲಕವೂ ಹಣ ಠೇವಣಿ ಮಾಡಲು ಸೌಲಭ್ಯ ಕಲ್ಪಿಸಲಿದೆ. ಅಲ್ಲದೇ, ಮೂರನೇ ವ್ಯಕ್ತಿಯ ಯುಪಿಐ ಅಪ್ಲಿಕೇಶನ್‌ಗಳ ಮೂಲಕ ಪ್ರಿಪೇಯ್ಡ್ ಪೇಮೆಂಟ್ ಇನ್‌ಸ್ಟ್ರುಮೆಂಟ್ಸ್ (ಪಿಪಿಐ) ಲಿಂಕ್ ಮಾಡಲು ಸಹ ದೇಶದ ಕೇಂದ್ರೀಯ ಬ್ಯಾಂಕ್​ ನಿರ್ಧರಿಸಿದೆ.

ಪ್ರಸ್ತುತ ಆರ್ಥಿಕ ವರ್ಷದ ಮೊದಲ ದ್ವೈಮಾಸಿಕ ವಿತ್ತೀಯ ನೀತಿಯನ್ನು ಇಂದು ಪ್ರಕಟಿಸಿದ ಆರ್​ಬಿಐ ಗವರ್ನರ್​​ ಶಕ್ತಿಕಾಂತ್​ ದಾಸ್​, ''ಬ್ಯಾಂಕ್​​ ಶಾಖೆಗಳಲ್ಲಿ ನಗದು ನಿರ್ವಹಣೆಯ ಒತ್ತಡ ಕಡಿಮೆ ಮಾಡಲು ಮತ್ತು ಗ್ರಾಹಕರಿಗೆ ಅನುಕೂಲ ಹೆಚ್ಚಿಸುವ ನಿಟ್ಟಿನಲ್ಲಿ ಹಣ ಠೇವಣಿ ಮಷಿನ್​ಗಳನ್ನು (Cash Deposit Machines) ಇರಿಸಲಾಗುವುದು'' ಎಂದು ತಿಳಿಸಿದರು.

''ಸದ್ಯ ಬ್ಯಾಂಕ್​ನಲ್ಲಿ ಡೆಬಿಟ್​ ಕಾರ್ಡ್​​ ಬಳಕೆ ಮೂಲಕ ಮಾತ್ರ ಹಣ ಠೇವಣಿ ಮಾಡುವ ವ್ಯವಸ್ಥೆ ಇದೆ. ಯುಪಿಐ ವ್ಯವಸ್ಥೆಗೆ ಹೆಚ್ಚಿನ ಜನಪ್ರಿಯತೆ ಹಾಗೂ ಅದರ ಸ್ವೀಕಾರವನ್ನು ಹೆಚ್ಚಿಸುವುದರ ಜತೆಗೆ ಎಟಿಎಂಗಳಲ್ಲಿ ಯುಪಿಐ ಲಭ್ಯತೆಯಿಂದ ಕಾರ್ಡ್‌ರಹಿತವಾಗಿ ಹಣ ವಿತ್​ಡ್ರಾ ಪ್ರಯೋಜನಗಳನ್ನು ಗಮನಿಸಿ, ಈಗ ಯುಪಿಐ ಮೂಲಕ ಹಣ ಠೇವಣಿ ಇಡುವ ವ್ಯವಸ್ಥೆಯನ್ನು ಕಲ್ಪಿಸುವ ಪ್ರಸ್ತಾಪವನ್ನು ಕೈಗೊಳ್ಳಲಾಗಿದೆ'' ಎಂದು ಅವರು ವಿವರಿಸಿದರು.

ಇದರ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಆರ್​ಬಿಐ ಹೇಳಿದೆ. ಇದೇ ವೇಳೆ, ಬಳಕೆದಾರರಿಗೆ ಹೆಚ್ಚಿನ ಹೊಂದಾಣಿಕೆಯನ್ನು ಒದಗಿಸುವ ನಿಟ್ಟಿನಲ್ಲಿ ಮೂರನೇ ವ್ಯಕ್ತಿಯ ಯುಪಿಐ ಅಪ್ಲಿಕೇಶನ್‌ಗಳ ಮೂಲಕ ಪಿಪಿಐಗಳನ್ನು ಲಿಂಕ್ ಮಾಡಲು ಅನುಮತಿ ನೀಡಲು ಆರ್​ಬಿಐ ಮುಂದಾಗಿದೆ. ಪ್ರಸ್ತುತ ಪಿಪಿಐ ವಿತರಕರು ಒದಗಿಸಿದ ಅಪ್ಲಿಕೇಶನ್​ ಅನ್ನು ಬಳಸಿಕೊಂಡು ಮಾತ್ರವೇ ಯುಪಿಐ ವಹಿವಾಟುಗಳನ್ನು ಮಾಡಲು ಪಿಪಿಐಗಳನ್ನು ಬಳಸಬಹುದಾಗಿದೆ.

ಈಗ ಪಿಪಿಐ ಗ್ರಾಹಕರಿಗೆ ಮತ್ತಷ್ಟು ಒಗ್ಗಿಕೊಳ್ಳುವ ಸಲುವಾಗಿ ಮೂರನೇ ವ್ಯಕ್ತಿಯ ಯುಪಿಐ ಅಪ್ಲಿಕೇಶನ್‌ಗಳ ಮೂಲಕ ಪಿಪಿಐಗಳನ್ನು ಲಿಂಕ್ ಮಾಡಲು ಅನುಮತಿ ನೀಡಲು ಪ್ರಸ್ತಾಪಿಸಲಾಗಿದೆ. ಇದರಿಂದ ಪಿಪಿಐ ಹೊಂದಿರುವವರು ಯುಪಿಐ ಪಾವತಿಗಳನ್ನು ಬ್ಯಾಂಕ್​ ಖಾತೆದಾರರಂತೆಯೇ ಮಾಡಬಹುದು. ಈ ಬಗ್ಗೆಯೂ ಸದ್ಯದಲ್ಲೇ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ.

ಇದನ್ನೂ ಓದಿ: ರೆಪೋ ದರದಲ್ಲಿ ಈ ಬಾರಿಯೂ ಯಾವುದೇ ಬದಲಾವಣೆ ಇಲ್ಲ: ಜಿಡಿಪಿ ಶೇ 7 ರಷ್ಟಿರಲಿದೆ ಎಂದ ಆರ್​​ಬಿಐ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.