ಭಾರತದಲ್ಲಿ ದಸರಾ ನಂತರ, ದೀಪಾವಳಿಯಲ್ಲಿ ಖರೀದಿ ಭರಾಟೆ ಜೋರಾಗಿರುತ್ತದೆ. ಯಾವುದೇ ಶುಭ ಕಾರ್ಯವನ್ನು ಆರಂಭಿಸಬೇಕು ಎಂದರೆ ಜನ ದಸರಾ - ದೀಪಾವಳಿಗೆ ಕಾಯುತ್ತಿರುತ್ತಾರೆ. ಈ ಸಂದರ್ಭದಲ್ಲಿ ಸಹಜವಾಗಿಯೇ ಕಾರು ಮಾರಾಟ ದೊಡ್ಡಮಟ್ಟದಲ್ಲಿರುತ್ತದೆ. ಅದಕ್ಕಾಗಿಯೇ ಎಲ್ಲಾ ಪ್ರಮುಖ ಆಟೋಮೊಬೈಲ್ ಕಂಪನಿಗಳು ಭಾರಿ ರಿಯಾಯಿತಿ ಮತ್ತು ಕೊಡುಗೆಗಳನ್ನು ಘೋಷಿಸುತ್ತವೆ. ಬ್ಯಾಂಕ್‌ಗಳು ವಾಹನ ಹಣಕಾಸಿನ ಮೇಲೆ ಉತ್ತಮ ಡೀಲ್‌ಗಳು ಮತ್ತು ಪ್ರಚಾರದ ಪ್ಯಾಕೇಜ್‌ಗಳನ್ನೂ ಸಹ ನೀಡುತ್ತವೆ.
ಗ್ರಾಹಕರನ್ನು ಸೆಳೆಯಲು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಇದಲ್ಲದೇ ಪೂರ್ವಪಾವತಿ ದಂಡಗಳನ್ನು ರದ್ದುಗೊಳಿಸುವುದು ಮತ್ತು ದಾಖಲಾತಿ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ. ಇಷ್ಟೇ ಅಲ್ಲ ಕ್ಯಾಶ್ ಬ್ಯಾಕ್ ಪ್ರೋತ್ಸಾಹಕಗಳನ್ನು ಸಹ ನೀಡಲಾಗುತ್ತದೆ. ಕೆಲವು ಆಟೋಮೊಬೈಲ್ ಕಂಪನಿಗಳು ತಮ್ಮ ಗ್ರಾಹಕರಿಗೆ ತಮ್ಮ ಆಯ್ಕೆಯ ಬ್ಯಾಂಕ್‌ನಿಂದ ಕಾರು ಸಾಲವನ್ನು ತೆಗೆದುಕೊಳ್ಳುವ ಸೌಲಭ್ಯವನ್ನು ಸಹ ಒದಗಿಸುತ್ತವೆ. ಇದು ಕಾರು ಖರೀದಿದಾರರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಕಾರುಗಳ ಮೇಲಿನ ಸಾಲಗಳು: ಕಾರ್ ಲೋನ್‌ಗಳ ಮೇಲಿನ ಬಡ್ಡಿ ದರಗಳು ಬ್ಯಾಂಕ್ ನಿಂದ ಬ್ಯಾಂಕ್ಗೆ ವ್ಯತ್ಯಾಸವಿದೆ. ಕನಿಷ್ಠ 8.70 ಪ್ರತಿಶತದಿಂದ 10 ಪ್ರತಿಶತದವರೆಗೆ ವಿವಿಧ ಬ್ಯಾಂಕ್‌ಗಳು ಬಡ್ಡಿ ವಿಧಿಸುತ್ತವೆ. ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ, ಈ ಬಡ್ಡಿದರಗಳು ಹೆಚ್ಚಾಗುವ ಸಾಧ್ಯತೆಯಿದೆ. ಕೆಲವು ಬ್ಯಾಂಕುಗಳು ವಾಹನದ ಆನ್ - ರೋಡ್ ಬೆಲೆಯ 100 ಪ್ರತಿಶತದವರೆಗೆ ಹಣಕಾಸು ಒದಗಿಸುತ್ತವೆ. ಇನ್ನು ಕೆಲವು ಬ್ಯಾಂಕ್‌ಗಳು ಈ ಕಾರು ಸಾಲವನ್ನು ತೀರಿಸಲು 8 ವರ್ಷಗಳವರೆಗೆ ಕಾಲಾವಕಾಶ ನೀಡುತ್ತಿವೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ನೀವು ಈ ಕಾರ್ ಲೋನ್‌ಗಳನ್ನು ನೇರವಾಗಿ ಪಡೆಯಬಹುದು. ಇಲ್ಲವೇ ನೇರವಾಗಿ ಬ್ಯಾಂಕ್ ಗೆ ಹೋಗಿಯೂ ತೆಗೆದುಕೊಳ್ಳಬಹುದು.
ಕಾರ್ ಲೋನ್ ಯಾರಿಗೆಲ್ಲ ನೀಡಲಾಗುತ್ತದೆ?; ಕಾರು ಸಾಲ ಪಡೆಯಲು CIBIL ಸ್ಕೋರ್ ಉತ್ತಮವಾಗಿರಬೇಕು. ಅಲ್ಲದೇ ಆದಾಯದ ಮೂಲಗಳು ಮತ್ತು ಸಾಲವನ್ನು ಮರುಪಾವತಿ ಮಾಡುವ ಸಾಮರ್ಥ್ಯ ಇರಬೇಕು. ಬ್ಯಾಂಕ್‌ಗಳು ನಿಮ್ಮ ಹಿಂದಿನ ಸಾಲಗಳು, ಮರುಪಾವತಿ ಇತಿಹಾಸ ಮತ್ತು ಕ್ರೆಡಿಟ್ ವಿಚಾರಣೆಗಳನ್ನು ಸಹ ನೋಡುತ್ತದೆ. ಎಲ್ಲವೂ ಸರಿಯಾಗಿ ನಡೆದರೆ ಬ್ಯಾಂಕ್‌ಗಳು ನಿಮಗೆ ಕಡಿಮೆ ಬಡ್ಡಿದರದಲ್ಲಿ ಕಾರು ಸಾಲವನ್ನು ನೀಡುತ್ತವೆ. ಸಾಮಾನ್ಯವಾಗಿ 750 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಇದ್ದರೆ, ನಿಮಗೆ ಕಾರ್ ಲೋನ್ ಸುಲಭವಾಗಿ ದೊರೆಯುತ್ತದೆ. ಅಷ್ಟೇ ಏಕೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಮಂಜೂರು ಮಾಡಲಾಗುತ್ತದೆ.
ಕಾರು ಸಾಲದ ಮೇಲಿನ ಬಡ್ಡಿ ದರ - ಯಾವ ಬ್ಯಾಂಕ್‌ನಲ್ಲಿ ಎಷ್ಟು?: ಒಬ್ಬ ವ್ಯಕ್ತಿಯು ಕಾರು ಸಾಲದ ಅಡಿ 1 ಲಕ್ಷ ರೂ. ತೆಗೆದುಕೊಳ್ಳುತ್ತಾನೆ ಎಂದು ಭಾವಿಸೋಣ. ಅವರು 7 ವರ್ಷಗಳಲ್ಲಿ ಆ ಸಾಲದ ಮೊತ್ತವನ್ನು ಪಾವತಿಸಲು ನಿರ್ಧರಿಸಿದರೆ, ಬ್ಯಾಂಕ್‌ನಲ್ಲಿ ವಿಧಿಸಲಾಗುವ ಕನಿಷ್ಠ ಮಾಸಿಕ ಬಡ್ಡಿ, ಮಾಸಿಕ EMI - ಎಷ್ಟು ಎಂದು ಈ ಕೋಷ್ಟಕದಲ್ಲಿ ನೋಡೋಣ.
ಬ್ಯಾಂಕ್ | ಕನಿಷ್ಠ ಬಡ್ಡಿ ದರ (ವಾರ್ಷಿಕ) | ಇಎಂಐ |
ಎಸ್ಬಿಐ | 9.05% | ರೂ.1,611 |
ಇಂಡಿಯನ್ ಓವರ್ಸಿಸ್ ಬ್ಯಾಂಕ್ | 8.85% | ರೂ.1,601 |
ಕೆನರಾ ಬ್ಯಾಂಕ್ | 8.70% | ರೂ.1,594 |
ಹೆಚ್ಡಿಎಫ್ಸಿ | 9.40% | ರೂ.1,629 |
ಐಸಿಐಸಿಐ | 9.10% | ರೂ.1,614 |
ಕರೂರ್ ವೈಶ್ಯ ಬ್ಯಾಂಕ್ | 9.60% | ರೂ.1,640 |
ಸೌತ್ ಇಂಡಿಯನ್ ಬ್ಯಾಂಕ್ | 8.75% | ರೂ.1,596 |
ಕರ್ನಾಟಕ ಬ್ಯಾಂಕ್ | 8.88% | ರೂ.1,611 |
ಫೆಡರಲ್ ಬ್ಯಾಂಕ್ ಆಫ್ ಇಂಡಿಯಾ | 8.85% | ರೂ.1,601 |
ಯೂನಿಯನ್ ಬ್ಯಾಂಕ್ | 8.70% | ರೂ.1,594 |
ಎಕ್ಸಿಸ್ ಬ್ಯಾಂಕ್ | 9.30% | ರೂ.1,624 |
ಬ್ಯಾಂಕ್ ಆಫ್ ಇಂಡಿಯಾ | 8.85% | ರೂ.1,601 |
ಜಮ್ಮು ಕಾಶ್ಮೀರ ಬ್ಯಾಂಕ್ | RLLR+ 0.75% (ಪ್ಲೋಟಿಂಗ್ ದರ) RLLR+ 0.25% (ಫಿಕ್ಸಡ್ ರೇಟ್) | |
ಐಡಿಬಿಐ ಬ್ಯಾಂಕ್ | 8.85% (ಪ್ಲೋಟಿಂಗ್ ದರ) 8.80% (ಫಿಕ್ಸಡ್ ರೇಟ್) | |
ಪಂಜಾಬ್ ನ್ಯಾಷನಲ್ ಬ್ಯಾಂಕ್ | 8.75% (ಪ್ಲೋಟಿಂಗ್ ದರ) 9.75% (ಫಿಕ್ಸಡ್ ರೇಟ್) | ರೂ.1,596 ರೂ.1,647 |
ಬ್ಯಾಂಕ್ ಆಫ್ ಬರೋಡಾ | 8.95% (ಪ್ಲೋಟಿಂಗ್ ದರ) 9.40% (ಫಿಕ್ಸಡ್ ರೇಟ್) | ರೂ.1,629 ರೂ.1,629 |
ಗಮನಿಸಿ: ಈ ಕೋಷ್ಟಕದಲ್ಲಿ ಕನಿಷ್ಠ ಬಡ್ಡಿ ದರಗಳು ಮತ್ತು ಕನಿಷ್ಠ EMI ಮೊತ್ತಗಳನ್ನು ಮಾತ್ರ ನೀಡಲಾಗಿದೆ. ನಿಮ್ಮ ಕ್ರೆಡಿಟ್ ಸ್ಕೋರ್‌ಗೆ ಅನುಗುಣವಾಗಿ ನಿಮಗೆ ವಿಧಿಸಲಾಗುವ ಬಡ್ಡಿ ದರಗಳು ಬದಲಾಗುತ್ತವೆ. ನೀವು ಇದನ್ನು ಗಮನಿಸಬೇಕಾಗುತ್ತದೆ.