ETV Bharat / business

ಎಲೆಕ್ಟ್ರಿಕ್​​ ಕಾರುಗಳ ವಿಭಾಗದಲ್ಲಿ ಟಾಟಾ ಹೊಸ ಮೈಲಿಗಲ್ಲು: 50 ಸಾವಿರ ಯೂನಿಟ್​ ಮಾರಾಟವಾದ Tata Tiago EV - TATA TIAGO EV MILESTONE

Tata Tiago EV: ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಟಾಟಾ ಟಿಯಾಗೊ ಇವಿ ದೊಡ್ಡ ಮೈಲಿಗಲ್ಲು ಸಾಧಿಸಿದೆ. 50,000 ಯುನಿಟ್‌ಗಳ ಮಾರಾಟದ ಅಂಕಿ ಅಂಶವನ್ನು ಮುಟ್ಟಿದೆ.

Tata Tiago EV Surpasses 50,000 Units Delivery Milestone
ಎಲೆಕ್ಟ್ರಿಕ್​​ ಕಾರುಗಳ ವಿಭಾಗದಲ್ಲಿ ಟಾಟಾ ಹೊಸ ಮೈಲಿಗಲ್ಲು: 50 ಸಾವಿರ ಯೂನಿಟ್​ ಮಾರಾಟವಾದ Tata Tiago EV (ಕೃಪೆ Tata Motors)
author img

By ETV Bharat Karnataka Team

Published : Oct 26, 2024, 2:27 PM IST

ಹೈದರಾಬಾದ್: ಸ್ವದೇಶಿ ಕಾರು ತಯಾರಕ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಕಂಪನಿಯಾಗಿದೆ. ಟಾಟಾ ಮೋಟಾರ್ಸ್ ತನ್ನ ಪೋರ್ಟ್​​ ಪೋಲಿಯೋದಲ್ಲಿ ಅನೇಕ ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿದೆ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಗ್ರಾಹಕರು ಅವುಗಳಿಗೆ ಫಿದಾ ಕೂಡಾ ಆಗುತ್ತಿದ್ದಾರೆ. ಇವುಗಳಲ್ಲಿ ಕಂಪನಿಯ EV ಹ್ಯಾಚ್‌ಬ್ಯಾಕ್ ಟಾಟಾ ಟಿಯಾಗೊ EV ಸಖತ್​ ಸದ್ದು ಮಾಡುತ್ತಿದೆ.

ಟಾಟಾ ಟಿಯಾಗೊ ಆರಂಭಿಕ EV ಕೊಡುಗೆಗಳಲ್ಲಿ ಒಂದಾಗಿದೆ. ಅದು ಈಗ ಹೊಸ ಮೈಲಿಗಲ್ಲೊಂದನ್ನು ಸಾಧಿಸಿದೆ. ಟಾಟಾ ಮೋಟಾರ್ಸ್‌ನಿಂದ ಪಡೆದ ಮಾಹಿತಿಯ ಪ್ರಕಾರ, ಈ ಎಲೆಕ್ಟ್ರಿಕ್ ಕಾರು ಪ್ರಾರಂಭವಾದಾಗಿನಿಂದ 50,000 ಯುನಿಟ್‌ಗಳ ಮಾರಾಟವಾಗಿದೆ.

ಸೆಪ್ಟೆಂಬರ್ 2022 ರಲ್ಲಿ ಈ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಟಾಟಾ ಮೋಟಾರ್ಸ್‌ನಿಂದ ಒಟ್ಟು ಐದು ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅದರಲ್ಲಿ ಈ ಹ್ಯಾಚ್‌ಬ್ಯಾಕ್ ಕೂಡಾ ಒಂದಾಗಿದೆ. ಟಾಟಾ ಟಿಯಾಗೊ EV ಯ ಹೊರತಾಗಿ, ಕಂಪನಿಯ ಪೋರ್ಟ್‌ಫೋಲಿಯೊದಲ್ಲಿ ಟಾಟಾ ನೆಕ್ಸಾನ್ ಇವಿ, ಟಾಟಾ ಪಂಚ್ ಇವಿ, ಟಾಟಾ ಟಿಗೊರ್ ಇವಿ, ಟಾಟಾ ಎಕ್ಸ್-ಪ್ರೆಸ್ ಟಿ ಇವಿ ಮತ್ತು ಹೊಸ ಟಾಟಾ ಕರ್ವ್ವಿ ಇವಿ ಕೂಡಾ ಈಗ ಸೇರ್ಪಡೆಯಾಗಿದೆ.

ಯಾವ ಯಾವ ಬಣ್ಣದಲ್ಲಿ ಕಾರುಗಳು ಲಭ್ಯ?: ಟಾಟಾ ಮೋಟಾರ್ಸ್ ಮುಂದಿನ ವರ್ಷ ಈ ಪಟ್ಟಿಯಲ್ಲಿ ಟಾಟಾ ಹ್ಯಾರಿಯರ್ ಇವಿ, ಸಫಾರಿ ಇವಿ, ಅವಿನ್ಯಾ ಮತ್ತು ಟಾಟಾ ಸಿಯೆರಾ ಇವಿಗಳನ್ನು ಸೇರ್ಪಡೆ ಮಾಡುವ ಸಾಧ್ಯತೆಗಳಿವೆ ಎಂಬ ಮಾಹಿತಿ ಸಹ ಇದೀಗ ಹೊರ ಬಿದ್ದಿದೆ. ಟಾಟಾ ಟಿಯಾಗೊ EV ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ, ಅವುಗಳೆಂದರೆ XE, XT, XZ+ ಮತ್ತು XZ+ ಲಕ್ಸ್. ಈ ಕಾರನ್ನು ಟೀಲ್ ಬ್ಲೂ, ಡೇಟೋನಾ ಗ್ರೇ, ಟ್ರಾಪಿಕಲ್ ಮಿಸ್ಟ್, ಪ್ರಿಸ್ಟಿನ್ ವೈಟ್ ಮತ್ತು ಮಿಡ್‌ನೈಟ್ ಪ್ಲಮ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಪವರ್‌ಟ್ರೇನ್ ಮತ್ತು ಶ್ರೇಣಿ: 19.2kWh ಮತ್ತು 24kWh ನ ಎರಡು ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯು, ಟಾಟಾ ಟಿಯಾಗೊ EV ಯೊಂದಿಗೆ ಲಭ್ಯವಿದೆ. ಈ ಬ್ಯಾಟರಿ ಪ್ಯಾಕ್‌ಗಳಿಗೆ ಸಂಬಂಧಿಸಿದಂತೆ ಅವುಗಳನ್ನು ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡುವ ಮೂಲಕ 275 ಕಿಮೀ ವರೆಗೆ ಯಾವುದೇ ಸಮಸ್ಯೆ ಇಲ್ಲದೇ ತೆರಳಬಹುದು ಎಂದು ಕಂಪನಿ ಹೇಳಿಕೊಂಡಿದೆ. ಬೆಲೆಯ ಬಗ್ಗೆ ಮಾತನಾಡುವುದಾದರೆ ಈ ಕಾರಿನ ಆರಂಭಿಕ ಬೆಲೆ ರೂ 7.99 ಲಕ್ಷ (ಎಕ್ಸ್ ಶೋ ರೂಂ) ಆರಂಭವಾಗುತ್ತದೆ. ಟಾಪ್-ಎಂಡ್​ ರೂಪಾಂತರದ ಬೆಲೆ ರೂ 11.49 ಲಕ್ಷ (ಎಕ್ಸ್ ಶೋ ರೂಂ) ನಿಗದಿ ಮಾಡಲಾಗಿದೆ.

ಇವುಗಳನ್ನು ಓದಿ: ಹೊಸ ಕ್ರ್ಯಾಶ್ ಟೆಸ್ಟ್ ಪ್ಲಾಂಟ್​, ಬ್ಯಾಟರಿ ಸೆಲ್ ರಿಸರ್ಚ್ ಲ್ಯಾಬ್ ಉದ್ಧಾಟಿಸಿದ ಮಹೀಂದ್ರಾ

ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ TVS ರೈಡರ್ 125 iGo- ಇದರ ಬೆಲೆ, ವೈಶಿಷ್ಟ್ಯಗಳು ಹೀಗಿವೆ

ಮೂರುವರೆ ಕೋಟಿಗೂ ಅಧಿಕ ಬೆಲೆ, 240 ಕಿಮೀ ಟಾಪ್​ ಸ್ಪೀಡ್: ಭಾರತಕ್ಕೆ ಕಾಲಿಟ್ಟ ಮರ್ಸಿಡಿಸ್ ಬೆಂಜ್​ನ ಹೊಸ ಮಾಡೆಲ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.