ನವದೆಹಲಿ: ತಮ್ಮ ಸೇಲ್ಸ್ ಗುರಿಯನ್ನು ತಲುಪುವ ಉದ್ದೇಶದಿಂದ ಭಾರತದಲ್ಲಿ ಪ್ರತೀ 10ರಲ್ಲಿ 7 ಮಂದಿ ಅಂದರೆ ಶೇ.73ರಷ್ಟು ಬ್ಯುಸಿನೆಸ್-ಟು-ಬ್ಯುಸಿನೆಸ್ (ಬಿ2ಬಿ) ಮಾರಾಟಗಾರರು ಕೃತಕ ಬುದ್ದಿಮತ್ತೆ (ಎಐ) ಬಳಕೆ ಮಾಡುತ್ತಿದ್ದಾರೆ ಎಂದು ಹೊಸ ವರದಿ ತಿಳಿಸಿದೆ.
ತಮ್ಮ ಉತ್ಪನ್ನಗಳ ಮಾರಾಟದ ಉದ್ದೇಶಕ್ಕಾಗಿ ಬಿಟುಬಿ ಮಾರಾಟಗಾರರು ಎಐ ಬಳಕೆ ಹೆಚ್ಚಳ ಮಾಡಿರುವುದು ಕಂಡುಬಂದಿದೆ. ಈ ಮಾರಾಟಗಾರರು ತಮ್ಮ ಸಂಶೋಧನೆಯ ಉದ್ದೇಶ, ಉತ್ಪನ್ನದ ಗುರಿ ಪತ್ತೆ, ಖರೀದಿದಾರರು ಸೇರಿದಂತೆ ಪ್ರಮುಖ ಉದ್ಧೇಶಕ್ಕೆ ಎಐ ಬಳಕೆ ಮಾಡುವಲ್ಲಿ ಮುನ್ನಡೆ ಕಂಡುಕೊಂಡಿದ್ದಾರೆ.
ಇದರಿಂದ ಮುಂದಿನ ಒಂದು ವರ್ಷದಲ್ಲಿ ಶೇ.78ರಷ್ಟು ಮಾರಾಟಗಾರರು ಮತ್ತು ಶೇ.82ರಷ್ಟು ಖರೀದಿದಾರರ ಗ್ರಾಹಕರ ಬಜೆಟ್ ಹೆಚ್ಚಲಿದೆ ಎಂಬ ನಿರೀಕ್ಷೆ ಹೊಂದಿದ್ದಾರೆ. ಇದು ಬಿ2ಬಿ ಮಾರಾಟದ ಮುನ್ನೋಟವನ್ನು ಸೂಚಿಸುತ್ತದೆ.
ಅಧ್ಯಯನದ ಫಲಿತಾಂಶದಲ್ಲಿ ಭಾರತದಲ್ಲಿ ಬಿಟುಬಿ ಮಾರಾಟಗಾರರಲ್ಲಿ 32 ಡೀಪ್ ಸೆಲ್ಲರ್ಸ್ ಅಂದರೆ ಆಳವಾದ ಮಾರಾಟಗಾರರಾಗಿದ್ದಾರೆ. ಮಾರಾಟಗಾರರು ತಮ್ಮ ಖರೀದಿದಾರರನ್ನು ಹುಡುಕಲು ಸಾಮಾಜಿಕ ನೆಟ್ವರ್ಕ್ ಬಳಕೆ ಮಾಡುವವರ ಸಂಖ್ಯೆ ಶೇ 2.3ರಷ್ಟು ಹೆಚ್ಚಿದೆ.
ಡೀಪ್ ಸೆಲರ್ಸ್ಗಳು ಮಾರಾಟದ ಜಗತ್ತಿನಲ್ಲಿ ಹೆಚ್ಚು ಜ್ಞಾನ ಹೊಂದಿರುತ್ತಾರೆ. ಅವರ ಉದ್ದೇಶಿತ ಗುರಿ ತಲುಪಲು ಆಳವಾದ ಸಂಶೋಧನೆ ನಡೆಸುತ್ತಾರೆ. ಇದಕ್ಕಾಗಿ ಖರೀದಿದಾರರೊಂದಿಗೆ ದೀರ್ಘ ಸಂಪರ್ಕವನ್ನು ನಿರ್ಮಾಣ ಮಾಡುತ್ತಾರೆ. ಇದಕ್ಕಾಗಿ ಕೃತಕ ಬುದ್ದಿಮತ್ತೆಯನ್ನು ಮತ್ತು ಬುದ್ಧಿವಂತಿಕೆ ಸಾಧನ ಬಳಕೆ ಮಾಡುವ ಡೀಪ್ ಸೇಲರ್ಗಳ ಹುಡುಕಾಟಕ್ಕೆ ಕಂಪನಿಗಳು ಕೂಡ ಮುಂದಾಗುತ್ತವೆ ಎಂದು ಲಿಂಕ್ಡ್ಇನ್ ಇಂಡಿಯಾದ ಸೇಲ್ಸ್ ಸಮ್ಯೂಷನ್ ಮುಖ್ಯಸ್ಥ ಅಭಯ್ ಸಿಂಗ್ ತಿಳಿಸಿದ್ದಾರೆ.
ಇನ್ನು ಭಾರತದಲ್ಲಿ ಸುಮಾರು ಶೇ.93ರಷ್ಟು ಬಿಟುಬಿ ಮಾರಾಟಗಾರರು ತಮ್ಮ ವ್ಯಾಪಾರ ಡೀಲ್ ಮುಗಿಸುವ ಮುನ್ನ ಖರೀದಿದಾರರೊಂದಿಗೆ ಮುಖಾಮುಖಿ ಭೇಟಿಯಾಗುವುದು ಅವಶ್ಯಕ ಎಂದು ಒಪ್ಪುತ್ತಾರೆ.
ಮಾರಾಟಗಾರರು ಕಂಪನಿಯನ್ನು ಬದಲಾಯಿಸಿದರೂ ಶೇ.52ರಷ್ಟು ಮಂದಿ ಖರೀದಿದಾರರು ಅದೇ ವ್ಯಕ್ತಿಯಿಂದಲೇ ಉತ್ಪನ್ನಗಳನ್ನು ಕೊಳ್ಳಲು ಬಯಸುತ್ತಾರೆ ಎಂಬುದು ಕಂಡುಬಂದಿದೆ. ಇದು ಮಾರಾಟದ ಸಂಬಂಧಗಳು ಯಶಸ್ಸು ಮತ್ತು ಮೌಲ್ಯಗಳು ಎಷ್ಟು ಮುಖ್ಯ ಎಂಬುದನ್ನು ತೋರಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ₹ 10,371 ಕೋಟಿ ವೆಚ್ಚದ ಇಂಡಿಯಾ ಎಐ ಮಿಷನ್‌ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ