ನವದೆಹಲಿ: ದೃಢವಾದ ಮತ್ತು ಪರಿಣಾಮಕಾರಿ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ನಿರ್ಮಿಸಲು ಭಾರತಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಅದಾನಿ ಟೋಟಲ್ ಎನರ್ಜಿಸ್ ಇ-ಮೊಬಿಲಿಟಿ ಲಿಮಿಟೆಡ್ (ಎಟಿಇಎಲ್) ಮತ್ತು ಎಂಜಿ ಮೋಟಾರ್ ಇಂಡಿಯಾ ಸೋಮವಾರ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಿದವು.
ಸಹಯೋಗದ ಭಾಗವಾಗಿ ದೇಶಾದ್ಯಂತ ಇವಿ ಗ್ರಾಹಕರಿಗೆ ಮೌಲ್ಯವರ್ಧಿತ ಸೇವೆಗಳನ್ನು ಒದಗಿಸಲು ನಿಯೋಜಿತ ಎಂಜಿ ಡೀಲರ್ ಶಿಪ್ಗಳಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು (60 ಕಿಲೋವ್ಯಾಟ್ ಡಿಸಿ) ಸ್ಥಾಪಿಸಲಾಗುವುದು.
"ದೇಶದಲ್ಲಿ ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಅದಾನಿ ಟೋಟಲ್ ಎನರ್ಜಿಸ್ ಇ- ಮೊಬಿಲಿಟಿ ಲಿಮಿಟೆಡ್ ಮತ್ತು ಎಂಜಿ ಮೋಟಾರ್ ಇಂಡಿಯಾದ ಸಹಭಾಗಿತ್ವವು ಮಹತ್ವದ ಮೈಲಿಗಲ್ಲಾಗಿದೆ ಮತ್ತು ಭಾರತದ ಇಂಧನ ಬಳಕೆಯ ಪರಿವರ್ತನೆಯನ್ನು ವೇಗಗೊಳಿಸುವಲ್ಲಿ ಇದು ನಿರ್ಣಾಯಕ ಪಾತ್ರ ವಹಿಸುತ್ತದೆ" ಎಂದು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ (ಎಟಿಜಿಎಲ್) ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಎಟಿಜಿಎಲ್ ನ ಇಡಿ ಮತ್ತು ಸಿಇಒ ಸುರೇಶ್ ಪಿ ಮಂಗಳಾನಿ ಹೇಳಿದರು.
ಈ ಪ್ರಯತ್ನವು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಸ್ವಚ್ಛ ಮತ್ತು ಹಸಿರು ಪರಿಸರವನ್ನು ಉತ್ತೇಜಿಸಲು ಕೊಡುಗೆ ನೀಡುತ್ತದೆ ಎಂದು ಮಂಗಳಾನಿ ಹೇಳಿದರು. ಚಾರ್ಜಿಂಗ್ ನೆಟ್ವರ್ಕ್ ಅನ್ನು ಹೆಚ್ಚಿಸಲು ಮತ್ತು ಗ್ರಾಹಕರಿಗೆ ಹೆಚ್ಚಿನ ಸೌಕರ್ಯ ನೀಡಲು ಎಟಿಇಎಲ್ ಮುಂಬರುವ ಎಂಜಿ ಡೀಲರ್ ಶಿಪ್ ಗಳಲ್ಲಿ ಸಿಸಿ 2 60 ಕಿಲೋವ್ಯಾಟ್ ಡಿಸಿ ಚಾರ್ಜರ್ ಗಳನ್ನು ಸ್ಥಾಪಿಸಲಿದೆ.
ಈ ಸಹಭಾಗಿತ್ವವು ಚಾರ್ಜಿಂಗ್ ಮೂಲಸೌಕರ್ಯಗಳ ಪೂರೈಕೆ, ಸ್ಥಾಪನೆ, ಕಾರ್ಯಾರಂಭ, ಕಾರ್ಯಾಚರಣೆಗಳು ಮತ್ತು ನಿರ್ವಹಣೆಯನ್ನು ಒಳಗೊಂಡ ಸಮಗ್ರ ಸೇವೆಗಳನ್ನು ಒದಗಿಸಲಿದೆ. ಇದಲ್ಲದೆ, ಮೀಸಲಾದ ಮೊಬೈಲ್ ಅಪ್ಲಿಕೇಶನ್ ಮೂಲಕ ಅನ್ವೇಷಣೆ, ಬಳಕೆದಾರ ದೃಢೀಕರಣ, ಚಾರ್ಜಿಂಗ್ ಮತ್ತು ಬಿಲ್ಲಿಂಗ್ಗಳನ್ನು ಒಳಗೊಂಡ ಡಿಜಿಟಲ್ ವೇದಿಕೆಯನ್ನು ಪ್ರಾರಂಭಿಸಲಾಗುವುದು ಎಂದು ಕಂಪನಿಗಳು ತಿಳಿಸಿವೆ.
ಪ್ರಸ್ತುತ ಎಟಿಇಎಲ್ 300 ಕ್ಕೂ ಹೆಚ್ಚು ಚಾರ್ಜ್ ಪಾಯಿಂಟ್ಗಳ ಜಾಲವನ್ನು ಹೊಂದಿದೆ. ಇದು ಎಸಿ ಮತ್ತು ಡಿಸಿಯ ಮಿಶ್ರಣವಾಗಿದ್ದು, ಹೆದ್ದಾರಿ ಪಿಟ್-ಸ್ಟಾಪ್ಗಳು, ಶಾಪಿಂಗ್ ಮಾಲ್ಗಳು, ಆರ್ಡಬ್ಲ್ಯೂಎಗಳು, ಕೆಲಸದ ಸ್ಥಳಗಳು ಮತ್ತು ಫ್ಲೀಟ್ ಚಾರ್ಜಿಂಗ್ ಹಬ್ಗಳಂತಹ ವಿವಿಧ ಪ್ರದೇಶಗಳಲ್ಲಿ ಹರಡಿದೆ. ಕಂಪನಿಯು ಪ್ರಸ್ತುತ ಸುಮಾರು 6 ಮೆಗಾವ್ಯಾಟ್ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದ್ದು, ಸುಮಾರು 500 ಚಾರ್ಜ್ ಪಾಯಿಂಟ್ಗಳು ನಿರ್ಮಾಣ ಹಂತದಲ್ಲಿವೆ.
ಇದನ್ನೂ ಓದಿ : 150 ದೇಶಗಳಿಗೆ ಕಾರ್ಯಾಚರಣೆ ವಿಸ್ತರಿಸಿದ ಮೇಕ್ ಮೈ ಟ್ರಿಪ್ - MAKEMYTRIP