ETV Bharat / business

2023-24ರಲ್ಲಿ 1 ಮಿಲಿಯನ್ ಟನ್ ಸರಕು ಸಾಗಿಸಿದ ಅದಾನಿ ಏರ್​ಪೋರ್ಟ್ಸ್​: ಶೇ 7ರಷ್ಟು ಬೆಳವಣಿಗೆ - Adani Airports cargo shipment

ಅದಾನಿ ಏರ್ ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ 2023-2024ರ ಹಣಕಾಸು ವರ್ಷದಲ್ಲಿ ತನ್ನ ವಿಮಾನಗಳ ಮೂಲಕ ಒಂದು ಮಿಲಿಯನ್ ಟನ್ ಸರಕುಗಳನ್ನು ಸಾಗಿಸಿದೆ.

author img

By ETV Bharat Karnataka Team

Published : Jun 9, 2024, 7:39 PM IST

ಅದಾನಿ ಏರ್​ಪೋರ್ಟ್ಸ್ (ಸಂಗ್ರಹ ಚಿತ್ರ)
ಅದಾನಿ ಏರ್​ಪೋರ್ಟ್ಸ್ (ಸಂಗ್ರಹ ಚಿತ್ರ) (IANS)

ಮುಂಬೈ: ಅದಾನಿ ಏರ್ ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (ಎಎಹೆಚ್ಎಲ್) 2023-2024ರ ಹಣಕಾಸು ವರ್ಷದಲ್ಲಿ (ಎಫ್ ವೈ 24) ತನ್ನ ವಿಮಾನಗಳ ಮೂಲಕ ಒಂದು ಮಿಲಿಯನ್ ಟನ್ ಸರಕುಗಳನ್ನು ಸಾಗಿಸಿದೆ ಎಂದು ಭಾನುವಾರ ತಿಳಿಸಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಇದು ಶೇಕಡಾ 7 ರಷ್ಟು ಗಮನಾರ್ಹ ಬೆಳವಣಿಗೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ಸರಕು ಸಾಗಾಟ 9,44,912 ಮೆಟ್ರಿಕ್ ಟನ್ ಆಗಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಕಂಪನಿಯು ಏಳು ವಿಮಾನ ನಿಲ್ದಾಣಗಳು 2024ರ ಹಣಕಾಸು ವರ್ಷದಲ್ಲಿ 10 ಲಕ್ಷ ಮೆಟ್ರಿಕ್ ಟನ್ ಸರಕುಗಳನ್ನು ಸಾಗಿಸಿದ್ದು, ಶೇ 30.1ರಷ್ಟು ಮಾರುಕಟ್ಟೆ ಪಾಲು ಪಡೆದುಕೊಂಡಿದೆ.

"ಅದಾನಿ ಏರ್ ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್​ನಲ್ಲಿ ಕಾರ್ಯಾಚರಣೆಯ ದಕ್ಷತೆಗಾಗಿ ನಾವು ನಿರಂತರವಾಗಿ ಹೊಸ ಮಾನದಂಡಗಳನ್ನು ನಿಗದಿಪಡಿಸುತ್ತಿದ್ದೇವೆ. ಸರಕು ಟರ್ಮಿನಲ್​ಗಳು ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿವೆ. ನಮ್ಮ ಟರ್ಮಿನಲ್​ಗಳು ಈ ಹಣಕಾಸು ವರ್ಷದಲ್ಲಿ 1 ಮಿಲಿಯನ್ ಟನ್ ಸರಕುಗಳನ್ನು ನಿರ್ವಹಿಸಿವೆ. ಈ ಸಾಧನೆಯು ಭಾರತದಲ್ಲಿ ಅಂತರರಾಷ್ಟ್ರೀಯ ಮತ್ತು ದೇಶೀಯ ಏರ್ ಫ್ರೈಟ್ ಕಾರ್ಯಾಚರಣೆಗಳಲ್ಲಿ ಪ್ರಮುಖ ಕಂಪನಿಯಾಗಿ ನಮ್ಮ ಸ್ಥಾನವನ್ನು ಗಟ್ಟಿಗೊಳಿಸಿದೆ" ಎಂದು ಎಎಎಚ್​ಎಲ್ ಸಿಇಒ ಅರುಣ್ ಬನ್ಸಾಲ್ ಹೇಳಿದರು.

2024ರ ಹಣಕಾಸು ವರ್ಷದಲ್ಲಿ ಕಂಪನಿಯು ನಿರ್ವಹಿಸಿದ ಸರಕುಗಳ ಶೇಕಡಾ 65 ರಷ್ಟು ಅಂತರರಾಷ್ಟ್ರೀಯವಾಗಿತ್ತು. ಅಂತರರಾಷ್ಟ್ರೀಯ ಸರಕು ಸಾಗಾಟದ ಪ್ರಮಾಣ 6,62,258 ಮೆಟ್ರಿಕ್ ಟನ್ ಆಗಿದ್ದು, ಹಿಂದಿನ ಹಣಕಾಸು ವರ್ಷದ 6,06,348 ಮೆಟ್ರಿಕ್ ಟನ್​ಗಳಿಗೆ ಹೋಲಿಸಿದರೆ ಗಮನಾರ್ಹ ಶೇಕಡಾ 9 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಪ್ರಮುಖ ಸರಕುಗಳಲ್ಲಿ ಆಟೋಮೊಬೈಲ್, ಫಾರ್ಮಾಸ್ಯುಟಿಕಲ್ಸ್, ಹಾಳಾಗುವ ವಸ್ತುಗಳು, ಎಲೆಕ್ಟ್ರಿಕಲ್ಸ್ / ಎಲೆಕ್ಟ್ರಾನಿಕ್ಸ್ ಮತ್ತು ಎಂಜಿನಿಯರಿಂಗ್ ಸರಕುಗಳು ಸೇರಿವೆ.

ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಮಾರ್ಚ್ 2024 ರಲ್ಲಿ ಆರ್ಥಿಕ ವರ್ಷದಲ್ಲಿ ಅತ್ಯಧಿಕ ಸರಕು ಸಾಗಾಟವನ್ನು ನಿರ್ವಹಿಸಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (ಅಹಮದಾಬಾದ್) ಮೇ 18 ರಂದು ಇಂಡಿಗೊದ ಮೊದಲ ಎ 320 ನಿಯೋ ಸರಕು ಸಾಗಣೆ ವಿಮಾನವನ್ನು ಯಶಸ್ವಿಯಾಗಿ ಸಾಗಿಸಿದೆ ಎಂದು ಕಂಪನಿ ತಿಳಿಸಿದೆ. ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತರರಾಷ್ಟ್ರೀಯ ಸರಕು ಸಾಗಾಟವು ಮಾರ್ಚ್ 2024 ರಲ್ಲಿ 700 ಟನ್​ಗಳಷ್ಟು ಗರಿಷ್ಠ ಮಟ್ಟಕ್ಕೆ ತಲುಪಿದೆ.

ಇದನ್ನೂ ಓದಿ : ಕಳೆದ ವಾರ $97 ಮಿಲಿಯನ್ ಫಂಡಿಂಗ್ ಸಂಗ್ರಹಿಸಿದ ಭಾರತೀಯ ಸ್ಟಾರ್ಟ್​ಅಪ್​ಗಳು - STARTUPS IN INDIA

ETV Bharat Logo

Copyright © 2024 Ushodaya Enterprises Pvt. Ltd., All Rights Reserved.