ETV Bharat / business

5 ತಿಂಗಳಲ್ಲಿ ಭಾರತಕ್ಕೆ 41 ಲಕ್ಷ ವಿದೇಶಿ ಪ್ರವಾಸಿಗರ ಆಗಮನ: ₹1 ಲಕ್ಷ ಕೋಟಿಗೂ ಅಧಿಕ ಗಳಿಕೆ - Foreign Tourists Arrivals

author img

By ETV Bharat Karnataka Team

Published : Aug 5, 2024, 5:30 PM IST

ಈ ವರ್ಷದ ಜನವರಿಯಿಂದ ಮೇ ತಿಂಗಳಲ್ಲಿ ಭಾರತಕ್ಕೆ 41 ಲಕ್ಷ ವಿದೇಶಿ ಪ್ರವಾಸಿಗರು ಆಗಮಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ದೆಹಲಿಯ ಕೆಂಪು ಕೋಟೆ
ದೆಹಲಿಯ ಕೆಂಪು ಕೋಟೆ (IANS)

ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಜನವರಿಯಿಂದ ಮೇ ಅವಧಿಯಲ್ಲಿ ಭಾರತಕ್ಕೆ ಆಗಮಿಸಿದ ವಿದೇಶಿ ಪ್ರವಾಸಿಗರ ಸಂಖ್ಯೆ ಶೇ 9.1ರಷ್ಟು ಏರಿಕೆಯಾಗಿ 40.72 ಲಕ್ಷಕ್ಕೆ ತಲುಪಿದೆ ಎಂದು ಸೋಮವಾರ ಸಂಸತ್ತಿಗೆ ಮಾಹಿತಿ ನೀಡಲಾಯಿತು. ಕಳೆದ ವರ್ಷದ ಇದೇ ಅವಧಿಯಲ್ಲಿ 37.32 ಲಕ್ಷ ವಿದೇಶಿ ಪ್ರವಾಸಿಗರು ಭಾರತಕ್ಕೆ ಆಗಮಿಸಿದ್ದರು.

ಈ ಅವಧಿಯಲ್ಲಿ ದೇಶಕ್ಕೆ 1,08,362 ಕೋಟಿ ರೂ.ಗಳಷ್ಟು ವಿದೇಶಿ ವಿನಿಮಯ (ಎಫ್ಇಇ) ಗಳಿಕೆಯಾಗಿದೆ. 2023ರ ಜನವರಿಯಿಂದ ಮೇ ತಿಂಗಳಲ್ಲಿ ಈ ಪ್ರಮಾಣ 88,441 ಕೋಟಿ ರೂ. ಆಗಿತ್ತು. ವಿದೇಶಿ ವಿನಿಮಯ ಗಳಿಕೆ ವರ್ಷದಿಂದ ವರ್ಷಕ್ಕೆ ಶೇಕಡಾ 22.52ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಲೋಕಸಭೆಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.

ಈ ವರ್ಷದ ಮೇ ತಿಂಗಳಲ್ಲಿ ವಿದೇಶಿ ವಿನಿಮಯ ಗಳಿಕೆ 17,762 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷ ಮೇ ತಿಂಗಳಲ್ಲಿ ಇದು 17,206 ಕೋಟಿ ರೂ.ಗಳಷ್ಟಿತ್ತು. ಹಾಗೆಯೇ ಮೇ ತಿಂಗಳಲ್ಲಿ 6 ಲಕ್ಷ ವಿದೇಶಿ ಪ್ರವಾಸಿಗರು ದೇಶಕ್ಕೆ ಆಗಮಿಸಿದ್ದಾರೆ. 2023ರ ಮೇ ತಿಂಗಳಲ್ಲಿ ಬಂದಿದ್ದ 5.98 ಲಕ್ಷಕ್ಕೆ ಹೋಲಿಸಿದರೆ ಪ್ರವಾಸಿಗರ ಸಂಖ್ಯೆ ಈ ವರ್ಷ ಶೇಕಡಾ 0.3ರಷ್ಟು ಏರಿಕೆಯಾಗಿದೆ.

ವಿದೇಶಿ ಪ್ರವಾಸಿಗರ ಆಗಮನ ಮತ್ತು ವಿದೇಶಿ ವಿನಿಮಯ ಗಳಿಕೆ ಸ್ಥಿರವಾಗಿ ಏರಿಕೆಯಾಗುತ್ತಿರುವುದು ಪ್ರವಾಸೋದ್ಯಮ ವಿಸ್ತಾರವಾಗುತ್ತಿರುವುದನ್ನು ಸೂಚಿಸುತ್ತದೆ ಎಂದು ಸಚಿವರು ಹೇಳಿದರು.

ದೇಶದಲ್ಲಿರುವ ಆಧ್ಯಾತ್ಮಿಕ ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇತ್ತೀಚಿನ ಕೇಂದ್ರ ಬಜೆಟ್​ನಲ್ಲಿ ಬಿಹಾರದ ವಿಷ್ಣುಪದ್ ದೇವಾಲಯ ಕಾರಿಡಾರ್ ಮತ್ತು ಮಹಾಬೋಧಿ ದೇವಾಲಯ ಕಾರಿಡಾರ್​ನ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

2024-25ರ ಹಣಕಾಸು ವರ್ಷದಲ್ಲಿ, ಸರ್ಕಾರವು ಪ್ರವಾಸೋದ್ಯಮ ಸಚಿವಾಲಯಕ್ಕೆ ಸುಮಾರು 2,478 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಕಳೆದ ವರ್ಷ 2,400 ಕೋಟಿ ರೂ. ನಿಗದಿಪಡಿಸಲಾಗಿತ್ತು. ಆದರೆ ಇದರಲ್ಲಿ ವಾಸ್ತವಿಕ ವೆಚ್ಚ 1,692 ಕೋಟಿ ರೂ. ಮಾತ್ರ ಆಗಿದೆ.

ಏತನ್ಮಧ್ಯೆ, ದೇಶದಿಂದ ಹೊರಹೋಗುವ ಪ್ರವಾಸೋದ್ಯಮ ಮಾರುಕಟ್ಟೆ 2034ರ ವೇಳೆಗೆ 55.3 ಬಿಲಿಯನ್ ಡಾಲರ್​ಗೆ ತಲುಪುವ ನಿರೀಕ್ಷೆಯಿದೆ. ಸದ್ಯ 2024ರಲ್ಲಿ ಈ ಮಾರುಕಟ್ಟೆ 18.8 ಬಿಲಿಯನ್ ಡಾಲರ್​ಗಿಂತ ಹೆಚ್ಚಾಗಿದೆ ಎಂದು ಎಫ್ಐಸಿಸಿಐ-ನಂಗಿಯಾ ಜ್ಞಾನ ಪತ್ರಿಕೆ ತಿಳಿಸಿದೆ. ಇನ್ನು ಭಾರತದ ಆನ್‌ಲೈನ್ ಪ್ರಯಾಣ ಮಾರುಕಟ್ಟೆ 2024 ಮತ್ತು 2029ರ ನಡುವೆ 17.24 ಬಿಲಿಯನ್ ಡಾಲರ್​ನಿಂದ 28.40 ಬಿಲಿಯನ್ ಡಾಲರ್​ಗೆ ಬೆಳೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ: ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳ ವಿಲೀನವಿಲ್ಲ: ಕೇಂದ್ರದ ಸ್ಪಷ್ಟೀಕರಣ - General Insurance Companies

ETV Bharat Logo

Copyright © 2024 Ushodaya Enterprises Pvt. Ltd., All Rights Reserved.