ನವದೆಹಲಿ: ಭಾರತದಲ್ಲಿನ ಕನಿಷ್ಠ 37 ಸ್ಟಾರ್ಟ್ಅಪ್ಗಳು ಈ ವಾರ ಸುಮಾರು 310 ದಶಲಕ್ಷ ಡಾಲರ್ ಮೊತ್ತದ ಫಂಡಿಂಗ್ ಪಡೆದುಕೊಂಡಿವೆ. ಇದರಲ್ಲಿ 10 ಬೆಳವಣಿಗೆಯ ಹಂತದ ಫಂಡಿಂಗ್ ಡೀಲ್ಗಳು ಸೇರಿವೆ. ಕಳೆದ ವಾರ 21 ಸ್ಟಾರ್ಟ್ಅಪ್ಗಳು ದೇಶದಲ್ಲಿ ಸುಮಾರು 105 ಮಿಲಿಯನ್ ಡಾಲರ್ ಫಂಡಿಂಗ್ ಸಂಗ್ರಹಿಸಿದ್ದವು.
ಈ ವಾರ ಜಿಪಿಎಸ್ ರಿನ್ಯೂವೇಬಲ್ಸ್ ಸೇರಿದಂತೆ 10 ಸ್ಟಾರ್ಟ್ಅಪ್ಗಳು 225.86 ಮಿಲಿಯನ್ ಡಾಲರ್ ಹಣವನ್ನು ಸಂಗ್ರಹಿಸಿವೆ. ಜಿಪಿಎಸ್ ರಿನ್ಯೂವೇಬಲ್ಸ್ 50 ಮಿಲಿಯನ್ ಡಾಲರ್ ಸಾಲ ನಿಧಿಯನ್ನು ಪಡೆದುಕೊಂಡಿದೆ ಎಂದು ಎನ್ ಟ್ರಾಕರ್ ವರದಿ ಮಾಡಿದೆ. ಡೀಪ್ ಟೆಕ್ ಸ್ಟಾರ್ಟ್ಅಪ್ ಇಕೋಜೆನ್ ಸಂಪತ್ತು ನಿರ್ವಹಣಾ ಸಂಸ್ಥೆ ನುವೀನ್ ಸೇರಿದಂತೆ ಅಸ್ತಿತ್ವದಲ್ಲಿರುವ ಹೂಡಿಕೆದಾರರಿಂದ ಸಾಲ ಮತ್ತು ಈಕ್ವಿಟಿಯ ರೂಪದಲ್ಲಿ 30 ಮಿಲಿಯನ್ ಡಾಲರ್ ಫಂಡಿಂಗ್ ಪಡೆದುಕೊಂಡಿದೆ.
ಆನ್ಲೈನ್ ಬಿ 2 ಬಿ ಮಾರ್ಕೆಟ್ ಪ್ಲೇಸ್ ಆಗಿರುವ ಪ್ರೊಕ್ ಮಾರ್ಟ್ ಸರಣಿ ಬಿ ಫಂಡಿಂಗ್ನಲ್ಲಿ, ನಂದನ್ ನಿಲೇಕಣಿ ಮತ್ತು ಸಂಜೀವ್ ಅಗರ್ವಾಲ್ ಅವರ ನೇತೃತ್ವದ ವಿಸಿ ಫಂಡ್ ಫಂಡಮೆಂಟಮ್ ಪಾರ್ಟ್ನರ್ ಶಿಪ್ ಮತ್ತು ಎಡೆಲ್ವೀಸ್ ಡಿಸ್ಕವರಿ ಫಂಡ್ನಿಂದ 30 ಮಿಲಿಯನ್ ಡಾಲರ್ ಫಂಡಿಂಗ್ ಸಂಗ್ರಹಿಸಿದೆ. ಬ್ಲೂಮ್ ವೆಂಚರ್ಸ್ ಮತ್ತು ಇತರ ಪ್ರಮುಖ ಹೂಡಿಕೆದಾರರ ನೇತೃತ್ವದ ಗೇಮಿಂಗ್ ಸ್ಟಾರ್ಟ್ಅಪ್ ಲೈಟ್ ಫ್ಯೂರಿ ಗೇಮ್ಸ್ ತನ್ನ ಮೊದಲ ಸುತ್ತಿನಲ್ಲಿ 8.5 ಮಿಲಿಯನ್ ಡಾಲರ್ ನಿಧಿ ಸಂಗ್ರಹಿಸಿದೆ.
ಆನ್ ಲೈನ್ ರಿಟೇಲ್ ವ್ಯಾಪಾರಿಗಳ ಲಾಜಿಸ್ಟಿಕ್ಸ್ ವಿಶ್ಲೇಷಕ ವೇದಿಕೆಯಾದ ಕ್ಲಿಕ್ ಪೋಸ್ಟ್, ಇನ್ ಫ್ಲೆಕ್ಸರ್ ವೆಂಚರ್ಸ್ ಪಾಲುದಾರರು ಮತ್ತು ಅಥೆರಾ ವೆಂಚರ್ ಪಾರ್ಟನರ್ಸ್ ನೇತೃತ್ವದ ಸರಣಿ ಎ ಫಂಡಿಂಗ್ನಲ್ಲಿ 6 ಮಿಲಿಯನ್ ಡಾಲರ್ ಸಂಗ್ರಹಿಸಿದೆ. ತುರ್ತು ಆರೋಗ್ಯ ಆರೈಕೆ ಪೂರೈಕೆದಾರ ಮೆಡುಲನ್ಸ್ ಸರಣಿ ಎ ನಿಧಿಯಲ್ಲಿ 3 ಮಿಲಿಯನ್ ಡಾಲರ್ (ಸುಮಾರು 25 ಕೋಟಿ ರೂ.) ಪಡೆದುಕೊಂಡಿದೆ.
ಭಾರತದಲ್ಲಿ ಉದ್ಯಮ ಆರಂಭಿಸಲು ಸೂಕ್ತ ಸಮಯ: ಪ್ರಸ್ತುತ ದಿನಮಾನಗಳಲ್ಲಿ ವಿಶ್ವದ ಪ್ರತಿಯೊಂದು ಪ್ರಮುಖ ಬ್ರಾಂಡ್ ಭಾರತದಲ್ಲಿ ಉದ್ಯಮ ಸ್ಥಾಪಿಸಲು ಬಯಸುತ್ತವೆ ಎಂದು ಜಾಗತಿಕ ಹಾಸ್ಪಿಟ್ಯಾಲಿಟಿ ಕಂಪನಿ ಓಯೋ ರೂಮ್ಸ್ನ ಸಂಸ್ಥಾಪಕ ಮತ್ತು ಸಿಇಒ ರಿತೇಶ್ ಅಗರ್ವಾಲ್ ಹೇಳಿದ್ದಾರೆ. ಜನಪ್ರಿಯ 'ಶಾರ್ಕ್ ಟ್ಯಾಂಕ್ ಇಂಡಿಯಾ' ತೀರ್ಪುಗಾರರಾಗಿರುವ ಅಗರ್ವಾಲ್ ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಜಾಗತಿಕ ಕಂಪನಿಗಳು ಭಾರತಕ್ಕೆ ಆಗಮಿಸಿ ವ್ಯವಹಾರ ಪ್ರಾರಂಭಿಸಲು ಇದು ಸೂಕ್ತ ಸಮಯವಾಗಿದೆ ಎಂದಿದ್ದಾರೆ.
ಇದನ್ನೂ ಓದಿ : ಬೇಸಿಗೆ ಪ್ರಯಾಣ ದಟ್ಟಣೆ: 2,742 ಹೆಚ್ಚುವರಿ ಟ್ರಿಪ್ ಓಡಿಸಲಿದೆ ಭಾರತೀಯ ರೈಲ್ವೆ - Indian Railways