ETV Bharat / business

ಕೇವಲ ₹755 ಪಾವತಿಸಿದರೆ ಸಿಗಲಿದೆ ₹15 ಲಕ್ಷ: ನಿಮ್ಮ ಕುಟುಂಬಕ್ಕೆ ಆಸರೆ ಈ ಅಂಚೆ ಜೀವ ವಿಮೆ! - Postal Life Insurance - POSTAL LIFE INSURANCE

ಮನುಷ್ಯನ ಜೀವನ ನೀರಿನ ಮೇಲಿನ ಗುಳ್ಳೆ ಇದ್ದಂತೆ. ಯಾವಾಗ ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಮನೆಯ ಮುಖ್ಯಸ್ಥ ದುರಾದೃಷ್ಟವಶಾತ್​ ಮೃತಪಟ್ಟರೆ ಆತನನ್ನು ಅವಲಂಭಿಸಿದ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ. ಹೀಗಾಗಿ ಮುಂಚಿತವಾಗಿಯೇ ಜೀವ ವಿಮೆ ತೆಗೆದುಕೊಳ್ಳುವುದು ಅತ್ಯಗತ್ಯ. ಹಾಗಾದರೆ ನೀವು ವಿಮೆ ತೆಗೆದುಕೊಂಡಿದ್ದೀರಾ?. ಇಲ್ಲ ಎಂದರೆ ಪೋಸ್ಟ್ ಆಫೀಸ್ ನೀಡುವ 15 ಲಕ್ಷ ರೂ ಜೀವ ವಿಮಾ ಪಾಲಿಸಿ ತೆಗೆದುಕೊಳ್ಳಿ.

ಅಂಚೆ ಜೀವ ವಿಮೆ
postal life insurance (ETV Bharat)
author img

By ETV Bharat Karnataka Team

Published : Jul 5, 2024, 8:45 PM IST

ಪ್ರಸ್ತುತ ಜನರಲ್ಲಿ ಜೀವ ವಿಮೆಯ ಬಗ್ಗೆ ಜಾಗೃತಿ ಹೆಚ್ಚಾಗಿದೆ. ಕುಟುಂಬದ ಹಿರಿಯರು ತಮಗೆ ದುರಾದೃಷ್ಟವಶಾತ್​ ಏನಾದರೂ ಅನಾಹುತ ಸಂಭವಿಸಿದರೆ ನಂತರ ಕುಟುಂಬಕ್ಕೆ ಆಸರೆಯಾಗಲಿ ಎಂದು ಜೀವ ವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳುತ್ತಾರೆ. ಅನೇಕರು ಟರ್ಮ್ ಪಾಲಿಸಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಹಲವರಿಗೆ ಅವು ಹೊರೆಯಾಗಿರುತ್ತವೆ. ಹೆಚ್ಚಿನ ಪ್ರೀಮಿಯಂ ಕಟ್ಟಬೇಕಿರುವುದರಿಂದ ಅವುಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅಂತಹವರಿಗಾಗಿ ಅಂಚೆ ಇಲಾಖೆಯು ಕೈಗೆಟಕುವ ದರದಲ್ಲಿ ಜೀವ ವಿಮಾ ಪಾಲಿಸಿಗಳನ್ನು ತರುತ್ತಿದೆ. ಅಂತಹವುಗಳಲ್ಲಿ ಉತ್ತಮವಾದ ಪಾಲಿಸಿಗಳು ಯಾವು (ಆರೋಗ್ಯ ವಿಮೆ) ಎಂಬುದನ್ನು ಇಲ್ಲಿ ತಿಳಿಯೋಣ.

ವರ್ಷಕ್ಕೆ 755 ರೂ. ಪಾವತಿಸಿದರೆ?:

  • ಅಂಚೆ ಕಚೇರಿಯಿಂದ ಈ ವಿಮೆಯನ್ನು ತೆಗೆದುಕೊಂಡವರು ಅಪಘಾತದಿಂದ ಮೃತಪಟ್ಟರೇ ನಾಮಿನಿಯಾದ ಕುಟುಂಬದ ಸದಸ್ಯನಿಗೆ 15 ಲಕ್ಷ ರೂ. ಪಾವತಿಸುತ್ತಾರೆ.
  • ಇನ್ನೂ ವಿಮೆ ತೆಗೆದುಕೊಂಡವರು ಮೃತಪಟ್ಟಾಗ ಮಾತ್ರವಲ್ಲದೇ, ಶಾಶ್ವತ ಅಂಗವೈಕಲ್ಯಕ್ಕೆ ಒಳಾಗದರೂ 15 ಲಕ್ಷ ರೂ. ಪಾವತಿಸಲಾಗುತ್ತಿದೆ.
  • ಪಾಲಿಸಿದಾರರು ಮರಣ ಹೊಂದಿದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಿರಲು ಒಂದು ಲಕ್ಷ ರೂಪಾಯಿ ಮತ್ತು ಮದುವೆಗೆ ಇನ್ನೊಂದು ಲಕ್ಷ ರೂಪಾಯಿಗಳನ್ನು ಪಾವತಿಸಲಾಗುತ್ತದೆ.
  • ಪಾಲಿಸಿದಾರ ಬದುಕಿದ್ದರೆ ವೈದ್ಯಕೀಯ ವೆಚ್ಚಕ್ಕಾಗಿ ಒಂದು ಲಕ್ಷ ರೂಪಾಯಿ ಪಾವತಿಸಲಾಗುತ್ತದೆ.
  • ಆಸ್ಪತ್ರೆಯಲ್ಲಿ ಸಾಮಾನ್ಯ ಚಿಕಿತ್ಸೆಗೆ ಒಳಗಾದರೆ ದಿನಕ್ಕೆ 1000 ರೂಪಾಯಿ, ಐಸಿಯುನಲ್ಲಿ ದಾಖಲಾದರೆ ದಿನಕ್ಕೆ 2000 ರೂಪಾಯಿ ನೀಡಲಾಗುತ್ತದೆ.
  • ಕೈ ಕಾಲು ಮುರಿದರೆ 25 ಸಾವಿರ ರೂ.ವರೆಗೆ ಪರಿಹಾರ ನೀಡಲಾಗುತ್ತದೆ.

ವಾರ್ಷಿಕ 399 ರೂ ಪಾವತಿಸಿದರೆ?:

  • 399 ರೂ ಪ್ರೀಮಿಯಂನಲ್ಲಿಯೂ ಕೂಡ ಅಪಘಾತ ವಿಮೆ ಲಭ್ಯವಿದೆ. ಈ ಪಾಲಿಸಿಯಲ್ಲಿ ವ್ಯಕ್ತಿ ಮರಣ ಹೊಂದಿದರೆ 10 ಲಕ್ಷ ರೂ. ವರೆಗೆ ವಿಮೆ ಪಡೆಯಬಹುದು.
  • ಶಾಶ್ವತ ಅಂಗವೈಕಲ್ಯ, ಕೈಕಾಲು, ಬ್ರೈನ್ ಸ್ಟ್ರೋಕ್​ಗೆ ಒಳಗಾದರೆ 10 ಲಕ್ಷ ರೂ. ಪಾವತಿಸಲಾಗುತ್ತದೆ.
  • ಪಾಲಿಸಿದಾರರಿಗೆ ಅಪಘಾತ ಸಂಭವಿಸಿ ಆಸ್ಪತ್ರೆಗೆ ದಾಖಲಾದರೆ ಒಳರೋಗಿ ವಿಭಾಗದಡಿ 60 ಸಾವಿರ ರೂ.ವರೆಗೆ ಕ್ಲೇಮ್ ಮಾಡುವ ಅವಕಾಶವಿದೆ.
  • ಅದೇ ರೀತಿ ಹೊರರೋಗಿ ಕೋಟಾದಡಿ 30 ಸಾವಿರ ರೂ. ಕ್ಲೈಮ್ ಮಾಡಬಹುದು.
  • ಚಿಕಿತ್ಸೆಯ ಸಮಯದಲ್ಲಿ ದಿನಕ್ಕೆ 1000 ರೂಪಾಯಿಗಳನ್ನು ನಗದು ರೂಪದಲ್ಲಿ ನೀಡಲಾಗುತ್ತದೆ. ಇದನ್ನು 10 ದಿನಗಳವರೆಗೆ ನೀಡಲಾಗುತ್ತದೆ.
  • ಇಬ್ಬರು ಮಕ್ಕಳಿಗೆ ಶಾಲಾ ಶುಲ್ಕದ 10 ಪ್ರತಿಶತ ಅಥವಾ ಒಂದು ಲಕ್ಷ ರೂ ವರೆಗೆ ನಗದು ಆಯ್ಕೆ ಮಾಡಬಹುದು.
  • ಅಷ್ಟೇ ಅಲ್ಲ, ಅಪಘಾತಕ್ಕೀಡಾದ ಪಾಲಿಸಿದಾರನ ಸಾರಿಗೆ ವೆಚ್ಚಕ್ಕಾಗಿ 25 ಸಾವಿರ ರೂ ನೀಡಲಾಗುತ್ತದೆ. ಪಾಲಿಸಿದಾರ ಒಂದು ವೇಳೆ ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ಇನ್ನೂ 5 ಸಾವಿರ ನೀಡಲಾಗುತ್ತದೆ.

299 ರೂ ಪಾವತಿಸಿದರೆ?:

  • 299 ರೂಪಾಯಿಗಳ ಪ್ರೀಮಿಯಂ ಅನ್ನು ಆಯ್ಕೆ ಮಾಡಿಕೊಂಡ ಪಾಲಿಸಿದಾರರು ಮರಣಹೊಂದಿದರೆ 10 ಲಕ್ಷ ರೂ. ಪಾವತಿಸಲಾಗುತ್ತದೆ.
  • ಅಪಘಾತದಲ್ಲಿ ಮರಣಹೊಂದಿದರೆ, ಅಂಗವಿಕಲರಾಗಿದ್ದರೆ ಅಥವಾ ಪಾರ್ಶ್ವವಾಯುವಿಗೆ ಒಳಗಾಗಿದ್ದರೆ ಮೇಲಿನ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.
  • ಇದರಲ್ಲಿ ಇತರ ಹೆಚ್ಚುವರಿ ಪ್ರಯೋಜನಗಳು ಇರುವುದಿಲ್ಲ

ವಿಮೆ ಪಡೆಯಲು ಯಾರು ಅರ್ಹರು?: ಈ ಪಾಲಿಸಿಯನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮೂಲಕ ಪಡೆಯಬೇಕು. ಇದಕ್ಕಾಗಿ ವಿಶೇಷ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ಖಾತೆ ತೆರೆಯಬೇಕು. 18 ರಿಂದ 65 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಮೇಲಿನ ಮೂರು ಪಾಲಿಸಿಗಳನ್ನು ತೆಗೆದುಕೊಳ್ಳಬಹುದು. ಕುಟುಂಬಕ್ಕೆ ಆಸರೆಯಾಗುವ ಈ ಜೀವ ವಿಮೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ.

ಇದನ್ನೂ ಓದಿ: ಬ್ಯಾಂಕ್​ಗಳಲ್ಲಿ 5 ದಿನ ಮಾತ್ರ ಕೆಲಸ: ಶೀಘ್ರವೇ ಹೊಸ ಸಮಯ ಘೋಷಣೆ - 5 Days working in Bank

ETV Bharat Logo

Copyright © 2025 Ushodaya Enterprises Pvt. Ltd., All Rights Reserved.